
ಪ್ರೇಮಿ(Lover)ಗಳ ತಿಂಗಳು ಫೆಬ್ರವರಿ(February)ಯಲ್ಲಿ ವಿಶೇಷ ಖುಷಿ(Enjoy)ಯಿರುತ್ತದೆ. ಗುಲಾಬಿ ಡೇ,ಟೆಡ್ಡಿ ಡೇ,ಚಾಕೋಲೇಟ್ ಡೇ,ಹಗ್ ಡೇ,ವ್ಯಾಲಂಟೈನ್ ಡೇ ಹೀಗೆ ಅನೇಕ ವಿಶೇಷ ದಿನಗಳನ್ನು ಈ ತಿಂಗಳಿನಲ್ಲಿ ಆಚರಿಸುತ್ತೇವೆ. ಅದ್ರಲ್ಲಿ ಕಿಸ್ಸಿಂಗ್ ಡೇ ಕೂಡ ಸೇರಿದೆ. ವಾರದ ಏಳನೇ ದಿನ ಅಂದರೆ ಫೆಬ್ರವರಿ 13 ರಂದು ಕಿಸ್ ಡೇ (Kiss Day )ಆಚರಿಸಲಾಗುತ್ತದೆ. ಪ್ರೀತಿಯನ್ನು ಅನೇಕ ರೀತಿಯಲ್ಲಿ ವ್ಯಕ್ತಪಡಿಸಬಹುದು. ಅದರಲ್ಲಿ ಮುತ್ತು ಕೂಡ ಸೇರಿದೆ. ನಮ್ಮ ಪ್ರೀತಿ ಪಾತ್ರರಿಗೆ ಮುತ್ತಿಡುವ ಮೂಲಕ ನಾವು ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತೇವೆ. ಮುತ್ತು ಕೇವಲ ಸಂಗಾತಿಗೆ ಸೀಮಿತವಾಗಿಲ್ಲ. ಮಕ್ಕಳನ್ನು ಅಪ್ಪಿಮುದ್ದಾಡುವಾಗ್ಲೂ ನಾವು ಮುತ್ತಿನ ಮಳೆಗರೆಯುತ್ತೇವೆ. ಮುತ್ತು ಗಾಢ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನ ಮಾತ್ರವಲ್ಲ. ಚುಂಬನದಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಚುಂಬನವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಚುಂಬನವು ಅನೇಕ ದೈಹಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಚುಂಬನದ ಸಮಯದಲ್ಲಿ ದೇಹದ 34 ಮುಖದ ಸ್ನಾಯುಗಳು ಮತ್ತು 112 ಭಂಗಿ ಸ್ನಾಯುಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ನಿಮ್ಮ ಸ್ನಾಯುಗಳು ಬಿಗಿಯಾಗಿ ಮತ್ತು ಟೋನ್ ಆಗಿರುತ್ತವೆ. ಚುಂಬನದಿಂದ, ಮುಖದಲ್ಲಿ ರಕ್ತ ಪರಿಚಲನೆಯು ವೇಗವಾಗಿರುತ್ತದೆ. ಇದರಿಂದಾಗಿ ಚರ್ಮವು ದೀರ್ಘಕಾಲದವರೆಗೆ ಯುವ ಮತ್ತು ಸುಂದರವಾಗಿ ಕಾಣುತ್ತದೆ. ಚುಂಬನವು ಅನೇಕ ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರ ಬಗ್ಗೆ ನಾವಿಂದು ಹೇಳ್ತೇವೆ.
ಚುಂಬನದ ಪ್ರಯೋಜನಗಳು :
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ : ಚುಂಬನವು ದೇಹದ ರೋಗನಿರೋಧಕ ಶಕ್ತಿಯನ್ನು ಸಹ ಬಲಪಡಿಸುತ್ತದೆ. ಆಶ್ಚರ್ಯವಾಗಿದ್ರೂ ಇದು ಸತ್ಯ. 2014 ರಲ್ಲಿ, ಮೈಕ್ರೋಬಯೋಮ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾಯಿಯಿಂದ ಬಾಯಿಗೆ ಚುಂಬಿಸುವುದರಿಂದ ಎರಡೂ ಪಾಲುದಾರರ ಲಾಲಾರಸ ಪರಸ್ಪರ ವರ್ಗವಾಗುತ್ತದೆ. ಲಾಲಾರಸದಲ್ಲಿ ಸ್ವಲ್ಪ ಪ್ರಮಾಣದ ಹೊಸ ಸೂಕ್ಷ್ಮಾಣುಗಳು ಇರಬಹುದು. ಅವುಗಳಿಗೆ ಒಡ್ಡಿಕೊಂಡಾಗ ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳ ವಿರುದ್ಧ ಪ್ರತಿಕಾಯಗಳನ್ನು ತಯಾರಿಸಲು ಪ್ರಾರಂಭಿಸುತ್ತದೆ. ಇದು ಭವಿಷ್ಯದಲ್ಲಿ ಆ ಸೂಕ್ಷ್ಮಾಣುಗಳಿಂದ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಒತ್ತಡ ಕಡಿಮೆಯಾಗುತ್ತದೆ : ಚುಂಬನವು ಒತ್ತಡ ಮತ್ತು ಆತಂಕವನ್ನು ಸಹ ಕಡಿಮೆ ಮಾಡುತ್ತದೆ. ವಾಸ್ತವವಾಗಿ, ಕಾರ್ಟಿಸೋಲ್ ಎಂಬ ಹಾರ್ಮೋನ್‌ನಿಂದಾಗಿ ಒತ್ತಡ ದೂರವಾಗುತ್ತದೆ. ಜನರು ಚುಂಬಿಸಿದಾಗ, ಅಪ್ಪಿಕೊಂಡಾಗ ಅಥವಾ ಪ್ರೀತಿಯನ್ನು ವ್ಯಕ್ತಪಡಿಸಿದಾಗ, ಮೆದುಳಿನಲ್ಲಿ ಕಾರ್ಟಿಸೋಲ್ ಮಟ್ಟವು ಕಡಿಮೆ ಇರುತ್ತದೆ. ಚುಂಬನವು ಮೆದುಳಿನಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವ ಚಿಕಿತ್ಸೆಯಾಗಿದೆ. ಸರಳವಾಗಿ ಹೇಳುವುದಾದರೆ, ಚುಂಬನವು ಮನಸ್ಥಿತಿಯನ್ನು ರಿಫ್ರೆಶ್ ಮಾಡುತ್ತದೆ. ವ್ಯಕ್ತಿಯು ಉಲ್ಲಾಸ ಅನುಭವಿಸಲು ನೆರವಾಗುತ್ತದೆ. ಚಡಪಡಿಕೆ ಮತ್ತು ನಿದ್ರಾಹೀನತೆ ಮತ್ತು ಆತಂಕ ದೂರವಾಗುತ್ತದೆ.
ಬೋಳುತಲೆಯ ಪುರುಷರಲ್ಲಿ ಹೆಚ್ಚು ಕಾಮಾಸಕ್ತಿ ಇರುತ್ತಾ?
ಅಧಿಕ ರಕ್ತದೊತ್ತಡ ನಿಯಂತ್ರಣ : ಅಧಿಕ ರಕ್ತದೊತ್ತಡದಿಂದ ಬಳಲುವ ಜನರಿಗೆ ಚುಂಬನವು ಹೆಚ್ಚು ಪರಿಣಾಮಕಾರಿ. ಚುಂಬಿಸಿದಾಗ, ನಿಮ್ಮ ಹೃದಯ ಬಡಿತ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ರಕ್ತನಾಳಗಳು ಹಿಗ್ಗುತ್ತವೆ. ಪರಿಣಾಮವಾಗಿ, ರಕ್ತದ ಹರಿವು ಉತ್ತಮವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಹೃದಯಕ್ಕೆ ಒಳ್ಳೆಯದು : ಚುಂಬನವು ಸೀರಮ್ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಚುಂಬನವು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ONLINE AUCTION: ಪತಿಯನ್ನು ಮಾರಾಟಕ್ಕಿಟ್ಟರೆ, ಮಹಿಳೆಯರು ಕ್ಯೂ ನಿಲ್ಲೋದಾ?
ತೂಕ ಇಳಿಕೆಗೆ ಸಹಕಾರಿ : ಚುಂಬನ ತೂಕ ನಷ್ಟಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಅಧ್ಯಯನಗಳ ಪ್ರಕಾರ, ನಿಜವಾಗಿಯೂ ಭಾವೋದ್ರಿಕ್ತ ಚುಂಬನದ ಸಮಯದಲ್ಲಿ ನಿಮಿಷಕ್ಕೆ ಎರಡು ಕ್ಯಾಲೊರಿ ಬರ್ನ್ ಮಾಡಬಹುದು. ಇದು ನಿಮ್ಮ ಚಯಾಪಚಯ ದರಕ್ಕಿಂತ ದ್ವಿಗುಣವಾಗಿರುತ್ತದೆ. ಇದರಿಂದ ತೂಕ ಇಳಿಕೆ ಸುಲಭವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.