ಪ್ರೀತ್ಸೋದು ಸುಲಭ. ಆದ್ರೆ ಪ್ರೀತಿ (Love)ಸೋರು ರಿಜೆಕ್ಟ್ (Reject) ಮಾಡಿದಾಗ, ಲವ್ ಬ್ರೇಕಪ್ ಆದಾಗ ಆ ನೋವಿನಿಂದ ಹೊರಬರುವುದು ತುಂಬಾ ಕಷ್ಟ. ಅವಳಿಗೆ ನಾನು ಇಷ್ಟವಿಲ್ಲ. ಆದ್ರೆ ಮರೆಯೋಕಾಗ್ತಿಲ್ಲ..ಏನ್ಮಾಡ್ಲಿ..? ಇದು ಹಲವರ ಸಮಸ್ಯೆ (Problem). ಮೂಡ್ ಆಫ್ ಮಾಡ್ಕೊಂಡು ಮನೆ ಮೂಲೆಯಲ್ಲಿ ಕೂರೋ ಬದ್ಲು ಹೀಗೆ ಮಾಡಿ
ಪ್ರೀತಿ ಎನ್ನುವುದು ಎಷ್ಟು ಇಷ್ಟವೋ ಅಷ್ಟೇ ಕಷ್ಟ. ಇಷ್ಟಪಡುವವರು ಸಿಕ್ಕರೆ ಜೀವನ ಫುಲ್ ಹ್ಯಾಪಿ. ಆದರೆ ಮನಸಾರೆ ಇಷ್ಟಪಡುವವರು, ವಾಪಾಸ್ ಇಷ್ಟಪಡದಿದ್ದಲ್ಲಿ ಲೈಫ್ ದಿ ಎಂಡ್ ಆಯ್ತು ಎನ್ನುವ ಅನುಭವ. ಇಷ್ಟಪಡುವವರು ಜೀವನ ಪೂರ್ತಿ ಜತೆಗಿರುವ ಭರವಸೆ ನೀಡಿ ದೂರ ಹೋದರಂತೂ ಜೀವನದಲ್ಲಿ ಇನ್ನೂ ಏನೇನೂ ಉಳಿದಿಲ್ಲ ಎಂಬ ಭಾವನೆ. ಲವ್ ರಿಜೆಕ್ಟ್ ಆಯ್ತು, ಬ್ರೇಕಪ್ ಆಯ್ತು ಅನ್ನೋ ಕಾರಣಕ್ಕೇ ಸುಸೈಡ್ ಮಾಡಿಕೊಂಡವರು, ಖಿನ್ನತೆಗೊಳಗಾದವರು ಅದೆಷ್ಟೋ ಮಂದಿಯಿದ್ದಾರೆ. ಲವ್ ರಿಜೆಕ್ಟ್ ಆದ ಎಷ್ಟೋ ಮಂದಿಗೆ ಅದೇ ಬೇಸರಲ್ಲಿ ಕೊರಗುವುದು, ಅಳುವುದು ಗೊತ್ತು. ಆದರೆ ಆ ನೋವಿನಿಂದ ಹೊರಬರುವ ದಾರಿ ತಿಳಿದಿಲ್ಲ.
ಆಕೆ/ಆತ ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂಬ ವಿಷಯವನ್ನು ಒಪ್ಪಿಕೊಳ್ಳಿ
undefined
ಜೀವನ (Life)ದಲ್ಲಿ ನಾವು ಬದಲಾಯಿಸಲಾಗದ ಹಲವು ವಿಷಯಗಳಿವೆ. ಅದರಲ್ಲೊಂದು ಪ್ರೀತಿಸುವುದು. ನಾವು ಯಾರನ್ನು ಪ್ರೀತಿ (Love)ಸಬೇಕು ಎಂಬುದನ್ನು ನಾವು ನಿರ್ಧರಿಸಬಹುದು. ಆದರೆ ನಮ್ಮನ್ನು ಅವರು ಪ್ರೀತಿಸಬೇಕು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ನೀವು ಪ್ರೀತಿಸುವವರು ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂದಾದರೆ ಆ ಸತ್ಯವನ್ನು ಒಪ್ಪಿಕೊಳ್ಳಿ. ಆ ನಿಜವನ್ನು ನಿಮ್ಮದಾಗಿಸಿಕೊಳ್ಳಿ. ಮೊದಲಿನಂತೆ ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನವನ್ನು ಉಲ್ಲಾಸದಾಯಕವಾಗಿಸಿ.
Long Distance Relationship: ಲವರ್‌ಗೆ ಕೊಡುವ ಒಲವಿನ ಉಡುಗೊರೆ ಹೀಗಿರಲಿ
ಸ್ನೇಹಿತರೊಂದಿಗೆ ಹೆಚ್ಚು ಬೆರೆಯಿರಿ
ಒಂಟಿಯಾಗಿದ್ದಷ್ಟೂ ಪ್ರೀತಿ, ಆ ಹುಡುಗ ಅಥವಾ ಹುಡುಗಿಯ ನೆನಪು ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಆದಷ್ಟು ಫ್ರೆಂಡ್ಸ್ (Friends) ಗ್ರೂಪ್‌ನಲ್ಲಿ ಮಿಂಗಲ್ ಆಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಕಾಳಜಿ ವಹಿಸುವವರು, ನಿಮ್ಮ ಜತೆ ಇರಲು ಇಷ್ಟಪಡುವವರ ಜತೆ ಉತ್ತಮವಾಗಿ ಸಮಯ (Time) ಕಳೆಯಿರಿ. ಇದರಿಂದ ಮನಸ್ಸು ಸ್ಪಲ್ಪ ಸ್ಪಲ್ಪವಾಗಿ ಅವನ, ಅವಳ ನೆನಪುಗಳಿಂದ ಹೊರಬರುತ್ತದೆ. ನಂತರದ ದಿನಗಳಲ್ಲಿ ಅವನ ಅಥವಾ ಅವಳ ನೆನಪಿನಿಂದ ಹೊರಬರಲು ಸಾಧ್ಯವಾಗುತ್ತದೆ. ನಿಮಗಿಷ್ಟವಾದ ಸಿನಿಮಾಗಳನ್ನು ನೋಡಿ, ಪುಸ್ತಕವನ್ನು ಓದಿ. ದಿನವನ್ನು ಸಂಪೂರ್ಣ ಬಿಝಿಯಾಗಿಸಿಕೊಳ್ಳಿ.
ಹೊಸ ಹವ್ಯಾಸಗಳನ್ನು ಆರಿಸಿಕೊಳ್ಳಿ
ಸ್ನೇಹಿತರೊಂದಿಗೆ ಕಾರ್ಯನಿರತವಾಗಿರುವುದು ಹೇಗೆ ಮರೆಯಲು ಸಹಾಯ ಮಾಡುತ್ತದೆಯೋ, ಹಾಗೆಯೇ ಕೆಲವು ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಫೋಟೋಗ್ರಫಿ (Photography) ಮೊದಲಾದ ಅಭ್ಯಾಸಗಳು ಜೀವನಕ್ಕೆ ಹೊಸ ಉಮೇದನ್ನು ತುಂಬುತ್ತವೆ. ಅವುಗಳಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ, ಹೊಸ ಹೊಸ ವಿಷಯಗಳ ಕಲಿಕೆ ಕ್ರಮೇಣ ನೀವು ಪ್ರೀತಿಸಿದವಳನ್ನು ಮರೆಯುವಂತೆ ಮಾಡುತ್ತದೆ.
ಅಳು ಬಂದಾಗ ಅತ್ತು ಬಿಡಿ.
ಲವ್ ಬ್ರೇಕಪ್ (Love breakup) ಆದಾಗ ಅಥವಾ ರಿಜೆಕ್ಟ್ ಆದಾಗ ಹೆಚ್ಚಿನವರು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಐಯಾಮ್ ಆಲ್ ರೈಟ್ ಎಂದು ತೋರಿಸಿಕೊಳ್ಳಲು ಸಹಜವಾಗಿ ವರ್ತಿಸುತ್ತಾರೆ. ಆದರೆ ಮನಸ್ಸಿನೊಳಗೆ ಮಾತ್ರ ಕೊರಗುತ್ತಿರುತ್ತಾರೆ. ಪದೇ ಪದೇ ಅವನನ್ನೇ, ಅವಳನ್ನೇ ನೆನಪಿಸಿಕೊಳ್ಳುತ್ತಿರುತ್ತಾರೆ. ಹೀಗೆ ಮಾಡದಿರಿ, ನೆನಪಾದಾಗ, ಬೇಸರವೆನಿಸಿದಾಗ ಒಮ್ಮೆ ಮನಸಾರೆ ಅತ್ತು ಬಿಡಿ. ದುಃಖವನ್ನು ಇಲ್ಲದಾಗಿಸಿಕೊಳ್ಳಿ. ಮನಸ್ಸಲ್ಲೇ ಇಟ್ಟು ಕೊರಗುವ ಭಾರಕ್ಕಿಂತ ಅತ್ತುಬಿಡುವುದು ಹೆಚ್ಚು ಸೂಕ್ತ.
Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ
ಅವನಿಂದ/ಅವಳಿಂದ ಅಂತರ ಕಾಯ್ದುಕೊಳ್ಳಿ
ಆದಷ್ಟು ಅವನಿಂದ, ಅವಳಿರುವ ಪರಿಸರದಿಂದ ದೂರ ಇರಿ. ನೀವು ಎದುರು ಬಂದರೂ ನನಗೇನು ಡಿಫರ್ನೆನ್ಸ್ ಆಗುವುದಿಲ್ಲ ಎಂಬ ಹುಚ್ಚಾಟ ಮಾಡಿಕೊಂಡು ಅವನ, ಅವಳ ಸಮೀಪವೇ ಸುಳಿಯುವ ಕೆಲಸ ಮಾಡದಿರಿ. ಇದು ಮರೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಕಷ್ಟವಾಗಿಸುತ್ತದೆ. ಅವನ, ಅವಳೆಡೆಗಿನ ಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಅವನ/ ಅವಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ
ವೈಯಕ್ತಿಕವಾಗಿ ನೋಡುವುದನ್ನು ತಪ್ಪಿಸುವ ಹಾಗೆಯೇ ಅವನ/ ಅವಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ನೀವು ಅವನ/ ಅವಳ ಬಗ್ಗೆ ಸ್ನೇಹಿತರಲ್ಲಿ ಮಾತನಾಡುತ್ತಿದ್ದರೆ ಮನಸ್ಸಿನ ಮೂಲೆಯಲ್ಲಿ ಎಲ್ಲೂ ನೀವಿನ್ನೂ ಅವನನ್ನು ಪಡೆಯಲು ಇಷ್ಟಪಡುತ್ತಿದ್ದೀರಿ ಎಂದರ್ಥ. ಹೀಗಾಗಿ ಅವನ, ಅವಳ ಒಳ್ಳೆಯ ಗುಣಗಳನ್ನು ಇನ್ನೊಬ್ಬರ ಬಳಿ ಹೇಳುವುದನ್ನು ಬಿಟ್ಟು ಬಿಡಿ.