Valentine Day : ಮದ್ವೆ ಗಿದ್ವೆ ಬಂಧ ಬೇಡ, ಹೀಗೇ ಇರೋದೇ ಚೆಂದ ಬಿಟ್ ಬಿಡಿ ಅಂತಿದ್ದಾರೆ ಅಮೆರಿಕನ್ನರು!

By Suvarna News  |  First Published Feb 14, 2023, 3:38 PM IST

ಪ್ರೀತಿ, ಮದುವೆ, ಮಕ್ಕಳು ಇದೆಲ್ಲ ಜೀವನದ ಒಂದೊಂದು ಘಟ್ಟ. ಲೈಫ್ ಎಂಜಾಯ್ ಮಾಡುವ ಭರದಲ್ಲಿ ಕೆಲ ಯುವಕರು ಬದಲಾವಣೆ ಗಾಳಿ ಬೀಸ್ತಿದ್ದಾರೆ. ಮದುವೆ, ಪ್ರೀತಿಗಿಂತ ಒಂಟಿ ಬಾಳ್ವೆ ಅವರಿಗೆ ಇಷ್ಟವಾಗ್ತಿದೆ.  
 


ಒಂದು ವಯಸ್ಸಿಗೆ ಬರ್ತಿದ್ದಂತೆ ಪುರುಷ- ಮಹಿಳೆಯರಲ್ಲಿ ಆಕರ್ಷಣೆಯಾಗೋದು ಸಹಜ. ಯೌವನದಲ್ಲಿ ಮನಸ್ಸು ಸಂಗಾತಿಯನ್ನು ಬಯಸುತ್ತದೆ. ಪ್ರೀತಿಯಲ್ಲಿ ಬೀಳುವ ಜನರು ಮುಂದಿನ ಜೀವನಕ್ಕೆ ಅಡಿಯಿಡ್ತಾರೆ. ಮದುವೆ ಮೂಲಕ ಹೊಸ ಜೀವನ ಶುರು ಮಾಡ್ತಾರೆ. ಇದು ಪ್ರಕೃತಿ ನಿಯಮ ಕೂಡ ಹೌದು. ಒಂಟಿಯಾಗಿ ಜೀವನ ನಡೆಸೋದು ಬಹಳ ಕಷ್ಟ ಎನ್ನುವುದು ಭಾರತೀಯರ ಅಭಿಪ್ರಾಯ. ಭಾರತದಲ್ಲಿ ಈಗ್ಲೂ ಅನೇಕರು ಒಂಟಿಯಾಗಿ ಬಾಳ್ವೆ ನಡೆಸುತ್ತಿರುವವರಿದ್ದಾರೆ. ಆದ್ರೆ ಬಹುತೇಕ ಮಂದಿ ಒಂಟಿಯಿಂದ ಜಂಟಿಯಾಗೋಕೆ ಇಷ್ಟಪಡ್ತಾರೆ. 

ಭಾರತ (India) ದ ಸ್ಥಿತಿ ಹೀಗಿದ್ರೆ ಅಮೆರಿಕಾ (America) ದ ಸ್ಥಿತಿ ಬಹಳ ಭಿನ್ನವಾಗಿದೆ. ಅಮೆರಿಕಾದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿ (Love) – ಪ್ರೇಮ ಅಂತಾ ಓಡಾಡೋ ಜನರು ನಂತ್ರ ಮದುವೆ (Marriage) ಯಾಗದೆ ಲಿವ್ ಇನ್ ನಲ್ಲಿ ಸ್ವಲ್ಪ ದಿನವಿದ್ದು ನಂತ್ರ ದೂರವಾಗ್ತಾರೆ. ಡೈವೋರ್ಸ್ (Divorce) ಅಲ್ಲಿ ಮಾಮೂಲಿ. ಇದು ಭಾರತೀಯರು ಅಮೆರಿಕಾ ಬಗ್ಗೆ ಇಟ್ಟಿರುವ ನಂಬಿಕೆ. ಕಾಲ ಬದಲಾದಂತೆ ಅಮೆರಿಕಾ ಜನರ ಮನಸ್ಥಿತಿ ಬದಲಾಗಿದೆ. ಅಮೆರಿಕಾದಲ್ಲಿ ಜಂಟಿಯಾಗುವ ಬದಲು ಒಂಟಿ (Alone) ಯಾಗಿ ಜೀವನ ನಡೆಸಲು ಇಚ್ಛಿಸುವವರು ಹೆಚ್ಚಾಗ್ತಿದ್ದಾರೆ. ನಿಮಗೆ ಅಚ್ಚರಿ ಎನ್ನಿಸಿದ್ರೂ ಇದು ಸತ್ಯ.  ಈ ಬಗ್ಗೆ ಕೆಲ ಸಮೀಕ್ಷೆ ನಡೆದಿದೆ. ಅದರ ವರದಿ ನಿಮ್ಮ ಮುಂದೆ.

Latest Videos

undefined

VALENTINE DAY: ಪುರುಷ ಬೆಂಕಿಯಾದ್ರೆ ಮಹಿಳೆ ನೀರು, ವ್ಯಾಲಂಟೈನ್ ಡೇ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ

ಅಮೆರಿಕಾದಲ್ಲಿ ಇಷ್ಟು ಜನ ಒಂಟಿ..! :  ಪ್ಯೂ ರಿಸರ್ಚ್ (Pew Research) ಹೆಸರಿನ ಸಂಸ್ಥೆ ಅಮೆರಿಕಾದಲ್ಲಿ ಎಷ್ಟು ಮಂದಿ ಒಂಟಿಯಾಗಿ ಜೀವನ ನಡೆಸ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲು ಸಂಶೋಧನೆ ನಡೆಸಿದೆ. ಅಮೆರಿಕದ ಯುವಕರು ಇತರ ದೇಶಗಳಿಗಿಂತ ಸ್ವಲ್ಪ ಭಿನ್ನವಾಗಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಜನಸಂಖ್ಯೆಯ ಶೇಕಡ 30ಕ್ಕೂ ಹೆಚ್ಚು ಮಂದಿ ಒಂಟಿ ಜೀವನ ನಡೆಸುತ್ತಿದ್ದಾರೆ. ಇದರಲ್ಲಿ ಶೇಕಡಾ 32 ರಷ್ಟು ಪುರುಷರಾದ್ರೆ ಶೇಕಡಾ 38 ರಷ್ಟು ಮಹಿಳೆಯರು ಸೇರಿದ್ದಾರೆ. ಸಂಶೋಧನೆ ವರದಿ ಪ್ರಕಾರ, ಅಮೆರಿಕಾದ 10 ಯುವಕರಲ್ಲಿ 3 ಮಂದಿ ಮದುವೆಯಾಗಿಲ್ಲ. ಅವರು ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಮೆರಿಕಾದ ಬಹುತೇಕ ಯುವಕರು ಒಂಟಿಯಾಗಿರಲು ಇಷ್ಟಪಡ್ತಿದ್ದಾರೆ. ಈ ದೇಶದಲ್ಲಿ ಶೇಕಡಾ 63 ರಷ್ಟು ಯುವಕರು ಮತ್ತು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 34 ರಷ್ಟು ಮಹಿಳೆಯರು ಒಂಟಿಯಾಗಿರಲು ಬಯಸಿದ್ದಾರೆ. ಅಮೆರಿಕಾದಲ್ಲಿರುವ ಕಪ್ಪು ಜನಾಂಗದ ಯುವಕರಲ್ಲಿ ಶೇಕಡಾ 47 ರಷ್ಟು ಮಂದಿ ಒಂಟಿತನವನ್ನು ಇಷ್ಟಪಡುತ್ತಾರಂತೆ.

ಜಂಟಿಯಾಗುವವರ ಸಂಖ್ಯೆಯಲ್ಲಿ ಇಳಿಕೆ : ಇನ್ನೊಂದು ಆಶ್ಚರ್ಯದ ಸಂಗತಿ ಏನೆಂದ್ರೆ ಮದುವೆಯಾಗುವವರ ಸಂಖ್ಯೆ ಇಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2019 ರಲ್ಲಿ ಶೇಕಡಾ 49 ರಷ್ಟು ಯುವಕರು ಸಂಬಂಧದಲ್ಲಿರಲು ಆದ್ಯತೆ ನೀಡಿದ್ದರ. ಎರಡು ವರ್ಷಗಳ ನಂತರ ಈ ಅಂಕಿ ಅಂಶವು ಶೇಕಡಾ 42 ಕ್ಕೆ ಇಳಿದಿದೆ.  

Valentine's Day 2023: ಪ್ರೇಮಿಗೆ ಈ ದಿನವನ್ನು ವಿಶೇಷವಾಗಿಸಲು ನೀವೇನು ಮಾಡಬಹುದು?

ಒಂಟಿತನವನ್ನು ಆನಂದಿಸ್ತಿದ್ದಾರೆ ಯುವಕರು : ಏಕಾಂಗಿಯಾಗಿ ವಾಸಿಸುವ ಯುವಕರು ಯಾವುದೇ ಸಂಬಂಧದಲ್ಲಿರಲು ಆಸಕ್ತಿ ತೋರಿಸುತ್ತಿಲ್ಲವೆಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಅವರು ಏಕಾಂಗಿಯಾಗಿಯೇ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಒಂಟಿಯಾಗಿರುವುದು ಅವರಿಗೆ ಅಭ್ಯಾಸವಾಗಿದೆ. ಅದ್ರಲ್ಲಿ ಸಿಗುವ ಸ್ವಾತಂತ್ರ್ಯ ಸಂಬಂಧದಲ್ಲಿದ್ದಾಗ ಸಿಗೋದಿಲ್ಲ ಎಂಬ ನಂಬಿಕೆ ಅವರದ್ದು. ಇಷ್ಟುದೊಡ್ಡ ಮಟ್ಟದಲ್ಲಿ ಜನರು ಒಂಟಿತನ ಬಯಸ್ತಿದ್ದಾರೆ ಅಂದ್ರೆ ಅದು ಅಚ್ಚರಿ ಮೂಡಿಸುತ್ತದೆ. ಇದರ ಪರಿಣಾಮವನ್ನು ಅವರ ಮನಸ್ಸು ಹಾಗೂ ಸ್ವಭಾವದಲ್ಲಿ ಕಾಣಬಹುದು ಎನ್ನುತ್ತಾರೆ ತಜ್ಞರು.
ಸಂಶೋಧನೆ ಪ್ರಕಾರ, ಅಮೆರಿಕಾದಲ್ಲಿ ಶೇಕಡಾ 22ರಷ್ಟು ಮಂದಿ ಸಂಗಾತಿಯ ಹುಡುಕಾಟದಲ್ಲಿದ್ದಾರೆ. ಶೇಕಡಾ 13ರಷ್ಟು ಮಂದಿ ಕಮಿಟೆಡ್ ಹಾಗೂ ಶೇಕಡಾ 7ರಷ್ಟು ಮಂದಿ ಸಾಮಾನ್ಯ ಸಂಬಂಧವನ್ನು ಬಯಸುತ್ತಿದ್ದಾರೆ. 
 

click me!