ಭಾರತೀಯ ಸಂಸ್ಕೃತಿಯಲ್ಲಿ ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ರವಿದೆ. ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ಸಂಬಂಧಕ್ಕೆ ಮಹತ್ವ ನೀಡದೆ ಸಂಸ್ಕೃತಿಗೇ ಕಳಂಕ ತರುತ್ತಿದ್ದಾನೆ. ರಾಜಸ್ಥಾನದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ.
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂಬಂಧಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಎಲ್ಲವನ್ನೂ ಪೂಜನೀಯ ಭಾವನೆಯಿಂದಲೇ ನೋಡುವ ಕಾರಣ, ಈ ಸಂಬಂಧಗಳನ್ನು ಆಚರಿಸಲೂ ಕೆಲವು ದಿನಗಳಿವೆ. ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ಸಂಬಂಧಕ್ಕೆ ಮಹತ್ವ ನೀಡದೆ ಸಂಸ್ಕೃತಿಗೇ ಕಳಂಕ ತರುತ್ತಿದ್ದಾನೆ. ರಾಜಸ್ಥಾನದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ. ಮಾವ ತನ್ನ ಸೊಸೆಯನ್ನೇ ಪ್ರೀತಿಸಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ.
ಸೊಸೆಯೊಂದಿಗೆ ಓಡಿ ಹೋದ ಮಾವ; ಅಪ್ಪನ ವಿರುದ್ಧ ದೂರು ದಾಖಲಿಸಿದ ಮಗ..!
ಮಾವ (Father in law) ತನ್ನ ಸೊಸೆಯನ್ನೇ ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿರುವ ವಿಲಕ್ಷಣ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು (Daughter in law) ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿದ್ದಾನೆ. ತಂದೆ, ಪತ್ನಿಯೊಂದಿಗೆ ಓಡಿ ಹೋಗಿರುವ ವಿಷಯ ತಿಳಿದ ಮಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು (Complaint) ನೀಡಿದ್ದಾನೆ. ಮಾತ್ರವಲ್ಲ ತಮ್ಮ ತಂದೆ ಓಡಿಹೋಗುವ ಮುನ್ನ ಬೈಕ್ ಕದ್ದಿದ್ದಾರೆ ಎಂದು ಆರೋಪಿಸಿದ್ದಾನೆ. ಬುಂದಿ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲೋರ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಇದೆಂಥಾ ವಿಚಿತ್ರ ಸಂಪ್ರದಾಯ..ವರನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತಿಸಿದ ಅತ್ತೆ!
ಪವನ್ ವೈರಾಗಿ ಎಂಬಾತ ತನ್ನ ತಂದೆ ರಮೇಶ್ ವೈರಾಗಿ ತನ್ನ ಪತ್ನಿ (Wife)ಯೊಂದಿಗೆ ಓಡಿ ಹೋಗಿರುವುದಾಗಿ ದೂರು ಸಲ್ಲಿಸಿದ್ದಾನೆ. ನನ್ನ ತಂದೆ ಹೆಂಡತಿಯನ್ನು ನನ್ನಿಂದ ದೂರ ಮಾಡಿದ್ದಾರೆ ಎಂದು ಪವನ್ ಆರೋಪಿಸಿದ್ದಾನೆ. ಪವನ್ ಅವರಿಗೆ ಆರು ತಿಂಗಳ ಮಗಳಿದ್ದಾಳೆ. ಈ ಹಿಂದೆಯೂ ತನ್ನ ತಂದೆ ರಮೇಶ್ ನನ್ನ ಹೆಂಡತಿಯೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಪತ್ನಿ ಅಮಾಯಕಿಯಾಗಿದ್ದು ಆಕೆ ತಂದೆಯಿಂದ ಮೋಸ ಹೋಗಿದ್ದಾಳೆ. ಮಾತ್ರವಲ್ಲ, ದೂರು ದಾಖಲಿಸಿದ ನಂತರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲಎಂದು ಪವನ್ ಆರೋಪಿಸಿದ್ದಾನೆ.
ಪವನ್ ಅವರ ಆರೋಪವನ್ನು ಉದ್ದೇಶಿಸಿ ಸದರ್ ಠಾಣಾಧಿಕಾರಿ ಅರವಿಂದ್ ಭಾರದ್ವಾಜ್ ಮಾತನಾಡಿ, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಕಳ್ಳತನವಾದ ದ್ವಿಚಕ್ರ ವಾಹನದ (Bike) ಜೊತೆಗೆ ಪರಾರಿಯಾಗಿರುವ ದಂಪತಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರೆಗೂ ಯಾವುದೇ ವಿವರಗಳನ್ನು ಪೊಲೀಸರು ಹಂಚಿಕೊಂಡಿಲ್ಲ.ಈ ಹಿಂದೆಯೂ ಇಂಥಾ ಘಟನೆಗಳು ನಡೆದಿದ್ದವು. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 40 ವರ್ಷದ ಅತ್ತೆಯೊಬ್ಬಳು ತನ್ನ ಅಳಿಯನನ್ನು ಪ್ರೀತಿಸುತ್ತಿದ್ದಳು. ಮಾವನಿಗೆ ಕಂಠಪೂರ್ತಿ ಕುಡಿಸಿ ಇಬ್ಬರೂ ಓಡಿ ಹೋಗಿದ್ದರು.
ಅತ್ತೆ ಮನೆಗೆ ಹೋಗುವ ಮಗಳಿಗೆ ತಾಯಿ ಇದನ್ನೆಲ್ಲಾ ಹೇಳಿ ಕೊಟ್ರೆ ಚೆನ್ನಾಗಿರುತ್ತೆ
40ರ ಹರೆಯದ ಅತ್ತೆಯೊಂದಿಗೆ ಓಡಿ ಹೋದ ಅಳಿಯ
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಲ್ಕು ಮಕ್ಕಳ ವಿವಾಹಿತ ಅತ್ತೆ ತನ್ನ ಅಳಿಯ (son-in-law)ನೊಂದಿಗೆ ಓಡಿಹೋಗಿದ್ದಾಳೆ. ಅತ್ತೆಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಕ್ಕಳಿದ್ದು, ಎಲ್ಲಾ ನಾಲ್ಕು ಮಕ್ಕಳೂ ಮದುವೆಯಾಗಿದ್ದಾರೆ. ಹಾಗೆಯೇ ಮಹಿಳೆಯೊಂದಿಗೆ ಓಡಿಹೋದ ಅಳಿಯನಿಗೆ ಮೂವರು ಮಕ್ಕಳಿದ್ದಾರೆ. ಹೀಗಿದ್ದೂ ಅತ್ತೆ (Mother in law) ಯೆಂದರೆ ನನಗೆ ಭಾಳಾ ಪ್ರೀತಿ ಅಂತ ವ್ಯಕ್ತಿ ಮಾವನಿಗೆ ಬಲವಂತವಾಗಿ ಮದ್ಯಪಾನ (Alcohol) ಮಾಡಿಸಿ ಅತ್ತೆಯೊಂದಿಗೆ ಪಲಾಯನಗೈದಿದ್ದಾನೆ. ಆದ್ರೆ ಅಳಿಯನೇ ಅತ್ತೆಯನ್ನು ಅಪಹರಿಸಿದ್ದಾನೆ ಎಂದು ಮಹಿಳೆಯ ಸಂಬಂಧಿಕರು ದೂರು (Complaint) ದಾಖಲಿಸಿದ್ದಾರೆ.
ಸಿರೋಹಿ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಅತ್ತೆ ಮತ್ತು ಅಳಿಯನ ನಡುವೆ ಈ ಹಿಂದೆಯೇ ಪ್ರೀತಿ (Love) ಮೂಡಿತ್ತು. ಇಬ್ಬರೂ ಸರಿಯಾದ ಸಮಯಕ್ಕೆ ಕಾಯುತ್ತಿದ್ದರು. ಓಡಿ ಹೋಗುವ ಮುನ್ನ ಅಳಿಯ, ಮಾವನಿಗೆ ಕಂಠಪೂರ್ತಿ ಕುಡಿಸಿರುವುದು ಕೂಡ ಬೆಳಕಿಗೆ ಬಂದಿದೆ. ಮಾವ ಕುಡಿದು ಬಂದ ನಂತರ ಅತ್ತೆ ಮತ್ತು ಅಳಿಯ ಮನೆಯಿಂದ ಓಡಿ ಹೋಗಿದ್ದಾರೆ.