ಯಾವಾಗ ದಂಪತಿ IVF ಬಗ್ಗೆ ಯೋಚಿಸಬೇಕು?

Suvarna News   | Asianet News
Published : Jan 20, 2020, 10:14 AM ISTUpdated : Jan 20, 2020, 11:07 AM IST
ಯಾವಾಗ ದಂಪತಿ IVF ಬಗ್ಗೆ ಯೋಚಿಸಬೇಕು?

ಸಾರಾಂಶ

ಮದುವೆಯಾಗಿ ವರ್ಷಗಳು ಉರುಳಿದರೂ ಕರುಳಿನ ಕುಡಿ ಚಿಗುರುವುದಿಲ್ಲ. ಇದಕ್ಕೆ ಮನಸ್ಸು ಬೇರೇ ಕಾರಣ ಹುಡುಕುತ್ತದೆ. ಆದರೆ ಮಕ್ಕಳಾಗದಿರುವುದಕ್ಕೆ ಮೂಲ ಕಾರಣ ಮುಟ್ಟಿನಲ್ಲಿ ಏರುಪೇರು, ತೀವ್ರ ರಕ್ತಸ್ರಾವ, ಥೈರಾಯ್ಡ್‌ ಸಮಸ್ಯೆ, ಕೆಲಸದ ಒತ್ತಡ, ಜೀವನಶೈಲಿ, ಪುರ್ಣವಾಗಿ ಬೆಳೆಯದಿರುವ ಗರ್ಭಕೋಶ, ಅಂಡಾಣು ಉತ್ಪತ್ತಿಯಾಗದಿರುವಿಕೆ, ಟ್ಯೂಬಲ್‌ ಬ್ಲಾಕ್‌, ಫೈಬ್ರಾಯಿಡ್‌, ಬೊಜ್ಜು ಅಥವಾ ಅತಿಯಾದ ತೂಕ, ಕಡಿಮೆ ತೂಕ, ಧೂಮಪಾನ ಹಾಗೂ ಮದ್ಯಪಾನ, ಲೈಂಗಿಕ ಸಮಸ್ಯೆ, ಹಾರ್ಮೋನ್‌ ವ್ಯತ್ಯಾಸಗಳು.

ಡಾ. ದೇವಿಕಾ ಗುಣಶೀಲ

ಸಂತಾನಫಲ ಚಿಕಿತ್ಸೆ ತಜ್ಞರು

ಪುರುಷರಲ್ಲಿ ಕಡಿಮೆ ಅಥವಾ ವೀರಾರ‍ಯಣು ಇಲ್ಲದಿರುವಿಕೆ, ವೀರಾರ‍ಯಣುಗಳ ಕುಂಠಿತ ಚಲನ ಶಕ್ತಿ, ಸತ್ವ ಕಳೆದುಕೊಂಡ ವೀರಾರ‍ಯಣು, ಧೂಮಪಾನ ಹಾಗೂ ಮದ್ಯಪಾನ, ಟೆಸ್ಟಿಕ್ಯುಲರ್‌ ಇನ್‌ಫೆಕ್ಷನ್‌ ಹಾಗೂ ಕ್ಯಾನ್ಸರ್‌, ಉದ್ರೇಕಹೀನತೆ, ಶೀಫ್ರ ಸ್ಖಲನ ಮೊದಲಾದವು. ಸಂತಾನಹೀನತೆಗೆ ಸ್ತ್ರೀ .ಶೇ.25ರಷ್ಟುಕಾರಣವಾದರೆ ಪುರುಷ ಶೇ.33ರಷ್ಟುಕಾರಣ.

ಕೃತಕ ಗರ್ಭಧಾರಣೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಸೂಟ್ ಆಗುತ್ತಾ?

ಕೆಲವೊಮ್ಮೆ ದಂಪತಿ ನಡುವೆ ಸಮಸ್ಯೆ ಇಲ್ಲದಿದ್ದರೂ ಒತ್ತಡ, ಲೈಂಗಿಕ ನಿರಾಸಕ್ತಿ, ತಿಳವಳಿಕೆ ಕೊರತೆಯಿಂದ ಮಗುವನ್ನು ಹೊಂದುವ ಬಯಕೆ ಕೈಗೂಡುವುದೇ ಇಲ್ಲ. ಅದಕ್ಕೆ ಲೈಂಗಿಕ ಆಪ್ತ ಸಲಹೆ ಸಾಕು. ಕೆಲವೊಮ್ಮೆ ಔಷದೋಪಚಾರದ ಅಗತ್ಯವೂ ಇರಬಹುದು. ಸತತವಾಗಿ ಒಂದು ವರ್ಷದಿಂದ ಲೈಂಗಿಕವಾಗಿ ಸಕ್ರಿಯವಾಗಿದ್ದರೂ ಗರ್ಭಧರಿಸಿಲ್ಲ ಅಂದರೆ ನೀವು ವೈದ್ಯರನ್ನು ಸಂಪರ್ಕಿಸುವ ಸಮಯ ಬಂತು ಅಂತಲೇ ಅರ್ಥ. ಗರ್ಭ ಧರಿಸಿದ್ದರೂ ಎರಡು ಮೂರು ಬಾರಿ ಗರ್ಭಪಾತವಾಗಿದ್ದರೂ ನಿರ್ಲಕ್ಷಿಸುವ ಸಂಗತಿ ಅಲ್ಲ.

ಪ್ರಾಥಮಿಕವಾಗಿ ಗರ್ಭದಾರಣೆಗೆ ಸಣ್ಣ ತೊಡಕುಗಳಿದ್ದರೆ ಮಾತ್ರೆ ಕೊಡಬಹುದು. ಇಷ್ಟರಿಂದಲೇ ಗರ್ಭಧರಿಸುವ ಸಾಧ್ಯತೆ ಇದೆ. ಇದು ಪ್ರಯೋಜನವಾಗದಿದ್ದರೆ ಮಕ್ಕಳನ್ನು ಬಯಸುವ ದಂಪತಿಯ ಸಂತಾನಹೀನತೆ ಯಾವ ರೀತಿಯದ್ದು ಎಂಬುದನ್ನು ಪರಿಗಣಿಸಿ ಅನಂತರ ಚಿಕಿತ್ಸೆ ನಿರ್ಧರಿಸುತ್ತಾರೆ. ಚಿಕಿತ್ಸೆ ವಯಸ್ಸು, ಬಂಜೆತನದ ತೀವ್ರತೆ ಮೇಲೆ ಅವಲಂಬಿತ. ಪ್ರಾಥಮಿಕ ಹಂತಗಳ ಪರೀಕ್ಷೆ ನಂತರವೂ ಫಲ ಸಿಗದಿದ್ದರೆ, ಅಸಾಧ್ಯ ಅನ್ನುವ ಸ್ಥಿತಿಯಲ್ಲಿ ಐವಿಎಫ್‌ ಚಿಕಿತ್ಸೆ ಕಡೆಗೆ ಗಮನಹರಿಸುವುದು ಒಳಿತು.

ಮಕ್ಕಳಿಗೆ ಅನ್ನ ಕೊಡಲು ಕೂದಲು ಮಾರಿದ ವಿಧವೆ

ತಡ ಮದುವೆಯಾಗಿ ಸಹಜವಾಗಿ ಗರ್ಭಧರಿಸದೇ ಇದ್ದಾಗ, ವರ್ಷಗಳಾದರೂ ಮಗುವಾಗದಿದ್ದರೆ ಐ.ವಿ.ಎಫ್‌. ವಿಧಾನ ಆರಿಸಿಕೊಳ್ಳಬಹುದು. ಇದಲ್ಲದೇ, ಪುರುಷನ ವೀರ್ಯ ಸಂಖ್ಯೆ ತೀರ ಕಮ್ಮಿ ಇದ್ದಾಗ, ಮಹಿಳೆಯ ಗರ್ಭನಾಳ ಕೆಲಸ ಕಾರ್ಯ ನಿರ್ವಹಿಸಲು ವಿಫಲವಾದಾಗ ಐವಿಎಫ್‌ಗೆ ಹೋಗಬಹುದು. ಮುಖ್ಯವಾಗಿ ಮಕ್ಕಳಾಗಿಲ್ಲ ಎಂದರೆ ಸೂಕ್ತ ತಪಾಸಣೆ ಮಾಡಿಸಿಕೊಂಡು ಕಾರಣ ತಿಳಿಯುವುದು ಮುಖ್ಯ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?