ಗಂಡ ನಿಮಗೆ ಟೈಮ್ ಕೊಡ್ತಿಲ್ಲ, ಆಸಕ್ತಿ ತೋರಸ್ತಿಲ್ಲ ಎಂದಾದರೆ ನೀವು ಈ ಟಿಪ್ಸ್ ಪಾಲಿಸಿ.
“ಮದುವೆಗೂ ಮುನ್ನ ಟೈಮ್ ಕೊಡ್ತಿದ್ದ, ನಾನು ಹೇಳಿದಾಂಗೆ ಕೇಳ್ತಿದ್ದ ಗಂಡ ಈಗ ನನ್ನ ಮಾತು ಕಿವಿಗೆ ಹಾಕೋಳಲ್ಲ, ಟೈಮ್ ಕೊಡ್ತಿಲ್ಲ” ಅಂತ ಕೆಲ ಮಹಿಳೆಯರು ದೂರುವುದುಂಟು. ಇದಕ್ಕೂ ಪರಿಹಾರ ಇದ್ದೇ ಇದೆ. ಒಂದಷ್ಟು ಟಿಪ್ಸ್ ಫಾಲೋ ಮಾಡಿದ್ರೆ ಪಕ್ಕಾ ಗಂಡ ನಿಮ್ಮ ಜೊತೆಯೇ ಇರ್ತಾನೆ, ಓಡಿ ಬರ್ತಾನೆ.
ಇಬ್ಬರ ಮಧ್ಯೆ ಪ್ರೀತಿ ಇದ್ದರೂ ಕೂಡ ಒಮ್ಮೊಮ್ಮೆ ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣಕ್ಕೆ ಸತಿ-ಪತಿ ಮಧ್ಯೆ ಅಂತರ ಸೃಷ್ಟಿ ಆಗಬಹುದು. ಈ ಅಂತರದಿಂದ ನಾಳೆ ಡಿವೋರ್ಸ್ ಕೂಡ ಆಗಬಹುದು. ಹೀಗಾಗಿ ಮುಂಚಿತವಾಗಿ ಒಂದಷ್ಟು ಕ್ರಮ ಅನುಸರಿಸೋದು ಒಳ್ಳೆಯದು.
ಮದುವೆ ನಂತರವೂ ಪರರೊಂದಿಗೆ ಸಂಬಂಧ ಹೊಂದುವ ಜನರಿರೋ ಟಾಪ್ 10 ದೇಶಗಳು
ಕಾರಣ ಏನು?
ಎಮೋಶನಲ್ ಕನೆಕ್ಷನ್, ಒತ್ತಡ, ಚಿಂತೆ, ದೈಹಿಕ ಆಕರ್ಷಣೆಯ ಕೊರತೆ, ದಾಂಪತ್ಯ ದ್ರೋಹ ಮಾಡಿದ್ದರೆ, ಸಂವಹನದ ಕೊರತೆಯಿದ್ದಾಗಲೂ ಗಂಡ, ಹೆಂಡತಿಯನ್ನು ದೂರ ಮಾಡಬಹುದು, ಬಯಸದೆ ಇರಬಹುದು.
ಕೆಲಸದ ಸ್ಥಳಕ್ಕೆ ಹೋಗಿ
ನಿಮ್ಮ ಪತಿ ನಿಜಕ್ಕೂ ಕೆಲಸದಲ್ಲಿ ಬ್ಯುಸಿ ಇದ್ದಾರಾ? ಸುಳ್ಳು ಹೇಳ್ತಿದ್ದಾರಾ ಎನ್ನೋದನ್ನು ತಿಳಿದುಕೊಳ್ಳಿ. ಹೀಗಾಗಿ ನೀವು ಅವರ ಆಫೀಸ್‌ಗೆ ಹೇಳದೆ ಕೇಳದೆ ಹೋಗಬೇಕು. ಬೇರೆ ರಂಗದಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಕೆಲಸದ ಸ್ಥಳಕ್ಕೆ ಹೋಗಬೇಕು. ಆಗ ಅವರು ಏನು ಮಾಡ್ತಿದ್ದಾರೆ ಅಂತ ಗೊತ್ತಾಗುತ್ತದೆ.
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
ಫೋನ್ ಮಾಡೋದು ನಿಲ್ಲಿಸಿ
ಪತಿ ಏನು ಮಾಡ್ತಿದ್ದಾನೆ? ನಿಜಕ್ಕೂ ಕೆಲಸದಲ್ಲಿ ಬ್ಯುಸಿ ಇದ್ದಾನಾ ಅಂತ ತಿಳಿದುಕೊಳ್ಳಿ. ಆಮೇಲೆ ಕೆಲಸದ ಶೆಡ್ಯೂಲ್ ಮೇಲೆ ಗಮನ ಇಡಿ. ನಿತ್ಯವೂ ಫೋನ್ ಮಾಡಿ ಊಟ, ತಿಂಡಿ ಅಥವಾ ಇನ್ನಿತರ ವಿಚಾರಗಳನ್ನು ಕೇಳೋದನ್ನು ನಿಲ್ಲಿಸಿ. ಪತಿಯ ಜೊತೆಗೆ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಅವರಿಗಿಂತ ಮುಂಚೆ ಊಟ ಮಾಡಿ ಮಲಗಿ. ಆಗ ಅವರಿಗೆ ಏನೋ ಸಮಸ್ಯೆ ಆಗಿದೆ ಅಂತ ಅರ್ಥ ಆಗಬಹುದು. ಕೆಲವೊಮ್ಮೆ ಮೌನವೇ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ವಿನಾಕಾರಣ ಮಾತಾಡಬೇಡಿ. ನಿಮ್ಮ ಮೌನವನ್ನು ಸಹಿಸದೆ ಅವರೇ ಮಾತಾಡುತ್ತಾರೆ. ಜಗಳ ಆಡೋದಕ್ಕಿಂತ ಮೌನದಲ್ಲೇ ಗೆಲ್ಲೋದು ಉತ್ತಮ.
ಭಾವನಾತ್ಮಕವಾಗಿ ಹ್ಯಾಂಡಲ್ ಮಾಡಿ
ಪದೇ ಪದೇ ಗಂಡ ಟೈಮ್ ಕೊಡ್ತಿಲ್ಲ, ಕೇರ್ ಮಾಡ್ತಿಲ್ಲ ಎಂದಾಗ ಅವರ ಜೊತೆ ಕೂತು ಮಾತನಾಡಿ. ನಾನು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ತಿದೀನಿ, ನಿಜಕ್ಕೂ ಏನಾಗ್ತಿದೆ? ಯಾಕೆ ಹೀಗೆ ಮಾಡ್ತಿದ್ದೀರಿ? ನನಗೆ ಮಾನಸಿಕವಾಗಿ ಏನಾಗ್ತಿದೆ ಅಂತ ಮುಕ್ತವಾಗಿ ಮಾತನಾಡಿ. ಅದನ್ನು ಅವರು ಅರ್ಥಮಾಡಿಕೊಂಡರೆ ಒಳ್ಳೆಯದು. ಇಲ್ಲವೆಂದರೆ ಬೇರೆ ಹಾದಿ ಹಿಡಿಯಬೇಕು.
ತವರು ಮನೆಗೆ ಹೋಗ್ತೀನಿ ಅಂತ ಹೇಳಿ
ಗಂಡ ಯಾವಾಗಲೂ ಅದೇ ತಪ್ಪು ಮಾಡ್ತಾನೆ, ಟೈಮ್ ಕೊಡ್ತಿಲ್ಲ ಅಂದ್ರೆ ತವರು ಮನೆಗೆ ಹೋಗ್ತೀನಿ ಅಂತ ಎಚ್ಚರಿಕೆ ಕೊಡಿ. ಮನೆಯಲ್ಲಿ ಪತ್ನಿ ಇಲ್ಲ ಅಂದ್ರೆ ಗಂಡನಿಗೆ ಕೈಕಾಲು ಆಡಲ್ಲ ಅಂತ ಹೇಳ್ತಾರೆ. ಆಗ ಅವರಿಗೆ ಜೀವನ ಅಸ್ತವ್ಯಸ್ತ ಎನ್ನುವ ಭಾವ ಇರುತ್ತದೆ.
ಉಳಿದ ವಿಷಯ ಏನು?
ನಿಮ್ಮ ಮೇಲೆ ಗಮನ ಕೊಟ್ಟಿ, ಇದರಿಂದ ಅವರಿಗೆ ಇನ್ನಷ್ಟು ಆಸಕ್ತಿ ಮೂಡಬಹುದು. ಪಾಸಿಟಿವ್ ವಿಷಯಗಳತ್ತ ಗಮನಕೊಡಿ, ಅವರಿಗೂ ಒಂದಷ್ಟು ಟೈಮ್ ಕೊಡಿ, ಪತಿಯ ವೃತ್ತಿ ಜೀವನದ ಮೇಲೆ ಆಸಕ್ತಿ ತೋರಿಸಿ, ರೊಮ್ಯಾಂಟಿಕ್ ಆಗಿರಲು ಪ್ರಯತ್ನಪಡಿ, ಕೊನೆಯಲ್ಲಿ ಕೌನ್ಸೆಲಿಂಗ್ ಕಡೆ ಯೋಚಿಸಬಹುದು.