Relationship Tips: ಹುಡುಗಿ ಸದ್ದಿಲ್ಲದೆ ಕೈ ಕೊಟ್‌ ಬಿಟ್ಳಾ? ಕಾರಣ ಏನಿರ್ಬೋದು?

By Suvarna News  |  First Published Feb 14, 2023, 5:45 PM IST

ನಿಮ್ಮ ಹುಡುಗಿ ಏಕಾಏಕಿ ನಿಮ್ಮಿಂದ ದೂರವಾಗಿದ್ದಾಳಾ? ಸಂಬಂಧದಿಂದ ಇದ್ದಕ್ಕಿದ್ದ ಹಾಗೆ ಎದ್ದು ಹೋಗುವವರಿಗೂ ಹಲವು ಕಾರಣಗಳಿರುತ್ತವೆ ಎನ್ನುವುದು ಸತ್ಯ. ನಿಮ್ಮ ತಪ್ಪಿಲ್ಲದೆಯೂ ಅವರು ನಿಮ್ಮೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಬಹುದು. ಆದರೂ ಅವರನ್ನು ಕ್ಷಮಿಸಿಬಿಡಿ. ನೀವು ಮಾನಸಿಕವಾಗಿ ದೃಢವಾಗಿ.
 


ಬ್ರೇಕಪ್‌ ಆದಾಗ ಮನಸ್ಸಿಗೆ ಘಾಸಿಯಾಗುತ್ತದೆ. ಅದೂ ಸಹ ಇದ್ದಕ್ಕಿದ್ದ ಹಾಗೆ ಗರ್ಲ್‌ ಫ್ರೆಂಡ್‌ ನಿಮ್ಮ ಪಕ್ಕದಿಂದ ಮಾಯವಾದರೆ ಭಾವನಾತ್ಮಕವಾಗಿ ಸೋತ ಅನುಭವವಾಗುತ್ತದೆ. ಹುಡುಗರ ವಿಚಾರದಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಈಗೋಕ್ಕೆ ಭಾರೀ ಏಟಾಗುತ್ತದೆ. ಈಗೋಕ್ಕೆ ಆಗುವ ಶೇಮ್‌ ಅನ್ನು ಬಹಳಷ್ಟು ಗಂಡುಮಕ್ಕಳು ಗಂಭೀರವಾಗಿ ಪರಿಗಣಿಸಿ ಇಲ್ಲಸಲ್ಲದ ಕೃತ್ಯಗಳಿಗೆ ಮುಂದಾಗುತ್ತಾರೆ. ನಿಮಗೂ ಇಂತಹ ಅನುಭವ ಆಗಿದೆಯೇ? ನಿಮ್ಮ ಹುಡುಗಿಯೂ ಇದ್ದಕ್ಕಿದ್ದ ಹಾಗೆ ನಿಮ್ಮಂದ ದೂರವಾಗಿದ್ದಾಳಾ? ಹಾಗಿದ್ದರೆ ಅದಕ್ಕೆ ಕೆಲವು ಕಾರಣಗಳಿರಬಹುದು. ಯಾರೂ ಸಹ ಸ್ನೇಹ, ಪ್ರೀತಿಗೆ ಇದ್ದಕ್ಕಿದ್ದ ಹಾಗೆ ಬೈ ಎಂದು ಹೇಳುವುದಿಲ್ಲ. ಅದಕ್ಕೆ ಗಂಭೀರವಾದ ಹಿನ್ನೆಲೆ ಇದ್ದೇ ಇರುತ್ತದೆ. ಅದು ನಿಮ್ಮ ಗಮನಕ್ಕೆ ಬಾರದೆ ಇರಬಹುದು ಅಷ್ಟೆ. ಅಷ್ಟಕ್ಕೂ ಹುಡುಗಿಯರಿಗೆ ಗಂಭೀರವಾಗಿ ಕಾಣುವ ಕೆಲವು ಸಂಗತಿಗಳು ಹುಡುಗರಿಗೆ ತುಂಬ ಸಿಂಪಲ್‌ ಎಂದೂ ಅನ್ನಿಸಬಹುದು. ಭಾವನೆಗಳಲ್ಲಿರುವ ಇಂತಹ ವ್ಯತ್ಯಾಸವೂ ಅವರು ನಿಮಗೆ ಬೈ ಹೇಳಲು ಕಾರಣವಾಗಿದ್ದಿರಬಹುದು. ಅವರು ನಿಮ್ಮಿಂದ ದೂರವಾಗುವುದಕ್ಕೆ ಇರಬಹುದಾದ ಕಾರಣಗಳು ಅರಿತುಕೊಳ್ಳಿ. ಹಾಗೂ ಅದನ್ನು ಎದುರಿಸುವುದು ಹೇಗೆ ಎನ್ನುವ ವಿಚಾರವೂ ನಿಮ್ಮಲ್ಲಿರಲಿ.

•    ಭಾವನೆ ಬದಲಾಗಿರ್ಬೋದು (Changed Feelings)!
ಸಿಂಪಲ್ಲಾಗಿ ಹೇಳಬೇಕೆಂದರೆ, ನಿಮ್ಮ ಕುರಿತಾಗಿ ಆಕೆಯ ಭಾವನೆ ಬದಲಾಗಿರಬಹುದು. ಇದು ನಿಮಗೆ ತೀರ ಹುಚ್ಚುತನ (Silly) ಎನ್ನಿಸಬಹುದು. ಆದರೆ, ಇದು ನಿಜ. ನೀವು ನಂಬುತ್ತೀರೋ ಬಿಡುತ್ತೀರೋ, ಪ್ರೀತಿಯಲ್ಲಿ (Love) ಬೀಳುವಾಗ ಕೆಲವರಿಗೆ ನಿರ್ದಿಷ್ಟತೆ ಇರುವುದಿಲ್ಲ. ನೀವು ಅವರನ್ನು ಪ್ರೊಪೋಸ್‌ (Propose) ಮಾಡಿದಾಗ ಅದಕ್ಕೆ ಓಕೆ ಎಂದಿರಬಹುದು, ನಿಮ್ಮೊಂದಿಗೆ ಒಡನಾಡಿರಲೂಬಹುದು. ಆದರೆ, ಕ್ರಮೇಣ ಅವರಲ್ಲಿ ಅಷ್ಟು ತೀವ್ರವಾದ ಭಾವನೆಗಳು ಮೂಡಿರದೆ ಇರಬಹುದು. ನಿಮ್ಮ ಬಗ್ಗೆ ಆಳವಾದ ಭಾವನೆ ಇಲ್ಲದಿರುವಾಗ ಮನಸ್ಸು (Mind) ಬದಲಾಗಬಹುದು ಎನ್ನುವ ಸತ್ಯ ತಿಳಿದಿರಿ. 

Tap to resize

Latest Videos

ಸಂಬಂಧ ಚೆನ್ನಾಗಿರ್ಬೇಕಾ? ಮೂರು ವಿಚಾರಗಳನ್ನ ಕಲಿತುಕೊಳ್ಬೇಡಿ

•    ಭಾವನಾತ್ಮಕ ಅಗತ್ಯ (Emotional Needs) ಪೂರೈಕೆ ಆಗದಿರುವುದು
ಸಂಬಂಧದಲ್ಲಿ ಹಲವು ಮಗ್ಗಲುಗಳಿರುತ್ತವೆ. ಪ್ರೀತಿಪಾತ್ರ ವ್ಯಕ್ತಿಯ ಮೇಲೆ ಸಹಜವಾಗಿ ಹಲವು ರೀತಿಯಲ್ಲಿ ಭಾವನಾತ್ಮಕವಾಗಿ ಅವಲಂಬಿತಾಗಿರುತ್ತೇವೆ. ಆದರೆ, ನಿಮ್ಮ ಪ್ರೀತಿಯಲ್ಲಿ ಆಕೆಗೆ ಭಾವನಾತ್ಮಕ ಅಗತ್ಯಗಳ ಪೂರೈಕೆ ಆಗದಿರಬಹುದು. ಪ್ರೇಮಿಗಳ ನಡುವೆಯೂ ವಾತ್ಸಲ್ಯ, ಮಮಕಾರ (Affection) ಇರಬೇಕಾಗುತ್ತದೆ. ಇವು ಪೂರೈಕೆಯಾಗದಿರಬಹುದು. ಅಥವಾ ಅವರ ಭಾವನೆಗಳನ್ನು ನೀವು ಅರ್ಥ ಮಾಡಿಕೊಳ್ಳದಿರಬಹುದು, ಅವರಿಗೆ ಸಾಕಷ್ಟು ಸ್ವಾತಂತ್ರ್ಯ (Independence) ಇಲ್ಲದಿರಬಹುದು, ಭದ್ರತೆ, ಬೆಂಬಲ (Support), ಸಂಪರ್ಕ, ನಂಬಿಕೆ (Faith), ಕರುಣೆ, ಆದ್ಯತೆ, ಅಂತರ (Space) ಇವೆಲ್ಲವೂ ಸಂಬಂಧದಲ್ಲಿ ಬಹುಮುಖ್ಯ. ಇವುಗಳ ಕೊರತೆಯಾದರೆ ಹುಡುಗಿಯರು ದೂರವಾಗುವುದು ಸಾಮಾನ್ಯ.

•    ಮುಗಿಯದ ಸಂಘರ್ಷ (Conflicts)
ನಿಮ್ಮ ನಡುವೆ ಮುಗಿಯದ ಸಂಘರ್ಷಗಳಿದ್ದಾಗ ಹುಡುಗಿ (Girl) ದೂರವಾಗುವುದು ಸಹಜ. ನಿಮ್ಮ ಕೆಲವು ವರ್ತನೆಗಳು ಆಕೆಗೆ ತೊಡಕಾಗಿರಬಹುದು. ಅಥವಾ ಆಕೆಯ ಯಾವುದೋ ಒಂದು ಸ್ವಭಾವವನ್ನು ನೀವು ನಿಯಂತ್ರಿಸಲು ಯತ್ನಿಸುತ್ತಿರಬಹುದು. ಅಂತಹ ಸಂಘರ್ಷಗಳನ್ನು ಪದೇ ಪದೆ ಎದುರಿಸಲು (To Face) ಆಕೆ ಇಷ್ಟಪಡದೆ ಇರಬಹುದು. ಅವುಗಳ ಬಗ್ಗೆ ಬಾಯಿಬಿಟ್ಟು ಹೇಳಿದರೂ ನೀವು ಪರಿಗಣಿಸದೆ ಇದ್ದಾಗ, ಮತ್ತೆ ಮತ್ತೆ ಜಗಳವಾಡುತ್ತ ನಿಮ್ಮನ್ನು ನೋಯಿಸಲು ಇಷ್ಟಪಡದೆ ಆಕೆ ದೂರವಾಗಬಹುದು.

ನಿಮ್ಮ ಸಂಗಾತಿಗೆ ಇದು ಎರಡನೇ ಮದುವೆಯೇ? ಹಾಗಿದ್ರೆ ಈ ವಿಷ್ಯ ನೆನಪಿರಲಿ

•    ನಿರೀಕ್ಷೆಯಂತೆ (Expectation) ನೀವಿಲ್ಲ, ಆಕರ್ಷಣೆ ಫೇಡ್‌ (Faded Attraction)
ನಮ್ಮ ಸಂಬಂಧದಿಂದ ನಾವು ಸಿಕ್ಕಾಪಟ್ಟೆ ನಿರೀಕ್ಷೆ ಮಾಡುತ್ತೇವೆ. ಕೆಲವರಂತೂ ಅತಿಯಾಗಿ ನಿರೀಕ್ಷೆ ಮಾಡುತ್ತಾರೆ. ಫೇರಿಟೇಲ್‌ (Fairy Tale) ಮಾದರಿಯ ಪ್ರೇಮದ ಕಥೆಯ ನಾಯಕಿಯಾಗಲು ಆಕೆ ಬಯಸಿ ನೀವು ಸಾಮಾನ್ಯರಂತಿದ್ದರೆ ಆಕೆಗೆ ನಿರಾಸೆಯಾಗಬಹುದು. ಆರಂಭದ ಆಕರ್ಷಣೆ ಕುಗ್ಗಿ ನೈಜವಾದ ಬದುಕು (Real Life) ಆಕೆಗೆ ಬೇಸರ ಮೂಡಿಸಿರಬಹುದು. ಸಂಬಂಧ (Relationship) ಶಕ್ತಿಯುತವಾಗಿದ್ದರೆ ಹೀಗೆಲ್ಲ ಆಗುವುದಿಲ್ಲ ಎನ್ನುವ ಮಾತು ನಿಜವಾಗಿದ್ದರೂ, ಹೀಗೂ ಸಂಭವಿಸಬಹುದು ಎನ್ನುವುದು ಸತ್ಯ. ಅಥವಾ ದೀರ್ಘಾವಧಿ (Longterm) ಸಂಬಂಧಕ್ಕೆ ಆಕೆ ಸಿದ್ಧಳಾಗಿಲ್ಲದಿರಬಹುದು. 
ನಿಮಗೆ ಗೊತ್ತೇ? ಇನ್ನೊಬ್ಬರ ಆಕರ್ಷಣೆಯಲ್ಲಿರುವಾಗ ನಮ್ಮ ದೇಹದಲ್ಲಿ ಡೊಪಮೈನ್‌ (Dopamine) ಮತ್ತು ಇತರ ಸಂಬಂಧಿ ಹಾರ್ಮೋನುಗಳು (Horomones) ಅಧಿಕ ಮಟ್ಟದಲ್ಲಿ ಬಿಡುಗಡೆಯಾಗುತ್ತದೆ. ಇವು ಅಕ್ಷರಶಃ ಕೆಮಿಕಲ್‌ ನಂತೆ ಕಾರ್ಯನಿರ್ವಹಿಸುತ್ತವೆ. ತಲೆಸುತ್ತಿದ ಅನುಭವ ಆಗಬಹುದು, ಸಿಕ್ಕಾಪಟ್ಟೆ ಎನರ್ಜೆಟಿಕ್‌ ಅನ್ನಿಸಬಹುದು, ನಿಜಕ್ಕೂ ಈ ಸಮಯದಲ್ಲಿ ನಿದ್ರೆ (Sleep) ಕಡಿಮೆಯಾಗಿ, ಆಹಾರದ ಬಯಕೆ (Appetite) ಕುಗ್ಗುತ್ತದೆ. ಇದೇ ಸಂಬಂಧದ ಹನಿಮೂನ್‌ ಪೀರಿಯೆಡ್. ಆದರೆ, ಕ್ರಮೇಣ ಆಕರ್ಷಣೆ ಕುಗ್ಗಿದಾಗ ಈ ಪರಿಣಾಮಗಳಿಲ್ಲದೆ ಸಂಬಂಧ ನೀರಸವೆನಿಸಬಹುದು.
 

click me!