ಕೋಟಿ ಕೋಟಿ ಆಸ್ತಿ ಇದ್ರೂ ಹೆಂಡ್ತಿಯಿಂದ ಬಾಡಿಗೆ ವಸೂಲಿ ಮಾಡ್ತಾನಂತೆ ಈ ಬೇಜವಾಬ್ದಾರಿ ಪತಿರಾಯ!

By Roopa Hegde  |  First Published May 15, 2024, 2:32 PM IST

ಈಗಿನ ಜನರ ಆಲೋಚನೆ  ಸಂಪೂರ್ಣ ಬದಲಾಗಿದೆ. ಸ್ವಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಪತ್ನಿಯನ್ನೂ ಬೇರೆಯವರಂತೆ ನೋಡುವ ಜನರು ಅವರ ಆಸೆ, ಬಯಕೆಯನ್ನು ಕಡೆಗಣಿಸಿ ಅವರಿಂದ್ಲೇ ಹಣ ವಸೂಲಿ ಮಾಡ್ತಿದ್ದಾರೆ.


ದುಬಾರಿ ದುನಿಯಾದಲ್ಲಿ ಮನೆಯಲ್ಲಿ ಒಬ್ಬರೇ ದುಡಿಮೆ ಮಾಡಿದ್ರೆ ಸಾಲೋದಿಲ್ಲ. ಪತಿ – ಪತ್ನಿ ಇಬ್ಬರೂ ದುಡಿದಾಗ ಮಾತ್ರ ಸಂಸಾರ ಸಂಭಾಳಿಸೋದು ಸಾಧ್ಯ. ಇಬ್ಬರು ಕೆಲಸಕ್ಕೆ ಹೋಗುವ ಕುಟುಂಬದಲ್ಲಿ ದಂಪತಿ ತಮ್ಮ ಹಣಕಾಸಿನ ವ್ಯವಹಾರ ಚೊಕ್ಕಟವಾಗಿಟ್ಟುಕೊಳ್ತಾರೆ. ಒಬ್ಬರು ಮನೆ ಬಾಡಿಗೆ ಪಾವತಿಸಿದ್ರೆ ಮತ್ತೊಬ್ಬರು ಮನೆ ಖರ್ಚು, ಮಕ್ಕಳ ಶಿಕ್ಷಣ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ತಾರೆ. ಹೀಗೆ ಖರ್ಚನ್ನು ಹಂಚಿಕೊಂಡಾಗ ಒಬ್ಬರ ಮೇಲೆ ಹೊಣೆ ಬೀಳೋದು ತಪ್ಪುತ್ತದೆ. ಈ ಒಪ್ಪಂದ ಕೂಡ ಒಪ್ಪಿಗೆ ಮೇಲೆ ಆಗ್ಬೇಕು. ಸಾಮಾನ್ಯವಾಗಿ ಮನೆಯ ಖರ್ಚಿನ ಜವಾಬ್ದಾರಿಯನ್ನು ಪತಿ ಹೊತ್ತಿರುತ್ತಾನೆ. ಆತನಿಗೆ ಕಡಿಮೆ ಸಂಬಳ ಬರ್ತಿದೆ, ಆರ್ಥಿಕ ಸಂಕಷ್ಟ ಎದುರಾಗಿದೆ ಎನ್ನುವ ಸಮಯದಲ್ಲಿ ಪತ್ನಿ ಆತನಿಗೆ ನೆರವಾಗ್ತಾಳೆ. ಆದ್ರೆ ಇಲ್ಲೊಬ್ಬ ಪತಿ, ಪತ್ನಿಯಿಂದ ಸಣ್ಣಪುಟ್ಟ ಹಣಕಾಸಿನ ನೆರವು ಪಡೆಯುತ್ತಿಲ್ಲ. ಬದಲಾಗಿ ಪತ್ನಿಯಿಂದ ಮನೆ ಬಾಡಿಗೆ ವಸೂಲಿ ಮಾಡ್ತಿದ್ದಾನೆ. ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಪತ್ನಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. 

Origami Torby ಹೆಸರಿನ ಖಾತೆಯಿಂದ ರೆಡ್ಡಿಟ್ (Reddit) ನಲ್ಲಿ ಮಹಿಳೆ ತನ್ನ ಕಥೆ ಹಂಚಿಕೊಂಡಿದ್ದಾಳೆ. ಆಕೆ ಪತಿಗೆ ಐವತ್ತು ವರ್ಷ ವಯಸ್ಸು. ಆತ ನಿವೃತ್ತಿ ಪಡೆದಿದ್ದಾನೆ. ಆತನ ಬಳಿ ಸಾಕಷ್ಟು ಹಣವಿದೆ. ಸ್ವಂತಕ್ಕೊಂದು ಮನೆ ಇದೆ. ಇಷ್ಟಾದ್ರೂ ಅದೇ ಮನೆಯಲ್ಲಿ ವಾಸಿಸುವ ಪತ್ನಿಯಿಂದ ಬಾಡಿಗೆ (Rent) ವಸೂಲಿ ಮಾಡ್ತಿದ್ದಾನೆ. 

Tap to resize

Latest Videos

ಬಿಗ್​ಬಾಸ್​ ದೀದಿ ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಡ್ರೋನ್​ ಪ್ರತಾಪ್​ ಸ್ಪೆಷಲ್​ ಗಿಫ್ಟ್​!

ಕಳೆದ 17 ವರ್ಷಗಳಿಂದ ಇಬ್ಬರು ಸಂಬಂಧದಲ್ಲಿದ್ದಾರೆ. ಕಳೆದ ಆರು ವರ್ಷದ ಹಿಂದೆ ಮದುವೆಯಾಗಿದೆ. ಮದುವೆಯಾದ ಆರಂಭದಲ್ಲಿ ಇಬ್ಬರೂ ಆರ್ಥಿಕ ಸ್ಥಿತಿ ಸುಧಾರಿಸಲು ಖರ್ಚನ್ನು ಹಂಚಿಕೊಳ್ತಿದ್ದರು. ಆದ್ರೆ ನಾಲ್ಕು ವರ್ಷದ ಹಿಂದೆ ಪತಿಗೆ ತನ್ನ ಅಮ್ಮನಿಂದ ಒಂದಿಷ್ಟು ಹಣ ಸಿಕ್ಕಿದೆ. ಸ್ವಂತದ ಮನೆ ಇದೆ. ಹಾಗಾಗಿಯೇ ಆತ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಮನೆಯಲ್ಲಿ ಆರಾಮವಾಗಿ ದಿನ ಕಳೆಯುತ್ತಿರುವ ವ್ಯಕ್ತಿ, ಐಷಾರಾಮಿ ಜೀವನಕ್ಕೆ ಹಣ ಖರ್ಚು ಮಾಡ್ತಿದ್ದಾನೆ.

ಆತನಿಗೆ ಪತ್ನಿ ಮೇಲೆ ಕಿಂಚಿತ್ತೂ ಕನಿಕರವಿಲ್ಲ. ಆಕೆ ವಾರದಲ್ಲಿ ನಲವತ್ತು ಗಂಟೆ ಕೆಲಸ ಮಾಡ್ತಾಳೆ. ಸ್ವಲ್ಪ ಸೇವಿಂಗ್ ಇದೆ ಆದ್ರೂ ನಿವೃತ್ತಿ ಘೋಷಿಸಿ ಮನೆಯಲ್ಲಿರುವಷ್ಟು ಹಣವಿಲ್ಲ. ಪತಿಗೆ ಬಾಡಿಗೆ ನೀಡಲು, ಸಣ್ಣಪುಟ್ಟ ಖರ್ಚಿಗೆ ಹಣದ ಅವಶ್ಯಕತೆ ಇರುವ ಕಾರಣ ಆಕೆ ದಿನವಿಡಿ ಕೆಲಸ ಮಾಡ್ಬೇಕಾದ ಅನಿವಾರ್ಯತೆ ಇದೆ.

ಆಕೆಯ ಪತಿ ಬೆಳಿಗ್ಗೆ ತಡವಾಗಿ ಏಳ್ತಾನೆ. ಹನ್ನೊಂದು ಗಂಟೆಗೆ ಏಳುವ ಪತಿ, ಗಲ್ಫ್ ಆಡಲು ಹೊರಗೆ ಹೋಗುವ ವ್ಯಕ್ತಿ, ಮಧ್ಯಾಹ್ನ ಮನೆಯಲ್ಲಿ ಊಟ ಮಾಡ್ತಾನೆ. ಸಂಜೆ ಟಿವಿಯಲ್ಲಿ ಗೇಮ್ಸ್ ನೋಡ್ತಾ ಕಾಲಕಳೆಯುವ ಪತಿ, ಪತ್ನಿ ಏನು ಮಾಡ್ತಿದ್ದಾಳೆ ಎಂಬುದನ್ನೂ ಗಮನಿಸೋದಿಲ್ಲ. ವಾರಾಂತ್ಯದಲ್ಲಿ ದೋಣಿ ವಿಹಾರಕ್ಕೆ ಹೋಗುವ ಬಗ್ಗೆ ಸ್ನೇಹಿತರ ಜೊತೆ ಚರ್ಚಿಸುತ್ತಾ ಫೋನ್‌ನಲ್ಲಿ ದೊಡ್ಡದಾಗಿ ಮಾತನಾಡ್ತಿರುತ್ತಾನೆ. ಕೆಲವೊಮ್ಮೆ ವಾರಗಟ್ಟಲೆ ಪ್ರವಾಸಕ್ಕೆ ಹೋಗೋದಿದೆ. ಆದ್ರೆ ಈ ಯಾವ ಕೆಲಸಕ್ಕೂ ಪತ್ನಿಯನ್ನು ಕರೆಯೋದಿಲ್ಲ. ಸುಖಕರ ಜೀವನ ನಡೆಸುತ್ತಿರುವ ಪತಿಗೆ ಯಾವುದೇ ತೊಂದರೆ ಇಲ್ಲ. ಆತ ಪತ್ನಿಯನ್ನು ಮಾತ್ರ ಸಂಪೂರ್ಣ ಮರೆತಿದ್ದಾನೆ ಎನ್ನುತ್ತಾಳೆ ಪತ್ನಿ.

ಗಂಡನನ್ನೇ ಸಲಿಂಗ ಕಾಮಿ ಎಂದ ಗಾಯಕಿ, ನಾನು ಆಗಿದ್ರೆ.. ಎಂದ ನಟ ಕಾರ್ತಿಕ್

ಮಹಿಳೆ ಪತಿಯೊಂದಿಗೆ ದೊಡ್ಡ ಮನೆಯಲ್ಲಿ ವಾಸ ಮಾಡ್ತಿದ್ದಾಳೆ. ಮೊದಲು ಆಕೆ ಪ್ರತಿ ತಿಂಗಳು 80 ಸಾವಿರ ಡಾಲರ್ ಗಳಿಸುತ್ತಿದ್ದಳು. ಕೊರೊನಾ ನಂತ್ರ ಆಕೆ ಆರ್ಥಿಕ ಸ್ಥಿತಿ ಕುಸಿದಿದೆ. ಸಂಪಾದನೆ ಕಡಿಮೆ ಆಗಿದ್ದು, ಪತಿಯ ಈ ವರ್ತನೆ ಮತ್ತಷ್ಟು ಹಿಂಸೆ ನೀಡ್ತಿದೆ. ರೆಡ್ಡಿಟ್ ಪೋಸ್ಟ್ (Reddit) ಗೆ ಸಾಕಷ್ಟು ಕಮೆಂಟ್ ಬಂದಿದೆ. ಪತ್ನಿಯಿಂದಲೇ ಬಾಡಿಗೆ ಪಡೆಯುತ್ತಿರುವ ಪತಿಯ ಕ್ರಮವನ್ನು ಜನರು ವಿರೋಧಿಸಿದ್ದಾರೆ. 

click me!