ಸಂಬಂಧದಲ್ಲಿ ಪ್ರಾಮಾಣಿಕತೆ ಅತಿ ಮುಖ್ಯ. ಇಬ್ಬರು ಒಟ್ಟಾಗಿ ಸೇವಿಂಗ್ ನಿರ್ಧಾರ ತೆಗೆದುಕೊಂಡಾಗ ಮೋಸ ಇಲ್ಲಿ ಸಲ್ಲೋದಿಲ್ಲ. ಈಗ ಮಹಿಳೆಯೊಬ್ಬಳು ಇದೇ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಪತಿಯನ್ನು ಪ್ರಶ್ನೆ ಮಾಡ್ಲಾ, ಬಿಡಲಾ ಎಂಬ ಗೊಂದಲದಲ್ಲಿದ್ದಾಳೆ.
ಭವಿಷ್ಯದ ಬಗ್ಗೆ ಆಲೋಚನೆ ಮಾಡುವ ದಂಪತಿ ಸ್ವಲ್ಪ ಹಣವನ್ನು ಉಳಿತಾಯ ಮಾಡಲು ಬಯಸ್ತಾರೆ. ಇದು ಒಳ್ಳೆಯ ಅಭ್ಯಾಸ. ಕೆಲವರು ಒಬ್ಬರ ಸಂಬಳವನ್ನು ಖರ್ಚು ಮಾಡಿ, ಇನ್ನೊಬ್ಬರ ಸಂಬಳ ಉಳಿಸಿದ್ರೆ ಮತ್ತೆ ಕೆಲವರು ಜಾಯಿಂಟ್ ಅಕೌಂಟ್ ತೆರೆದು, ತಿಂಗಳಿಗೆ ಇಷ್ಟು ಹಣವನ್ನು ಅದಕ್ಕೆ ವರ್ಗಾಯಿಸಿ, ಉಳಿತಾಯ ಮಾಡ್ತಾರೆ. ಇದು ದಂಪತಿ ಮಧ್ಯೆ ಇರುವ ಹೊಂದಾಣಿಕೆಯನ್ನು ಅವಲಂಬಿಸಿರುತ್ತದೆ. ಜಾಯಿಂಟ್ ಖಾತೆ ತೆರೆದು ಅದಕ್ಕೆ ಇಬ್ಬರೂ ಹಣ ಜಮಾ ಮಾಡ್ತಿದ್ದಾರೆ ಎಂದಾಗ ಇಬ್ಬರೂ ಆ ಹಣದ ಹಕ್ಕನ್ನು ಹೊಂದಿರುತ್ತಾರೆ. ಆದ್ರೆ ಒಬ್ಬರು ಯಾವುದೇ ಸುಳಿವಿಲ್ಲದೆ ಆ ಖಾತೆಯ ಹಣವನ್ನು ವಿತ್ ಡ್ರಾ ಮಾಡ್ತಿದ್ದರೆ ಇನ್ನೊಬ್ಬರಿಗೆ ಹೇಗಾಗಬೇಡ?. ಕೋಪದ ಜೊತೆ ಅನುಮಾನ ಶುರುವಾಗೋದು ಸಹಜ. ಈ ಮಹಿಳೆಗೂ ಈಗ ಇದೇ ಆಗಿದೆ. ಗಂಡನ ವರ್ತನೆಯಿಂದ ಬೇಸತ್ತಿರುವ ಮಹಿಳೆ ಮುಂದೆ ಏನು ಮಾಡೋದು ಅಂತಾ ಪ್ರಶ್ನೆ ಕೇಳಿದ್ದಾಳೆ.
ಜಾಯಿಂಟ್ (Joint) ಖಾತೆಯಲ್ಲಿರುವ ಹಣ ತೆಗೆದು ಪತಿ (Husband) ಏನು ಮಾಡ್ತಿದ್ದಾನೆ? : ಈ ಮಹಿಳೆಗೆ ವಿವಾಹವಾಗಿ ಅನೇಕ ವರ್ಷ ಕಳೆದಿದೆ. ಪತಿಯ ವರ್ತನೆಗೆ ಮಹಿಳೆ ಸಂಪೂರ್ಣ ಬೆಂದುಹೋಗಿದ್ದಾಳೆ. ಪತಿ ಹಾಗೂ ಆಕೆ ಇಬ್ಬರು ಜಾಯಿಂಟ್ ಖಾತೆ (Account) ತೆರೆದಿದ್ದರು. ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಅದಕ್ಕೆ ಜಮಾ ಮಾಡ್ತಿದ್ದಾರೆ. ಆದ್ರೆ ಪತಿ ಮಾತ್ರ ಹಾಕಿದ ಹಣದಲ್ಲಿ ಸ್ವಲ್ಪ ಹಣವನ್ನು ಪತ್ನಿಗೆ ತಿಳಿಯದೆ ವಿತ್ ಡ್ರಾ ಮಾಡ್ತಿದ್ದಾನೆ. ವಿತ್ ಡ್ರಾ ಮಾಡಿದ ಹಣವನ್ನು ದುಬಾರಿ ಉಡುಗೊರೆ ಖರೀದಿಗೆ ಖರ್ಚು ಮಾಡ್ತಿದ್ದಾರೆ. ಆ ಉಡುಗೊರೆ ಪತ್ನಿ ಕೈಗೆ ಸಿಕ್ಕಿಲ್ಲ. ಆತ ಉಡಗೊರೆಯನ್ನು ಯಾರಿಗೆ ನೀಡ್ತಿದ್ದಾನೆ ಎನ್ನುವ ಜೊತೆಗೆ ತನಗೆ ಹೇಳದೆ ಹಣ ತೆಗೆಯುತ್ತಿರುವ ಪತಿಯ ಬಗ್ಗೆ ಮಹಿಳೆಗೆ ಅನುಮಾನ ಶುರುವಾಗಿದೆ. ಈ ಬಗ್ಗೆ ಪತಿಯನ್ನು ಪ್ರಶ್ನೆ ಮಾಡಬಹುದಾ ಎಂದು ತಜ್ಞರ ಸಲಹೆ ಕೇಳಿದ್ದಾಳೆ.
ಸೂಕ್ತ ಸಂಗಾತಿಯ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಈ ತಪ್ಪು ಮಾಡ್ಬೇಡಿ
ತಜ್ಞರು ಹೇಳೋದೇನು? : ಪತಿ – ಪತ್ನಿ ಸಂಬಂಧ ನಂಬಿಕೆ ಮೇಲೆ ನಿಂತಿರುತ್ತದೆ. ಪತಿ ಯಾವುದೇ ಮಾಹಿತಿ ನೀಡದೆ ಜಾಯಿಂಟ್ ಖಾತೆಯಿಂದ ಹಣ ತೆಗೆಯುತ್ತಿದ್ದಾನೆ ಎಂದಾಗ ಕೋಪಬರುವುದು ಸಹಜ. ಆದ್ರೆ ದುಡುಕಬೇಡಿ ಎನ್ನುತ್ತಾರೆ ತಜ್ಞರು. ಖಾತೆಯಿಂದ ಪತಿ ಹಣ ವಿತ್ ಡ್ರಾ ಮಾಡ್ತಿದ್ದಾನೆ ಅಂದ್ರೆ ಅದು ಮೋಸವೆಂದು ನೇರವಾಗಿ ಆರೋಪ ಮಾಡಲು ಸಾಧ್ಯವಿಲ್ಲ. ಆತನಿಗೆ ಹಣದ ಅವಶ್ಯಕತೆ ಏಕಿದೆ? ನಿಮ್ಮನ್ನು ಕೇಳದೆ ವಿತ್ ಡ್ರಾ ಮಾಡಲು ಕಾರಣವೇನು ಎಂಬುದನ್ನು ತಿಳಿಯೋದು ಸಂಗಾತಿಯ ಜವಾಬ್ದಾರಿ.
ಯಾವುದೋ ಸಂಕಟದಲ್ಲಿ ಪತಿ ಸಿಕ್ಕಿರಬಹುದು. ಹಾಗಾಗಿ ಏಕಾಏಕಿ ಪತಿಗೆ ಮೋಸಗಾರ, ಕಳ್ಳ ಎಂದು ಆರೋಪ ಮಾಡಬೇಡಿ. ಶಾಂತವಗಿ ಈ ಬಗ್ಗೆ ಆಲೋಚನೆ ಮಾಡಿ ಎನ್ನುತ್ತಾರೆ ತಜ್ಞರು. ಇಬ್ಬರ ಮಧ್ಯೆ ಯಾವುದೇ ದೊಡ್ಡ ಸಮಸ್ಯೆ ಶುರುವಾಗದಂತೆ ಈ ಸಮಸ್ಯೆಯನ್ನು ಬಗೆಹರಿಸಿ ಎನ್ನುತ್ತಾರೆ ತಜ್ಞರು.
ಛೇ ನಾನು ಫಸ್ಟ್ ನೈಟಲ್ಲಿ ಈ ತಪ್ಪು ಮಾಡಬಾರದಿತ್ತು, ಪುರುಷರ ತಪ್ಪೊಪ್ಪಿಗೆ
ಪ್ರತಿಯೊಂದಕ್ಕೂ ಮಾತುಕತೆ ಮುಖ್ಯ. ನೀವು ಖಂಡಿತವಾಗಿ ನಿಮ್ಮ ಪತಿಯನ್ನು ಪ್ರಶ್ನೆ ಮಾಡಬಹುದು. ಜಾಯಿಂಟ್ ಖಾತೆಯಿಂದ ಹಣ ವಿತ್ ಡ್ರಾ ಮಾಡಿದ್ದೀರಾ ಎಂದು ನೀವು ಶಾಂತವಾಗಿ ಪ್ರಶ್ನೆ ಕೇಳಿ. ಒಂದು ವೇಳೆ ಉತ್ತರ ಹೌದು ಎಂದು ಬಂದಲ್ಲಿ, ಅದಕ್ಕೆ ಕಾರಣ ತಿಳಿದುಕೊಳ್ಳಲು ಮುಂದಾಗಿ. ಒಂದ್ವೇಳೆ ಉತ್ತರ ಇಲ್ಲ ಎಂದು ಬಂದಲ್ಲಿ, ಸುಳ್ಳು ಏಕೆ ಹೇಳ್ತಿದ್ದಾರೆ ಎಂದು ನೀವು ಕೇಳ್ಬಹುದು. ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಕೋಪದ ಕೈಗೆ ಬಾಯಿ ಕೊಡಬೇಡಿ. ಸಂಬಂಧಕ್ಕೆ ಧಕ್ಕೆಯಾಗದಂತೆ ಮಾತುಕತೆ ನಡೆಸಿ ಎನ್ನುತ್ತಾರೆ ತಜ್ಞರು.