Sex Coffee Trend: 2022ರಲ್ಲಿ ‘ಸೆಕ್ಸ್ ಕಾಫಿ’ ಟ್ರೆಂಡ್‌, ಏನಿದು..?

By Suvarna News  |  First Published Dec 21, 2021, 7:02 PM IST

ಮದುವೆಯಾದ ಮೇಲೆ ಲೈಂಗಿಕ ಜೀವನ ಚೆನ್ನಾಗಿರಬೇಕು ಎಂದು ಎಲ್ಲರೂ ಬಯಸ್ತಾರೆ. ಸೆಕ್ಸ್ (Sex) ಲೈಫ್ ಚೆನ್ನಾಗಿ ನಡೆಯೋಕೆ ಇನ್ನಿಲ್ಲದ ಕಸರತ್ತುಗಳನ್ನು ಮಾಡ್ತಾರೆ.  2022ರಲ್ಲಿ ಟ್ರೆಂಡ್ (Trend) ಆಗಬಹುದಾದ ‘ಸೆಕ್ಸ್ ಕಾಫಿ’ ನಿಮ್ಮ ಬೆಡ್ ರೂಮ್‌ (Bedromm)ನ್ನು ಬಿಝಿಯಾಗಿಸುವ ಎಲ್ಲಾ ಛಾನ್ಸಸ್ ಇದೆ. ಹಾಗಿದ್ರೆ ಏನಿದು ಸೆಕ್ಸ್ ಕಾಫಿ..?


ಹೊಸವರ್ಷಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ. ಹಳೆ ಟ್ರೆಂಡ್‌ಗಳು ಹೋಗಿ ಹೊಸ ಟ್ರೆಂಡ್‌ಗಳು ಬರುವ ಸಮಯ. ಒಂದೊಂದು ವರ್ಷದಲ್ಲೂ ಒಂದೊಂದು ವಿಷ್ಯ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳುತ್ತದೆ. 2021ರಲ್ಲಿ ಡಾಲ್ಗೋನಾ ಕಾಫಿ ಹೆಚ್ಚು ಫೇಮಸ್ ಆಗಿತ್ತು. ಅದೇ ರೀತಿ, 20224ರಲ್ಲಿ ಸೆಕ್ಸ್ ಕಾಫಿ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳುವ ಸಾಧ್ಯತೆಯಿದೆ. ದಾಂಪತ್ಯ ಜೀವನದಲ್ಲಿ ಸೆಕ್ಸ್ ಲೈಫ್ ಚೆನ್ನಾಗಿ ನಡೆಯೋಕೆ ಎಲ್ಲರೂ ಇನ್ನಿಲ್ಲದ ಕಸರತ್ತುಗಳನ್ನು ಮಾಡ್ತಾರೆ. ಇಂಥವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. 2022ರಲ್ಲಿ ಟ್ರೆಂಡ್ ಆಗಬಹುದಾದ ‘ಸೆಕ್ಸ್ ಕಾಫಿ’ ನಿಮ್ಮ ಬೆಡ್ ರೂಮ್‌ನ್ನು ಬಿಝಿಯಾಗಿಸುವ ಎಲ್ಲಾ ಸಾಧ್ಯತೆಯೂ ಇದೆ.

ಪ್ರಪಂಚದಾದ್ಯಂತದ ಕಾಫಿ ಉತ್ಸಾಹಿಗಳಿಗೆ ಈಗಾಗಲೇ ಸೆಕ್ಸ್ ಕಾಫಿ ಅನ್ನೋದು ಫೇವರಿಟ್ ಆಗಿದೆ. ಹಾಗಿದ್ರೆ ಸೆಕ್ಸ್ ಕಾಫಿ ಎಂದರೇನು. ಇದಕ್ಕೂ ಸೆಕ್ಸ್‌ಗೂ ಏನಾದ್ರೂ ಸಂಬಂಧ ಇದ್ಯಾ..? ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದಾ..?

Tap to resize

Latest Videos

ಸೆಕ್ಸ್ ಕಾಫಿ ಎಂದರೇನು..?

ಅಮೇರಿಕಾದ ಗಲ್ಲಿಗಲ್ಲಿಗಳಲ್ಲಿ ಸದ್ಯ ಈ ಸೆಕ್ಸ್ (Sex) ಕಾಫಿ ಹೆಚ್ಚು ಪ್ರಸಿದ್ಧಿ ಹೊಂದುತ್ತಿದೆ. ಸೆಕ್ಸ್ ಕಾಫಿ, ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ, ಸೆಕ್ಸ್ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಸೆಕ್ಸ್ ಕಾಫಿ ಎಂದರೆ ಮೂಲತಃ ಕಾಮೋತ್ತೇಜಕ ಪದಾರ್ಥಗಳ ಸಂಯೋಜನೆಯಾಗಿದ್ದು, ಕೋಕೋ (Coco), ದಾಲ್ಚಿನ್ನಿ ಮತ್ತು ಮಕಾ ಎಂಬ ಅಂಶವನ್ನು ಒಳಗೊಂಡಿದೆ. ಇದು ದೇಹದಲ್ಲಿ ಕಡು ಬಯಕೆಯನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ. ಸೆಕ್ಸ್ ಕಾಫಿಯಲ್ಲಿ ಮುಖ್ಯ ಅಂಶವೆಂದು ಗುರುತಿಸಿಕೊಂಡಿರುವ ಮಕಾ ಎಂದರೇನು?

Sex Life: ಸಂಭೋಗಕ್ಕೂ ಮುನ್ನ ಸಂಗಾತಿ ಜೊತೆ ಈ ವಿಷ್ಯ ಮಾತನಾಡಿ

ಮಕಾ ರಹಸ್ಯವೇನು?

ಮಕಾ ಕಾಮೋತ್ತೇಜಕ ಆಹಾರವಾಗಿದೆ. ಈ ಕಾಮೋತ್ತೇಜಕವನ್ನು ಸತು, ಸೆಲೆನಿಯಮ್, ವಿಟಮಿನ್ B9, ಅಯೋಡಿನ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಖನಿಜಗಳ ಮೆಲಂಜ್‌ನಿಂದ ತಯಾರಿಸಲಾಗುತ್ತದೆ. ಮಕಾವನ್ನು ಮುಖ್ಯವಾಗಿ ಬ್ರಾಸಿಕಾ ಕುಟುಂಬದ ಸಸ್ಯದ ಸಾರದಿಂದ ತಯಾರಿಸಲಾಗುತ್ತದೆ. ಇದನ್ನು ಪೆರುವಿಯನ್ ಆಂಡಿಸ್‌ನಲ್ಲಿ ಬೆಳೆಸಲಾಗುತ್ತದೆ.

ಸೆಕ್ಸ್ ಕಾಫಿ (Coffee)ಯಲ್ಲಿನ ಈ ರಹಸ್ಯ ಪದಾರ್ಥವನ್ನು ಪೆರುವಿಯನ್ನರು ಸಾಂಪ್ರದಾಯಿಕವಾಗಿ ಕಾಮ ಉತ್ತೇಜಕವಾಗಿ ಬಳಸುತ್ತಾರೆ. ಹಲವಾರು ವರ್ಷಗಳಿಂದಲೂ ಪೆರುವಿಯನ್ನರು ಇದನ್ನು ಬಳಸಿಕೊಂಡೇ ಬಂದಿದ್ದಾರೆ. ಈ ಅಂಶವು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಸೆಕ್ಸ್ ಡ್ರೈವ್ ಅನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಸಾಂಪ್ರದಾಯಿಕವಾಗಿ  ವೀರ್ಯ ಮತ್ತು ಮೊಟ್ಟೆಗಳ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪುರುಷರಲ್ಲಿ ಫಲವತ್ತತೆಯನ್ನು ಸುಧಾರಿಸಲು ಮಕಾ ಪೌಡರ್ ಅನ್ನು ಸೇವಿಸಲಾಗುತ್ತದೆ. 

Foreplay: ನಿಮ್ಮ ಮುನ್ನಲಿವು ಹೆಚ್ಚು ಕಾಲ ನಡೆಯಲು ಈ ಟಿಪ್ಸ್ ಅನುಸರಿಸಿ

ಕಾಫಿ ಕಾಮಾಸಕ್ತಿಯನ್ನು ಹೆಚ್ಚಿಸಬಹುದೇ..?

ಅಧ್ಯಯನಗಳ ಪ್ರಕಾರ ಕಾಫಿ ಸ್ವತಃ ಉತ್ತಮ ಕಾಮಾಸಕ್ತಿ ಬೂಸ್ಟರ್ ಆಗಿದೆ. 2015ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಪ್ಲೋಸ್ ಒನ್ ಎಂಬ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟವಾದ ಪ್ರಕಾರ, ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವ ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ ಕಂಡುಬರುವ ಸಾಧ್ಯತೆ ಕಡಿಮೆ. ಅಧ್ಯಯನದ ಪ್ರಕಾರ, ಸುಮಾರು 85ರಿಂದ 170 ಮಿಲಿಗ್ರಾಂ ಕೆಫೀನ್ ಅನ್ನು ಸೇವಿಸುವುದರಿಂದ ನಿಮಿರುವಿಕೆಯ ಸಮಸ್ಯೆ 42%ರಷ್ಟು ಕಡಿಮೆಯಾಗುತ್ತದೆ. 

ಮನೆಯಲ್ಲಿ ಸೆಕ್ಸ್ ಕಾಫಿ ತಯಾರಿಸುವುದು ಹೇಗೆ?

ಮನೆಯಲ್ಲಿಯೇ ಈ ಮಸಾಲೆಯುಕ್ತ ಸೆಕ್ಸ್ ಕಾಫಿಯನ್ನು ತಯಾರಿಸಬಹುದಾಗಿದೆ. ಒಂದು ಚಮಚ ಹಸಿ ಕೋಕೋ ಪೌಡರ್, ಎರಡು ಚಮಚ ತೆಂಗಿನ ಹಾಲು, ಅರ್ಧ ಟೀ ಚಮಚ ದಾಲ್ಚಿನ್ನಿ, ಒಂದು ಚಮಚ ಜೇನುತುಪ್ಪ (Honey)ಕ್ಕೆ ಒಂದು ಟೀ ಚಮಚ ಮಕಾ ಪೌಡರ್ ಸೇರಿಸಿದರೆ ಬೆಡ್ ರೂಮ್‌ನಲ್ಲಿ ನೀವು ಫುಲ್ ಎನರ್ಜೆಟಿಕ್ ಆಗಿರಲು ಸೆಕ್ಸ್ ಕಾಫಿ ಸಿದ್ಧ.

click me!