ಎರಡು ತಾಯಿ ಕೋತಿಗಳ ನಡುವಿನ ಅಪೂರ್ವ ಸಮ್ಮಿಲನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮನುಷ್ಯರಿಗಿಂತ ಮಿಗಿಲಾಗಿಯೂ ಪ್ರಾಣಿಗಳ ನಡುವೆ ಇರುವ ಅನೋನ್ಯ ಸಂಬಂಧವನ್ನು ತೋರಿಸುವ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇವರೇನೂ ಪ್ರಾಣೆಗಳೋ ಅಥವಾ ಮನುಷ್ಯರೋ ಎಂದು ಅವುಗಳು ವರ್ತಿಸುವ ರೀತಿ ನೋಡಿದಾಗ ಅನಿಸುವಷ್ಟು ಅವರ ನಡವಳಿಕೆಗಳು ನಮ್ಮಲ್ಲಿ ಬೆರಗು ಮೂಡಿಸುತ್ತವೆ. ಅದೇ ರೀತಿ ಇಲ್ಲೊಂದು ಕೋತಿಗಳ ವಿಡಿಯೋವೊಂದು ಎಲ್ಲರ ಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ಮನೆಗೆ ನೆಂಟರು ಬಂದಾಗ ಅಥವಾ ಅಪರೂಪದ ದೂರದ ಬಂಧುಗಳು ಆಗಮಿಸಿದಾಗ ಮನುಷ್ಯರಾದ ನಾವು ಹೇಗೆ ಆತ್ಮೀಯವಾಗಿ ವರ್ತಿಸುತ್ತೇವೆ? ಅವರನ್ನು ಹೇಗೆ ಬಿಗಿದಪ್ಪಿ ಸತ್ಕರಿಸುತ್ತೇವೆಯೋ ಅದೇ ರೀತಿ ಎರಡು ಕೋತಿಗಳು ಇಲ್ಲಿ ಪರಸ್ಪರ ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವ ರೀತಿ ಮನಸಿಗೆ ಸೋಜಿಗ ನೀಡುತ್ತಿದೆ.
When family met after the pandemic😌☺️ pic.twitter.com/sDxFHXr1z9
— Susanta Nanda IFS (@susantananda3)ವಿಡಿಯೋದಲ್ಲಿ ಕಾಣಿಸುವಂತೆ ಎರಡು ಕೋತಿಗಳು (Monkey) ಬೆನ್ನಿನ ಮೇಲೆ ಮರಿಗಳನ್ನು ಇಟ್ಟುಕೊಂಡಿವೆ. ಪರಸ್ಪರ ಹತ್ತಿರ ಬಂದು ಎರಡೂ ಗಟ್ಟಿಯಾಗಿ ತಬ್ಬಿಕೊಳ್ಳುತ್ತವೆ. ಜೊತೆಗೆ ಮತ್ತೊಂದು ಕೋತಿಯ ಬೆನ್ನಿನ ಮೇಲಿದ್ದ ಮರಿಯನ್ನು ಇನ್ನೊಂದು ಕೋತಿ ಎತ್ತಿಕೊಂಡು ತಬ್ಬಿ ಮುದ್ದಾಡುತ್ತಿದೆ. ಈ ವಿಡಿಯೋ ನೋಡತ್ತಿದ್ದಾರೆ. ಮನೆಗೆ ಬಂದ ನೆಂಟರ ಸಣ್ಣ ಮಕ್ಕಳನ್ನು ಮಾನವರಾದ ನಾವು ಹೇಗೆ ಎತ್ತಿಕೊಂಡು ಮುದ್ದಾಡುತ್ತೇವೆಯೋ ಅದೇ ರೀತಿ ಈ ಕೋತಿಗಳು ವರ್ತಿಸುತ್ತಾ ಪರಸ್ಪರ ಪ್ರೀತಿ ತೋರುತ್ತಿದ್ದು, ಇವುಗಳು ಮನುಷ್ಯರೋ ಪ್ರಾಣಿಗಳೋ ಎಂಬ ಸಂಶಯವನ್ನು ಮೂಡಿಸುತ್ತಿವೆ.
ಮೃತ ತಾಯಿಯನ್ನು ತಬ್ಬಿ ಮಲಗಿದ್ದ ಕೋತಿ ಮರಿಯ ರಕ್ಷಣೆ
ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಶಾಂತ್ ನಂದಾ (sushanth nanda) ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎರಡು ಮಕ್ಕಳನ್ನು ಹೊಂದಿರುವ ಹಿರಿಯ ಕೋತಿಗಳೆರಡ ಈ ಆತ್ಮೀಯ ಪ್ರೀತಿ ತುಂಬಿದ ನಡವಳಿಕೆ ಜನರ ಮನಸ್ಸನ್ನು ಮುದಗೊಳಿಸುತ್ತಿದೆ.
ಬೆಕ್ಕಿನೊಂದಿಗೆ ಪ್ರೀತಿಯಲ್ಲಿ ಬಿದ್ದ ಕೋತಿ: ತಬ್ಬಿ ಕಿಸ್ ಮಾಡಲೆತ್ನಿಸಿದ ವಾನರ
ಪ್ರೀಮೇಟ್ ರಕ್ಷಣಾ ಕೇಂದ್ರದ ಪ್ರಕಾರ ಕೋತಿಗಳ ಈ ಸಾಮಾಜಿಕ ನಡವಳಿಕೆಯು ಕೋತಿಗಳ ನಡುವಿನ ಸಾಮಾಜಿಕ ಗುಂಪುಗಳ ಸ್ನೇಹಮಯವಾದ ಗುಣವಾಗಿದೆ. ಈ ವಿಡಿಯೋ ಶೇರ್ ಮಾಡಿದ ಸುಶಾಂತ್ ನಂದಾ ಕೋವಿಡ್ ನಂತರ ಕುಟುಂಗಳು ಪರಸ್ಪರ ಭೇಟಿಯಾದಾಗ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 14 ಸೆಕೆಂಡ್‌ಗಳ ಈ ವಿಡಿಯೋವನ್ನು 29,000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಸಾವಿರಾರು ಜನ ಲೈಕ್ ಮಾಡಿದ್ದಾರೆ. ಹೇಗೆ ಮನುಷ್ಯರು ಪ್ರೀತಿ ಮಾಡುತ್ತಾರೋ ಅದೇ ರೀತಿ ಕೋತಿಗಳು ಪರಸ್ಪರ ಪ್ರೀತಿ ಮಾಡುತ್ತಿವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಮಂಗವೊಂದು ಸಲೂನ್‌ನಲ್ಲಿ ಟ್ರಿಮ್ ಮಾಡಿಸಿಕೊಳ್ಳಲು ಚೇರ್‌ನಲ್ಲಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾನವರನ್ನು ಅನುಕರಿಸುತ್ತಿರುವ ಮಂಗನ ವಿಡಿಯೋಗಳು ಈ ಹಿಂದೆಯೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವು ನಿಮ್ಮನ್ನು ಕುತೂಹಲದಿಂದ ನೋಡುವಂತೆ ಮಾಡಿದರೆ ಮತ್ತೆ ಕೆಲವು ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಈ ವಿಡಿಯೋವನ್ನು ಐಪಿಎಸ್( ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು.
45 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಂಗವೂ ಸಲೂನ್‌ನ ಕನ್ನಡಿ ಮುಂದೆ ಚೇರ್‌ನಲ್ಲಿ ಕುಳಿತಿದೆ. ತನ್ನ ಕತ್ತಿನ ಸುತ್ತ ಮಂಗನಿಗೆ ಬಟ್ಟೆಯನ್ನು ಸುತ್ತಿದ್ದು, ಹೇರ್ ಡ್ರೆಸರ್ ಈ ಮಂಗದ ಮುಖದಲ್ಲಿರುವ ಕೂದಲನ್ನು ಬಾಚಿ ಟ್ರಿಮ್ ಮಾಡುತ್ತಿದ್ದಾರೆ. ಇಲೆಕ್ಟ್ರಿಕ್ ಟ್ರಿಮರ್‌ನಲ್ಲಿ ಟ್ರಿಮ್ ಮಾಡುತ್ತಿದ್ದು, ಮಂಗವೂ ತುಂಬಾ ತಾಳ್ಮೆಯಿಂದ ಕುಳಿತು ಶೇವ್ ಮಾಡಿಸಿಕೊಳ್ಳುತ್ತಿದೆ.