ಮದುವೆ ಎಂದರೆ ಎರಡು ಮನಸ್ಸುಗಳನ್ನು ಬೆಸೆಯುವ ಶುಭ ಕಾರ್ಯ. ನಿಜವಾದ ಪ್ರೀತಿಗೆ ವಯಸ್ಸು, ಜಾತಿ-ಧರ್ಮ, ಲಿಂಗ, ದೇಶ-ರಾಜ್ಯ ಯಾವುದು ಸಹ ಅಡ್ಡಿಯಾಗುವುದಿಲ್ಲ. ಅದು ನಿಜ ಅನ್ನೋದನ್ನು ಕೇರಳದಲ್ಲೊಂದು ತೃತೀಯ ಲಿಂಗಿ ಜೋಡಿ ಸಾಬೀತುಪಡಿಸಿದೆ.
ಪ್ರೀತಿಯೆಂದರೆ ಹಾಗೇ..ಅದೊಂದು ಜಾದೂ..ಹೃದಯದಲ್ಲಿ ಮೂಡುವ ಮಧುರ ಭಾವನೆ..ಒಬ್ಬ ವ್ಯಕ್ತಿಯ ಬಗ್ಗೆ ಪ್ರೀತಿ ಮೂಡುವಾಗ ವ್ಯಕ್ತಿಯ ಜಾತಿ-ಧರ್ಮ, ಅಂತಸ್ತು, ರಾಜ್ಯ-ದೇಶ, ಲಿಂಗ, ವಯಸ್ಸು ಯಾವುದೂ ಸಹ ಮುಖ್ಯವಾಗುವುದಿಲ್ಲ. ಹಾಗೆಯೇ ಕೇರಳದಲ್ಲೊಂದ ತೃತೀಯಲಿಂಗಿ ಜೋಡಿಯ ಮದುವೆ ನಡೆದಿದೆ. ಅದೂ ಈ ವಿಶೇಷ ಮದುವೆ ಪ್ರೇಮಿಗಳ ದಿನದಂದೇ ನಡೆದಿರೋದು ವಿಶೇಷ. ಪಾಲಕ್ಕಾಡ್‌ನಲ್ಲಿ ಪ್ರೇಮಿಗಳ ದಿನದಂದು ಟ್ರಾನ್ಸ್‌ಜೆಂಡರ್‌ಗಳಾದ ಪ್ರವೀಣ್ ನಾಥ್ ಮತ್ತು ರಿಶಾನಾ ಐಶು ವಿವಾಹವಾಗಿದ್ದಾರೆ.
ತೃತೀಯಲಿಂಗಿಗಳಾದ ಪ್ರವೀಣ್ ನಾಥ್ ಹಾಗೂ ರಿಶಾನಾ ಐಶು ಮದುವೆ
ಕೇರಳದ ಪಾಲಕ್ಕಾಡ್ ಜಿಲ್ಲೆಯ ಎಲವಚ್ಚೇರಿಯ ಪ್ರವೀಣ್ ನಾಥ್ ಹಾಗೂ ಮಲಪ್ಪುರಂ ಜಿಲ್ಲೆಯ ಕೊಟ್ಟೈಕಲ್‌ನ ರಿಶಾನಾ ಐಶು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರೇಮಿಗಳ ದಿನದಂದೇ (Valentines day) ಇವರಿಬ್ಬರ ಮದುವೆ (Marriage) ನಡೀತು. ತೃತೀಯಲಿಂಗಿಗಳಾಗಿರುವ ಇವರ ಮದುವೆಗೆ ಆರಂಭದಲ್ಲೇ ಮನೆ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ನಂತರ ಎರಡೂ ಕುಟುಂಬದವರ ಒಪ್ಪಿಗೆಯಿಂದಲೇ ಪ್ರೇಮಿಗಳ ಮದುವೆ ನಡೆದಿದೆ.
undefined
ಹೆಂಡ್ತಿ ತೀರಿಹೋದ ನೋವಲ್ಲಿ ತಾನೇ ಅವಳಾದ ಪತಿ, ನ್ಯೂಯಾರ್ಕ್ ನಲ್ಲೊಂದು ವಿಲಕ್ಷಣ ಘಟನೆ!
ಬಾಡಿಬಿಲ್ಡರ್ ಆಗಿರುವ ಪ್ರವೀಣ್, 2021ರಲ್ಲಿ ಮಿಸ್ಟರ್ ಕೇರಳ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. 2022ರಲ್ಲಿ ಮುಂಬೈನಲ್ಲಿ ನಡೆದ ಇಂಟರ್‌ನ್ಯಾಷನಲ್ ಬಾಡಿ ಬಿಲ್ಡಿಂಗ್‌ನಲ್ಲಿ ತೃತೀಯ ಲಿಂಗಿ (Transgender) ವಿಭಾಗದಲ್ಲಿ ಭಾಗವಹಿಸಿದ್ದಾರೆ. ರಿಶಾನ ಐಶು ತೃತೀಯ ಲಿಂಗಿ ವಿಭಾಗದಲ್ಲಿ ಮಿಸ್ ಮಲಬಾರ್ ಅವಾರ್ಡ್ ಗೆದ್ದಿದ್ದಾರೆ. ರಿಶಾನಾ ಮಾಡೆಲ್ ಆಗಿಯೂ ಫೇಮಸ್ ಆಗಿದ್ದು, ತ್ರಿಶ್ಯೂರ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಲಕ್ಕಾಡ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಟ್ರಾನ್ಸ್ ಸಮುದಾಯದ ಅನೇಕ ಜನರು ಭಾಗವಹಿಸಿದ್ದರು.
ಪ್ರವೀಣ್ ತಮ್ಮ 18ನೇ ವಯಸ್ಸಿನಲ್ಲಿ ತಾವು ತೃತೀಯಲಿಂಗಿ ಎಂಬುದನ್ನು ತಿಳಿದುಕೊಂಡರು. ಮನೆಯಲ್ಲಿ ಈ ವಿಷ್ಯ ತಿಳಿದು ಹಲವು ಗಲಾಟೆಗಳು ನಡೆದಿದ್ದವು. ನಂತರ ಮನೆಮಂದಿ ಪ್ರವೀಣ್‌ನನ್ನು ಒಪ್ಪಿಕೊಂಡರು. ಮಹಾರಾಜ ಕಾಲೇಜಿನಲ್ಲಿ ಪ್ರವೀಣ್ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ತೃತೀಯಲಿಂಗಿಗಳಿಗಾಗಿ ಸಹಯಾತ್ರಿಕ ಎಂಬ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವೀಣ್ ಹಾಗೂ ರಿಶಾ ಐಶು ಪರಸ್ಪರ ಭೇಟಿಯಾದರು. ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು ಎಂದು ತಿಳಿದುಬಂದಿದೆ.
ಗಂಡಾಗಿ ಹುಟ್ಟಿ ಹೆಣ್ಣಾಗಿ, 11 ವರ್ಷಕ್ಕೆ ಅತ್ಯಾಚಾರದಲ್ಲಿ ಬೆಂದ ನಾಝಾಗೆ ಒಲಿದ ಅಂತಾರಾಷ್ಟ್ರೀಯ ಕಿರೀಟ!
ಆದರೆ ಇಬ್ಬರ ಪಾಲಿಗೂ ಪ್ರೀತಿಸುವುದು ಸುಲಭವಾಗಿರಲ್ಲಿಲ್ಲ. ಅದರಲ್ಲೂ ಐಶು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ತೃತೀಯಲಿಂಗಿಯನ್ನು ಒಪ್ಪಿಕೊಳ್ಳಲು ಅವರ ಕುಟುಂಬ ಸಿದ್ಧವಿರಲ್ಲಿಲ್ಲ. ಬದಲಾಗಿ ಆಕೆಯನ್ನು ಮಾನಸಿಕ ರೋಗಿಯಂತೆ ಕಾಣುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮನೆ ಮಂದಿ ಸಹ ಆಕೆಯ ಐಡೆಂಟಿಟಿಯನ್ನು ಒಪ್ಪಿಕೊಂಡರು.
ಪ್ರವೀಣ್ ಕೇರಳದ ಮೊದಲ ಟ್ರಾನ್ಸ್ ಬಾಡಿ ಬಿಲ್ಡರ್ ಕೂಡ ಹೌದು.ನಟನೆಯಲ್ಲೂ ಮಿಂಚಿರುವ ಪ್ರವೀಣ್ ಗೆ ಇನ್ನೂ ಹಲವು ಕನಸುಗಳಿವೆ. ಆ ಕನಸುಗಳ ಜೊತೆಗೆ ಈಗ ಪ್ರವೀಣ್ ಜೊತೆಯಲ್ಲಿ ಮಲಪ್ಪುರಂ ನಿವಾಸಿ ಟ್ರಾನ್ಸ್ ಮಹಿಳೆ ರಿಶಾನಾ ಐಶು ಇರಲಿದ್ದಾರೆ. ಎರಡು ವರ್ಷಗಳ ಅವರ ಸ್ನೇಹ ಮದುವೆಯ ಹಂತಕ್ಕೆ ತಲುಪಿರುವುದು ಖುಷಿಯ ವಿಚಾರವೇ ಸರಿ.
ಕೇರಳದ ತೃತೀಯಲಿಂಗಿ ದಂಪತಿಗೆ ಮಗು ಜನನ, ದೇಶದಲ್ಲೇ ಇದು ಮೊದಲ ಪ್ರಕರಣ
ಇತ್ತೀಚಿಗಷ್ಟೇ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗು ಜನನವಾಗಿತ್ತು. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಮೊದಲ ಮಗುವನ್ನು ಪಡೆದುಕೊಂಡಿದ್ದರು. ಕೇರಳದ ಕೋಝಿಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತೃತೀಯಲಿಂಗಿ ದಂಪತಿಗಳು ಮಗುವನ್ನು ಪಡೆದರು. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ.