ಮದುವೆ (Marriage)ಯೆಂಬ ಸಂಬಂಧವನ್ನು ಬೆಸೆಯೋದು ತುಂಬಾ ಕಷ್ಟಕರವಾದ ಕೆಲಸ, ಆದ್ರೆ ಅದೇ ಸಂಬಂಧ (Relationship) ದೂರವಾಗಲು ಕೆಲವೇ ಕ್ಷಣಗಳು ಸಾಕಾಗುತ್ತವೆ. ಆದ್ರೆ ಕೆಲವೊಮ್ಮೆ ದಾಂಪತ್ಯದಲ್ಲಿ (Married life) ಭಿನ್ನಾಭಿಪ್ರಾಯ ಬರ್ತಿರೋದು ದಂಪತಿ (Couple)ಗಳಿಗೇ ಗೊತ್ತಾಗಲ್ಲ. ಅದನ್ನು ತಿಳ್ಕೊಳ್ಳೋದು ಹೇಗೆ ನಾವ್ ಹೇಳ್ತೀವಿ.
ಮದುವೆ (Wedding) ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಘಟ್ಟ. ವಿವಾಹದ ನಂತ್ರ ಪತಿ (Husband) – ಪತ್ನಿ (Wife) ಜೀವನ ಪರ್ಯಂತ ಒಂದಾಗಿರುವ ಕನಸು (Dream) ಕಾಣ್ತಾರೆ. ಒಂದಾಗಿ ಬಾಳ್ವೆ ಮಾಡ್ತೇವೆಂದು ಪ್ರಮಾಣ ಮಾಡ್ತಾರೆ. ಆದ್ರೆ ಅನೇಕರ ಬಾಳಲ್ಲಿ ಮದುವೆಯೇ ಮುಳುವಾಗುತ್ತದೆ. ಕೆಲ ತಿಂಗಳ ನಂತ್ರ ದಾಂಪತ್ಯ (Married life) ಮುರಿದು ಬೀಳುವುದಿದೆ. ಇನ್ನು ಕೆಲವೊಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ್ರೂ ಅದ್ಹೇಗೋ ಸರಿದೂಗಿಸಿಕೊಂಡು ಹೋಗ್ತಾರೆ. ಇನ್ನು ಕೆಲವೊಬ್ಬರಿಗೆ ಗಂಡ-ಹೆಂಡ್ತಿ ಮಧ್ಯೆ ಜಗಳ ನಡೀತಾ ನಡೀತಾ ಯಾವಾಗ ಸಂಬಂಧ ಕೊನೆಯಾಯ್ತು ಅಂತಾನೆ ಗೊತ್ತಾಗಿರುವುದಿಲ್ಲ. ಹೀಗಾಗಿ ಸಂಬಂಧದಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು, ಸಮಸ್ಯೆಗಳನ್ಜು ಸರಿಯಾದ ಸಂದರ್ಭದಲ್ಲಿ ತಿಳಿದುಕೊಳ್ಳುವುದು ಸಹ ತುಂಬಾ ಮುಖ್ಯ.
ಕೆಲವೊಮ್ಮೆ ಸಂಗಾತಿಗೆ (Partner) ಅವರು ಮಾಡ್ತಿರೋ ಕೆಲಸದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿಯೇ ಸಣ್ಣಪುಟ್ಟ ಜಗಳವನ್ನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ. ಆದ್ರೆ ಇದರಿಂದ ಕೆಲವೊಮ್ಮೆ ಸಂಗಾತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ಮ್ಯಾರೀಡ್ ಲೈಫ್ ಸೇಫಾಗಿದ್ಯಾ ? ಇಲ್ಲ ತೊಂದರೆಯಲ್ಲಿದ್ಯಾ ಎಂಬುದನ್ನು ನೀವು ಮೊದ್ಲು ತಿಳ್ಕೊಬೇಕು. ನಿಮ್ಮ ಮದುವೆ ಮುರಿದು ಬೀಳುವ ಹಂತದಲ್ಲಿದೆ ಎಂಬುದನ್ನು ನೀವ್ಹೇಗೆ ತಿಳಿದುಕೊಳ್ಬೋದು.
Weddingಗೂ ಮುನ್ನ ಮಾಡಿದ ಒಪ್ಪಂದವೀಗ ತಂದಿದೆ ತಲೆನೋವು!
ಸಂಗಾತಿಯ ಬಗ್ಗೆ ಆಸಕ್ತಿಯಿಲ್ಲದಿರುವುದು
ಒತ್ತಡದ ಜೀವನಶೈಲಿಯಿಂದ, ಸಮಯಾವಾಕಾಶದ ಕೊರತೆಯಿಂದ ಕೆಲವೊಮ್ಮೆ ಸಂಗಾತಿಯ ಬಗ್ಗೆ ಆಸಕ್ತಿಯಿಲ್ಲದಂತಾಗುತ್ತದೆ. ಅಥವಾ ಬೇರೆ ವ್ಯಕ್ತಿಯೆಡೆಗಿನ ಆಕರ್ಷಣೆಯೂ ಸಂಗಾತಿಯ ಕುರಿತು ಆಕರ್ಷಣೆ ಇಲ್ಲದಂತೆ ಮಾಡಿಬಿಡುತ್ತದೆ. ಹೀಗಿದ್ದಾಗ ದಂಪತಿ ಪರಸ್ಪರ ಮಾತನಾಡುವುದು, ಸಮಯ ನೀಡುವುದನ್ನು ಬಿಟ್ಟು ಬಿಡುತ್ತಾರೆ. ಹೀಗಿರುವಾಗ ದಾಂಪತ್ಯ ಶೀಘ್ರವಾಗಿ ಕೊನೆಗೊಳ್ಳುವ ಸಾಧ್ಯತೆಯಿದೆ.
ನಿಮ್ಮ ಸಂಗಾತಿ ಇತರರೊಂದಿಗೆ ಮದುವೆಯ ಬಗ್ಗೆ ಚರ್ಚಿಸುತ್ತಾರೆ
ನಿಮ್ಮ ಸಂಗಾತಿ ಇತರ ವ್ಯಕ್ತಿಗಳೊಂದಿಗೆ ನಿಮ್ಮ ಮದುವೆಯ ಜೀವನದ ಬಗ್ಗೆ ಚರ್ಚಿಸುತ್ತಿದ್ದರೆ ಅವರು ನಿಮ್ಮ ಬಗ್ಗೆ ಅಸಮಾಧಾನ ಹೊಂದಿದ್ದಾರೆ, ಸಂಬಂಧದಿಂದ ಶೀಘ್ರ ಹೊರಬರಲು ಯತ್ನಿಸುತ್ತಿದ್ದಾರೆ ಎಂದೇ ಅರ್ಥ. ಹೀಗಾಗಿ ನೀವು ಸಂಗಾತಿಯ ಜೊತೆ ಯಾವಾಗ, ಯಾವ ರೀತಿ ತಪ್ಪಾಗಿ ನಡೆದುಕೊಳ್ಳುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಅದನ್ನು ಸರಿಪಡಿಸಿಕೊಳ್ಳಲು ಯತ್ಬಿಸಬೇಕು.
ವೈವಾಹಿಕ ಸಮಸ್ಯೆಗಳನ್ನು ಸಂಗಾತಿ ಜೊತೆ ಮಾತ್ರ ಚರ್ಚಿಸಿ
ನಿಮ್ಮ ವೈವಾಹಿಕ ಸಮಸ್ಯೆಗಳನ್ನು ನೀವು ನಿಮ್ಮ ಸಂಗಾತಿಯ ಜೊತೆ ಮಾತ್ರ ಚರ್ಚಿಸಬೇಕು, ಅದು ತುಂಬಾ ಉಲ್ಬಣಗೊಂಡಾಗ ಸ್ನೇಹಿತರ ಜೊತೆ ಚರ್ಚಿಸುವ ಬದಲು ವೃತ್ತಿಪರ ಸಹಾಯವನ್ನು ಪಡೆಯಬೇಕು. ನಿಮ್ಮ ಸಂಗಾತಿಯು ಅವರ ಸ್ನೇಹಿತರು, ಕುಟುಂಬ ಸದಸ್ಯರು, ವಿಶೇಷವಾಗಿ ಪೋಷಕರೊಂದಿಗೆ ತಮ್ಮ ಮದುವೆಯ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದರೆ, ನೀವು ಮಧ್ಯಪ್ರವೇಶಿಸಬೇಕಾಗುತ್ತದೆ ಮತ್ತು ಹೀಗೆ ಮಾಡದಂತೆ ತಡೆಯಬೇಕು.
ಮದುವೆಯಾಗಲು ಪುರುಷರಿಗೆ ಚಿಕ್ಕ ವಯಸ್ಸಿನ ಹುಡುಗಿಯೇ ಬೇಕು ! ಅದಕ್ಕೆ ಕಾರಣ ಇದೇ ನೋಡಿ
ಸಂಗಾತಿಯನ್ನು ಮೆಚ್ಚಿಸಲು ನೀವು ಹೇಗೇಗೋ ವರ್ತಿಸುತ್ತಿದ್ದೀರಿ
ದಾಂಪತ್ಯ ಎಂದರೆ ಗಂಡ-ಹೆಂಡತಿ ಇಬ್ಬರೂ ಪರಸ್ಪರ ಇಬ್ಬರ ಗುಣಗಳನ್ನು ಸ್ವೀಕರಿಸಿಕೊಂಡು ತಪ್ಪಾದಾಗ ತಿದ್ದಿಕೊಂಡು ಜೀವನ ನಡೆಸಬೇಕು. ಅದು ಬಿಟ್ಟು ಸಂಗಾತಿಯ ಎದುರು ಸಹ ನೀವು ಸಂಪೂರ್ಣ ವ್ಯಕ್ತಿತ್ವದವರಂತೆ ಬಿಂಬಿಸಲು ಯತ್ನಿಸಿದರೆ ಇದು ಸಂಪೂರ್ಣ ಅಪರಿಚಿತ ಸಂಬಂಧದಂತೆ ಭಾಸವಾಗುತ್ತದೆ.
ಸಂಗಾತಿಯನ್ನು ಮೆಚ್ಚಿಸಲು ನೀವು ಹೇಗೇಗೋ ವರ್ತಿಸುತ್ತಿದ್ದೀರಿ, ನಿಮ್ಮತನವನ್ನೇ ಕಳೆದುಕೊಂಡಿದ್ದೀರಿ ಎಂದರೆ ಈ ಸಂಬಂಧ ಸದ್ಯದಲ್ಲಿ ಕೊನೆಗೊಳ್ಳಬಹುದು ಎಂದು ತಿಳಿದುಕೊಳ್ಳಬಹುದು. ನೆನಪಿಡಿ, ಮದುವೆಯೆಂದರೆ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವುದು ಮತ್ತು ಒಬ್ಬರ ಅಭಿಪ್ರಾಯಗಳನ್ನು ಗೌರವಿಸುವುದು. ಇದು ಸಾಧ್ಯವಾಗದಿದ್ದಾಗ ಆ ಸಂಬಂಧಕ್ಕೆ ಅರ್ಥವಿರುವುದಿಲ್ಲ.
ತಪ್ಪಿತಸ್ಥ ಭಾವನೆಯಿಂದ ಸಂಬಂಧ ಮುಂದುವರಿಯುವುದಿಲ್ಲ
ತಪ್ಪಿತಸ್ಥ ಭಾವನೆಯಿದ್ದಾಗ ಯಾವತ್ತೂ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ನೀವು ನಿಮ್ಮ ಸಂಗಾತಿಗೆ ಮೋಸ ಮಾಡುತ್ತಿದ್ದೀರಿ, ಅಥವಾ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ ಈ ಸಂಬಂಧ ಯಾವಾಗ ಬೇಕಾದರೂ ಕೊನೆಗೊಳ್ಳಬಹುದು.