ರಷ್ಯಾದಿಂದ ಉತ್ತರಕ್ಕಿರುವ, ಸದಾ ಹಿಮ ತುಂಬಿರುವ ಫಿನ್‌ಲ್ಯಾಂಡ್ ಎಂಬ ಪುಟ್ಟ ದೇಶ ಸತತ ಐದನೇ ಬಾರಿಗೆ 'ಹ್ಯಾಪಿಯೆಸ್ಟ್ ನೇಷನ್' ಅನಿಸಿಕೊಂಡಿದೆ. ಯಾಕೆ ಈ ದೇಶ ಸಂತೋಷದಲ್ಲಿರೋರ ನಾಡು ನಿಮಗೆ ಗೊತ್ತಾ?
ವಿಶ್ವಸಂಸ್ಥೆ (United Nations) ಪ್ರತಿವರ್ಷ ಆಯಾ ವರ್ಷದ ಅತಿ ಹ್ಯಾಪಿ (Happiest) ದೇಶಗಳ ಪಟ್ಟಿ ತಯಾರಿಸುತ್ತೆ. ಅದರಲ್ಲಿ ಕಳೆದ ಐದು ವರ್ಷಗಳಿಂದ ಫಿನ್‌ಲ್ಯಾಂಡ್ (Finland) ಮೊದಲ ಸ್ಥಾನ ಕಾಪಾಡಿಕೊಂಡಿದೆ. ಯಾಕೆ ಎಂಬುದಕ್ಕೆ ಕಾರಣಗಳು ಇಲ್ಲಿವೆ:
1. ಇಲ್ಲಿ ವರ್ಷದ ಇನ್ನೂರು ದಿನಗಳ ಕಾಲ ಚಳಿಗಾಲ (Winter). ದಟ್ಟ ಹಿಮ (Ice) ಬೀಳುತ್ತದೆ. ಉತ್ತರ ಧ್ರುವ (Arctic) ಪ್ರದೇಶವಾದ್ದರಿಂದ ಕತ್ತಲಿನ ದಿನಗಳು ಜಾಸ್ತಿ. ಅಂದರೆ ಕೆಲವು ತಿಂಗಳ ಕಾಲ ಸೂರ್ಯನೇ (Sun) ಕಾಣುವುದಿಲ್ಲ. ಹೀಗಾಗಿ ಕತ್ತಲಿನಲ್ಲೇ ದಿನ ಕಳೆಯುತ್ತಾರೆ. ಬಿಸಿಲು ಕಂಡುಬಂದಾಗ ಖುಷಿಪಡುತ್ತಾರೆ. ನಾವಿಲ್ಲಿ ನಿತ್ಯ ಅನುಭವಿಸುವ ಸಂಗತಿ ಅವರಿಗೆ ತುಂಬಾ ಅಪರೂಪವಾದ್ದರಿಂದ ಸಿಕ್ಕಿದ್ದರಲ್ಲಿ ಸಂತೋಷಪಡುತ್ತಾರೆ.
2. ಸಿಕ್ಕಾಪಟ್ಟೆ ಓದುತ್ತಾರೆ. ಇಲ್ಲಿನ ಸಾಕ್ಷರತಾ (Education) ಮಟ್ಟ ನೂರು ಶೇಕಡಾ. ಲೈಬ್ರರಿಗಳು ತುಂಬಾ ಇವೆ. ಪ್ರತಿಯೊಬ್ಬನೂ ಓದುತ್ತಾನೆ.
3. ಇಲ್ಲಿ ಕ್ರೈಮ್ ರೇಟ್ (Crime Rate) ತುಂಬಾ ಕಡಿಮೆ. ಕಾನೂನನ್ನು ಎಲ್ಲರೂ ಗೌರವಿಸ್ತಾರೆ.
4. ಪ್ರಜಾಪ್ರಭುತ್ವ (Democracy) ದೇಶ. ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಚೆನ್ನಾಗಿದೆ. ನಾಗರಿಕರ ಹಕ್ಕುಗಳ ಮೇಲೆ ದಮನ ಇಲ್ಲ.
Self Marriage Trend: ನನ್ನನ್ನೇ ನಾನು ಮದುವೆಯಾದೆ ! ಸೆಲ್ಫ್ ಮ್ಯಾರೇಜ್ ಟ್ರೆಂಡ್ ಬಗ್ಗೆ ಗೊತ್ತಾ ?
5. ಯಾರು ಬೇಕಿದ್ದರೂ ಎಲ್ಲಿ ಬೇಕಿದ್ದರೂ ತಿರುಗಾಡಬಹುದು. ಇಲ್ಲಿನ ಅರಣ್ಯಗಳಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದು. ಇವು ಸಾರ್ವಜನಿಕ ಪ್ರದೇಶಗಳು. ಖಾಸಗಿ ಜಾಗಗಳಿಗೂ ಯಾರೂ ಬೇಲಿ ಹಾಕುವುದಿಲ್ಲಿ. ತೋಟಗಳಿಂದ ಹಣ್ಣು ಕಿತ್ತು ತಿಂದರೆ ಆಕ್ಷೇಪಿಸುವುದಿಲ್ಲ.
6. ಸ್ವಚ್ಛತಾ ಪ್ರಜ್ಞೆ, ಕ್ಲೀನ್ಲಿನೆಸ್ (Cleanliness) ತುಂಬಾ ಹೆಚ್ಚು. ಕಸ ಸೃಷ್ಟಿಸುವುದಿಲ್ಲ, ಹಾಕುವುದಿಲ್ಲ. ಪ್ಲಾಸ್ಟಿಕ್ ಬಳಸುವುದಿಲ್ಲ.
7. ಕನ್‌ಸ್ಯೂಮರಿಸಂ (Consumerism) ಅಂದರೆ ಸಿಕ್ಕಿದ್ದನ್ನೆಲ್ಲ ಬಳಕೆ ಮಾಡಿ ಬಿಸಾಕುವ ಪ್ರವೃತ್ತಿ ಇಲ್ಲ. ಸೆಕೆಂಡ್‌ಹ್ಯಾಂಡ್ ಬಳಸಲು ಹಿಂಜರಿಯುವುದಿಲ್ಲ. ಹೊಸ ವಸ್ತುಗಳನ್ನು ತೀರ ಅಗತ್ಯ ಬಿದ್ದರೆ ಮಾತ್ರ ಖರೀದಿಸುತ್ತಾರೆ.
8. ಇಲ್ಲಿನವರಿಗೆ ಹೆಚ್ಚು ದಿನ ಸಂಬಳಸಹಿತ ರಜೆ ಸಿಗುತ್ತದೆ. ತಾಯ್ತನ ರಜೆ, ತಂದೆತನ ರಜೆ ಧಾರಾಳ. ಹೀಗಾಗಿ ಕೆಲಸದ ಒತ್ತಡ ಅಷ್ಟಿಲ್ಲ.
Dating Scams : ಸಂಗಾತಿ ಹುಡುಕುವ ಆತುರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ
9. ಇಲ್ಲಿ ಶಿಕ್ಷಣ ಸಂಪೂರ್ಣ ಉಚಿತ. ಕಾಲೇಜಿನವರೆಗೂ ನಯಾಪೈಸೆ ಖರ್ಚಿಲ್ಲದೆ ಶಿಕ್ಷಣ ಪಡೆಯಬಹುದು. ಹಾಗೇ ಆರೋಗ್ಯ (Health) ಸೇವೆಯೂ ಬಹುತೇಕ ಉಚಿತ. ಅಂದರೆ ನೀವು ಮಕ್ಕಳನ್ನು ಹೆರಲು ಮುಂದಿನ ಖರ್ಚಿನ ಬಗೆಯೇನು ಎಂದು ಚಿಂತಿಸಬೇಕಿಲ್ಲ.
10. ನಿವೃತ್ತರಿಗೂ ಬಗೆಬಗೆಯ ಸೌಲಭ್ಯಗಳಿವೆ. ನಿವೃತ್ತರನ್ನು ಹೊರೆ ಎಂದು ಪರಿಗಣಿಸುವುದಿಲ್ಲ. ಅವರ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ಮಾಡುತ್ತಾರೆ.
11. ಇಲ್ಲಿ ಹೆಚ್ಚಿನ ಪ್ರದೇಶ ಅರಣ್ಯ (Forest). ಸದಾ ಹಸಿರಿನ (Green) ಮಧ್ಯೆಯೇ ಬದುಕುತ್ತಿರುತ್ತಾರೆ. ಹಸಿರು ಮನುಷ್ಯನ ಆಯುಷ್ಯ, ಆನಂದವನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಯನಗಳಿಂದ ಗೊತ್ತಾಗಿದೆ.
12. ನಿರುದ್ಯೋಗಿಗಳಿಗೆ (Un employment) ಭತ್ಯೆ ಕೊಡಲಾಗುತ್ತದೆ. ಎಲ್ಲರಿಗೂ ನೀಡಲು ಉದ್ಯೋಗ ಇಲ್ಲದೆ ಹೋದಾಗ, ಉದ್ಯೋಗ ಇಲ್ಲದವರನ್ನು ಸಾಕುವ ಹೊಣೆಯನ್ನೂ ಸರಕಾರವೇ ಹೊರುವುದು ಇಲ್ಲಿನ ಮಟ್ಟಿಗೆ ನ್ಯಾಯ.
ವಿಚ್ಛೇದನ ಬಯಸೋದ್ರಲ್ಲಿ ಮಹಿಳೆಯರೇ ಮುಂದು!
13. ಇಲ್ಲಿ 'ಸಿಸು' ಅನ್ನೋ ಒಂದು ವಿಚಾರಧಾರೆ ಇದೆ. ಹಾಗೆಂದರೆ, ಎಂಥ ಸಂಕಷ್ಟದ ಸನ್ನಿವೇಶದಲ್ಲಿ ಇದ್ರೂ ಪಾಸಿಟಿವ್ (Be Positive) ಆಗಿರು, ಚಳಿಗಾಲದಲ್ಲಿ ಬಿಸಿಲು ಬಂದ್ರೆ ಸಂತೋಷಪಡು, ಏನೂ ಇಲ್ಲವಾದ್ರೆ ಗಂಜಿ ಕುಡಿದು ಹಾಯಾಗಿರು- ಎಂಬ ಚಿಂತನೆ. ಸದಾ ಐಸ್ ನಡುವೆ ಬದುಕುವ ಇವರಿಗೆ ಪ್ರಕೃತಿಯ ನೆಗೆಟಿವಿಟಿ (Nagetivity) ನಡುವದೆಯೇ ಬದುಕುವ ಹುಮ್ಮಸ್ಸು.