Health Alert: ಮೂರ್ಖರ ಜತೆ ಕೆಲ್ಸ ಮಾಡ್ತೀರಾ? ಅಪಾಯ ಗ್ಯಾರಂಟಿ!

Published : Feb 06, 2022, 05:15 PM IST
Health Alert: ಮೂರ್ಖರ ಜತೆ ಕೆಲ್ಸ ಮಾಡ್ತೀರಾ? ಅಪಾಯ ಗ್ಯಾರಂಟಿ!

ಸಾರಾಂಶ

ಮೂರ್ಖರ ಜತೆ ಏಗುವ ಸ್ಕಿಲ್‌ ಎಲ್ಲರಲ್ಲೂ ಇರುವುದಿಲ್ಲ. ಹೀಗಾಗಿ, ಅವರ ಜತೆ ಕೆಲಸ ಮಾಡುವುದು ಸುಲಭವಲ್ಲ. ಕಚೇರಿಗಳಲ್ಲಿ ಮೂರ್ಖರಿದ್ದರೆ ಅವರನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಆದರೆ, ಎಚ್ಚರಿಕೆ, ಅವರಿಂದ ನಿಮ್ಮ ಆರೋಗ್ಯ ಹದಗೆಡಬಹುದು.  

ಬುದ್ಧಿವಂತರ (Wise) ಜತೆ ಕೆಲಸ ಮಾಡಬಹುದು, ದಡ್ಡರ ಜತೆಯೂ ಸಾಗಬಹುದು. ಆದರೆ, ಮೂರ್ಖರ (Idiot) ಜತೆ ಮಾತ್ರ ಏಗಲು ಸಾಧ್ಯವಿಲ್ಲ. ಅದು ಭಾರೀ ಕಷ್ಟ ಕಷ್ಟ. ಇದು ಕೇವಲ ತಮಾಷೆಯ ಮಾತಲ್ಲ, ಒಮ್ಮೆ ನಿಮ್ಮ ಸುತ್ತಮುತ್ತ ಯಾರಾದರೂ ಮೂರ್ಖರಿದ್ದರೆ ಅವರ ಕುರಿತು ಕ್ಷಣಕಾಲ ಯೋಚಿಸಿನೋಡಿ. “ಅಬ್ಬಾ, ಅವರ ಸಹವಾಸವೇ ಬೇಡʼ ಎನಿಸುತ್ತದೆ. ನಮ್ಮ ಮನೆಯಲ್ಲಿ ಮೂರ್ಖರಿದ್ದರೆ ಅವರನ್ನು ಹೇಗಾದರೂ ಸಂಭಾಳಿಸಬಹುದು. ಬೈದು, ಪದೇ ಪದೆ ತಿಳಿವಳಿಕೆ ಹೇಳುತ್ತಲಾದರೂ ನಿಯಂತ್ರಿಸಬಹುದು. ಆದರೆ, ಕಚೇರಿಯಲ್ಲಿ ಅಂಥವರೇ ಸಹೋದ್ಯೋಗಿ(Colleague)ಗಳಾದರೆ…? ನೀವು ಸಾಯುವುದು ನಿಶ್ಚಿತ!

ಹೌದು, ಮೂರ್ಖರು (Foolish) ಎಲ್ಲಿದ್ದರೂ ಮೂರ್ಖರೇ. ಅವರು ಇನ್ನೊಬ್ಬರ ಪ್ರಾಣ(Life)ಕ್ಕೆ ಸಂಚಕಾರ ತರುವಷ್ಟು ಅಪಾಯಕಾರಿಗಳಾಗಿರುತ್ತಾರೆ. ಅಚ್ಚರಿ ಬೇಡ. ಸಿಗರೇಟು, ಅಧಿಕ ಕೆಫೀನ್‌, ಜಿಡ್ಡಿನ ಆಹಾರಗಳು (Greasy Food) ಆರೋಗ್ಯಕ್ಕೆ ಎಷ್ಟು ಹಾನಿಕಾರಕವಾಗಬಲ್ಲವೋ ಅಷ್ಟೇ ಪ್ರಮಾಣದಲ್ಲಿ ಮೂರ್ಖರೂ ಇನ್ನೊಬ್ಬರ ಆರೋಗ್ಯಕ್ಕೆ ಹಾನಿ ತರಬಲ್ಲರು. ಈ ಕುರಿತು ಕಣ್ತೆರೆಸುವಂತಹ ಅಧ್ಯಯನವೊಂದು ಇತ್ತೀಚೆಗೆ ನಡೆದಿದೆ.

ಇಂದಿನ ಆಧುನಿಕ ಜೀವನದಲ್ಲಿ ಹೃದಯಾಘಾತ(Heart Attack)ವಾಗುವುದು ಅತಿ ಸಾಮಾನ್ಯವಾಗಿದೆ. ಅಪಾರ ಒತ್ತಡವೇ (Stress) ಹಾರ್ಟ್‌ ಅಟ್ಯಾಕ್‌ ಗೆ ಮೂಲ ಕಾರಣ. ಕಚೇರಿಗಳಲ್ಲಿ ಮೂರ್ಖರೊಂದಿಗೆ ದಿನವೂ ಏಗುವುದು ಅತ್ಯಂತ ಅಪಾಯಕಾರಿ (Dangerous) ಒತ್ತಡವನ್ನು ಸೃಷ್ಟಿಸುತ್ತದೆ ಎಂದು ಸ್ವೀಡನ್‌ ನ (Sweden) ಲಿಂಡ್‌ ಬರ್ಗ್‌ (Lind Burg) ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರದ ಅಧ್ಯಯನ ಇತ್ತೀಚೆಗೆ ಬಹಿರಂಗಪಡಿಸಿದೆ. 

ಮೂರ್ಖರ ಸಹವಾಸ

ಅಧ್ಯಯನದ ಪ್ರಮುಖರಾದ ಡಾ.ಡ್ಯಾಗ್ಮರ್‌ ಆಂಡರ್ಸನ್‌ (Dagmar Andersson) ಅವರ ತಂಡ ಸುಮಾರು 500ಕ್ಕೂ ಅಧಿಕ ಹೃದಯಾಘಾತದ ಪ್ರಕರಣಗಳ ಕುರಿತು ಅಧ್ಯಯನ ನಡೆಸಿತ್ತು. ಇದರಲ್ಲಿ ಅತಿ ಕಡಿಮೆ ಜನ ದೈಹಿಕವಾಗಿ ಯಾವುದೇ ಸಮಸ್ಯೆಗಳನ್ನು ಹೊಂದಿರಲಿಲ್ಲ. ಸದೃಢವಾಗಿಯೇ ಇದ್ದರು. ಬಳಿಕ ವೈದ್ಯರ  ತಂಡ ಅವರ ಜೀವನಪದ್ಧತಿ, ಮಾನಸಿಕ ಸ್ಥಿತಿಗತಿಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಿತ್ತು. ಆಗ ಅವರಲ್ಲಿ ಶೇ.62ರಷ್ಟು ಜನ ತಾವು  ಕಚೇರಿಯಲ್ಲಿ ಅತ್ತ ದಡ್ಡರೂ ಅಲ್ಲದ, ಇತ್ತ ಬುದ್ಧಿವಂತರೂ ಅಲ್ಲದ, ಸಾಮಾನ್ಯಜ್ಞಾನದ ಕನಿಷ್ಠ ಪ್ರಜ್ಞೆಯೂ ಇಲ್ಲದ, ಕೆಲಸದ ಬಗೆಗೆ ಸದಾ ನೆರವು ಬೇಡುವ ಚಿತ್ರವಿಚಿತ್ರ ಜನರ ಒಡನಾಟದ ಬಗ್ಗೆ ಹಂಚಿಕೊಂಡರು. ಅವರಿಂದಾದ ಕಿರಿಕಿರಿಗಳ ಬಗ್ಗೆ ಹೇಳಿಕೊಂಡರು. ಸಮಾಧಾನಕರ ಸಂಗತಿಯೆಂದರೆ, ಇವರೆಲ್ಲರೂ ಕಡಿಮೆ ಪ್ರಮಾಣದ ಹೃದಯಾಘಾತಕ್ಕೆ ತುತ್ತಾಗಿದ್ದರಿಂದ ಹೆಚ್ಚಿನ ಸಮಸ್ಯೆ ಆಗಿರಲಿಲ್ಲ.
ಈ ಪೈಕಿ ಬಹುತೇಕ ಎಲ್ಲರೂ ಕಚೇರಿಯಲ್ಲಿ ಮೂರ್ಖ ಜನರೊಂದಿಗೆ ಚರ್ಚೆ ಅಥವಾ ಅವರೊಂದಿಗೆ ಪ್ರಮುಖ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದ ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರ ಜತೆಗೆ ಕೆಲಸ ಮಾಡಿದ್ದುದು ಇವರಲ್ಲಿ ಒತ್ತಡ ಹಾಗೂ ಜಿಗುಪ್ಸೆಯನ್ನು ಸೃಷ್ಟಿಸಿತ್ತು.

Inspiring Story: ಇವರು ಮಗಳಿಗಾಗಿ ಚಿನ್ನ ಮಾಡಿಡಲಿಲ್ಲ, ಮಗಳನ್ನೇ ಚಿನ್ನದ ಹುಡುಗಿಯಾಗಿಸಿದರು

ಒಬ್ಬ ಮಹಿಳೆಯ ಕತೆ ಹೀಗಿದೆ. ಈ ಮಹಿಳೆಯ ಕಾರ್ಯದರ್ಶಿಯೊಬ್ಬಳು  ಕಂಪನಿಯೊಂದಕ್ಕೆ ಸೇರಿದ ಮಹತ್ವದ ತೆರಿಗೆ ದಾಖಲೆಗಳನ್ನು ಕಾಪಿ ಮಾಡುವ ಬದಲಾಗಿ ಅದನ್ನು ಹರಿದು ಚೂರು ಚೂರು ಮಾಡಿಹಾಕಿದ್ದಳು. ಈ ಘಟನೆಯ ದಿನವೇ ಮಹಿಳೆಗೆ ಹೃದಯಾಘಾತವಾಗಿತ್ತು. ಇನ್ನೋರ್ವ ಪುರುಷನ ಎದುರಿನ ಸಾಲಿನಲ್ಲಿ ಕುಳಿತ ಮಹಿಳೆಯೋರ್ವರು ಇವರಲ್ಲಿ ಪದೇ ಪದೆ ಕಂಪ್ಯೂಟರ್‌ ಸಮಸ್ಯೆಗೆ ಕರೆಕ್ಷನ್‌ ಕೇಳುತ್ತಿದ್ದಳು. ದಿನವೂ ಇದೇ ಕಿರಿಕಿರಿಯಾಗುತ್ತಿತ್ತು. ಒಂದು ದಿನವಂತೂ ವಿಪರೀತಕ್ಕೆ ಹೋದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಮೂರ್ಖರ ಜತೆ ಏಗೋದು ಸುಲಭವಲ್ಲ!
“ಮೂರ್ಖರೊಂದಿಗೆ ಒಡನಾಡಲು, ಏಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಮೂರ್ಖರು ತಮ್ಮ ಸಹೋದ್ಯೋಗಿಗಳ ಕೆಲಸವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಬಲ್ಲರು. ಸಾಮಾನ್ಯ ಉದ್ಯೋಗಿಗಳು ಅಂಥವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ತಮ್ಮನ್ನು ತಾವೇ ಹಳಿದುಕೊಳ್ಳುತ್ತ, ಹೆಚ್ಚಿನ ಕೆಲಸ ಮಾಡುತ್ತ ಒತ್ತಡಕ್ಕೆ ಒಳಗಾಗುತ್ತಾರೆ. ಅವರಿಗೆ ಹೇಳುವುದಕ್ಕೂ ಸಾಧ್ಯವಾಗದೆ ಭಾವನೆಗಳನ್ನು ತಮ್ಮೊಳಗೇ ಅದುಮಿಟ್ಟು(Suppress Feelings)ಕೊಳ್ಳುತ್ತಾರೆ. ಅದು ಒತ್ತಡವಾಗಿ ಹೃದಯಾಘಾತ ಸಂಭವಿಸುತ್ತದೆʼ ಎಂದು ಡಾ.ಆಂಡರ್ಸನ್‌ ಹೇಳಿದ್ದಾರೆ.

Health Tips: ಆಹಾರ ತಿಂದ ಮೇಲೆ ಚಳಿಯಾಗುತ್ತಾ ? ಇದೇ ಕಾರಣವಿರಬಹುದು

ಹೀಗಾಗಿ, ಕಚೇರಿಯಲ್ಲಿರುವ ಮೂರ್ಖರೊಂದಿಗೆ ಸಾಧ್ಯವಾದಷ್ಟು ಕೆಲಸ ಹಂಚಿಕೆ ಮಾಡಿಕೊಳ್ಳಲು ಮುಂದಾಗಬೇಡಿ. ಅವರೊಂದಿಗೆ ಕೆಲಸ ಮಾಡುವುದು ಅನಿವಾರ್ಯವಾದರೆ ಮತ್ತೊಬ್ಬರ ನೆರವನ್ನೂ ಪಡೆದುಕೊಳ್ಳಿ. ನೀವು ಮೆತ್ತಗಿದ್ದರೆ ಅವರು ತಮ್ಮದೇ ಧೋರಣೆ ತೋರುತ್ತಾರೆ. ಅವರೊಂದಿಗೆ ಬಿಗಿಯಾಗಿ ನಡೆದುಕೊಳ್ಳಿ. ಮೂರ್ಖರೊಂದಿಗೆ ಏಗುವ ಸ್ಕಿಲ್‌ (Skill) ರೂಢಿಸಿಕೊಳ್ಳಿ. ಬದಲಾಗಿ, ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌