
ಹಿಂದೊಂದು ಕಾಲವಿತ್ತು. ಅಲ್ಲಿ ಜನರಿಗೆ ಪರಸ್ಪರ ನಗಲು, ಮಾತನಾಡಲು ಪರಿಚಯ ಬೇಕಿರಲ್ಲಿಲ್ಲ. ಸಹಾಯ ಮಾಡಲು, ಸಹಾಯ ಕೇಳಲು ಅಪರಿಚಿರೂ ಮುಂದೆ ಬರುತ್ತಿದ್ದರು. ಆದರೆ ಆ ಸೌಹಾರ್ದತೆ ಈಗಿಲ್ಲ. ಸ್ವಾರ್ಥಕ್ಕಾಗಿ ಓಡುವ ಜಗತ್ತಿನಲ್ಲಿ ಎಲ್ಲರೂ ಸ್ವಾರ್ಥಿಗಳೇ. ನಮ್ ನಮ್ಮದೇ ಸಾಕಾಗಿದೆ. ಇನ್ನೊಬ್ಬರ ಉಸಾಬರಿ ಯಾಕೆ ಬೇಕು ಅನ್ನೋ ಮನೋಭಾವ. ಹಿಂದೆಲ್ಲಾ ನೆರೆಮನೆಯವರು, ಓಣಿಯವರು ಎಂದರೆ ಒಂದೇ ಮನೆಯವರಂತೆ ಒಗ್ಗಟ್ಟಾಗಿರುತ್ತಿದ್ದರು. ಖುಷಿ ಹಂಚಿಕೊಳ್ಳುತ್ತಿದ್ದರು. ಕಷ್ಟಕ್ಕೆ ಪರಸ್ಪರ ನೆರವಾಗುತ್ತಿದ್ದರು. ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸುತ್ತಿದ್ದರು. ಆದರೆ ಅಂಥಾ ಪ್ರೀತಿ, ಒಗ್ಗಟ್ಟನ್ನು ಇವತ್ತಿನ ದಿನಗಳಲ್ಲಿ ನೋಡುವುದು ಕಷ್ಟ. ಆದರೆ ಮೈಸೂರಿನಲ್ಲೊಬ್ಬ ಮಹಿಳೆ ತಮ್ಮ ನೆರೆಹೊರೆಯವರ ಪ್ರೀತಿಯ ಕುರಿತು ಹಂಚಿಕೊಂಡಿರುವ ಹೃದಯಸ್ಪರ್ಶಿ ಪೋಸ್ಟ್ ವೈರಲ್ ಆಗಿದೆ
ಮೈಸೂರಿನ ಗಾಯತ್ರಿ ಎಂಬವರು ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 'ಮೈಸೂರೆಂದರೆ ಹೀಗೆಯೇ. ಯೋಗ ಮಾಡಲು ಮನೆಯಿಂದ ಹೊರ ಹೊರಟಿದ್ದೆ. ರೆಂಟ್ ಬೈಕ್ ಬುಕ್ ಮಾಡಲು ಮೊದಲೇ ನಾನೂ ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಒಬ್ಬರು ಬಂದರು. ನನಗೆ ದಾರಿ ತೋರಿಸಲು ನೆರವಾದರು. ಮನೆಯ ಡೋರ್ ಹಾಕಿದರೆ ನಮ್ಮ ಮನೆಯ ನಾಯಿ ಜೋರಾಗಿ ಬೊಗಳುತ್ತದೆ. ಹೀಗಾಗಿ ನಾನು ಮನೆಯ ಫ್ರಂಟ್ ಡೋರ್ ತೆರೆದಿಟ್ಟೇ ಹೋಗುತ್ತೇನೆ. ಇದರಿಂದ ನೆರೆಹೊರೆಯ ಮನೆಯವರು (Neighbours) ನಮ್ಮ ಮನೆಯ ಮೇಲೊಂದು ಕಣ್ಣಿಡಲು ನೆರವಾಗುತ್ತದೆ. ನೆರೆಹೊರೆಯವರು ವಿಶೇಷ ಅಡುಗೆ ಮಾಡಿದಾಗ ಕರೆಯುತ್ತಾರೆ. ಆತಿಥ್ಯ ವಹಿಸುತ್ತಾರೆ. ನಿಜವಾಗಲೂ ಮೈಸೂರು ತುಂಬಾ ಸುಂದರವಾಗಿದೆ. ಅಥವಾ ನಾನಿರುವ ಸ್ಟ್ರೀಟ್‌ನ ಜನರು ಅದ್ಭುತವಾಗಿದ್ದಾರೆ. ಅದು ಏನೇ ಇರಲಿ ಈ ನಗರದಲ್ಲಿ ಇರುವುದಕ್ಕೆ ನಾನು ಸಂತೋಷವಾಗಿದ್ದೇನೆ, ಧನ್ಯಳಾಗಿದ್ದೇನೆ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹತ್ತು ವರ್ಷದ ಹಿಂದೆ ಹೀಗಿತ್ತು ಬೆಂಗಳೂರಿನ ಈ ರಸ್ತೆ, ಯಾವುದು ಗೊತ್ತಾಯ್ತಾ ?
ಗಾಯತ್ರಿ, ತನ್ನ ನೆರೆಹೊರೆಯವರಲ್ಲಿ ಒಬ್ಬರು ನನಗೆ ಬಿಸಿಬೇಳೆ ಬಾತ್ ಕಳುಹಿಸಿದರೆ, ಇನ್ನೊಬ್ಬರು ಸಾಂಬಾರ್ ಕಳುಹಿಸುತ್ತಾರೆ. ಮತ್ತೊಬ್ಬ ನೆರೆಹೊರೆಯವರು ತನ್ನ ನಾಯಿಗಾಗಿ ಬಿಸ್ಕತ್ತುಗಳನ್ನು ಕಳುಹಿಸುತ್ತಾರೆ. ಪ್ರತಿಯಾಗಿ, ಅವಳು ಏನು ಅಡುಗೆ (Cooking) ಮಾಡಿದರೂ ಅದರಲ್ಲಿ ಒಂದು ಭಾಗವನ್ನು ಹಂಚಿಕೊಳ್ಳುತ್ತಾಳೆ. ಇಡೀ ಬೀದಿಯು ಒಂದು ದೊಡ್ಡ ಕುಟುಂಬ (Family)ದಂತೆ ಭಾಸವಾಗುತ್ತದೆ. ಅವರವರ ಅಡುಗೆಮನೆಯಲ್ಲಿ ಪಕ್ಕದ ಮನೆಯ ಪ್ಲೇಟ್‌ಗಳು ಮತ್ತು ಕಪ್‌ಗಳನ್ನು ನಿಯಮಿತವಾಗಿ ಹುಡುಕುವುದು ಸಾಮಾನ್ಯವಾಗಿದೆ ಎಂದು ಗಾಯತ್ರಿ ಹೇಳುತ್ತಾರೆ.
ಮಹಿಳೆ (Woman) ಮಾಡಿರುವ ಟ್ವೀಟ್ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನೆರೆಹೊರೆಯ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. 'ಮೇಡಂ, ಇದು ಮೈಸೂರು ಮಾತ್ರವಲ್ಲ, ಇಡೀ ಕರ್ನಾಟಕದ ಹಲವೆಡೆ ಒಂದೇ ಆಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಕಛೇರಿಯಲ್ಲಿ ನನ್ನ ಸ್ನೇಹಿತರು ಪ್ರತಿದಿನ ನನಗೆ ಊಟವನ್ನು ಕೊಡುತ್ತಿದ್ದರು. ಏಕೆಂದರೆ ನಾನು ನಮ್ಮ ಆಫೀಸ್ ಕ್ಯಾಂಟೀನ್‌ನ ಆಹಾರವನ್ನು ನಾನು ಇಷ್ಟಪಡುತ್ತಿರಲ್ಲಿಲ್ಲ' ಎಂದು ತಿಳಿಸಿದ್ದಾರೆ.
ಸಹಪಾಠಿಯ ಪೀರಿಯಡ್ಸ್ ಸಮಯದಲ್ಲಿ ಪ್ಯಾಡ್, ಐಸ್ ಕ್ರೀಂ ಕೊಡಿಸಿ ನೆಟ್ಟಿಗರ ಮನ ಗೆದ್ದ ಯುವಕ!
ಇನ್ನೊಬ್ಬ ಬಳಕೆದಾರರು ಬದಲಾಗುತ್ತಿರುವ 'ಬೆಂಗಳೂರಿನ ಕೆಲವು ಜನರು ಮತ್ತು ಸ್ಥಳಗಳು ಇನ್ನೂ ಪರಂಪರೆಯನ್ನು ಉಳಿಸಿಕೊಂಡಿವೆ, ಆದರೆ ಜನರ ನಡುವಿನ ಬೆಚ್ಚಗಿನ ಸಂಪರ್ಕವು ನಿಧಾನವಾಗಿ ಕಳೆದುಹೋಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ನಗರದಲ್ಲಿ ಬೆಳೆದಿದ್ದರೂ ನಾನು ಕೂಡ ಇದನ್ನು ಅನುಭವಿಸಿದ್ದೇನೆ. ಈಗ ಕೊಯಮತ್ತೂರಿನಲ್ಲಿ, ತಮ್ಮ ಅಡಿಗೆ ತೋಟದಿಂದ ತಾಜಾ ಉತ್ಪನ್ನಗಳನ್ನು ನನಗೆ ನೀಡುವ ನೆರೆಹೊರೆಯವರೂ ನನಗಿದ್ದಾರೆ. ನಾನು ಅದೃಷ್ಟಶಾಲಿಯಾಗಿದ್ದೇನೆ' ಎಂದು ಕಾಮೆಂಟಿಸಿದ್ದಾರೆ.
ಇನ್ನೊಬ್ಬ ವ್ಯಕ್ತಿ 'ವಾವ್, ಅಂಥಾ ಜನರ ಮಧ್ಯೆ ವಾಸಿಸಲು ಯಾರು ಬಯಸುವುದಿಲ್ಲ. ಹೆಚ್ಚಿನವರು ಪರಸ್ಪರ ತಿಳಿದಿರುವ ಮತ್ತು ಒಂದು ರೀತಿಯ ಸಮುದಾಯ ಪ್ರಜ್ಞೆ ಇರುವ ಕ್ವಾರ್ಟರ್ಸ್' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಒಟ್ನಲ್ಲಿ ನೆರೆಹೊರೆಯವರ ಪ್ರೀತಿಯ ಬಗ್ಗೆ ಮಹಿಳೆ ಮಾಡಿರೋ ಪೋಸ್ಟ್ ಸಾಮಾಜಿಕ ಬಂಧಗಳನ್ನು ಮತ್ತೆ ನೆನಪಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.