ಸೂಕ್ತ ಸಂಗಾತಿ ದೊರೆಯುವುದು ಅದೃಷ್ಟವೇನಲ್ಲ. ಸ್ವಲ್ಪ ಮುಕ್ತವಾದ ಮನಸ್ಸಿದ್ದರೆ, ವಾಸ್ತವದ ನೆಲೆಗಟ್ಟಿನಲ್ಲಿ ಚಿಂತಿಸುವ ಧೋರಣೆ ಹೊಂದಿದ್ದರೆ, ಸ್ವಯಂ ಪ್ರೀತಿ ಹೊಂದಿದ್ದರೆ, ಹಲವು ರೀತಿಯ ಗೀಳುಗಳಿಂದ ಮುಕ್ತವಾಗಿದ್ದರೆ ಸುಲಭವಾಗಿ ಸಂಗಾತಿಯನ್ನು ಗುರುತಿಸಬಹುದು.
ಯಾರನ್ನೋ ನೋಡಿದಾಕ್ಷಣ ಪ್ರೀತಿ ಒಡಮೂಡುವುದಿಲ್ಲ. ಭೇಟಿಯಾದ ತಕ್ಷಣ ಇವರೇ ನಮ್ಮ ಆತ್ಮದ ಸಂಗಾತಿ ಎನ್ನುವ ಭಾವನೆ ಉಂಟಾಗುವುದಿಲ್ಲ. ಕೆಲವೇ ಕೆಲವರ ಜೀವನದಲ್ಲಿ ಇದು ಸಂಭವಿಸಿರಬಹುದು. ಆದರೆ, ಸಾಮಾನ್ಯವಾಗಿ ಪ್ರೀತಿಪಾತ್ರರನ್ನು ಗುರುತಿಸಲು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಯಾರ್ಯಾರನ್ನೋ ತಮ್ಮವರೆಂದು ಭ್ರಮಿಸುತ್ತ ಸಮಯ ಕಳೆದುಹೋಗಬಹುದು. ಕೆಲವೊಮ್ಮೆ ಕ್ರಶ್ ಗಳಲ್ಲೇ ದಿನಗಳು ಸವೆಯಬಹುದು. ಅಥವಾ ಪ್ರೀತಿ-ಪ್ರೇಮವೆಂದು ಓಡಾಡಿದ ಬಳಿಕವೂ ದೂರವಾಗಬಹುದು. ಆಗೆಲ್ಲ ಹೃದಯ ಚೂರಾದಂತೆ ಅನಿಸಬಹುದು. ಒಟ್ಟಿನಲ್ಲಿ ನಿಮ್ಮ ಬದುಕಿಗೆ ಸಂಪೂರ್ಣ ಪ್ರೀತಿಯೊಂದು ದಕ್ಕಿದೆ ಎನ್ನುವ ಭಾವನೆಯೇ ಬಾರದಿರಬಹುದು. ಇಂಥದ್ದು ಹಲವರ ಜೀವನದಲ್ಲಿ ನಡೆಯುತ್ತದೆ. ಅವರು ಉತ್ತಮ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾರೆ. ನೈಜವಾದ ಸಾಂಗತ್ಯಕ್ಕಾಗಿ ನಿರೀಕ್ಷೆ ಮಾಡುತ್ತಾರೆ. ನೀವೂ ಸಹ ಈ ಸಾಲಿಗೆ ಸೇರಿದ್ದರೆ ಕೆಲವು ತಪ್ಪುಗಳನ್ನು ಎಂದಿಗೂ ಮಾಡಬಾರದು. ಅವುಗಳಿಂದಾಗಿ ಉತ್ತಮ ಸಾಂಗತ್ಯ ದಕ್ಕದೇ ಹೋಗಬಹುದು. ಉದಾಹರಣೆಗೆ, ನಿಮ್ಮನ್ನು ನೀವು ನಿರ್ಲಕ್ಷ್ಯ ಮಾಡುವುದರಿಂದ ಉತ್ತಮ ಪ್ರೀತಿ ಸಿಗುವುದಿಲ್ಲ. ನಿಮ್ಮನ್ನೇ ಪ್ರೀತಿಸಿಕೊಳ್ಳಲಾರದವರು ಇನ್ನೊಬ್ಬರನ್ನು ಪ್ರೀತಿಸುವುದು ಸಾಧ್ಯವೇ? ಆಂತರಿಕ ಸಂಬಂಧ ಚೆನ್ನಾಗಾದರೆ ಮಾತ್ರ ಮತ್ತೊಬ್ಬರೊಂದಿಗೆ ಸಾಂಗತ್ಯ ಹೊಂದಲು ಸಾಧ್ಯವಾಗುತ್ತದೆ. ನಿಮ್ಮನ್ನು ನೀವು ಅಲಕ್ಷ್ಯ ಮಾಡುವ ಸ್ವಭಾವ ಹೊಂದಿದ್ದರೆ ಈಗಲೇ ಬದಲಿಸಿಕೊಳ್ಳಿ. ಜತೆಗೆ, ಇಂತಹದ್ದೇ ಕೆಲವು ತಪ್ಪುಗಳನ್ನು ಮಾಡಬೇಡಿ.
• ನಿಮ್ಮತನದ ಗೀಳು (Obsessing Your Type)
ನೀವು “ನಿಮ್ಮತನ’ದ ಗೀಳನ್ನು ಹೊಂದಿದ್ದೀರಾ? ಸಾಮಾನ್ಯವಾಗಿ ನಾವೆಲ್ಲ ಮತ್ತೊಬ್ಬರ ವಿವಿಧ ಗುಣಗಳ ಬಗ್ಗೆ ಆಕರ್ಷಣೆ (Attraction) ಹೊಂದುತ್ತೇವೆ. ಆದರೆ, ನೀವು ಮತ್ತೊಬ್ಬರಲ್ಲಿ ನಿಮ್ಮಂಥದ್ದೇ ಗುಣಗಳ ನಿರೀಕ್ಷೆಯಲ್ಲಿದ್ದರೆ ಅದು ಸರಿಯಲ್ಲ. ನಿಮ್ಮ ಇಷ್ಟ (Likings), ಆಸಕ್ತಿ, ಧೋರಣೆ, ಹವ್ಯಾಸಗಳು ಇನ್ನೊಬ್ಬರಲ್ಲೂ ಇರಬೇಕು ಎಂದರೆ ಅದು ಸಾಧ್ಯವೂ ಇಲ್ಲ. ಇಂತಹ ಮನಸ್ಥಿತಿ (Mentality) ನಿಮ್ಮದಾಗಿದ್ದರೆ ಸೂಕ್ತ ಸಂಗಾತಿ ಸಿಗುವುದು ಸುಲಭವಲ್ಲ.
ನಿಮ್ಮವರ ಜೊತೆ ಜಗಳ ಮಾಡಿ ಮಾತು ಬಿಟ್ಟಿದ್ದೀರಾ? ಮತ್ತೆ ಮಾತನಾಡಲು ಟಿಪ್ಸ್ ಹೀಗೆ ಮಾಡಿ
• ಅತಿಯಾದ ಯೋಚನೆ, ಅತಿ ವಿಮರ್ಶೆ (Over Thinking, Over Analyzing)
ಪ್ರತಿಯೊಂದು ಸನ್ನಿವೇಶ (Situation), ವ್ಯಕ್ತಿಗಳ (Person) ಬಗ್ಗೆ ಅತಿಯಾಗಿ ಯೋಚಿಸುವುದು, ಅತಿಯಾಗಿ ವಿಮರ್ಶೆ ಮಾಡುವುದು ಎಂದಿಗೂ ಸರಿಯಲ್ಲ. ಇದರಿಂದ ಮನದಲ್ಲಿ ವಾಸ್ತವದಿಂದ ಹೊರತಾದ ಬೇರೆಯದೇ ಕಲ್ಪನೆ (Imagine) ಸೃಷ್ಟಿಯಾಗುತ್ತದೆ. ಇದರಿಂದ ಸಾಕಷ್ಟು ನಿರಾಶೆ (Disappoint) ಎದುರಾಗುತ್ತದೆ. ಮುಕ್ತ ಭಾವನೆಯಿಂದ ಎಲ್ಲವನ್ನೂ ನೋಡಿದರೆ ವಿಷಯ ಸರಳವಾಗುತ್ತದೆ. ಆಗಲೇ ಸೂಕ್ತ ಸಂಗಾತಿಯೂ (Partner) ಸಿಗುತ್ತಾರೆ.
• ಅವರು ಬೇಡ, ಇವರು ಸರಿಯಿಲ್ಲ
ಕೆಲವರು ಹೇಳುವುದನ್ನು ಕೇಳಿರಬಹುದು, “ಬೇರೆ ಎಲ್ಲವೂ ಓಕೆ, ಆದರೆ, ಹುಡುಗ ಸಾಫ್ಟ್ ವೇರ್ (Software) ಉದ್ಯೋಗದಲ್ಲಿ ಇಲ್ಲ’. ಅಂದರೆ, ಇಲ್ಲಿ ಹುಡುಗಿಯೋ, ಹುಡುಗಿಯ ಮನೆಯವರೋ ಹುಡುಗನ ಸಾಫ್ಟ್ ವೇರ್ ಉದ್ಯೋಗಕ್ಕೇ ಆದ್ಯತೆ ನೀಡುತ್ತಿರುತ್ತಾರೆ. ಆತನ ವ್ಯಕ್ತಿತ್ವಕ್ಕೆ (Personality) ಅಲ್ಲ. ಹೀಗಾದಾಗ ಒಳ್ಳೆಯ ಸಂಬಂಧ ಹೇಗೆ ಉಂಟಾಗಲು ಸಾಧ್ಯ? ಹಾಗೆಯೇ, ಎದುರಾದ ಪ್ರತಿಯೊಬ್ಬರ ಬಗ್ಗೆಯೂ ಏನಾದರೊಂದು ಕೊರತೆ ತೆಗೆಯುತ್ತ ಹೋದರೆ ಅವರ ಮನಸ್ಸನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ.
Relationship Tips: ಸಂಗಾತಿ ಮಾತು ಕೇಳಿಸ್ಕೊಳ್ಳೋಕೆ ತಲೆನೋವಾ? ಸಂಬಂಧ ಸುಧಾರಣೆ ಹೇಗೆ?
• ಡೇಟಿಂಗ್ ಆಪ್ (Dating App) ಮೇಲೆ ನಿರ್ಭರವಾಗಿದ್ದೀರಾ?
ಡೇಟಿಂಗ್ ಆಪ್ ಮೇಲೆ ಆಧಾರಿತವಾಗಿ ಸಂಗಾತಿಯನ್ನು ಆಯ್ಕೆ ಮಾಡಲು ಹೋಗಬೇಡಿ. ಸಂಗಾತಿ ಆಯ್ಕೆ ಮಾಡುವುದು ವ್ಯಕ್ತಿಯೊಂದಿಗೆ ಒಡನಾಡಿನ ಬಳಿಕವೇ ಸುಲಭವೆನಿಸುತ್ತದೆ. ಡೇಟಿಂಗ್ ಆಪ್ ಗಳಲ್ಲಿ ಪರಿಚಯವಾದವರ ಬಗ್ಗೆ ಸರಿಯಾಗಿ ಅರಿಯುವ ಮುನ್ನವೇ ಸಂಬಂಧ (Relation) ಏರ್ಪಟ್ಟರೆ ಮೋಸ ಹೋಗುವ ಸಾಧ್ಯತೆಯೇ ಅಧಿಕ.
• ಅಗತ್ಯಗಳ (Need) ಬಗ್ಗೆ ಸುಮ್ಮನಿರುವುದು
ನಿಮ್ಮ ಸಂಗಾತಿ ಹೇಗಿರಬೇಕು ಎನ್ನುವ ಕಲ್ಪನೆ ನಿಮಗಿದೆ. ಅದನ್ನು ವ್ಯಕ್ತಪಡಿಸುವುದು ಉತ್ತಮ. ಒಂದೊಮ್ಮೆ ನಿಮ್ಮ ವೃತ್ತಿಗೆ ಸ್ಪಂದಿಸುವ ಸಂಗಾತಿ ಅಗತ್ಯ ಎನ್ನುವುದು ನಿಮ್ಮ ಬಲವಾದ ಭಾವನೆಯಾಗಿದ್ದರೆ (Feeli) ಅದನ್ನು ಸ್ಪಷ್ಟವಾಗಿ ತಿಳಿಯಪಡಿಸಬೇಕು. ಅಗತ್ಯಗಳ ಬಗ್ಗೆ ಸುಮ್ಮನಿದ್ದರೆ ಸೂಕ್ತ ಸಂಗಾತಿ ಹೇಗೆ ದೊರೆಯಬಲ್ಲರು?