ಸಾಮಾನ್ಯವಾಗಿ ಕೋಟ್ಯಾಧಿಪತಿಗಳೆನಿಸಿದ ಶ್ರೀಮಂತರು ಲಕ್ಷ್ಮಿಪತಿಗಳೆನಿಸಿದ ಉದ್ಯಮಿಗಳು ಸುಂದರವಾದ ಗರ್ಲ್‌ಫ್ರೆಂಡ್‌ಗಳನ್ನು ಬಯಸುತ್ತಾರೆ. ಅವರಿಗಾಗಿ ಲಕ್ಷ ಲಕ್ಷ ವೆಚ್ಚ ಮಾಡಲು ಸಿದ್ಧರಿರುತ್ತಾರೆ. ಆದರೆ ಇಲ್ಲೊಂದು ಕಡೆ 26ರ ಹರೆಯದ ಕೋಟ್ಯಾಧಿಪತಿ ಹುಡುಗಿಯೊಬ್ಬಳು ಬಾಯ್‌ಫ್ರೆಂಡ್ ಮಾಡಿಕೊಳ್ಳಲು ಬಯಸಿದ್ದಾಳೆ. ತನ್ನ ಬಾಯ್‌ಫ್ರೆಂಡ್ ಆಗ ಬಯಸುವ ಯುವಕನಿಗೆ ಆಕೆ 57 ಲಕ್ಷ ರೂಪಾಯಿ ಸಂಬಳ ನೀಡಲು ಸಿದ್ಧಳಿದ್ದಾಳೆ. ವಿಚಿತ್ರ ಎಂದರೂ ಈ ವಿಚಾರ ಸತ್ಯ.
ಹೀಗೆ ಸಂಬಳ ನೀಡಿ ಬಾಯ್‌ಫ್ರೆಂಡ್ (Boyfriend) ಮಾಡಿಕೊಳ್ಳಲು ಬಯಸಿದ ಹುಡುಗಿ (Girl) ಬೇರಾರು ಅಲ್ಲ, ತನ್ನ 17ರ ಹರೆಯದಲ್ಲೇ ಲಾಟರಿ ಹೊಡೆಸಿಕೊಂಡು ಮಿಲಿಯನೇರ್ (millionaire) ಆಗಿ ಮಾಧ್ಯಮಗಳಲ್ಲಿ ಹೆಡ್‌ಲೈನ್ಸ್ ಆದ ಈಕೆಯ ಹೆಸರು ಜಾನೇ ಪಾರ್ಕ್(Jane park). 2013ರಲ್ಲಿ ತನ್ನ 17ರ ಹರೆಯದಲ್ಲಿ ಈಕೆ 9.45 ಕೋಟಿ ಮೌಲ್ಯದ ಲಾಟರಿಯನ್ನು ಜಯಿಸಿದ್ದಳು. ಈ ಮೂಲಕ ಆಕೆ ಇಷ್ಟೊಂದು ದೊಡ್ಡ ಮೊತ್ತದ ಲಾಟರಿ ಬೀಳಿಸಿಕೊಂಡ ಅತ್ಯಂತ ಕಿರಿಯ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಳು. ಈಗ ಈ ಜಾನೇ ಪಾರ್ಕ್‌ಗೆ (Jane park)ಗೆ 26 ವರ್ಷ ವಯಸ್ಸು, ಬದುಕಿಗೊಂದು ಬಾಯ್‌ಫ್ರೆಂಡ್ ಬೇಕು ಎಂದು ಈಕೆಗೆ ಅನಿಸಲು ಆರಂಭಿಸಿದ್ದು, ಅದಕ್ಕಾಗಿ ಆಕೆ ಈ ದೊಡ್ಡದಾದ ಘೋಷಣೆಯನ್ನು ಮಾಡಿದ್ದಾಳೆ. ತನ್ನ ಬಾಯ್‌ಫ್ರೆಂಡ್ ಆಗ ಬಯಸುವ ಹುಡುಗನಿಗೆ ವಾರ್ಷಿಕವಾಗಿ 57 ಲಕ್ಷ ರೂಪಾಯಿ ಸಂಬಳ (Salary) ನೀಡುವ ಘೋಷಣೆ ಮಾಡಿದ್ದಾಳೆ. ಈಕೆಯ ಈ ಘೋಷಣೆ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ.
ಕೈಕೊಟ್ಟ ಬಾಯ್‌ಫ್ರೆಂಡ್ : ಮುಖದ ಮೇಲೆ ಟ್ಯಾಟೋ ಹಾಕಿಸಿಕೊಂಡ ಯುವತಿ
ಅಲ್ಲದೇ ಬಾಯ್‌ಫ್ರೆಂಡ್ ಅನ್ವೇಷಣೆಗಾಗಿ ಈಕೆ ವೆಬ್‌ಸೈಟೊಂದನ್ನು (website) ಲಾಂಚ್ ಮಾಡಿದ್ದು, ಅದರಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಅಪ್ಲಿಕೇಷನ್‌ಗಳು ಬಂದು ಬಿದ್ದಿವೆಯಂತೆ. ಪ್ರಸ್ತುತ ಈಕೆ ಸೋಶಿಯಲ್ ಮೀಡಿಯಾ (Social Media star) ಸ್ಟಾರ್ ಆಗಿ ಕೆಲಸ ಮಾಡುತ್ತಿದ್ದು, ಜೊತೆ ಜೊತೆಗೆ ಮಾಡೆಲಿಂಗ್ (Modelling) ಕೂಡ ಮಾಡುತ್ತಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ(Instagram) ಸುಮಾರು 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಕೂಡ ಈಕೆ ಹೊಂದಿದ್ದಾಳೆ.
ಆದರೆ ಹುಡುಗರು ಬೇಸರಿಸುವ ವಿಚಾರ ಏನೆಂದರೆ ಆಕೆಗೆ ಈಗಾಗಲೇ ಬಾಯ್‌ಫ್ರೆಂಡ್ ಸಿಕ್ಕಾಗಿದೆಯಂತೆ, ಆಕೆ ಆತನೊಂದಿಗಿರುವ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹಾಕಿಕೊಂಡಿದ್ದಾಳಂತೆ. ಇದನ್ನು ಗಮನಿಸಿದ ಆಕೆಯ ಅಭಿಮಾನಿಗಳು ಬಹುಶಃ ಈತ ಆಕೆಯ ಅಭಿಮಾನಿ ಇರಬಹುದು ಎಂದು ಭಾವಿಸಿದರಂತೆ. ಆದರೆ ಆತನೊಂದಿಗಿರುವ ಹಲವು ವಿಡಿಯೋಗಳನ್ನು ಜಾನೇ ಪೋಸ್ಟ್ ಮಾಡಿದ ಬಳಿಕ ಅಭಿಮಾನಿಗಳಿಗೂ ಸಂಶಯ ಬಂದಿತ್ತಂತೆ. ಆದರೆ ಅಷ್ಟರಲ್ಲಿ ಸ್ವತಃ ಜಾನೆಯೇ ಇದು ನನ್ನ ಹೊಸ ಬಾಯ್‌ಫ್ರೆಂಡ್ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡು ಎಲ್ಲರನ್ನು ನಿರಾಸೆಗೊಳಿಸಿದ್ದಾಳೆ.
ಆಕಾಶದಲ್ಲಿ ಹಾರಾಡುತ್ತಲೇ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್: ವಿಶಿಷ್ಟ ಪ್ರೇಮಕತೆಗೆ ಏರ್‌ಲೈನ್ಸ್ ನೆರವು..!
ಅಂದಹಾಗೆ ಈಕೆಯ ಹೊಸ ಬಾಯ್‌ಫ್ರೆಂಡ್ ಹೆಸರು ಲೀ (Lee) ಆಗಿದ್ದು, ಆಕೆ ತನ್ನ ಇನ್ಸ್ಟಾ ಹಾಗೂ ಟಿಕ್‌ಟಾಕ್ ಖಾತೆಯಲ್ಲಿ ಹೊಸ ಬಾಯ್‌ಫ್ರೆಂಡ್ ಜೊತೆ ಮೋಜು ಮಾಡುತ್ತಿರುವ ಹಲವು ವಿಡಿಯೋಗಳನ್ನು ಹಾಕಿಕೊಂಡಿದ್ದಾಳೆ. ಅದೇನೆ ಇರಲಿ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ, ಹುಡುಗಿಯರು ದುಡ್ಡಿದ್ದವರ ಹಿಂದೆ ಹೋಗ್ತಾರೆ, ದುಡ್ಡಿದವರನ್ನು ನೋಡಿ ಮದ್ವೆಯಾಗಿ ಲೈಫ್ ಸೆಟ್ಲ್ ಮಾಡಿಕೊಳ್ತಾರೆ ಎಂಬ ಹುಡುಗರ ಹಲವು ಆರೋಪಗಳ ಮಧ್ಯೆ ಹುಡುಗಿಯೊಬ್ಬಳು ಭರ್ಜರಿ ಸಂಬಳ ಕೊಟ್ಟು ಹುಡುಗನನ್ನು ಬಾಯ್‌ಫ್ರೆಂಡ್ ಮಾಡಿಕೊಂಡಿರುವುದು ಎಲ್ಲರ ಹುಬ್ಬೇರಿಸಿದೆ.
ಎಕ್ಸ್‌ಗಳ ಜೊತೆ ಇನ್ನೂ ಫ್ರೆಂಡ್‌ಶಿಪ್ ಇದೆ, ಅವರ ಪೋಷಕರನ್ನು ಭೇಟಿಯಾಗ್ತೀನಿ; ನಟಿ ರಶ್ಮಿಕಾ ಮಂದಣ್ಣ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.