ವಿಚ್ಛೇದನಕ್ಕೂ ಮೆಹಂದಿ: ಮದರಂಗಿ ಹಾಕಿ ಡಿವೋರ್ಸ್‌ ಸಂಭ್ರಮಾಚರಣೆ: ವೀಡಿಯೋ ವೈರಲ್

Published : Apr 25, 2025, 01:33 PM ISTUpdated : Apr 25, 2025, 02:10 PM IST
 ವಿಚ್ಛೇದನಕ್ಕೂ ಮೆಹಂದಿ: ಮದರಂಗಿ ಹಾಕಿ ಡಿವೋರ್ಸ್‌ ಸಂಭ್ರಮಾಚರಣೆ: ವೀಡಿಯೋ ವೈರಲ್

ಸಾರಾಂಶ

ವಿಚ್ಛೇದನ ಪಡೆದ ಮಹಿಳೆಯೊಬ್ಬರು ಮದರಂಗಿ ಹಾಕಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯಾಯದ ತಕ್ಕಡಿ, ಒಡೆದ ಹೃದಯ ಸೇರಿದಂತೆ ವಿಭಿನ್ನ ಚಿತ್ರಗಳನ್ನು ಮದರಂಗಿಯಲ್ಲಿ ಚಿತ್ರಿಸಲಾಗಿದೆ.

ಸಾಮಾನ್ಯವಾಗಿ ಮದುವೆಯ ಖುಷಿ ಆಚರಿಸಲು ಕೈಗಳಿಗೆ ಮದರಂಗಿ ಹಾಕುವುದನ್ನು ನೀವು ನೋಡಿರಬಹುದು. ಮದುವೆಗೆ ಮೊದಲು ಮದರಂಗಿ ಶಾಸ್ತ್ರ, ಅರಿಶಿಣ ಶಾಸ್ತ್ರ ಅಂತ ಹಲವು ಆಚರಣೆಗಳೇ ಇವೆ. ಇತ್ತೀಚೆಗೆ ಮದರಂಗಿಯನ್ನು ಕೇವಲ ಮದುವೆಗೆ ಮಾತ್ರವಲ್ಲ, ನಿಶ್ಚಿತಾರ್ಥ , ಸೀಮಂತ, ಮಗುವಿನ ನಾಮಕರಣ, ಮನೆ ಗೃಹಪ್ರವೇಶ ಹೀಗೆ ಎಲ್ಲಾ ಶುಭ ಸಮಾರಂಭಗಳಿಗೂ ಹೆಂಗೆಳೆಯರು ಮದರಂಗಿಯಿಂದ ತಮ್ಮ ಕೈಯನ್ನು ಅಲಂಕರಿಸುತ್ತಾರೆ. ಆದರೆ ಬೇಸರ ತರಿಸುವ ವಿಚಾರವನ್ನು ಯಾರೂ ಕೂಡ ಮದರಂಗಿಯಿಂದ ಕೈಗಳನ್ನು ಅಲಂಕರಿಸಿ ಸಂಭ್ರಮಿಸುವುದಿಲ್ಲ. ಆದರೆ ಇಲ್ಲೊಬ್ಬರು ಮಹಿಳೆ ವಿಚ್ಚೇದನ ಪಡೆದಿರುವುದಕ್ಕೆ ಕೈಗಳಿಗೆ ಮದರಂಗಿ ವಿಭಿನ್ನವಾದ ಮದರಂಗಿ ಹಾಕಿ ಸಂಭ್ರಮಿಸಿದ್ದು, ಇವರ ಈ ಡಿವೋರ್ಸ್ ಮದರಂಗಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಯಾವುದೇ ಸಂಬಂಧ ಇರಬಹುದು, ಪ್ರೀತಿ ಇರಬೇಕಾದ ಜಾಗದಲ್ಲಿ ವಿರಸ ಕಿತ್ತಾಟ ಶುರುವಾದರೆ ಆ ಸಂಬಂಧದ ಜೊತೆ ಏಗಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ ಬಹುತೇಕರು ವೈವಾಹಿಕ ಸಂಬಂಧ ಮುರಿಯುವ ವೇಳೆ ಬಹಳ ಯೋಚನೆ ಮಾಡುತ್ತಾರೆ ಕಾಯುತ್ತಾರೆ, ಸರಿ ಹೋಗಬಹುದೇ ಎಂದು ಯೋಚಿಸುತ್ತಾರೆ. ಕೆಲವು ಸಂಬಂಧಗಳನ್ನು ಮುರಿಯುವುದರಿಂದ ತಾವು ನೆಮ್ಮದಿಯಾಗಿ ಇರಬಹುದು ಎಂದು ತಿಳಿದಿದ್ದರೂ ಕೂಡ ವಿವಾಹ ಮುರಿಯುವ ವಿಚಾರದಲ್ಲಿ ಸಾವಿರ ಬಾರಿ ಯೋಚನೆ ಮಾಡುತ್ತಾರೆ. ಆದರೆ ಹೀಗೆ ಯೋಚನೆ ಮಾಡಿ ಡಿವೋರ್ಸ್‌ ತಗೊಂಡೆ ಬಿಡೋಣ ಅಂತ ನಿರ್ಧಾರ ಮಾಡಿದ ನಂತರ ಅಂತಹ ಸಂಬಂಧದಿಂದ ಹೊರಬರುವವರೆಗೂ ನೆಮ್ಮದಿ ಇರುವುದಿಲ್ಲ. ಒಮ್ಮೆ ಬಿಡುಗಡೆ ಸಿಕ್ಕರೆ ಸಾಕಪ್ಪ ಅಂತ ಅನೇಕರು ಕಾಯುತ್ತಾರೆ. ಇನ್ನೂ ಅನೇಕರಿಗೆ ಕೋರ್ಟ್‌ಗೆ ಅಲೆದು ಅಲೆದು ಸುಸ್ತಾಗಿರುತ್ತದೆ. ಯಾವಾಗ ಬಿಡುಗಡೆ ಸಿಗುವುದೋ ಎಂದು ಕಾಯುತ್ತಿರುತ್ತಾರೆ. ಬಹುಶಃ ಇಷ್ಟೊಂದು ಕಾಯುವಿಕೆ ಹೋರಾಟದ ನಂತರ ಸಿಕ್ಕ ವಿಚ್ಚೇದನ ಇದಾಗಿರಬೇಕು. ಹೀಗಾಗಿ ಇದೇ ಕಾರಣಕ್ಕೆ ಇಲ್ಲಿ ಮಹಿಳೆಯೊಬ್ಬರು ವಿಚ್ಚೇದನ ಸಿಕ್ಕ ನಂತರ ಅದನ್ನು ಮೆಹಂದಿ ಹಾಕುವ ಮೂಲಕ ಸಂಭ್ರಮಾಚರಿಸಿದ್ದು. ಈ ಡಿವೋರ್ಸ್‌ ಮೆಹಂದಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
 

ಇದನ್ನೂ ಓದಿ:ಯಾವ ದೇಶಗಳಲ್ಲಿ ಅತ್ಯಂತ ಕಡಿಮೆ ಡಿವೋರ್ಸ್ ಆಗುತ್ತೆ? ಕಾರಣ ಏನು?

ಮೆಹಂದಿ ಬೈ ಸಂಧ್ಯಾಯಾದವ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ನ್ಯಾಯ ದೇವತೆ ನ್ಯಾಯದ ತಕ್ಕಡಿ ಹಿಡಿದು ಕಣ್ಣಿಗೆ ಬಟ್ಟೆ ಕಟ್ಟಿ ನಿಂತಿರುವ ರೀತಿಯಲ್ಲಿ ಮದರಂಗಿಯನ್ನು ಚಿತ್ರಿಸಲಾಗಿದೆ. ತಕ್ಕಡಿಯ ಒಂದು ಭಾಗದಲ್ಲಿ ಪ್ರೇಮ 100 ಗ್ರಾಂ ಎಂದು ಬರೆದಿದ್ದರೆ ಮತ್ತೊಂದೆಡೆ ಜಗಳ 200 ಗ್ರಾಂ ಎಂದು ಬರೆಯಲಾಗಿದೆ. ಅಂಗೈ ಮೇಲೆ ಫೈನಲಿ ಡಿವೋರ್ಸ್ ಎಂದು ಬರೆಯಲಾಗಿದ್ದು, ಒಡೆದ ಹೃದಯದಾಕಾರವನ್ನು ಚಿತ್ರಿಸಿ ಅದರೊಳಗೆ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿರುವ ಗಂಡು ಹೆಣ್ಣನ್ನು ಚಿತ್ರಿಸಲಾಗಿದೆ. ಹಾಗೆಯೇ ಮೇಲ್ಭಾಗದಲ್ಲಿ ಎ ಡೇ ಟು ರಿಮೆಂಬರ್ ಎಂದು ಬರೆಯಲಾಗಿದ್ದು, ಅಲ್ಲಿ ಹುಡುಗಿಗೆ ಹುಡುಗನೋರ್ವ ಉಂಗುರು ಹಾಕಿ ಎಂಗೇಜ್ ಆಗುತ್ತಿರುವ ದೃಶ್ಯವಿದೆ. ಹಾಗೆಯೇ ಅಲ್ಲಿ 'ಅವಳ ಮದುವೆ' ಎಂದು ಬರೆಯಲಾಗಿದೆ. ಈ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. 

ಜೀವನದ ಯುದ್ಧದಿಂದ ಜೀವಂತವಾಗಿ ನಿಮ್ಮ ಕುಟುಂಬದ ಬಳಿ ಮರಳಿದ್ದಕ್ಕೆ ಅಭಿನಂದನೆಗಳು ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ನೋಡಿದ ಒಬ್ಬರು ಈ ತಲೆಮಾರಿಗೆ ಏನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಬ್ರೇಕಾಪ್ ಬಗ್ಗೆ ಏನಾದರೂ ಮದರಂಗಿ ಇದೆಯೇ ಎಂದು ಒಬ್ಬರು ಕೇಳಿದ್ದಾರೆ. ಇವರು ದೂರಾದ ನಂತರ ಖುಷಿಯಾಗಿದ್ದಾರೆ ಎಂಬುದಕ್ಕೆ ಈ ಇದು ಸಾಕ್ಷಿಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ಇವರು ಸಾವಿನ ದಿನ ಮೆಹಂದಿ ಹಾಕಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಿಚ್ಚೇದನ ಕೆಟ್ಟದೆಂದು ಭಾವಿಸಬೇಡಿ, ಇದರಿಂದ ನಿಮ್ಮ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ಈ ನಯಾ ಟ್ರೆಂಡ್ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ:ಮಹ್ವಾಶ್ ಜೊತೆ ಡೇಟಿಂಗ್ ಸುದ್ದಿ ನಡುವೆ ಅಚ್ಚರಿ, ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡ ಧನಶ್ರಿ-ಚಹಾಲ್

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು