ಮದ್ವೆಯಾಗೋಕೆ ಹುಡುಗಿ ಸಿಗ್ತಿಲ್ಲ ಅನ್ನೋದು ಗ್ರಾಮೀಣ ಪ್ರದೇಶದ ಯುವಕರ ಸಾಮಾನ್ಯ ಗೋಳು. ಇದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕರೂ ಇದ್ದಾರೆ. ಆದ್ರೆ ಇಲ್ಲೊಬ್ಬ ತನಗೆ ಸೂಕ್ತ ಹುಡುಗಿಯನ್ನು ಹುಡುಕದ ಸಿಟ್ಟಿಗೆ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ.
ತೆಲಂಗಾಣ: ಮದುವೆಯಾಗಲು ಸೂಕ್ತ ಜೋಡಿಯನ್ನು ಹುಡುಕೋಕೆ ತಾಯಿ ವಿಫಲವಾದ ಕಾರಣ ಮಗನೇ ಆಕೆಯನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಹೈದರಾಬಾದ್ ನಡೆದಿದೆ. ತನಗೆ ಸೂಕ್ತ ವಧು ಸಿಗಲಿಲ್ಲ ಎಂಬ ಕಾರಣಕ್ಕೆ 45 ವರ್ಷದ ಮಹಿಳೆಯನ್ನು ಸ್ವಂತ ಮಗನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಮಗಳಿಂದ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿ ಮಗ ಮತ್ತು ಸಂಬಂಧಿ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯೆಂದು ಬಿಂಬಿಸಲು ತಾಯಿಯ ಕತ್ತು ಸೀಳಿ, ಕಾಲು ಕತ್ತರಿಸಿದ
ಮಹಿಳೆ ಬಂದಾ ಮೈಲಾರಂ ಗ್ರಾಮದಲ್ಲಿ ವಾಸವಾಗಿದ್ದು, ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಕೊಲೆ (Murder) ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಹಿಳೆ (Woman)ಯನ್ನು ಇಟ್ಟಿಗೆಯಿಂದ ಹೊಡೆದು ಕೊಂಲೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಸತ್ತ ನಂತರ ಪೊಲೀಸರ ದಾರಿ ತಪ್ಪಿಸುವ ಸಲುವಾಗಿ ಆಕೆಯ ಕತ್ತು ಸೀಳಿ ಕಾಲುಗಳನ್ನು ಕತ್ತರಿಸಲಾಯಿತು. ಸಂತ್ರಸ್ತೆಯ ಮಗ (Son) ಯಾವುದೋ ಲಾಭಕ್ಕಾಗಿ ಕೊಲೆ ಅಥವಾ ದರೋಡೆ ಯತ್ನ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತರ ಕಿತಾಪತಿ, ಮಂಟಪದಲ್ಲಿ ವಧುವನ್ನು ಎತ್ತಲು ಹೋಗಿ ಧೊಪ್ಪಂತ ಬಿದ್ದ ವರ!
ಕಳೆದ ಒಂದು ದಿನದ ಹಿಂದಷ್ಟೇ ಮುಂಬೈನಲ್ಲಿ ನಡೆದ ಕೊಲೆಯೊಂದರಲ್ಲಿ ವಿವಾಹೇತರ ಸಂಬಂಧದ (Relationship) ಶಂಕೆಯಿಂದ ಹದಿಹರೆಯದ ಯುವಕನೊಬ್ಬ ತನ್ನ ತಾಯಿಯನ್ನು ಕೊಂದಿರುವುದು ಬೆಳಕಿಗೆ ಬಂದಿತ್ತು. ಯುವಕ ತನ್ನ ತಾಯಿಯನ್ನು ನೋಡಿದಾಗ ಆಕೆ ಒಬ್ಬ ವ್ಯಕ್ತಿಗೆ ಮೆಸೇಜ್ ಕಳುಹಿಸುತ್ತಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಹದಿಹರೆಯದ ಯುವಕ ಕುಡುಗೋಲು ತೆಗೆದುಕೊಂಡು ತಾಯಿಯ ಮುಖ, ಕುತ್ತಿಗೆ ಮತ್ತು ಎದೆಯ ಮೇಲೆ ಹೊಡೆದು ಹತ್ಯೆ ಮಾಡಿದ್ದ.
ಪೊಲೀಸರು 17 ವರ್ಷದ ಯುವಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಆತನ ವಿರುದ್ಧ ಬಾಲಾಪರಾಧಿ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ವರನಿಗೆ ತಾಳಿ ಕಟ್ಟಲು ಬಿಡದ ವಧುವಿನ ಗ್ಯಾಂಗ್, ಮುಂದಿಟ್ಟ ಷರತ್ತು ನೋಡಿ ಜನರು ಸುಸ್ತು!