ಒತ್ತಡ ಈಗಿನ ಜನರ ಸೆಕ್ಸ್ ಲೈಫ್ ಹಾಳು ಮಾಡಿದೆ. ನಿರಾಸಕ್ತಿ, ವೀರ್ಯ ಸಮಸ್ಯೆ ಸೇರಿದಂತೆ ಪುರುಷರು ಅನೇಕ ಸಮಸ್ಯೆ ಎದುರಿಸ್ತಿದ್ದಾರೆ. ರಾಜರ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು, ಅವರ ಶಕ್ತಿ ರಹಸ್ಯವೇನು ಅನ್ನೋದು ಇಲ್ಲಿದೆ.
ರಾಜ –ಮಹಾರಾಜರ ಕಥೆಗಳನ್ನು ನಾವು ಟಿವಿಯಲ್ಲಿ ನೋಡಿರ್ತೇವೆ ಇಲ್ಲವೆ ಪುಸ್ತಕದಲ್ಲಿ ಓದಿರ್ತೇವೆ. ಪ್ರಾಚೀನ ಕಾಲದಲ್ಲಿದ್ದ ರಾಜರಿಗೆ ಒಂದಲ್ಲ ಅನೇಕ ರಾಣಿಯರು ಇರುತ್ತಿದ್ದರು. ಎಲ್ಲ ರಾಣಿಯರನ್ನು ಸಂಭಾಳಿಸುತ್ತಿದ್ದ, ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ರಾಜರು, ಶತ್ರುಗಳ ಜೊತೆ ಕೂಡ ಹೋರಾಟ ನಡೆಸುತ್ತಿದ್ದರು. ಅಂದ್ರೆ ರಾಜರಿಗೆ ಎಲ್ಲ ರೀತಿಯ ಶಕ್ತಿ ಇತ್ತು. ಈಗಿನ ಜನರು ಮನೆ ಮತ್ತು ಕಚೇರಿ ಕೆಲಸವನ್ನು ನಿರ್ವಹಿಸೋದ್ರಲ್ಲೇ ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರಾಗ್ತಾರೆ. ಪುರಾತನ ಕಾಲದಲ್ಲಿ ರಾಜ (King) ರು 15 – 20 ರಾಣಿಯರನ್ನು ಖುಷಿಯಾಗಿಡೋದಲ್ಲದೆ ರಾಜ್ಯದ ಪ್ರಜೆಗಳ ಯೋಗಕ್ಷೇಮ, ಶತ್ರುಗಳ ವಿರುದ್ಧ ಹೋರಾಟವನ್ನು ಮಾಡ್ತಿದ್ದರು. ಅವರ ಒತ್ತಡ (Stress) ಎಷ್ಟಿರಬೇಡ. ಆದ್ರೆ ಯಾವುದೇ ಒತ್ತಡಕ್ಕೊಳಗಾಗದೆ, ಶಕ್ತಿಗುಂದದೆ ಕೆಲಸ ಮಾಡ್ತಿದ್ದ ರಾಜರ ಗುಟ್ಟೇನು ಎಂಬುದನ್ನು ನಾವಿಂದು ಹೇಳ್ತೇವೆ.
ಆಗಿನ ಕಾಲದಲ್ಲಿ ರಾಜ ಮನೆತನದವರು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಗಿಡಮೂಲಿಕೆ (Herb) ಉತ್ಪನ್ನಗಳನ್ನು ಬಳಸುತ್ತಿದ್ದರು. ಪ್ರತಿ ರಾಜ್ಯದಲ್ಲೂ ರಾಜ ವೈದ್ಯರಿರುತ್ತಿದ್ದರು. ಅವರು ಗಿಡಮೂಲಿಕೆಗಳು, ರಾಸಾಯನಿಕಗಳು ಮತ್ತು ಲೋಹಗಳ ಸಹಾಯದಿಂದ ರಾಜರಿಗೆ ಅನೇಕ ಭಕ್ಷ್ಯಗಳನ್ನು ಮಾಡುತ್ತಿದ್ದರು. ರಾಜರು ಬಹುಕಾಲ ಯೌವನದಲ್ಲಿರಲಿ, ತಮ್ಮ ಶಕ್ತಿಯನ್ನೂ ಕಾಯ್ದುಕೊಳ್ಳಲಿ ಎಂಬುದು ಅವರ ಉದ್ದೇಶವಾಗಿತ್ತು.
undefined
ರಾಜರು ಶಕ್ತಿಗಾಗಿ ಬಳಸ್ತಿದ್ದರು ಈ ಗಿಡಮೂಲಿಕೆ :
ಶಿಲಾಜಿತ್ : ಇದೊಂದು ಗಿಡಮೂಲಿಕೆಯಾಗಿದೆ. ಇದನ್ನು ಅಕ್ಕಿಯ ಕಾಳಿನಷ್ಟು ಚಿಕ್ಕದಾಗಿ ಮಾಡಿ, ಜೇನುತುಪ್ಪದೊಂದಿಗೆ ತೆಗೆದುಕೊಳ್ಳಬೇಕು. ಇದು ನಿಮ್ಮ ದೇಹಕ್ಕೆ ಬಲವನ್ನು ನೀಡುವುದು ಮಾತ್ರವಲ್ಲದೆ ನಿಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಗೊಂದಲವನ್ನು ಕಡಿಮೆ ಮಾಡುತ್ತದೆ.
ಅತ್ತೆ-ಸೊಸೆ ಸಂಬಂಧದಲ್ಲಿ ಎಲ್ಲವೂ ಅತಿರೇಕವೇ; ಮಾಳವಿಕ ಅವಿನಾಶ್ ಮಾತು
ಅಶ್ವಗಂಧ : ಪ್ರತಿ ರಾತ್ರಿ ಅರ್ಧ ಟೀಚಮಚ ಅಶ್ವಗಂಧವನ್ನು ಬೆಚ್ಚಗಿನ ಹಾಲಿನೊಂದಿಗೆ ಸೇವಿಸುವುದು ತುಂಬಾ ಪ್ರಯೋಜನಕಾರಿ. ಇದರ ಬಳಕೆಯು ದೈಹಿಕ ಆಯಾಸವನ್ನು ಹೋಗಲಾಡಿಸುತ್ತದೆ. ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಬಿಳಿ ಮೂಸ್ಲಿ : ಬಿಳಿ ಮೂಸ್ಲಿ ಪುಡಿಯನ್ನು ತಯಾರಿಸಿ ಅದನ್ನು ಜೇನುತುಪ್ಪ, ಹಾಲಿನೊಂದಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಉತ್ತಮ ಶಕ್ತಿಯನ್ನು ಪಡೆಯಬಹುದಾಗಿದೆ. ನೀವು ಸದಾ ಆರೋಗ್ಯವಾಗಿರಲು ಇದು ನೆರವಾಗುತ್ತದೆ.
ಕೇಸರಿ : ಬಿಸಿ ಹಾಲಿನಲ್ಲಿ ನೆನೆಸಿದ ಒಂದು ಚಿಟಿಕೆ ಕೇಸರಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ. ರಕ್ತನಾಳಗಳಲ್ಲಿ ರಕ್ತದ ಉತ್ತಮ ಹರಿವಿಗೆ ಇದು ಕಾರಣವಾಗುತ್ತದೆ. ಪ್ರತಿ ರಾತ್ರಿ ಕೇಸರಿ ಹಾಲನ್ನು ನೀವು ಸೇವನೆ ಮಾಡ್ಬೇಕು.
ಶತಾವರಿ : ಒಂದು ಚಮಚ ಜೇನು ತುಪ್ಪ ಮತ್ತು ಅರ್ಧ ಚಮಚ ಶರಾವರಿ ಚೂರ್ಣವನ್ನು ಹಾಲು, ಹಸುವಿನ ತುಪ್ಪದ ಜೊತೆ ಸೇವನೆ ಮಾಡಬೇಕು. ಇದು ನಿಮಗೆ ದೈಹಿಕ ಶಕ್ತಿಯನ್ನು ನೀಡುತ್ತದೆ.
ಪುರುಷರ ಎದುರು ಚಡಪಡಿಕೆ ಯಾತಕ್ಕೆ? ಆತ್ಮವಿಶ್ವಾಸವಿಲ್ಲದ ಮಹಿಳೆಯರು ಹೇಗೆಲ್ಲ ಹಿಂಸೆ ಪಡ್ತಾರೆ ನೋಡಿ
ಗಿಡಮೂಲಿಕೆಯಲ್ಲದೆ ಪುರುಷ ಶಕ್ತಿ ಹೆಚ್ಚಳಕ್ಕೆ ಮನೆ ಮದ್ದು :
ಈರುಳ್ಳಿ : ಬಿಳಿ ಈರುಳ್ಳಿಯ ರಸ, ಜೇನುತುಪ್ಪ, ಶುಂಠಿ ರಸ ಮತ್ತು ತುಪ್ಪದ ಮಿಶ್ರಣವನ್ನು 21 ದಿನಗಳ ಕಾಲ ನಿರಂತರವಾಗಿ ಸೇವಿಸುವುದರಿಂದ ನಿಶ್ಶಕ್ತಿ ದೂರವಾಗುತ್ತದೆ ಮತ್ತು ಪುರುಷ ಶಕ್ತಿ ಪ್ರಾಪ್ತಿಯಾಗುತ್ತದೆ.
ಕಡಲೆಕಾಯಿ : ವೀರ್ಯದ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಕಡಲೆಕಾಯಿಯನ್ನು ಬಳಕೆ ಮಾಡ್ಬೇಕು. ರಾತ್ರಿ ಕಡಲೆಕಾಯಿಯನ್ನು ನೀರಿನಲ್ಲಿ ನೆನೆ ಹಾಕಿ ಬೆಳಿಗ್ಗೆ ಚೆನ್ನಾಗಿ ಅಗೆದು ಸೇವನೆ ಮಾಡಬೇಕು.
ನೆಲ್ಲಿಕಾಯಿ : ನೀವು ನೆಲ್ಲಿಕಾಯಿ ಚೂರ್ಣಕ್ಕೆ ಜೇನು ತುಪ್ಪವನ್ನು ಮಿಕ್ಸ್ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಒಂದು ಚಮಚದಂತೆ ಸೇವನೆ ಮಾಡಬೇಕು.
ಸೂಚನೆ : ರಾಜ – ಮಹಾರಾಜರು ರಾಜ ವೈದ್ಯರ ಸಲಹೆ ಮೇರೆಗೆ ಗಿಡ ಮೂಲಿಕೆಯನ್ನು ಸೇವನೆ ಮಾಡ್ತಿದ್ದರು. ಗಿಡಮೂಲಿಕೆಯಲ್ಲದೆ ಮನೆ ಮದ್ದುಗಳು ಕೂಡ ಪುರುಷ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಮಗೆ ಬೇರೆ ಆರೋಗ್ಯ ಸಮಸ್ಯೆ ಇದ್ದಲ್ಲಿ ಇವುಗಳ ಬಳಕೆ ಮುನ್ನ ವೈದ್ಯರ ಸಲಹೆ ಪಡೆಯಿರಿ.