
ಪ್ರೀತಿಯು ಬದುಕಿಗೆ ಜೀವನೋತ್ಸಾಹ ತುಂಬುವ ಮಧುರವಾದ ಭಾವನೆ. ಲವ್ ಎಟ್ ಫಸ್ಟ್ ಸೈಟ್ ಎಂಬುದು ಹಲವರ ಜೀವನದಲ್ಲಿ ನಡೆಯುವ ಘಟನೆಯಾದರೂ ಕೆಲವೊಬ್ಬರು ಆಕರ್ಷಣೆಯನ್ನೇ ಪ್ರೀತಿಯೆಂದು ತಪ್ಪು ತಿಳಿದುಕೊಳ್ಳುತ್ತಾರೆ. ಆದರೆ ಇವೆರಡೂ ವಿಭಿನ್ನ ಭಾವನೆಗಳಾಗಿವೆ. ಆಕರ್ಷಣೆಯು ಎಷ್ಟು ಬೇಗ ಮೂಡುತ್ತದೆಯೋ ಅಷ್ಟೇ ಬೇಗ ಮಾಯವಾಗಬಹುದು. ಆದರೆ ಪ್ರೀತಿ ಹಾಗಲ್ಲ. ಇದು ಸಂಪೂರ್ಣವಾಗಿ ಸಂಬಂಧಕ್ಕೆ ಒಪ್ಪಿಗೆ ಸೂಚಿಸುವ ಭಾವನೆಯಾಗಿದೆ. ಇದು ಜೀವನದ ಪ್ರಮುಖ ಬಾಂಧವ್ಯವಾಗಿಯೂ ಬದಲಾಗಬಹುದು.
ಪ್ರೀತಿ ಮತ್ತು ಆಕರ್ಷಣೆಯ ನಡುವಿನ ವ್ಯತ್ಯಾಸವೇನು ?
ಆಕರ್ಷಣೆ (Attraction) ಒಬ್ಬರ ಮೇಲೆ ನೋಡಿದ ತಕ್ಷಣ ಕಾಣಿಸಿಕೊಳ್ಳುವ ಭಾವನೆಯಾಗಿದೆ. ಅದು ತಕ್ಷಣವೇ ಸಂಭವಿಸುತ್ತದೆ ಮತ್ತು ಆ ಭಾವನೆ ಯಾವಾಗ ಬೇಕಾದರೂ ಇಲ್ಲವಾಗಬಹುದು. ಆದರೆ ಪ್ರೀತಿ (Love) ಹಾಗಲ್ಲ. ಇದು ಹೆಚ್ಚು ಆಳವಾದ ಭಾವನೆಯಾಗಿದ್ದು ಅದು ನಿಮ್ಮ ಸಂಗಾತಿಯೊಂದಿಗೆ ಬಂಧವನ್ನು ಏರ್ಪಡಿಸಲು ಕಾರಣವಾಗುತ್ತದೆ. ಎರಡರ ನಡುವಿನ ವ್ಯತ್ಯಾಸ (Difference)ವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಮುಖ್ಯವಾಗಿ ಪ್ರತಿಯೊಂದು ಸಂಬಂಧವು ವ್ಯಾಮೋಹದಿಂದ ಪ್ರಾರಂಭವಾಗುತ್ತದೆ. ಆದರೆ ಈ ವ್ಯಾಮೋಹದ ಭಾವನೆಯು ನಿಜವಾದ ನಂಬಿಕೆ (Trust) ಮತ್ತು ಗೌರವಕ್ಕೆ (Respect) ತಿರುಗಿದಾಗ ಮಾತ್ರ ಅದು ಪ್ರೀತಿಯಾಗುತ್ತದೆ. ಆಕರ್ಷಣೆಯೋ, ನಿಜವಾದ ಪ್ರೀತಿಯೋ ತಿಳಿದುಕೊಳ್ಳುವುದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.
ಸಂಬಂಧ ಚೆನ್ನಾಗಿರ್ಬೇಕಾ? ಮೂರು ವಿಚಾರಗಳನ್ನ ಕಲಿತುಕೊಳ್ಬೇಡಿ
ಸಂಗಾತಿಗಾಗಿ ಏನನ್ನೂ ಮಾಡಲು ಸಿದ್ಧರಾಗುತ್ತೀರಿ: ಒಬ್ಬ ವ್ಯಕ್ತಿಗಾಗಿ ಏನನ್ನೂ ಮಾಡಲು ಸಿದ್ಧ ಎಂದಾದರೆ ಅದನ್ನು ಪ್ರೀತಿ ಎಂದು ನಿರ್ಧರಿಸಬಹುದು. ಬಂಧವು ತುಂಬಾ ವಿಶೇಷವೆಂದು ಭಾವಿಸಿದರೆ, ನೀವು ಅವನನ್ನು ಅಥವಾ ಅವಳನ್ನು ಸಂತೋಷಪಡಿಸಲು ಏನು ಬೇಕಾದರೂ ಮಾಡಲು ಸಿದ್ಧವಾಗುತ್ತೀರಿ.
ಹೊಸ ಕೆಲಸಗಳನ್ನು ಮಾಡಲು ಸಿದ್ಧರಾಗುತ್ತೀರಿ: ನಿಮ್ಮ ಸಂಗಾತಿಯು (Partner) ನಿಮ್ಮನ್ನು ಹೊಸ ಕೆಲಸಗಳನ್ನು ಮಾಡಲು ಕೇಳಿದರೆ, ನೀವು ಸಾಮಾನ್ಯವಾಗಿ ಮಾಡುವ ಕೆಲಸವಲ್ಲದಿದ್ದರೂ ಸಹ ನೀವು ಅದಕ್ಕೆ ಅವಕಾಶವನ್ನು ನೀಡಲು ಬಯಸುತ್ತೀರಿ. ಈ ಹೊಸ ವಿಷಯಗಳನ್ನು ಪ್ರಯತ್ನಿಸುವುದು ನಿಮ್ಮ ಪಾಲುದಾರರೊಂದಿಗೆ ನಿಜವಾದ ಸಂಪರ್ಕವನ್ನು ರೂಪಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ವಿಶ್ರಾಂತಿ ನೀಡುತ್ತದೆ. ಇದು ನಿಜವಾಗಿಯೂ ಪ್ರೀತಿಯಾಗಿರುತ್ತದೆ.
Valentine's Day ಬಂತು; ನಿಮ್ಮ ಪ್ರಪೋಸಲ್ ಒಪ್ಪಿಕೊಳ್ಳುತ್ತಾರೋ, ಇಲ್ಲವೋ?
ನಾನು ಎನ್ನುವ ಬದಲು ನಾವು ಎನ್ನುವ ಯೋಚನೆ: ಒಬ್ಬರ ಬಗ್ಗೆ ನಿಜವಾಗಿಯೂ ಪ್ರೀತಿಯಿದ್ದಾಗ ವ್ಯಕ್ತಿ ನಾನು ಅನ್ನುವ ಬದಲು ನಾವು ಎಂದು ಯೋಚಿಸಲು ಪ್ರಾರಂಭಿಸುತ್ತಾನೆ. ಯಾವುದೇ ಪ್ಲಾನ್ ಮಾಡುವಾಗ ಇಬ್ಬರ ಬಗ್ಗೆ ಯೋಚನೆ ಮಾಡುವುದು ನೀವು ಪ್ರೀತಿಯಲ್ಲಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಪ್ರೀತಿಪಾತ್ರರ ಎಲ್ಲಾ ಗುಣಲಕ್ಷಣಗಳು ಆಕರ್ಷಕವಾಗಿ ಕಾಣುತ್ತವೆ. ಅವರು ಏನೇ ಮಾತನಾಡಿದರೂ ಮನಸ್ಸಿಗೆ ಖುಷಿ ನೀಡುತ್ತದೆ. ಮಾತ್ರವಲ್ಲ ಲವ್ ಸಾಂಗ್ಸ್ ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಮೂಡುತ್ತಿದೆ ಎಂದರ್ಥ.
ವ್ಯಕ್ತಿಯನ್ನು ಪರಿಪೂರ್ಣವಾಗಿ ಕಾಣುತ್ತೀರಿ: ಯಾವೊಬ್ಬ ವ್ಯಕ್ತಿಯೂ ಪರ್ಫೆಕ್ಟ್ ಅಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಹೀಗಿದ್ದೂ ನೀವು ಅವರನ್ನು ಪರಿಪೂರ್ಣ ವ್ಯಕ್ತಿಯಂತೆ ಕಾಣುತ್ತೀರಿ ಎಂದಾದರೆ ನೀವು ಪ್ರೀತಿಯಲ್ಲಿದ್ದೀರಿ.
Relationship Tips: ನೀವಿಬ್ಬರು ಜೊತೆಗಿರಲು ಸಾಧ್ಯಾನೇ ಇಲ್ಲ ಅನ್ನೋ ಸೂಚನೆಯಿದು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.