ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧ ಹೆಚ್ಚಾಗ್ತಿದೆ ಎಂಬ ವರದಿಯೊಂದಿದೆ. ಈ ಮಧ್ಯೆ ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವಿನ ಜವಾಬ್ದಾರಿಯನ್ನು ಕಾನೂನಿನ ಪ್ರಕಾರ ಯಾರು ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸುಪ್ರೀಂ ಕೋರ್ಟ್ (Supreme Court), ಇತ್ತೀಚೆಗೆ ವಿವಾಹೇತರ ಸಂಬಂಧ (Extramarital affair)ಕ್ಕೆ ಸಂಬಂಧಪಟ್ಟ 23 ವರ್ಷಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ. ಯುವಕನೊಬ್ಬ, ನಾನು ಅಕ್ರಮ ಸಂಬಂಧದಿಂದ ಜನಿಸಿದ್ದು, ಜೈವಿಕ ತಂದೆಯ ಡಿಎನ್ ಎ ಪರೀಕ್ಷೆಗೆ ಅವಕಶ ನೀಡಬೇಕು, ಆತನಿಂದ ಜೀವನಾಂಶ ಬೇಕು ಎಂದು ಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದ. ಆದ್ರೆ ಆತನ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿವಾಹಿತ ಮಹಿಳೆಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದ್ರೂ ಆಕೆ ಕಾನೂನು ಪ್ರಕಾರ ಮದುವೆಯಾದ ವ್ಯಕ್ತಿಯೇ ತಂದೆಯಾಗ್ತಾನೆ ಎಂದು ಕೋರ್ಟ್ ಹೇಳಿದೆ. ಡಿಎನ್ ಎ ಪರೀಕ್ಷೆಗೆ ಇಷ್ಟು ಸಾಕ್ಷ್ಯ ಸಾಲೋದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಕ್ರಮ ಸಂಬಂಧದಿಂದ ಮಗು ಜನಿಸಿದ್ರೆ ಅದ್ರ ಹೊಣೆಯನ್ನು ಯಾರು ಹೊರಬೇಕು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪತ್ನಿಯ ಅಕ್ರಮ ಸಂಬಂಧದದ ಮಗು ಯಾರ ಜವಾಬ್ದಾರಿ? : ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರ, ಪತ್ನಿಯ ಪ್ರೇಮಿಯಿಂದ ಮಗು ಜನಿಸಿದ್ರೂ, ಪ್ರೇಮಿ ಅದ್ರ ಜವಾಬ್ದಾರಿ ಹೊರುವುದಿಲ್ಲ. ಅದನ್ನು ಕೋರ್ಟ್ ಮಾನ್ಯ ಮಾಡುವುದಿಲ್ಲ. ಕಾನೂನುಬದ್ಧತೆ ಮತ್ತು ಪಿತೃತ್ವ ಪರಸ್ಪರ ಸಂಬಂಧ ಹೊಂದಿವೆ. ಒಂದು ಮಗು ಮಾನ್ಯ ವಿವಾಹದ ನಂತರ ಜನಿಸಿದರೆ, ಪಿತೃತ್ವವು ಸ್ವಯಂಚಾಲಿತವಾಗಿ ನಿರ್ಧರಿಸಲ್ಪಡುತ್ತದೆ. ಅಂದ್ರೆ ಜೈವಿಕ ತಂದೆ ಯಾರೆಂದು ಪತ್ತೆ ಮಾಡಲು ಡಿಎನ್‌ಎ ಪರೀಕ್ಷೆಯ ಅಗತ್ಯವಿಲ್ಲ. ಪತ್ನಿ ಜೊತೆಗಿರುವ ಪತಿಯೇ ಆ ಮಗುವಿನ ಪಾಲಕನಾಗ್ತಾನೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ರ ನಿಬಂಧನೆಯು ಮಾನ್ಯ ವಿವಾಹದ ಸಮಯದಲ್ಲಿ ಅಥವಾ ವೈವಾಹಿಕ ಸಂಬಂಧವು ಮುಕ್ತಾಯಗೊಂಡ 280 ದಿನಗಳ ಒಳಗೆ ಜನಿಸಿದ ಮಗುವನ್ನು ಪತಿಯ ಕಾನೂನುಬದ್ಧ ಮಗು ಎಂದು ಪರಿಗಣಿಸುತ್ತದೆ. ಪತ್ನಿಗೆ ಜನಿಸಿದ ಮಗುವಿನ ತಂದೆ, ಕಾನೂನು ಪ್ರಕಾರ ಮದುವೆಯಾದ ಪತಿಯೇ ಆಗಿರುತ್ತಾನೆ. ಈ ಬಗ್ಗೆ ಅನುಮಾನ ಬಂದ್ರೂ ಡಿಎನ್ ಎ ಪರೀಕ್ಷೆ ನಡೆಸಲು ಸಾಧ್ಯವಿಲ್ಲ.
ಗಂಡ ಟೈಮ್ ಕೊಡ್ತಿಲ್ಲ? ಇಂಟರೆಸ್ಟ್ ತೋರಸ್ತಿಲ್ವಾ? ಇದನ್ನು ಪಾಲಿಸಿದ್ರೆ ನಿಮ್ಮ ಹಿಂದೆ ಸುತ್ತುತ್ತಾರೆ!
ಕೋರ್ಟ್ ಹೇಳಿದ್ದೇನು? : 22 ವರ್ಷದ ಯುವಕ, ಜೀವನಾಂಶ ಪಡೆಯುವ ವಿಷ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ವಿಚಾರಣೆ ಮಾಡಿದ ಕೋರ್ಟ್, ಜೈವಿಕ ತಂದೆ ಡಿಎನ್ ಎ ಪರೀಕ್ಷೆಗೆ ಇಷ್ಟೇ ಸಾಕ್ಷ್ಯ ಸಾಲೋದಿಲ್ಲ ಎಂದಿದೆ. ಪತಿ ಹಾಗೂ ಪತ್ನಿ ಮಧ್ಯೆ ದೈಹಿಕ ಸಂಬಂಧ ಇಲ್ಲ ಎಂಬುದನ್ನು ಸಾಭೀತುಪಡಿಸುವುದು ಅಸಾಧ್ಯ. ಪೋಷಕರು ಒಟ್ಟಿಗೆ ವಾಸವಾಗಿದ್ದಾರೆ ಅಂದ್ರೆ ಮಗು ಅವರದ್ದು ಎಂದೇ ಅರ್ಥ ಎಂದು ಕೋರ್ಟ್ ಹೇಳಿದೆ. ಇಂಥ ಸಮಯದಲ್ಲಿ ಡಿಎನ್ ಎ ಪರೀಕ್ಷೆ ಆದೇಶ ಗೌಪ್ಯತೆ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಹುಡುಗೀರು ಹೀಗೂ ಫ್ಲರ್ಟ್ ಮಾಡ್ತಾರೆ… ಆದ್ರೆ ಹುಡುಗರಿಗದು ಗೊತ್ತೇ ಆಗಲ್ಲ
ಡಿಎನ್ ಎ ಪರೀಕ್ಷೆಗೆ ಅನುಮತಿ ಇಲ್ಲ : ಭಾರತದಲ್ಲಿ, ಕೋರ್ಟ್ ಅನುಮತಿ ಇಲ್ಲದೆ ಡಿಎನ್ ಎ ಪರೀಕ್ಷೆ ಮಾಡುವಂತಿಲ್ಲ. ಅದ್ರಲ್ಲೂ 18 ವರ್ಷ ಕೆಳಗಿನ ಮಕ್ಕಳ ಡಿಎನ್ ಎ ಪರೀಕ್ಷೆಗೆ ಕೋರ್ಟ್ ಅನುಮತಿ ನೀಡೋದಿಲ್ಲ. ಮಹಿಳೆ ಜೊತೆ ಪತಿಯೂ ವಾಸವಾಗಿದ್ದರೆ, ಮಗು ಪತಿಯದ್ದಾಗುತ್ತದೆ. ಇದಕ್ಕೆ ಯಾವುದೇ ಸಾಕ್ಷ್ಯ ನೀಡುವ ಅಗತ್ಯವಿಲ್ಲ. ಪತಿಯೇ ಮಕ್ಕಳ ಪಾಲನೆ ಜವಾಬ್ದಾರಿ ಹೊರಬೇಕು. ಕಾನೂನು ಪ್ರಕಾರ ಆತನೇ ಮಗುವಿನ ತಂದೆಯಾಗ್ತಾನೆ.