ದೈಹಿಕ ಸಂಬಂಧಕ್ಕೆ ಅಡ್ಡಿ ತರುವ ಏಳು ರೀತಿಯ ಆತಂಕಗಳು

By Suvarna News  |  First Published Mar 21, 2022, 5:46 PM IST

ಕೆಲವರು ದೈಹಿಕ ಸಂಬಂಧ ಬೆಳೆಸುವ ವೇಳೆ ಅಥವಾ ಬೆಳೆಸುವ ಬಗ್ಗೆ  ಸಾಕಷ್ಟು ಭಯ ಹೊಂದಿರುತ್ತಾರೆ. ಸಂಗಾತಿ ಹತ್ತಿರ ಬಂದ್ರೆ ಇವರಿಗೆ ಹೆದರಿಕೆ ಶುರುವಾಗಿರುತ್ತದೆ. ಸಂಗಾತಿಗೆ ಮುತ್ತಿಡಲೂ ಹೆದರುವವರಿದ್ದಾರೆ. ಈ ಭಯ ಮಾನಸಿಕ ಸಮಸ್ಯೆಯಾಗಿರಬಹುದು. 
 


 
ಶಾರೀರಿಕ ಸಂಬಂಧ (Physical Relationship) ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುತ್ತದೆ. ದಂಪತಿ ಮಧ್ಯೆ ಸೆಕ್ಸ್ (Sex) ಅವಶ್ಯ ಹಾಗೂ ಅನಿವಾರ್ಯ. ಸಂಭೋಗದಿಂದ ಸಂಬಂಧ ಸುಧಾರಿಸುವುದು ಮಾತ್ರವಲ್ಲ ದೈಹಿಕ ಹಾಗೂ ಮಾನಸಿಕ ಆರೋಗ್ಯ (Health) ಕೂಡ ಸುಧಾರಿಸುತ್ತದೆ. ವಾರದಲ್ಲಿ ಎರಡು ಬಾರಿಯಾದ್ರೂ ದೈಹಿಕ ಸಂಬಂಧ ಬೆಳೆಸುವಂತೆ ತಜ್ಞರು ಸಲಹೆ ನೀಡ್ತಾರೆ. ಅನೇಕರಿಗೆ ಸೆಕ್ಸ್ ಆರೋಗ್ಯ ವೃದ್ಧಿಸುತ್ತದೆ ಎಂಬ ಸಂಗತಿ ತಿಳಿದಿದ್ದರೂ ಸಂಭೋಗ ಬೆಳೆಸಲು ಮುಂದಾಗುವುದಿಲ್ಲ. ಕೆಲವರಿಗೆ ಶಾರೀರಿಕ ಸಂಬಂಧ ಬೆಳೆಸಲು ಭಯವಿರುತ್ತದೆ. ಹೌದು, ಸಂಭೋಗದ ಹೆಸರು ಕೇಳಿದ್ರೆ ಅವರಿಗೆ ನಡುಕು ಶುರುವಾಗುತ್ತದೆ. ಇದು ಸಾಮಾನ್ಯ ಸ್ಥಿತಿಯಲ್ಲ. ಇದೊಂದು ಖಾಯಿಲೆ. ಇದಕ್ಕೆ ಎರೋಟೋಫೋಬಿಯಾ (Erotophobia) ಎಂದು ಕರೆಯಲಾಗುತ್ತದೆ. ಇಂದು ನಾವು ಶಾರೀರಿಕ ಸಂಬಂಧ ಬೆಳೆಸಲು ಕಾಡುವ ಭಯದ ಖಾಯಿಲೆ ಎರೋಟೋಫೋಬಿಯಾ ಬಗ್ಗೆ ಮಾಹಿತಿಯನ್ನು ನೀಡ್ತೇವೆ.  

ಎರೋಟೋಫೋಬಿಯಾ ಎಂದರೇನು ?

ಎರೋಟೋಫೋಬಿಯಾ ಇದು ಒಂದು ರೀತಿಯ ಫೋಬಿಯಾ ಅಂದ್ರೆ ಭಯ. ಲೈಂಗಿಕ ಸಂಬಂಧ ಬೆಳೆಸುವ ಬಗ್ಗೆ ವ್ಯಕ್ತಿಯ ಮನಸ್ಸಿನಲ್ಲಿ ಅನೇಕ ರೀತಿಯ ಭಯಗಳು ಉದ್ಭವಿಸಿದ್ರೆ ಅದನ್ನು ಎರೋಟೋಫೋಬಿಯಾ ಎಂದು ಕರೆಯಲಾಗುತ್ತದೆ.  ಎರೋಟೋಫೋಬಿಯಾ ಹೊಂದಿರುವ ವ್ಯಕ್ತಿಯು ಚುಂಬಿಸುವುದರಿಂದ ಹಿಡಿದು ದೈಹಿಕ ಸಂಬಂಧ ಬೆಳೆಸುವುದು ಮತ್ತು ಅದರ ಇತರ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಬಹಳಷ್ಟು ಭಯವನ್ನು ಹೊಂದಿರುತ್ತಾರೆ. ಎರೋಟೋಫೋಬಿಯಾದಲ್ಲಿ 7 ವಿಧಗಳಿವೆ.

Tap to resize

Latest Videos

7 ವಿಧಗಳು 

ಕ್ಸೆನೋಫೋಬಿಯಾ : ಕ್ಸೆನೋಫೋಬಿಯಾ  ಹೊಂದಿರುವ ವ್ಯಕ್ತಿಯು ಪ್ರಣಯ ಸಂಬಂಧವನ್ನು ಪ್ರಾರಂಭಿಸಲು ಭಯಪಡುತ್ತಾನೆ. ಆದ್ರೆ ಚುಂಬನ ಹಾಗೂ ತಬ್ಬಿಕೊಳ್ಳುವ ವೇಳೆ ಇವರಿಗೆ ಭಯವಾಗುವುದಿಲ್ಲ.  ಇಂಥ ಚಟುವಟಿಕೆಗಳನ್ನು ಮಾಡಲು ಅವರು ಇಷ್ಟಪಡುತ್ತಾರೆ. ಆದರೆ ದೈಹಿಕ ಸಂಬಂಧ ಬೆಳೆಸುವ ವೇಳೆ ಸಾಕಷ್ಟು ಭಯಪಡ್ತಾರೆ.

ಜಿಮ್ನೋಫೋಬಿಯಾ : ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ನಗ್ನವಾಗಿರಲು ಹೆದರುತ್ತಾರೆ. ಸುತ್ತಮುತ್ತಲಿನ ಜನರು ತಮ್ಮನ್ನು ನೋಡುತ್ತಾರೆ ಎಂಬ ಭಯ ಅವರನ್ನು ಕಾಡ್ತಿರುತ್ತದೆ.

ಅನ್ಯೋನ್ಯತೆಯ ಭಯ : ಈ ಭಯವು ಭಾವನಾತ್ಮಕ ಮತ್ತು ದೈಹಿಕ ಎರಡಕ್ಕೂ ಸಂಬಂಧಿಸಿರುತ್ತದೆ. ಇಂಟಿಮೇಟ್ ಬಗ್ಗೆ ಭಯ ಹೊಂದಿರುವ ವ್ಯಕ್ತಿಯು ಕೇವಲ ಇಂಟರ್ಕೋರ್ಸ್ ಬಗ್ಗೆ ಮಾತ್ರವಲ್ಲ ಚುಂಬನ, ತಬ್ಬಿಕೊಳ್ಳುವಿಗೆ ಸೇರಿದಂತೆ ಎಲ್ಲ ಚಟುವಟಿಕೆಗೂ ನಡೆಸಲೂ ಹೆದರುತ್ತಾನೆ. 

ಇಲ್ಲಿವೆ ಪತಿಗೆ ಸರ್ಪ್ರೈಸ್ ನೀಡುವ ಸೀಕ್ರೆಟ್ಸ್

ಪ್ಯಾರಾಫೋಬಿಯಾ : ಪ್ಯಾರಾಫೋಬಿಯಾದಲ್ಲಿ ವ್ಯಕ್ತಿಯು ಒಂದು ರೀತಿಯ ಭ್ರಮೆಯಲ್ಲಿರುತ್ತಾನೆ. ಲೈಂಗಿಕ ಸಂಬಂಧ ಬೆಳೆಸುವುದ್ರಿಂದ ತನ್ನ ದೇಹದಲ್ಲಿ ಕೆಲ ಸಮಸ್ಯೆಗಳುಂಟಾಗುತ್ತದೆ ಎಂದು ಭಾವಿಸುತ್ತಾನೆ. ಸಂಭೋಗದಿಂದ ಇನ್ನೊಬ್ಬರ ಅಸ್ವಸ್ಥತೆಯು ತಮ್ಮ ದೇಹವನ್ನು ಪ್ರವೇಶಿಸಬಹುದೆಂದು ಅವರು ಹೆದರುತ್ತಾರೆ. ಇದೇ ಕಾರಣಕ್ಕೆ ಸಂಭೋಗ ನಡೆಸಲು ಮುಂದಾಗುವುದಿಲ್ಲ.

ಹೈಫೋಫೋಬಿಯಾ : ಈ ಫೋಬಿಯಾದಿಂದ ಬಳಲುತ್ತಿರುವ ವ್ಯಕ್ತಿಯು ಬೇರೆ ವ್ಯಕ್ತಿಯನ್ನು ಸ್ಪರ್ಶಿಸಲು ಭಯಪಡುತ್ತಾನೆ. ಹಾಗಾಗಿ ಎಲ್ಲರಿಂದ ದೂರವಿರಲು ಬಯಸ್ತಾನೆ.

ಫಿಲೆಮಾಫೋಬಿಯಾ : ಫಿಲೆಮಾಫೋಬಿಯಾದಲ್ಲಿ ವ್ಯಕ್ತಿಯು ಚುಂಬನಕ್ಕೆ ಹೆದರುತ್ತಾನೆ. ಯಾರಿಗೂ ಮುತ್ತು ಕೊಡಲು ಮನಸ್ಸು ಮಾಡುವುದಿಲ್ಲ. ತನ್ನ ಬಾಯಿ ವಾಸನೆ ಇರಬಹುದು ಅಥವಾ ತನ್ನ ಉಸಿರಾಟ ಕೆಟ್ಟದ್ದಾಗಿರಬಹುದು ಎಂದು ಆತ ಭಯಕ್ಕೊಳಗಾಗ್ತಾನೆ. ಹಾಗಾಗಿ ಯಾರಿಗೂ ಕಿಸ್ ನೀಡಲು ಮುಂದಾಗುವುದಿಲ್ಲ.   

ಪ್ರೀತಿಯಲ್ಲಿದ್ದೂ Loneliness ಕಾಡ್ತಿದ್ಯಾ? ಕಾರಣ ಕಂಡುಕೊಳ್ಳಿ

ದುರ್ಬಲತೆ (ವಲ್ನೆರೆಬಿಲಿಟಿ) ಫೋಬಿಯಾ : ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ತಾನು ಹೇಗಿದ್ದೇನೆ ಎಂಬುದನ್ನು ಇತರರ ಮುಂದೆ ತೋರಿಸಲು ಇಷ್ಟಪಡುವುದಿಲ್ಲ. ಇದ್ರಿಂದ ಜನರು ನನ್ನನ್ನು ಜಡ್ಜ್ ಮಾಡ್ತಾರೆಂಬ ಭಯ ಆತನಿಗಿರುತ್ತದೆ. 

ಇದೆಲ್ಲದಕ್ಕೆ ಕಾರಣವೇನು ? : ಇದು ಬೇರೆ ಬೇರೆ ಜನರಿಗೆ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಹಿಂದೆ ನಡೆದ ಅಹಿತಕರ ಘಟನೆಗಳು ಕೂಡ ಇದಕ್ಕೆ ಕಾರಣವಾಗುತ್ತದೆ. ಲೈಂಗಿಕ ಶೋಷಣೆ, ದೈಹಿಕ ಹಿಂಸೆ ಅಥವಾ ಮಾನಸಿಕ ಅಸ್ವಸ್ಥತೆ ಕಾರಣಕ್ಕೆ ಎರೋಟೋಫೋಬಿಯಾ ಜನರನ್ನು ಕಾಡಬಹುದು. 

click me!