
ಪ್ರತಿಯೊಬ್ಬರ ಜೀವನದಲ್ಲೂ ಮದುವೆ (Marriage) ಒಂದು ಸುಂದರ (Beautiful )ಕ್ಷಣ. ಮದುವೆ ನಿಶ್ಚಯವಾಗ್ತಿದ್ದಂತೆ ತಯಾರಿ ಶುರು ಮಾಡ್ತಾರೆ. ವಧು (bride )-ವರ(Groom)ರು ತಮ್ಮ ಜೀವನದ ಅತ್ಯಂತ ವಿಶೇಷ ದಿನ ಸದಾ ನೆನಪಿರಬೇಕೆಂದು ಅನೇಕ ಯೋಜನೆಗಳನ್ನು ಮಾಡ್ತಾರೆ. ಅವರ ತಯಾರಿ ಹೇಗೆ ಇರಲಿ,ಕೆಲ ಸಂಪ್ರದಾಯಗಳನ್ನು ಜನರು ಈಗಲೂ ಆಚರಿಸಿಕೊಂಡು ಬರ್ತಿದ್ದಾರೆ. ಮದುವೆಯಲ್ಲಿ ನಡೆಯುವ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ಉತ್ಸಾಹದಿಂದ ಅನುಸರಿಸಲಾಗುತ್ತದೆ. ನಮ್ಮ ದೇಶದಲ್ಲಿ ಮದುವೆಗಳು ವಿಭಿನ್ನತೆಯಿಂದ ಕೂಡಿವೆ. ಅಂತೆಯೇ, ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯಗಳಿವೆ. ಕೆಲವೆಡೆ ಮದುವೆಗಳಲ್ಲಿ ತೀರಾ ವಿಚಿತ್ರವಾದ ಆಚರಣೆಗಳು ನಡೆಯುತ್ತವೆ. ಇಂದು ಕೆಲ ಅಚ್ಚರಿ ಎನ್ನಿಸುವ ಮದುವೆ ಪದ್ಧತಿಗಳ ಬಗ್ಗೆ ನಾವು ಹೇಳ್ತೆವೆ.
ವಧುವಿನ ಅಳು : ಮದುವೆ ದಿನ ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವಾಗ ವಧು ಅಳುವುದು ನಮ್ಮಲ್ಲಿ ಸಾಮಾನ್ಯ. ಆದ್ರೆ ನಮ್ಮ ನೆರೆ ದೇಶ ಚೀನಾದಲ್ಲಿ ವಧು, ಮದುವೆಗೆ ಒಂದು ತಿಂಗಳ ಮೊದಲು ಪ್ರತಿದಿನ ಒಂದು ಗಂಟೆ ಅಳಬೇಕು. ಹೀಗೆ ಮಾಡಿದ್ರೆ ವಧುವಿನ ದಾಂಪತ್ಯ ಜೀವನ ಶುಭಕರವಾಗಿರಲಿದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಇದಲ್ಲದೆ ಮದುವೆಯಾಗುವ ಜೋಡಿ ಕೋಳಿ ಕಡಿದ ನಂತ್ರ ಯಕೃತ್ತನ್ನು ತೆಗೆದುಹಾಕಬೇಕು. ಹೀಗೆ ಮಾಡಿದ ನಂತರ ಅವರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಬಾತ್ ರೂಮಿಗೆ ಹೋಗುವಂತಿಲ್ಲ: ಬೋರ್ನಿಯೊ ಪ್ರದೇಶದಲ್ಲಿ ಮದುವೆಯ ದಿನದಂದು ವಧು ಮತ್ತು ವರನನ್ನು ಕೋಣೆಯಲ್ಲಿ ಲಾಕ್ ಮಾಡಲಾಗುತ್ತದೆ. ಅವರು ಎಲ್ಲಿಯೂ ಹೋಗಲು ಬಿಡುವುದಿಲ್ಲ. ಈ ಸಮಯದಲ್ಲಿ ಅವರು ಬಾತ್ರೂಮ್ ಗೂ ಹೋಗುವಂತಿಲ್ಲ.ಇದು ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ.
Kiss Day: ಪ್ರೀತಿಯ ಚುಂಬನದಲ್ಲಿದೆ ಆರೋಗ್ಯದ ಗುಟ್ಟು
ವರನಿಗೆ ಬೀಳುತ್ತೆ ಭರ್ಜರಿ ಒದೆ : ಮದುವೆಯ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲಿ ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಇಲ್ಲಿ ವಧುವನ್ನು ಮನೆಗೆ ಕರೆಯುವ ಮೊದಲು ವರ ತನ್ನ ಬೂಟುಗಳನ್ನು ತೆಗೆದುಹಾಕಬೇಕು. ನಂತರ ಅವನ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗುತ್ತದೆ. ವರನ ಸ್ನೇಹಿತರು ಕೋಲು ಅಥವಾ ಒಣ ಮೀನಿನಿಂದ ವರನ ಪಾದಗಳಿಗೆ ಹೊಡೆಯುತ್ತಾರೆ. ಈ ಸಂಪ್ರದಾಯವನ್ನು ಮೂಲತಃ ವರನ ಶಕ್ತಿಯನ್ನು ಪರೀಕ್ಷಿಸಲು ಮಾಡಲಾಗುತ್ತದೆ. ಈ ವೇಳೆ ವಧು ಕಡೆಯವರು ಆತನಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ತಾಳ್ಮೆ ಪರೀಕ್ಷೆ ಮಾಡುತ್ತಾರೆ.
Misunderstanding: ಸಂಬಂಧದಲ್ಲಿ ಅಪಾರ್ಥಗಳನ್ನು ಹೀಗೆ ಬಗೆಹರಿಸಿಕೊಳ್ಳಿ..
ಮದುವೆ ಸಂದರ್ಭದಲ್ಲಿ ಪುಡಿಯಾಗುತ್ತೆ ಗಾಜು : ಜರ್ಮನಿಯು ನವವಿವಾಹಿತರನ್ನು ಆಶೀರ್ವದಿಸಲು ತನ್ನದೇ ಆದ ಮಾರ್ಗವನ್ನು ಅನುಸರಿಸುತ್ತದೆ. ಮದುವೆಯ ದಿನದಂದು ಎಲ್ಲಾ ಅತಿಥಿಗಳು ವಧುವಿನ ಮನೆಯಲ್ಲಿ ಸೇರ್ತಾರೆ. ಅಲ್ಲಿ ಊಟದ ನಂತರ, ಪಾತ್ರೆಗಳನ್ನು ಒಡೆಯುವ ಆಚರಣೆಯಿದೆ. ವಧು ಮತ್ತು ವರರಿಗೆ ಅದೃಷ್ಟವನ್ನು ತರಲು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗ್ತಿದೆ. ಜರ್ಮನಿಯಲ್ಲಿ ನಡೆಯುವ ಈ ಸಂಪ್ರದಾಯವನ್ನು ಪೋಲ್ಟರ್‌ಬೆಂಡ್ ಎಂದೂ ಕರೆಯುತ್ತಾರೆ.ಅಷ್ಟೇ ಅಲ್ಲ, ಇದಾದ ನಂತರ ಹೊಸದಾಗಿ ಮದುವೆಯಾದ ದಂಪತಿ ಆ ಪಿಂಗಾಣಿ ಪಾತ್ರೆಗಳ ರಾಶಿಯನ್ನು ಒಟ್ಟಿಗೆ ಸ್ವಚ್ಛಗೊಳಿಸಬೇಕು. ಇದು ದುಷ್ಟಶಕ್ತಿಗಳನ್ನು ಓಡಿಸುತ್ತದೆ ಎಂದು ನಂಬಲಾಗಿದೆ. ದುಷ್ಟಶಕ್ತಿಗಳನ್ನು ಓಡಿಸಲು ಅತಿಥಿಗಳು ಈ ಪಾತ್ರೆಗಳನ್ನು ನೆಲದ ಮೇಲೆ ಎಸೆಯುತ್ತಾರೆ.
ವಧುವಿಗೆ ಬಿಳಿ ಉಡುಪು : ಸಾಮಾನ್ಯವಾಗಿ ಮದುವೆ ಸಂದರ್ಭದಲ್ಲಿ ಕಪ್ಪು ಹಾಗೂ ಬಿಳಿ ಉಡುಪನ್ನು ಅನೇಕರು ಧರಿಸುವುದಿಲ್ಲ. ಆದ್ರೆ ಜಪಾನಿನ ವಧುಗಳು ತಮ್ಮ ಮದುವೆಯ ದಿನದಂದು ಶಿಂಟೋ ಸಮಾರಂಭಗಳನ್ನು ಮಾಡುತ್ತಾರೆ. ಅವರು ತಲೆಯಿಂದ ಕಾಲಿನವರೆಗೆ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ. ಬಿಳಿ ಮೇಕಪ್ ಗೆ ಆದ್ಯತೆ ನೀಡ್ತಾರೆ. ಸಾಂಪ್ರದಾಯಿಕ ಜಪಾನೀಸ್ ಮದುವೆಯ ಡ್ರೆಸ್ ಸಾಮಾನ್ಯವಾಗಿ ತುಂಬಾ ದುಬಾರಿಯಾಗಿರುತ್ತದೆ. ಏಕೆಂದರೆ ಅವುಗಳು ಸಂಪೂರ್ಣವಾಗಿ ಕೈನಿಂದ ಮಾಡಲ್ಪಟ್ಟಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.