ತಾಯಂದಿರು ತಮ್ಮ ಮಕ್ಕಳಿಗಾಗಿ ಜೀವನದಲ್ಲಿ ಎಲ್ಲಾ ಕಷ್ಟವನ್ನು ಎದುರಿಸಲು ಸಿದ್ಧವಾಗುತ್ತಾರೆ. ಮಕ್ಕಳಿಗೆ ನೋವಾದರೆ ಕಣ್ಣೀರಾಗುತ್ತಾರೆ. ತಾಯಿ-ಮಕ್ಕಳ ಬಾಂಧವ್ಯವೇ ಅಂಥದ್ದು. ಅದು ಅಕ್ಷರಹಃ ನಿಜವೆಂಬುದು ಇಲ್ಲಿ ಸಾಬೀತಾಗಿದೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ.
ಬಾಗಲಕೋಟೆ: ಅಮ್ಮ ಎಂದರೆ ಆಕೆ ಎಲ್ಲವೂ ಹೌದು. ಪ್ರೀತಿ, ಶಕ್ತಿ, ಧೈರ್ಯ, ನಂಬಿಕೆ ಎಲ್ಲವೂ.ಎಲ್ಲಾ ತಾಯಂದಿರು ತಮ್ಮ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಾರೆ. ಮಕ್ಕಳನ್ನೇ ಸರ್ವಸ್ವ ಎಂದುಕೊಳ್ಳುತ್ತಾರೆ. ಮಕ್ಕಳಿಗಾಗಿ ಜೀವನದಲ್ಲಿ ಎಲ್ಲಾ ಕಷ್ಟವನ್ನು ಎದುರಿಸಲು ಸಿದ್ಧವಾಗುತ್ತಾರೆ. ಮಕ್ಕಳಿಗೆ ನೋವಾದರೆ ಕಣ್ಣೀರಾಗುತ್ತಾರೆ. ತಾಯಿ-ಮಕ್ಕಳ ಬಾಂಧವ್ಯವೇ ಅಂಥದ್ದು. ಅದು ಅಕ್ಷರಹಃ ನಿಜವೆಂಬುದು ಇಲ್ಲಿ ಸಾಬೀತಾಗಿದೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಮಗ ದಶರಥ ದುರ್ವೆ (60), ತಾಯಿ ಶಾವಕ್ಕ ದುರ್ವೆ (90) ಮೃತ ದುರ್ದೈವಿಗಳು. ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ಮಗ ದಶರಥ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು (Death). ದುಃಖಿತರಾಗಿದ್ದ ತಾಯಿ, ಮಗನ ಅಗಲಿಕೆ ನೋವು ಸಹಿಸದೇ ಹೃದಯಾಘಾತದಿಂದ (Heartattack) ಸಂಜೆ ಸಾವನ್ನಪ್ಪಿದರು. ಸಾವಿನಲ್ಲೂ ಒಂದಾದ ತಾಯಿ-ಮಗ (Son-mother) ಅಂತ್ಯಕ್ರಿಯೆಯನ್ನು ಒಟ್ಟಿಗೇ ನಡೆಸಲಾಯಿತು. ತಾಯಿ ಮಗನ ಸಾವು ಕಂಡು ಗ್ರಾಮಸ್ಥರು ಮಮ್ಮಲ ಮರಗಿದರು.
ಡಿಜೆ ಸೌಂಡ್ ಗದ್ದಲ, ಹಾರ ಬದಲಿಸುತ್ತಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ ವರ!