ಈ ಡಚ್ ದೇಶದ ಮಕ್ಕಳು ಯಾವಾಗಲೂ ನಗ್ ನಗ್ತಾ ಖುಷಿಯಾಗಿರ್ತಾರಿಲ್ಲಿ ಹೇಗೆ? ಪೋಷಕರು ಏನ್ ಮಾಡ್ತಾರೆ?

By Bhavani Bhat  |  First Published May 16, 2024, 9:49 AM IST

ಜಾಗತಿಕವಾಗಿ ಡಚ್ ಅಥವಾ ಹಾಲೆಂಡ್, ಅತ್ಯಂತ ಸಂತೋಷದ ಮಕ್ಕಳನ್ನು ಹೊಂದಿರುವ ದೇಶ ಎಂದು ಗುರುತಿಸಲ್ಪಟ್ಟಿದೆ. ಅಲ್ಲಿನ ಮಕ್ಕಳ ಪಾಲನೆಯಿಂದ ನೀವು ಕೆಲವು ಅಂಶಗಳನ್ನು ತೆಗೆದುಕೊಳ್ಳಬಹುದು.


ಮಕ್ಕಳು ಸಂತೋಷವಾಗಿರಬೇಕು ಎಂಬುದು ಎಲ್ಲ ತಂದೆ ತಾಯಿಯಂದಿರ ಆಸೆ. ಆದರೆ ಅಂಥ ಮಕ್ಕಳನ್ನು ಬೆಳೆಸುವುದು ಹೇಗೆ? ಜಾಗತಿಕವಾಗಿ ಡಚ್ ಅಥವಾ ಹಾಲೆಂಡ್, ಅತ್ಯಂತ ಸಂತೋಷದ ಮಕ್ಕಳನ್ನು ಹೊಂದಿರುವ ದೇಶ ಎಂದು ಗುರುತಿಸಲ್ಪಟ್ಟಿದೆ. ಅಲ್ಲಿನ ಮಕ್ಕಳ ಪಾಲನೆಯಿಂದ ನೀವು ಕೆಲವು ಅಂಶಗಳನ್ನು ತೆಗೆದುಕೊಳ್ಳಬಹುದು. 

ಹೊರಾಂಗಣ ಆಟ (Outdoor Games)
ಸೈಕ್ಲಿಂಗ್ ಆಗಿರಲಿ, ಉದ್ಯಾನವನಗಳಲ್ಲಿ ಆಟವಾಡುತ್ತಿರಲಿ ಅಥವಾ ಕಾಡುಗಳನ್ನು ಅನ್ವೇಷಿಸುತ್ತಿರಲಿ, ಡಚ್ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಹೊರಾಂಗಣದಲ್ಲಿ ಆಡಲು, ಸುತ್ತಾಡಲು, ಅನ್ವೇಷಿಸಲು ಕಲಿಯುತ್ತಾರೆ. ಆ ಮೂಲಕ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲಾಗುತ್ತದೆ. ನಾವು ಮಕ್ಕಳನ್ನು ಮನೆಯೊಳಗೇ ಕೊಳೆಹಾಕಿದರೆ ಕೊಳೆತುಹೋಗುತ್ತಾರೆ. 

Tap to resize

Latest Videos

undefined

ಸ್ವಾತಂತ್ರ್ಯವನ್ನು ಉತ್ತೇಜಿಸಿ (Encourage the Freedom)
ಚಿಕ್ಕ ವಯಸ್ಸಿನಿಂದಲೂ ಡಚ್ ಮಕ್ಕಳು ಸ್ವಾವಲಂಬಿಗಳಾಗಿರಲು (Empowerment) ಮತ್ತು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಇದು ಅವರ ಸಾಮರ್ಥ್ಯದಲ್ಲಿ ಅವರಿಗೆ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ. ಅವರ ಒಟ್ಟಾರೆ ಸಂತೋಷಕ್ಕೆ ಕೊಡುಗೆ ನೀಡುತ್ತದೆ.

ಸಮತೋಲಿತ ಜೀವನಶೈಲಿ (Balanced Lifestyle)
ಡಚ್ ಪೋಷಕರು ತಮ್ಮ ಮಕ್ಕಳಿಗೆ ಸಮತೋಲಿತ ಜೀವನಶೈಲಿಗೆ ಆದ್ಯತೆ ನೀಡುತ್ತಾರೆ. ಅವರು ಶಾಲೆ (School), ಆಟ (Games) ಮತ್ತು ಕುಟುಂಬಕ್ಕೆ (Family) ಸಾಕಷ್ಟು ಸಮಯವನ್ನು ಹಂಚುತ್ತಾರೆ. ಅವರು ವಿಶ್ರಾಂತಿ (Rest) ಮತ್ತು ವಿರಾಮದ ಮೌಲ್ಯವನ್ನು ಕಲಿಯುತ್ತಾರೆ. ಒತ್ತಡವನ್ನು ನಿರ್ವಹಿಸಲು (Balancing Stress) ಮತ್ತು ಜೀವನದ ಬಗ್ಗೆ ಮೇಲೆ ಸಕಾರಾತ್ಮಕ ದೃಷ್ಟಿಕೋನವನ್ನು (Positive Attitude) ಬೆಳೆಸಲು ಸಹಾಯ ಮಾಡುತ್ತಾರೆ.

ಮುಕ್ತ ಸಂವಹನ (Communication)
ಡಚ್ ಕುಟುಂಬಗಳು ಮುಕ್ತ ಸಂವಹನ ರೀತಿಗಳನ್ನು ನಿರ್ವಹಿಸುತ್ತವೆ. ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತದೆ. ಇದು ಕುಟುಂಬದೊಳಗೆ ನಂಬಿಕೆ ಮತ್ತು ತಿಳುವಳಿಕೆಯಯನ್ನು ಬೆಳೆಸುತ್ತದೆ. ಮಕ್ಕಳಿಗೆ ಸವಾಲುಗಳನ್ನು ಎದುರಿಸಲು, ಅಗತ್ಯವಿದ್ದಾಗ ಬೆಂಬಲವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಸಾಂಸ್ಕೃತಿಕ ಒಳಗೊಳ್ಳುವಿಕೆ
ಡಚ್ ಸಮಾಜ ವೈವಿಧ್ಯತೆ (Societal Diversity) ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ವಿವಿಧ ಸಂಸ್ಕೃತಿಗಳು, ಭಾಷೆಗಳು ಮತ್ತು ದೃಷ್ಟಿಕೋನಗಳಿಗೆ ಒಡ್ಡಲಾಗುತ್ತದೆ. ಈ ಬಹುಸಾಂಸ್ಕೃತಿಕ ಪರಿಸರವು ಸಹಾನುಭೂತಿ, ಸಹಿಷ್ಣುತೆ ಮತ್ತು ಸ್ವೀಕಾರವನ್ನು ಉತ್ತೇಜಿಸುತ್ತದೆ. ಸಂತೋಷದ ಭಾವನೆಗೆ ಕೊಡುಗೆ ನೀಡುತ್ತದೆ.

ಕುಟುಂಬದ ಆಚರಣೆಗಳು (Family Rituals)
ಡಚ್ ಕುಟುಂಬಗಳು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಆದ್ಯತೆ ನೀಡುತ್ತವೆ. ಅದು ಊಟವನ್ನು ಒಟ್ಟಾಗಿ ಆನಂದಿಸುವುದಿರಬಹುದು, ವಾರಾಂತ್ಯದ ಪ್ರವಾಸ ಹೋಗುವುದಿರಬಹುದು ಅಥವಾ ಹವ್ಯಾಸಗಳಲ್ಲಿ ಭಾಗವಹಿಸುದಿರಬಹುದು. ಈ ನಿಯಮಿತ ಆಚರಣೆಗಳು ಕುಟುಂಬ ಬಂಧಗಳನ್ನು ಬಲಪಡಿಸುತ್ತವೆ, ಮಕ್ಕಳಿಗೆ ಭದ್ರತೆಯ ಪ್ರಜ್ಞೆಯನ್ನು ನೀಡುತ್ತದೆ.

ಶಿಕ್ಷಣದ ಒತ್ತು (Priority to Education)
ಕೇವಲ ಶೈಕ್ಷಣಿಕ ಸಾಧನೆಗಿಂತ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ, ಮಕ್ಕಳು ತಮ್ಮ ಆಸಕ್ತಿಗಳನ್ನು ಅನ್ವೇಷಿಸಲು, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಆಸಕ್ತಿಗಳನ್ನು ಮುಂದುವರಿಸಲು ಪ್ರೋತ್ಸಾಹಿಸಲಾಗುತ್ತದೆ.

ಕೆಲಸ-ಜೀವನದ ಬ್ಯಾಲೆನ್ಸ್‍
ಡಚ್ ಪೋಷಕರು ಕೆಲಸ-ಜೀವನದ ಸಮತೋಲನಕ್ಕೆ ಆದ್ಯತೆ ನೀಡುತ್ತಾರೆ, ಕೆಲಸದ ಸಮಯದ ಆಚೆಗೆ ತಮ್ಮ ಮಕ್ಕಳೊಂದಿಗೆ ಕಳೆಯಲು ಸಾಕಷ್ಟು ಸಮಯವನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. ಇದು ಅರ್ಥಪೂರ್ಣ ಸಂವಾದಗಳನ್ನು ಹಾಗೂ ಅನುಭವಗಳನ್ನು ಮತ್ತು ಭಾವನಾತ್ಮಕವಾಗಿ ಶೇರ್ ಮಾಡುತ್ತದೆ.

ಕನಿಷ್ಠ ಜೀವನಶೈಲಿ (Simple Lifestyle)
ಡಚ್ ಕುಟುಂಬಗಳು ಸಾಮಾನ್ಯವಾಗಿ ಕನಿಷ್ಠ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತವೆ. ಆಸ್ತಿಗಳಿಗಿಂತ ಅನುಭವಗಳಿಗೆ ಆದ್ಯತೆ ನೀಡುತ್ತವೆ. ನಿಜವಾಗಿಯೂ ಮುಖ್ಯವಾದುದನ್ನು ಕೇಂದ್ರೀಕರಿಸುವ ಮೂಲಕ, ಮಕ್ಕಳು ಜೀವನದ ಸರಳ ಸಂತೋಷಗಳನ್ನು ಮೆಚ್ಚಲು ಮತ್ತು ಕೃತಜ್ಞತೆಯನ್ನು ಬೆಳೆಸಲು ಕಲಿಯುತ್ತಾರೆ.

ಸೃಜನಶೀಲತೆಯನ್ನು ಪ್ರೋತ್ಸಾಹಿಸಿ (Encourage Creativity)
ಡಚ್ ಪೋಷಕರು ತಮ್ಮ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲ್ಪನೆಯನ್ನು ಪ್ರೋತ್ಸಾಹಿಸುತ್ತಾರೆ. ಕಲಾತ್ಮಕ ಅಭಿವ್ಯಕ್ತಿ, ಪರಿಶೋಧನೆ ಮತ್ತು ನಾವೀನ್ಯತೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಾರೆ.

ಎಮೋಷನಲ್ ಇಂಟೆಲಿಜೆನ್ಸ್ (Emotional Intelligence)
ಡಚ್ ಪೋಷಕರು ತಮ್ಮ ಮಕ್ಕಳಲ್ಲಿ ಭಾವನಾತ್ಮಕ ಬುದ್ಧಿವಂತಿಕೆ ಅಥವಾ ಎಮೋಷನಲ್ ಇಂಟಲಿಜೆನ್ಸ್ ಬೆಳವಣಿಗೆಗೆ ಆದ್ಯತೆ ನೀಡುತ್ತಾರೆ. ಅವರ ಭಾವನೆಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು ಮತ್ತು ನಿರ್ವಹಿಸಲು ಅವರಿಗೆ ಕಲಿಸುತ್ತಾರೆ.

37 ಆದರೂ ಮಕ್ಕಳೇಕ್ಕಿಲ್ಲ... ಜೀವನದ ಸತ್ಯ ಬಿಚ್ಚಿಟ್ಟ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್

ವೈಫಲ್ಯವನ್ನು ಸ್ವೀಕರಿಸಿ (Accept Failures)
ತಪ್ಪುಗಳ ಬಗ್ಗೆ ಭಯಪಡುವ ಬದಲು, ಬೆಳವಣಿಗೆ ಮತ್ತು ಕಲಿಕೆಗೆ ಅವಕಾಶಗಳಾಗಿ ಅವುಗಳನ್ನು ನೋಡಲು ಪ್ರೋತ್ಸಾಹಿಸಲಾಗುತ್ತದೆ. ಪರಿಶ್ರಮ ಮತ್ತು ಸವಾಲುಗಳ ಕಡೆಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸಲಾಗುತ್ತದೆ.

ಆಟದ ಸಮಯ (Play Time)
ಡಚ್ ಪೋಷಕರು ಆಟದ ಸಮಯವನ್ನು ಮೀಸಲಿಡುತ್ತಾರೆ. ವಯಸ್ಕರ ನಿರ್ದೇಶನವಿಲ್ಲದೆ ಮಕ್ಕಳಿಗೆ ಆಟಗಳನ್ನು ಅನ್ವೇಷಿಸಲು, ಊಹಿಸಲು ಮತ್ತು ಆಡಲು ಸ್ವಾತಂತ್ರ್ಯ ನೀಡಲಾಗುತ್ತದೆ.

ಪ್ರಕೃತಿಗೆ ಗೌರವ (Respect the Nature)
ಡಚ್ ಕುಟುಂಬಗಳಲ್ಲಿನ ಮಕ್ಕಳು ನೈಸರ್ಗಿಕ ಜಗತ್ತನ್ನು, ಪರಿಸರವನ್ನು ರಕ್ಷಿಸಲು, ಆನಂದಿಸಲು ಕಲಿಯುತ್ತಾರೆ. ಅದು ಮರುಬಳಕೆಯಾಗಿರಲಿ, ತ್ಯಾಜ್ಯವನ್ನು ಕಡಿಮೆ ಮಾಡುವುದಿರಲಿ ಅಥವಾ ಸಂರಕ್ಷಣಾ ಪ್ರಯತ್ನಗಳಾಗಿರಲಿ. ಭೂಮಿಯ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತಾರೆ.

ಸಿಕ್ಸ್ ಪ್ಯಾಕ್ ಬೇಕಾಗಿಲ್ಲ.. ಗಂಡಸ್ರ ಹೊಟ್ಟೆ ದಪ್ಪಗಿದ್ದಷ್ಟು ಮದ್ವೆಯಾಗಲು ಹುಡ್ಗೀರು ಸಾಯ್ತಾರೆ ಇಲ್ಲಿ!
 

click me!