ಒಬ್ಬಳು ಸಂಬಂದ ಬ್ರೇಕ್ ಆದಾಗ ಮತ್ತೊಬ್ಬಳ ಪ್ರೀತಿಸಿದ್ದಾನೆ. ಮದುವೆ ತಯಾರಿ ನಡೆಯುತ್ತಿದ್ದಂತೆ ಎಕ್ಸ್ ಗರ್ಲ್‌ಫ್ರೆಂಡ್ ಪ್ರತ್ಯಕ್ಷಳಾಗಿದ್ದಾಳೆ.ಇದು ಸಿನಿಮಾ ಅಲ್ಲ ನಿಜ ಜೀವನ, ನೀವಂದುಕೊಂಡಂತೆ ಇಲ್ಲಿ ರಂಪಾಟ ನಡೆದಿಲ್ಲ. ಇದಕ್ಕೆ ಕಾರಣ ಸಿಂಪಲ್ ಆಗಿರೋ ಒಂದು ಪರಿಹಾರ ಸೂತ್ರ. ಮುಂದೇನಾಯ್ತು?
ಹೈದರಾಬಾದ್(ಮಾ.29) ಸಿನಿಮಾ ರೀತಿಯಲ್ಲೇ ಸಿನಿಮಾದಲ್ಲಿ ಕೆಲಸ ಮಾಡುವವನ ಘಟನೆ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ಪರಿಯಸ್ಥಳ ಜೊತೆ ಆತ್ಮೀಯತೆ ಬೆಳೆದು ಪ್ರೀತಿಯಾಗಿ ತಿರುಗಿದೆ. ಬರೋಬ್ಬರಿ 3 ವರ್ಷ ಪ್ರೀತಿ ಸಾಗಿದೆ. ಇದರ ನಡುವೆ ಬಿರುಗಾಳಿ ಎದ್ದಿದೆ. ಭೂಕಂಪನವಾಗಿದೆ. ಪರಿಣಾಮ 3 ವರ್ಷದ ಪ್ರೀತಿ ಅಂತ್ಯಗೊಂಡಿದೆ. ಸರಿ ಬಿಡು ಅಂತಾ ಈತನಿಗೆ ಮತ್ತೊಬ್ಬಳ ಜೊತೆ ಪ್ರೀತಿ ಶುರುವಾಗಿದೆ. ಈ ಪ್ರೀತ ಕುಟುಂಬಕ್ಕೆ ತಿಳಿಸಿ ಮದುವೆಗೆ ತಯಾರಿ ಶುರುವಾಗಿದೆ. ಇದರ ನಡುವೆ ಎಕ್ಸ್ ಗರ್ಲ್‌ಫ್ರೆಂಡ್ ಪ್ರತ್ಯಕ್ಷಳಾಗಿದ್ದಾಳೆ. ಎಲ್ಲವೂ ಸಿನಿಮಾ ಕತೆ ರೀತಿಯಲ್ಲೇ ಇದೆ. ಆದರೆ ಇದು ನಡೆದ ಘಟನೆ. ಹಾಗಂತ ಇಲ್ಲೊಂದು ರಂಪಾಟ, ಫೈಟ್ ಸೀನ್ ಇಲ್ಲ. ಎಲ್ಲರ ಮುಖದಲ್ಲಿ ಮಂದಹಾಸ, ಸಂಭ್ರಮ. ಕಾರಣ ಈ ಜಟಿಲ ಸಮಸ್ಯೆಗೆ ಸೂಸೂತ್ರವಾಗಿ ಪರಿಹಾರವಾಗಿದೆ.
ತೆಲಂಗಾಣದ ಲಿಂಗಾಪುರ ಮಂಡಲದ ಸಿದಮ್ ರೂಪಾಬಿ ಪುತ್ರ ಸೂರ್ಯದೇವ್ ಇಲ್ಲಿಯ ನಾಯಕ. ಈತ ಹೈದರಾಬಾದ್‌ನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಸಿನಿಮಾ ರಂಗದಲ್ಲಿ ತೆರೆಯ ಹಿಂದಿನ ಕೆಲಸದಲ್ಲಿ ನೆಮ್ಮದಿಯಾಗಿದ್ದಾನೆ. ಸಿರ್ಪುರ್ ಮಂಡಲದ ಕನಕಾ ಲಾಲ್ ಜೊತೆ ಪ್ರೀತಿ ಶುರುವಾಗಿತ್ತು. ಆರಂಭದಲ್ಲಿ ಪರಿಚಯಸ್ಥರಾಗಿದ್ದ ಇವರು ಆತ್ಮೀಯತೆ, ಸಲುಗೆ ಪ್ರೀತಿಯಾಗಿ ತಿರುಗಿತ್ತು. ಬರೋಬ್ಬರಿ 3 ವರ್ಷ ಇವರ ಪ್ರೀತಿ ಯಾವುದೇ ಅಡೆ ತಡೆ ಇಲ್ಲದೆ ಸಾಗಿತ್ತು. ಈ ಮೂರು ವರ್ಷ ಒಂದಷ್ಟು ಪ್ರೇಕ್ಷಣಿಯ ಸ್ಥಳ, ಬೆಟ್ಟ ಗುಡ್ಡ ಹೀಗೆ ಎಲ್ಲಾ ಪ್ರಣಯ ಹಕ್ಕಿಗಳು ಸುತ್ತುವಂತೆ ಸುತ್ತಿದ್ದಾರೆ.
ಪ್ರೇಮಿಯೊಂದಿಗೆ ಸಿಕ್ಕಿಬಿದ್ದ ಎರಡು ಮಕ್ಕಳ ತಾಯಿಗೆ ಲವರ್ ಜೊತೆ ಮದ್ವೆ ಮಾಡಿದ ಗಂಡ
ಈ ಮೂರು ವರ್ಷ ಜೋಡಿ ಹಕ್ಕಿಗಳಾಗಿದ್ದ ಇವರ ನಡುವೆ ಸಣ್ಣ ಬಿರುಕು ದೊಡ್ಡದಾಗಿತ್ತು. ಸಂಬಂಧ ಪ್ಯಾಚ್ ಅಪ್ ಆಗಲಿಲ್ಲ. ಕಿರಿಕ್ ಪಾರ್ಟಿ ಆಗೋಯ್ತು. ಕೊನೆಗೆ ಇಬ್ಬರ ಸಂಬಂಧ ಬ್ರೇಕ್ಅಪ್‌ನಲ್ಲಿ ಅಂತ್ಯಗೊಂಡಿತ್ತು. ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎಂದು ಇಬ್ಬರು ಗುಡ್ ಬೈ ಹೇಳಿದ್ದರು. ಮೊದಲ ಪ್ರೀತಿ 3 ವರ್ಷದಲ್ಲಿ ಬಿರುಗಾಳಿಗೆ ಸಿಲುಕಿ ಧೂಳೀಪಟವಾಯಿತು.
ಇದಾದ ಕೆಲ ದಿನಗಳ ಕಾಲ ಸೂರ್ಯದೇವ್ ಮೋಡದ ಮರೆಯಲ್ಲಿದ್ದ. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಯಾವಾಗಲೂ ಮೋಡ ಕವಿದ ವಾತಾವರಣದಲ್ಲಿದ್ದ. ಇದರ ನಡುವೆ ಮತ್ತೊಬ್ಬಳ ಪರಿಚಯವಾಗಿತ್ತು.ಈಕೆ ಹೆಸರು ಅತ್ರಮ್ ಜಾಲ್ಕರ್ ದೇವಿ. ಈಕೆ ಕೂಡ ಸಿರ್ಪುರ್ ಮಂಡಲದವಳು. ಇವರ ಪ್ರೀತಿ ಗಾಢವಾಯಿತು. ಕೊನೆಗೆ ಮದುವೆಗೆ ತಯಾರಿ ಕೂಡ ಆರಂಭಗೊಂಡಿತ್ತು. ಇಷ್ಟೊತ್ತಿಗೆ ಈ ಮಾಹಿತಿ ಮೊದಲ ಗರ್ಲ್‌ಫ್ರೆಂಡ್ ಕನಕಾಗೆ ಗೊತ್ತಾಗಿ ಬಿಡ್ತು.
ನೇರವಾಗಿ ಸೂರ್ಯದೇವ್ ಎದುರಿಗೆ ಕನಕಾ ಪ್ರತ್ಯಕ್ಷಳಾಗಿದ್ದಾಳೆ. ಮದುವೆಯಾಗುವಂತೆ ಮನವಿ ಮಾಡಿದ್ದಾಳೆ. ಸೂರ್ಯದೇವ್ ಮನಸ್ಸು ಕರಗಿದೆ.ಎಷ್ಟಾದರೂ ಮೊದಲ ಪ್ರೀತಿ. ದೂರ ಸರಿದರೂ ಪ್ರೀತಿ ದೂರವಾಗಿರಲಿಲ್ಲ. ಅಡಕತ್ತರಿಯಲ್ಲಿ ಸಿಲುಕಿದ ಸೂರ್ಯದೇವ್ ನೋಡೋಣ ಎಂದು ಹೊರಟಿದ್ದಾನೆ. ಬಳಿಕ ಹಾಲಿ ಗರ್ಲ್‌ಫ್ರೆಂಡ್ ಕರೆದುಕೊಂಡು ಹೈದರಾಬಾದ್‌ಗೆ ತೆರಳಿದ್ದಾನೆ. ಇದು ಮೊದಲ ಲವರ್ ಕನಾಕಾಗೆ ಮತ್ತಷ್ಟು ಆತಂಕ ತಂದಿತ್ತು. ಹೀಗಾಗಿ ಕನಕಾ ಹಿರಿಯರ ಜೊತೆ ಮಾತನಾಡಿದ್ದಾಳೆ. ಬಳಿಕ ಊರ ಪಂಚಾಯಿತಿ ಕರೆದು ಸೂರ್ಯದೇವ್‌ಗೆ ಮದುವೆಯಾಗಲು ಮನ ಒಲಿಸುವಂತೆ ಮನವಿ ಮಾಡಿದ್ದಾಳೆ. ಆತನಿಲ್ಲದೆ ತನಗೆ ಬದಕಲು ಸಾಧ್ಯವಿಲ್ಲ ಎಂದಿದ್ದಾರೆ.
ಇತ್ತ ಸೂರ್ಯದೇವ್‌ಗೆ ಪಂಚಾಯಿತಿ ಫಲಿತಾಂಶ ತಿಳಿಸಲು ಹಿರಿಯರು ಕರೆಸಿದ್ದಾರೆ. ಈ ವೇಳೆ ಮೊದಲ ಪ್ರೀತಿ ನಿಜ. ಆದರೆ ಹಾಲಿ ಪ್ರೀತಿಯನ್ನು ಕೈಬಿಟ್ಟರೆ ಮೋಸ ಮಾಡಿದಂತೆ ಎಂದಿದ್ದಾನೆ. ಎರಡೂ ಯುವತಿಯರ ಕುಟುಂಬಸ್ಥರು ಪಂಚಾಯಿತಿಗೆ ಹಾಜರಾಗಿದ್ದಾರೆ. ಚರ್ಚೆ ನಡೆಸಿದೆ. ಇದರಲ್ಲಿ ಒಂದಿಬ್ಬರು ಹಿರಿಯರು ಇಬ್ಬರನ್ನು ಮದುವೆಯಾಗುವ ಕುರಿತು ಮೆಲ್ಲನೆ ಪಿಸು ಮಾತು ಆಡಿದ್ದಾರೆ. ಇಷ್ಟು ಕೇಳಿದೊಡನೆ ಲಡ್ಡು ಬಂದು ಬಾಯಿಗೆ ಬಿದ್ದಂತ ನಿಮ್ಮೆಲ್ಲರ ಒತ್ತಾಯ, ಮನವಿ ಮೇರೆಗೆ ಇಬ್ಬರನ್ನು ಮದುವೆಯಾಗುವುದಾಗಿ ಹೇಳಿದ್ದಾನೆ. ಹಿರಿಯರು ಮುಂದೆ ಇದೊಂದು ದಾರಿ ಬಿಟ್ಟರೆ ಬೇರೆ ಇರಲಿಲ್ಲ. ಹೀಗಾಗಿ ಸರಿ ಎಂದಿದ್ದಾರೆ. ಇಬ್ಬರನ್ನು ಸಮಾನವಾಗಿ ನೋಡಿಕೊಳ್ಳಲು ಸೂಚಿಸಿದ್ದಾರೆ. ಇದರಂತೆ ಮಾರ್ಚ್ 27 ರಂದು ಒಂದೇ ವೇದಿಕೆಯಲ್ಲಿ ಇಬ್ಬರನ್ನು ಮದುವೆಯಾಗಿದ್ದಾನೆ. ಬುಡುಕಟ್ಟ ಸಮುದಾಯದ ಸಂಪ್ರದಾಯದ ಅಡಿಯಲ್ಲಿ ಮದುವೆ ನಡೆದಿದೆ. 1,000ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಮದುವೆಯಲ್ಲಿ ಪಾಲ್ಗೊಂಡಿದ್ದರು.
'ಕರಿಮಣಿ' ಸೀರಿಯಲ್ ಜೋಡಿ ರಿಯಲ್ ಲೈಫ್ನಲ್ಲೂ ಮದ್ವೆಯಾಗ್ತಿದ್ದಾರಾ? ಗುಟ್ಟು ರಿವೀಲ್ ಮಾಡಿದ ತಾರೆಯರು