ಏಜ್ ಈಸ್ ಜಸ್ಟ್ ಎ ನಂಬರ್ ಅಂತಾರೆ. ಪ್ರೀತಿಯು ಯಾವುದೇ ವಯಸ್ಸಿನ ಹಂಗಿಲ್ಲ. ಈ ಮಾತು ನಿಜವೆಂಬುದುನ್ನು 24 ವರ್ಷದ ಯುವತಿ ಸಾಬೀತುಪಡಿಸಿದ್ದಾಳೆ. ಕಾಲೇಜ್ ನಿಂದಲೂ ಮದುವೆಯಾಗಲು ಮುಂದಾಗಿದ್ದ ಹುಡುಗನೊಂದಿಗೆ ಸಂಬಂಧ ಮುರಿದುಕೊಂಡ ಯುವತಿ ತನ್ನ ತಂದೆಯ ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.
ಪ್ರೀತಿಯೆಂದರೆ ಹಾಗೇ..ಅದೊಂದು ಜಾದೂ..ಹೃದಯದಲ್ಲಿ ಮೂಡುವ ಮಧುರ ಭಾವನೆ..ಒಬ್ಬ ವ್ಯಕ್ತಿಯ ಬಗ್ಗೆ ಪ್ರೀತಿ ಮೂಡುವಾಗ ವ್ಯಕ್ತಿಯ ಜಾತಿ-ಧರ್ಮ, ಅಂತಸ್ತು, ರಾಜ್ಯ-ದೇಶ, ಲಿಂಗ, ವಯಸ್ಸು ಯಾವುದೂ ಸಹ ಮುಖ್ಯವಾಗುವುದಿಲ್ಲ. ಹಾಗೆಯೇ ಅಮೇರಿಕಾದಲ್ಲೊಂದು ಮದುವೆ (Marriage) ನಡೆದಿದೆ. 24 ವರ್ಷದ US ಮಹಿಳೆ 54 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಮಾತ್ರವಲ್ಲ ತನ್ನ ತಂದೆಯ ವಯಸ್ಸಿನ (Fathers age) ವ್ಯಕ್ತಿಯನ್ನು ಮದುವೆಯಾಗಲು ಈಕೆ ತನ್ನ ಗೆಳೆಯನೊಂದಿಗಿನ ತನ್ನ ಮದುವೆಯನ್ನು ರದ್ದುಗೊಳಿಸಿದಳು.
24 ವರ್ಷದ ಮಹಿಳೆಯನ್ನು ಮದ್ವೆಯಾದ 54 ವರ್ಷದ ವ್ಯಕ್ತಿ
ಪ್ರೀತಿಯು ಯಾವುದೇ ವಯಸ್ಸಿನ ಹಂಗಿಲ್ಲ. ಈ ಮಾತು ನಿಜವೆಂಬುದುನ್ನು 24 ವರ್ಷದ ಯುವತಿ ಸಾಬೀತುಪಡಿಸಿದ್ದಾಳೆ. ಕಾಲೇಜ್ ನಿಂದಲೂ ಮದುವೆಯಾಗಲು ಮುಂದಾಗಿದ್ದ ಹುಡುಗನೊಂದಿಗೆ ಸಂಬಂಧ (Relationship) ಮುರಿದುಕೊಂಡ ಯುವತಿ ತನ್ನ ತಂದೆಯ ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಮಗುವಿಗೆ ಜನ್ಮ ನೀಡಲಿರುವ ಅಮೆರಿಕದ ಉತ್ತರ ಕೆರೊಲಿನಾದ 24 ವರ್ಷದ ಅಮಂಡಾ ಕ್ಯಾನನ್ ಎಂಬ ಹುಡುಗಿ 2017 ರಲ್ಲಿ ಏಸ್ ಎಂಬ 54 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ವಿಚ್ಛೇದನ (Divorce) ಪಡೆದ ಏಸ್ ಮತ್ತೆ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿದ್ದನು.
ಅಮಂಡಾ ಅವರನ್ನು ಭೇಟಿಯಾದ ನಂತರ ತನ್ನ ನಿರ್ಧಾರ ಬದಲಿಸಿಕೊಂಡನು. ದಂಪತಿಗಳು 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು ಮತ್ತು ಅಂತಿಮವಾಗಿ 2021 ರ ಜನವರಿಯಲ್ಲಿ ಅವರು ಮದುವೆಯಾಗಲು ನಿರ್ಧರಿಸಿದರು. ಅಮಂಡಾ ತಾನು ಈಗಷ್ಟೇ ಪ್ರೀತಿಯಲ್ಲಿ ಬಿದ್ದೆ ಎಂದು ಹೇಳಿದರೆ, ಏಸ್ ತಾನು ಅಮಂಡಾಳ ಸೌಂದರ್ಯಕ್ಕೆ ಆಕರ್ಷಿತನಾಗಿದ್ದೆ ಎಂದು ಹೇಳಿದರು.
Transgender Marriage: ಕೇರಳದಲ್ಲಿ ಪ್ರೇಮಿಗಳ ದಿನದಂದೇ ತೃತೀಯ ಲಿಂಗಿ ಜೋಡಿಯ ಮದುವೆ
ದಾಂಪತ್ಯ ಜೀವನ ಪರಿಪೂರ್ಣವಾಗಿದೆ ಎಂದ ದಂಪತಿ
ಡೈಲಿ ಸ್ಟಾರ್ ವರದಿಯ ಪ್ರಕಾರ, ಏಸ್ ತನ್ನ ಹಿಂದಿನ ಮದುವೆಯಿಂದ ಇಬ್ಬರು ಮಕ್ಕಳಾದ (Children) ಪೇಟನ್, 21, ಮತ್ತು ಕೇಡ್, 20, ಗೆ ತಂದೆಯಾಗಿದ್ದಾನೆ. ಏಸ್‌ಗೆ ಅಮಂಡಾ ಅವರ ಅಮ್ಮನ ವಯಸ್ಸು ಒಂದೇ ಆಗಿರುವುದು ದಂಪತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ವಯಸ್ಸಾದ ವ್ಯಕ್ತಿಯೊಂದಿಗೆ ಡೇಟ್ ಮಾಡುವಾಗ, ಸಾಮಾನ್ಯವಾಗಿ ಅವನ ಗೆಳತಿ ಎಂದು ಕರೆಯುವುದು ಸ್ವಲ್ಪ ವಿಭಿನ್ನವಾಗಿರುತ್ತದೆ ಎಂದು ಅಮಂಡಾ ಅಭಿಪ್ರಾಯಪಟ್ಟಿದ್ದಾರೆ. ಅವರನ್ನು ಹೆಚ್ಚಾಗಿ ತಂದೆ ಮತ್ತು ಮಗಳು ಎಂದು ಗ್ರಹಿಸಲಾಗುತ್ತದೆ. ಅಮಂಡಾ ಏಸ್‌ನ ಮಗಳಿಗಿಂತ ಕೇವಲ 7 ವರ್ಷ ದೊಡ್ಡವಳಾಗಿದ್ದರೂ, ದಂಪತಿಗಳು ತಮ್ಮ ಸಂಬಂಧವನ್ನು ಪರಿಪೂರ್ಣ ಎಂದು ವಿವರಿಸುತ್ತಾರೆ.
ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಇದು 24 ವರ್ಷದ ಈ ಹುಡುಗಿಯ ವಿಷಯದಲ್ಲಿ ನಿಜವಾಗಿದೆ. ಈ ಹುಡುಗಿ ತನ್ನ ಅಪ್ಪನ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾಗಲು ತನ್ನ ಗೆಳೆಯನೊಂದಿಗಿನ ಮದುವೆಯನ್ನು ರದ್ದುಗೊಳಿಸಿ ಸುದ್ದಿಯಾಗಿದ್ದಾಳೆ. ಅಮೆರಿದ ಉತ್ತರ ಕೆರೊಲಿನಾದ 24 ವರ್ಷದ ಅಮಂಡಾ ಕ್ಯಾನನ್ ಎಂಬಾಕೆ ಕಾಲೇಜಿನಿಂದಲೂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು.
Valentines Day: ಟ್ವಿಟರ್‌ನಲ್ಲಿ ಹುಟ್ಟಿಕೊಂಡ ಪತ್ರಕರ್ತೆಯ ಪ್ರೇಮಕಥೆ ವೈರಲ್
ನಂತರ 2017 ರಲ್ಲಿ ಏಸ್ ಎಂಬ 54 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ಅತ್ತ ಏಸ್ ಡಿವೋರ್ಸ್ ಪಡೆದಿದ್ದ. ಇದಾದ ಮೇಲೆ ಮತ್ತೆ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ. ಆದರೆ ಆತ ಅಮಂಡಾಳನ್ನು ಭೇಟಿಯಾದ ನಂತರ ತನ್ನ ಪ್ರತಿಜ್ಞೆಯನ್ನು ಮುರಿದ. ಆಕೆಯ ಸೌಂದರ್ಯಕ್ಕೆ ಮನಸೋತ. ಇತ್ತ ಯುವತಿಯೂ ಆತನಿಗೆ ಒಲಿದಳು. ಬಾಯ್ಫ್ರೆಂಡ್ ಜೊತೆ ಸಂಬಂಧ ಮುರಿದಳು. 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಿದ್ದಾರೆ.