11 ಹೆತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ: ಮನೆಯಿಂದ ಹೊರ ಹಾಕಿದ ಪತಿ

Published : Feb 20, 2023, 03:53 PM ISTUpdated : Feb 20, 2023, 04:02 PM IST
11 ಹೆತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪತ್ನಿ: ಮನೆಯಿಂದ ಹೊರ ಹಾಕಿದ ಪತಿ

ಸಾರಾಂಶ

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದ ಪತ್ನಿಯನ್ನು ಪತಿಯೊಬ್ಬ ಮನೆಯಿಂದ ಹೊರ ಹಾಕಿದ ಆಘಾತಕಾರಿ ಘಟನೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದಿದೆ.  

ಕಿಯೋಂಜರ್: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದ ಪತ್ನಿಯನ್ನು ಪತಿಯೊಬ್ಬ ಮನೆಯಿಂದ ಹೊರ ಹಾಕಿದ ಆಘಾತಕಾರಿ ಘಟನೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದಿದೆ.  ಆದಿವಾಸಿ ಸಮುದಾಯದ ರಬಿ ಡೆಹುರಿ(Rabi Dehury) ಎಂಬಾತನೇ ಹೀಗೆ ಪತ್ನಿ ಮೇಲೆ ಕೋಪ ತೋರಿ ಆಕೆಯನ್ನು ಮನೆಯಿಂದ ಹೊರ ಹಾಕಿದ ವ್ಯಕ್ತಿ. ಇದಾದ ಬಳಿಕ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳು ಮಾತುಕತೆ ನಡೆಸಿ ಆತನ ಮನ ವೊಲಿಸಿದ್ದು, ಪತ್ನಿಯನ್ನು ಆತನೊಂದಿಗೆ ಸೇರಿಸಿದ್ದಾರೆ. 

ರಬಿ ಡೆಹುರಿ ಪತ್ನಿ ಜಾನಕಿ (Janaki) ತನ್ನ ಗಂಡನ ಗಮನಕ್ಕೆ ತಾರದೇ ಟ್ಯುಬೆಕ್ಟಮಿ (ಸಂತಾನಹರಣ ಶಸ್ತ್ರಚಿಕಿತ್ಸೆ) ಮಾಡಿಸಿಕೊಳ್ಳಲು ಹೋಗಿದ್ದಳು.  ರಬಿ ಡೆಹುರಿ  ಹಾಗೂ ಪತ್ನಿ ಜಾನಕಿ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಜಾನಕಿ ಸಾಲು ಸಾಲಾಗಿ ಈಗಾಗಲೇ ಒಟ್ಟು 11 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರಲ್ಲಿ ಒಂದು ಮಗು ಕೆಲ ವರ್ಷಗಳ ಹಿಂದೆ ತೀರಿಕೊಂಡಿತ್ತು. 11 ಹೆತ್ತ ಬಳಿಕ ಆರೋಗ್ಯ ಇಲಾಖೆಯ ಕಾರ್ಯಕರ್ತರ ಸಲಹೆಯಂತೆ ಆಕೆ ಸಂತಾನಹರಣ  ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಸಂತಾನಹರಣ  ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಬಂದ ಜಾನಕಿಗೆ ಶಾಕ್ ಕಾದಿತ್ತು. ವಿಚಾರ ತಿಳಿದ ಪತಿ ಆಕೆ ಹಾಗೂ ಹಸುಗೂಸನ್ನು ಮನೆಗೆ ಸೇರಿಸಿಕೊಳ್ಳಲು ಮುಂದಾಗಿಲ್ಲ. 

ಹೊಸ ತಾಯಂದಿರ Back Pain ಸಮಸ್ಯೆಗೆ ಇಲ್ಲಿದೆ ಪರಿಹಾರ

ಈ ಬಗ್ಗೆ ಅಧಿಕಾರಿಗಳು ಗಂಡ ರಬಿ ಡೆಹುರಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ಬುಡಕಟ್ಟು ಸಮುದಾಯದ ಪ್ರಕಾರ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಯಾವುದೇ ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಹೀಗಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಿ ಹೇಳಿದ್ದಾನೆ. ಇದಾದ ಬಳಿಕ ಭಾನುವಾರ ಭುಯನ್ ಮಹಾಸಮಾಜದ (Bhuyan Mahasamaj)ಸಂಜಯ್ ಶೇಖರ್ ಗಿರಿ ಎಂಬುವವರು ರಬಿ ಅವರ ನಿವಾಸಕ್ಕೆ ಹೋಗಿದ್ದಾರೆ. ಅಲ್ಲಿ ಆಗಲೇ ಉಪಸ್ಥಿತರಿದ್ದ ಸಲೆಕೆನಾ ಪಂಚಾಯತ್‌ (Saleikena panchayat)ನ ವಿಸ್ತರಣಾಧಿಕಾರಿ ದಾಮೋದರ್ ಮಂತ್ರಿ (Dambarudhar Mantri) ರಬಿ ಜೊತೆ ಈ ವಿಚಾರದ ಬಗ್ಗೆ ತಿಳಿ ಹೇಳಿ ಆತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ನಾವು ಇಂತಹ ಮೂಢನಂಬಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಆತನ ಮನವೊಲಿಸಿದೆವು. ಶಸ್ತ್ರಚಿಕಿತ್ಸೆ ಕಾನೂನು ಪ್ರಕಾರ ನಡೆಸಲಾಗಿದೆ ಎಂದು ಆತನ ಮನವೊಲಿಸಿದೆವು.  ಕುಟುಂಬ ಯೋಜನೆಯ ನಂತರ ಯಾವುದೇ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬಾರದು ಎಂಬಂತಹ ಆಚರಣೆ ನಮ್ಮ ಸಮುದಾಯದಲ್ಲಿ ಇಲ್ಲ ಎಂದು ಸಮುದಾಯದ ಮುಖಂಡ ಸಂಜಯ್ ಶೇಖರ್ಗಿರಿ ಹೇಳಿದರು. 

Surrogacy: ಈ ದೇಶದಲ್ಲಿ ಬಾಡಿಗೆ ಗರ್ಭಕ್ಕೆ ಸಿಗುತ್ತೆ ಕೈ ತುಂಬಾ ಹಣ

ನಂತರ ರಬಿ ಅಳುತ್ತಾ ಕ್ಷಮೆ ಕೇಳಿದರು. ಇದಾದ ಬಳಿಕ ಆಸ್ಪತ್ರೆಯಲ್ಲಿ ಈಗಾಗಲೇ ದಾಖಲಾಗಿದ್ದ  ಆತನ ಪತ್ನಿ ಜಾನಕಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!