Viral Video: ಮದುವೆಯ ದಿನವೇ ವೈಟ್‌ಕೋಟ್, ಸ್ಟೆತಾಸ್ಕೋಪ್ ಧರಿಸಿ ಎಕ್ಸಾಂಗೆ ಬಂದ ವಧು!

By Vinutha Perla  |  First Published Feb 12, 2023, 12:16 PM IST

ಮದುವೆ ದಿನದಂದೇ ವಧು ಮತ ಹಾಕಲು ಬರೋದು, ಎಕ್ಸಾಂ ಬರೆಯೋದು ಮೊದಲಾದ ವೀಡಿಯೋಗಳು ಈ ಹಿಂದೆಯೂ ಸಾಕಷ್ಟು ಬಾರಿ ವೈರಲ್ ಅಗಿದೆ. ಹಾಗೆಯೇ ಇಲ್ಲೊಂದೆಡೆ ವಧು ಲ್ಯಾಬ್‌ಕೋಟ್ ಹಾಗೂ ಸ್ಟೆತಾಸ್ಕೋಪ್ ಧರಿಸಿ ಪರೀಕ್ಷಾ ಹಾಲ್ ಪ್ರವೇಶಿಸಿದ್ದಾಳೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.


ಮದುವೆ ಅನ್ನೋದು ಗಂಡು-ಹೆಣ್ಣಿನ ನಡುವಿನ ಏಳೇನು ಜನ್ಮದ ಬಂಧ. ಮನೆಮೆಚ್ಚಿದವರ ಜೊತೆ ಜೀವನ ಪರ್ಯಂತ ಜೊತೆಯಾಗಿರುವ ವಾಗ್ದಾನ. ಹೀಗಾಗಿಯೇ ಮದುವೆಯ ದಿನ ಎಲ್ಲರ ಪಾಲಿಗೆ ಸ್ಪೆಷಲ್ ಆಗಿರುತ್ತದೆ. ಅದರಲ್ಲೂ ಹುಡುಗಿಯರು ಸುಂದರವಾಗಿ ರೆಡಿಯಾಗುತ್ತಾರೆ. ಜರತಾರಿ ಸೀರೆಯನ್ನುಟ್ಟು, ಮೈ ತುಂಬಾ ಆಭರಣಗಳನ್ನು ಧರಿಸಿ, ಮೇಕಪ್ ಮಾಡಿಕೊಂಡು ಕಂಗೊಳಿಸುತ್ತಾರೆ. ಹೀಗೆ ಬ್ರೈಡಲ್‌ ಲುಕ್‌ನಲ್ಲಿ ವಧು ವೆಡ್ಡಿಂಗ್‌ ಹಾಲ್‌ನಲ್ಲಿರೋದು ಸರಿ. ಆದ್ರೆ ಇಲ್ಲೊಂದೆಡೆ ಮದುಮಗಳು ಸುಂದರವಾಗಿ ರೆಡಿಯಾಗಿ ವಧುವಿನ ಲುಕ್‌ನಲ್ಲಿ ಎಕ್ಸಾಂ ಹಾಲ್‌ಗೆ ಬಂದಿದ್ದಳು.

ಅಚ್ಚರಿಯೆನಿಸಿದರೂ ಇದು ನಿಜ. ವಧು (Bride) ತನ್ನ ಮದುವೆಯ ಸೀರೆಯಲ್ಲಿ ಲ್ಯಾಬ್‌ಕೋಟ್ ಮತ್ತು ಕುತ್ತಿಗೆ ಸ್ಟೆತಾಸ್ಕೋಪ್‌ ಹಾಕಿಕೊಂಡು ಪ್ರಾಕ್ಟಿಕಲ್ ಎಕ್ಸಾಂಗೆ ಹಾಜರಾಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗ್ಇದೆ. ವಧುವನ್ನು ಶ್ರೀ ಲಕ್ಷ್ಮಿ ಅನಿಲ್ ಎಂದು ಗುರುತಿಸಲಾಗಿದೆ. ಆಕೆಯ ಇನ್‌ಸ್ಟಾಗ್ರಾಂ ಬಯೋ ಪ್ರಕಾರ ಆಕೆ ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ವಿದ್ಯಾರ್ಥಿನಿ (Student)ಯಾಗಿದ್ದಾಳೆ. 

Tap to resize

Latest Videos

ಫಸ್ಟ್‌ ನೈಟ್ ವೀಡಿಯೋ ಹಂಚಿಕೊಂಡ ದಂಪತಿ, ಇನ್ನು ಏನೇನೆಲ್ಲಾ ನೋಡ್ಬೇಕಪ್ಪಾ ಅಂತಿದ್ದಾರೆ ನೆಟ್ಟಿಗರು

ವೀಡಿಯೋ ಕ್ಲಿಪ್‌ನಲ್ಲಿ ವಧು, ಹಳದಿ ಸೀರೆ, ಮದುವೆಯ ಆಭರಣಗಳು (Jewellery) ಮತ್ತು ಮೇಕ್ಅಪ್‌ ಧರಿಸಿ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವಾಗ ತನ್ನ ಸಹಪಾಠಿಗಳಿಂದ ನಗು ಮತ್ತು ಹರ್ಷೋದ್ಗಾರಗಳನ್ನು ಎದುರಿಸುತ್ತಾಳೆ. ಕಿರು ವೀಡಿಯೋದಲ್ಲಿ ಅವಳು ಸ್ನೇಹಿತರನ್ನು (Friends) ಕೈಬೀಸಿ ನಗುತ್ತಿರುವುದನ್ನು ತೋರಿಸುತ್ತದೆ. 'ಮೆಡಿಕೋಸ್ ಲೈಫ್ #ಫಿಸಿಯೋಥೆರಪಿ ಪರೀಕ್ಷೆ ಮತ್ತು ಮದುವೆ ಒಂದೇ ದಿನ' ಎಂದು ವೀಡಿಯೋ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಈ  ಕ್ಲಿಪ್ ಅನ್ನು ಕೆಲವು ದಿನಗಳ ಹಿಂದೆ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದು 153,000 ಕ್ಕೂ ಹೆಚ್ಚು ಲೈಕ್ಸ್‌ ಮತ್ತು ಎರಡು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

 

 

 

 

 

View this post on Instagram

 

 

 

 

 

 

 

 

 

 

 

A post shared by 🅰🅳🅷🅸_🅰🅻🅼🅰💓 (@_grus_girls_)

ಇನ್ನೊಂದು ವೀಡಿಯೊದಲ್ಲಿ, ಶ್ರೀ ಲಕ್ಷ್ಮಿ ಅವರು ಹಾಲ್‌ಗೆ ಹೋಗುವ ದಾರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗೆ ತಯಾರಿ ನಡೆಸುವುದನ್ನು ನೋಡಬಹುದು. ಅವಳು ತನ್ನ ಪರೀಕ್ಷಾ ಕೇಂದ್ರವನ್ನು ತಲುಪುತ್ತಿದ್ದಂತೆ, ಅವಳ ಸ್ನೇಹಿತರೊಬ್ಬರು ಅವಳ ಸೀರೆಯ ನೆರಿಗೆಗಳನ್ನು ಸರಿಹೊಂದಿಸುತ್ತಿರುವುದು ಕಂಡುಬಂದರೆ, ಇನ್ನೊಬ್ಬರು ಅವಳ ಕುತ್ತಿಗೆಗೆ ಸ್ಟೆತಸ್ಕೋಪ್ ಅನ್ನು ಹಾಕುತ್ತಿದ್ದಾರೆ. ಪರೀಕ್ಷೆಯ ನಂತರ, ವಧು ಕೂಡ ಹೊರಗೆ ಬಂದು ತನ್ನ ತಾಯಿಯನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ. ಸದ್ಯ ಮದುವೆ ದಿನವೇ ವಧು ಎಕ್ಸಾಂ ಅಟೆಂಡ್ ಮಾಡಿರೋ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

Viral video: ನನ್‌ ಬಿಟ್ ಹೋಗ್ಬೇಡ..ವಧು ಮನೆ ಬಿಟ್ಟು ಹೋಗದಂತೆ ತಡೆದು ನಿಲ್ಲಿಸೋ ಶ್ವಾನ

ನಟ್ಟಿಗರು ವೀಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಅವಳನ್ನು ಶ್ಲಾಘಿಸಿದರು. ಇತರರು ಕಾಮೆಂಟ್ ವಿಭಾಗವನ್ನು ಹೃದಯ ಮತ್ತು ಪ್ರೀತಿಯ ಎಮೋಜಿಗಳೊಂದಿಗೆ ತುಂಬಿದರು. ಒಬ್ಬ ಬಳಕೆದಾರ. 'ಪ್ರಾಕ್ಟಿಕಲ್ ಟೈಮ್‌ನಲ್ಲಿ ಮದುವೆ ಫಿಕ್ಸ್ ಮಾಡಿ ಸಹಾಯ ಮಾಡಿದವರಿಗೆಲ್ಲ ನಮಸ್ಕಾರ' ಎಂದು ಮತ್ತೊಬ್ಬರು ಹೇಳಿದರು. ಇನ್ನೊಬ್ಬರು ವಧುವಿನ ಡೆಡಿಕೇಶನ್‌ಗೆ ಮೆಚ್ಚುಗೆ ಸೂಚಿಸಿದರು.

 

 

 

 

 

View this post on Instagram

 

 

 

 

 

 

 

 

 

 

 

A post shared by 🅰🅳🅷🅸_🅰🅻🅼🅰💓 (@_grus_girls_)

click me!