ಸುಳ್ಳು ಹೇಳಿದ್ಮೇಲೆ ಸಿಕ್ಕಿ ಬೀಳ್ಲೇಬೇಕು. ಸುಳ್ಳನ್ನು ಪತ್ತೆಹಚ್ಚುವುದು ತುಂಬಾ ಸುಲಭ. ಅದ್ರಲ್ಲೂ ಮೋಸ ಮಾಡಲು ಸುಳ್ಳು ಹೇಳ್ತಿದ್ದರೆ, ಅವರ ಹಾವ-ಭಾವವೇ ಎಲ್ಲವನ್ನೂ ಹೇಳಿರುತ್ತದೆ. ನಿಮ್ಮ ಸಂಗಾತಿ ಎಷ್ಟು ಸ್ಪಷ್ಟವಾಗಿ ಸುಳ್ಳು ಹೇಳಿದರೂ ನೀವು ಅವರ ಸುಳ್ಳನ್ನು ಕಂಡು ಹಿಡಿಯೋದು ಹೇಗೆ ಅಂತಾ ನಾವು ಹೇಳ್ತೇವೆ.
ಸತ್ಯ (Truth) ದ ತಲೆ ಮೇಲೆ ಹೊಡೆದಂತೆ ಸುಳ್ಳು (Lie) ಹೇಳುವವರಿದ್ದಾರೆ. ಸುಳ್ಳನ್ನು ಪದೇ ಪದೇ ಹೇಳಿದ್ರೆ ಅದನ್ನು ಜನರು ನಂಬುತ್ತಾರೆ ಎಂಬುದೂ ಸತ್ಯ. ಆದ್ರೆ ಸತ್ಯಕ್ಕೆ ಯಾವಾಗ್ಲೂ ಜಯ (Victory) ಸಿಗುತ್ತದೆ. ಸುಳ್ಳು ಹೇಳುವವರ ಬಣ್ಣ ಕೊನೆಯಲ್ಲಿ ಬಯಲಾಗ್ಲೇಬೇಕು. ಒಂದು ಸುಳ್ಳು ನೂರಾರು ಸುಳ್ಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ನಮ್ಮ ಹತ್ತಿರದವರು ಸುಳ್ಳು ಹೇಳಿದ್ರೆ ತಕ್ಷಣ ತಿಳಿಯುತ್ತದೆ. ಸಂಗಾತಿ ಸುಳ್ಳನ್ನು ಫಟ್ ಅಂತ ಕಂಡು ಹಿಡಿಯುವವರಿದ್ದಾರೆ. ಸುಳ್ಳು ಹೇಳುವವರು ಎಂದೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ಪತಿಯ ಸುಳ್ಳು ಪತ್ತೆ ಹಚ್ಚುವುದು ಕಷ್ಟವಾದ್ರೂ ಪತ್ನಿ ಒಂದಲ್ಲ ಒಂದು ವಿಧಾನದಲ್ಲಿ ಪತಿಯ ಮೋಸ ಪತ್ತೆ ಮಾಡ್ತಾರೆ.
ವಿವಾಹೇತರ ಸಂಬಂಧದಲ್ಲಿರುವ ಪತಿ ಹೆಚ್ಚು ಸುಳ್ಳು ಹೇಳ್ತಾನೆ. ಪತ್ನಿಯ ಕಣ್ಣಿಗೆ ಮಣ್ಣೆರೆಚಿ ಇನ್ನೊಬ್ಬರ ಭೇಟಿಗೆ ಹೋಗ್ತಾನೆ. ಪ್ರೇಯಸಿ ಭೇಟಿಗಾಗಿಯೇ ಸುಳ್ಳಿನ ಮೇಲೆ ಸುಳ್ಳು ಹೇಳ್ತಾನೆ. ಕೆಲ ಮಹಿಳೆಯರು ಪತಿಯ ಮಾತು ನಂಬಿ ಮೋಸ ಹೋಗ್ತಾರೆ. ಮತ್ತೆ ಕೆಲ ಮಹಿಳೆಯರು ಚಾಲಾಕಿತನದಿಂದ ಪತಿಯ ಬಣ್ಣ ಹೊರಗೆಳೆದು ನ್ಯಾಯಕ್ಕಾಗಿ ಹೋರಾಟ ನಡೆಸ್ತಾರೆ. ಇಂದು ಪತಿಯಾದವನು ಇನ್ನೊಂದು ಸಂಬಂಧದಲ್ಲಿದ್ದಾಗ ಏನೆಲ್ಲ ಸುಳ್ಳು ಹೇಳ್ತಾನೆ ಅಥವಾ ಆತ ಮಾಡುವ ಯಾವ ವರ್ತನೆಯಿಂದ ನೀವು ಆತ ಇನ್ನೊಂದು ಸಂಬಂಧದಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡ್ಬಹುದು ಎಂದು ನಾವು ಹೇಳ್ತೇವೆ.
ವಿವಾಹೇತರ ಸಂಬಂಧದಲ್ಲಿರುವ ಪತಿ ಹೇಳ್ತಾನೆ ಈ ಎಲ್ಲ ಸುಳ್ಳು
ಪ್ರತಿ ಬಾರಿ ಕೆಲಸದ ನೆಪ : ಊಟದ ಸಮಯದಲ್ಲೂ ನಿಮ್ಮ ಸಂಗಾತಿಗೆ ಪದೇ ಪದೇ ಕರೆ ಬರ್ತಿದ್ದರೆ ಇಲ್ಲವೆ ಕುಟುಂಬದ ಜೊತೆ ಸಮಯ ಕಳೆಯುವ ವೇಳೆ ಮಧ್ಯದಲ್ಲಿಯೇ ಎದ್ದು ಹೋಗ್ತಿದ್ದರೆ ಅವರ ಜೀವನದಲ್ಲಿ ಏನೂ ಬದಲಾಗಿದೆ ಎಂದು ಅರ್ಥೈಸಿಕೊಳ್ಳಿ. ಇದು ನಿಮಗೆ ಮೋಸ ಮಾಡುವ ಮೊದಲ ಸಂಕೇತವಾಗಿರಬಹುದು. ಎಷ್ಟೇ ಕೆಲಸವಿದ್ದರೂ ಕುಟುಂಬದ ಜೊತೆ ಜನರು ಸ್ವಲ್ಪ ಸಮಯ ಕಳೆಯಲು ಬಯಸ್ತಾರೆ. ಅದ್ರಲ್ಲೂ ಊಟವನ್ನು ಒಟ್ಟಿಗೆ ಮಾಡಲು ಬಯಸ್ತಾರೆ. ಇಷ್ಟು ದಿನ ಎಲ್ಲರ ಜೊತೆ ಕುಳಿತು ಸಮಯ ಕಳೆಯುತ್ತಿದ್ದ ಪತಿ ಈಗ ಹೀಗೆ ಆಡ್ತಿದ್ದರೆ ಆತನ ಮೇಲೆ ಒಂದು ಕಣ್ಣಿಡುವುದು ಒಳ್ಳೆಯದು.
HAPPY NATION FINLAND ಜನರ ಸಂತೋಷದ ರಹಸ್ಯ ಇಲ್ಲಿದೆ!
ಫಿಗರ್ ಬಗ್ಗೆ ಹೆಚ್ಚಿನ ಕಾಳಜಿ : ಏಕಾ ಏಕಿ ಫಿಗರ್ ಬಗ್ಗೆ ಪತಿ ಚಿಂತಿಸಲು ಶುರು ಮಾಡಿದ್ರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. ಜಿಮ್ ಗೆ ಹೋಗಲು ಶುರು ಮಾಡಿದ್ರೆ ಇಲ್ಲವೆ ವ್ಯಾಯಾಮ,ಡಯಟ್ ಬಗ್ಗೆ ಹೆಚ್ಚು ಗಮನ ನೀಡ್ತಿದ್ದರೆ ಇದು ಕೂಡ ಮೋಸ ಮಾಡುವ ಮುನ್ಸೂಚನೆಯಾಗಿದೆ. ಯಾರನ್ನೋ ಆಕರ್ಷಿಸಲು ಪತಿ ಹೀಗೆ ಮಾಡ್ತಿರಬಹುದು. ಹಾಗಂತ ಎಲ್ಲ ಪುರುಷರು ಹಾಗಿರುವುದಿಲ್ಲ. ಕೆಲವರು ಪತ್ನಿಯ ಗಮನ ಸೆಳೆಯಲೂ ಪ್ರಯತ್ನಿಸ್ತಿರುತ್ತಾರೆ. ಹಾಗಾಗಿ ವಿನಃ ಸಂಶಯಪಡಬೇಡಿ. ಮೊದಲು ಸತ್ಯ ಪತ್ತೆ ಹಚ್ಚಿ.
ಮನೆಯಿಂದ ಹೊರಗುಳಿಯಲು ಒಂದಿಲ್ಲೊಂದು ಕಾರಣ : ರಜಾ ದಿನಗಳಲ್ಲಿ ಮನೆಯಲ್ಲೇ ಇರ್ತಿದ್ದ ಪತಿ ಈಗ ಒಂದಿಲ್ಲೊಂದು ಕಾರಣ ಹೇಳಿ ಮನೆಯಿಂದ ಹೊರಗಿರುತ್ತಿದ್ದರೆ ಎಚ್ಚರವಹಿಸಿ. ಪ್ರೇಯಸಿ ಭೇಟಿಗಾಗಿ ಮನೆಯಿಂದ ಹೊರ ಹೋಗಲು ಪತಿ ಒಂದೊಂದು ಕಾರಣವನ್ನು ನಿಮಗೆ ಹೇಳಿರಬಹುದು.
ಪ್ರೀತಿಯಲ್ಲಿದ್ದೂ Loneliness ಕಾಡ್ತಿದ್ಯಾ? ಕಾರಣ ಕಂಡುಕೊಳ್ಳಿ
ಜಗಳ –ಗಲಾಟೆ : ಕಾರಣವಿಲ್ಲದೆ ನಿಮ್ಮ ಬಳಿ ಗಲಾಟೆ – ಜಗಳ ಮಾಡ್ತಿದ್ದರೆ ಅಥವಾ ಸುಮ್ಮ ಸುಮ್ಮನೆ ನಿಮ್ಮ ಮೇಲೆ ರೇಗಾಡುತ್ತಿದ್ದರೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗಿದೆ ಎಂದುಕೊಳ್ಳಿ. ನಿಮಗೆ ಮೋಸ ಮಾಡ್ತಿರುವ ಪತಿ ನಿಮ್ಮಿಂದ ದೂರವಿರಲು ಬಯಸ್ತಿದ್ದಾನೆ ಎಂದರ್ಥ.
ಬ್ಯುಸಿನೆಸ್ ಟ್ರಿಪ್ : ಸಂಗಾತಿಗೆ ಮೋಸ ಮಾಡಲು ಇದು ಒಳ್ಳೆಯ ಮಾರ್ಗ. ಅನೇಕರು ಬ್ಯುಸಿನೆಸ್ ಟ್ರಿಪ್ ಹೆಸರು ಹೇಳಿ ಸಂಗಾತಿಗೆ ಮೋಸ ಮಾಡ್ತಾರೆ. ಹಾಗಾಗಿ ಬ್ಯುಸಿನೆಸ್ ಟ್ರಿಪ್ ಹೋಗ್ತಿದ್ದು, ವಾರಗಳ ಕಾಲ ಮನೆಯಲ್ಲಿರೋದಿಲ್ಲ ಎಂದು ಪತಿ ಹೇಳಿದ್ರೆ ಟಿಕೆಟ್ ಚೆಕ್ ಮಾಡಿ. ಎಲ್ಲಿಗೆ? ಯಾರ ಜೊತೆ ಹೋಗ್ತಿದ್ದಾರೆ ಎಂಬೆಲ್ಲ ಮಾಹಿತಿ ಪಡೆಯಿರಿ.