ಎಲ್ಲರ ಮನೆ ದೋಸೆ ತೂತು ಅನ್ನೋ ಹಾಗೆ ಗಂಡ-ಹೆಂಡತಿ (Husband-wife) ಜಗಳ ಎಲ್ಲರ ಮನೆಯಲ್ಲೂ ಇದ್ದದ್ದೇ. ಆದ್ರೆ ಕೆಲ ಗಂಡಂದಿರಂತೂ ಹೆಂಡ್ತಿ ಸಿಟ್ಟಿನಿಂದ (Angry) ರೇಗಾಡ್ತಾಳೆ. ಮನೆಯ ನೆಮ್ದಿನೇ ಹಾಳಾಗ್ತಿದೆ ಏನ್ ಮಾಡೋದಪ್ಪಾ ಅಂತ ತಲೆಕೆಡಿಸಿಕೊಂಡಿರ್ತಾರೆ. ಈಝಿ ಸೊಲ್ಯೂಷನ್ (Solution) ನಾವ್ ಹೇಳ್ತಿವಿ.
ಗಂಡ-ಹೆಂಡತಿ (Husband-wife) ಎಂದಾಗ ಇಬ್ಬರ ನಡುವೆ ಸಣ್ಣಪುಟ್ಟ ಕಾರಣಕ್ಕೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುವುದು, ಜಗಳವಾಗುವುದು ಸಹಜ. ಕೆಲವೊಬ್ಬರು ಇದನ್ನು ಈಝಿಯಾಗಿ ತೆಗೆದುಕೊಂಡು ತಕ್ಷಣಕ್ಕೆ ಪರಿಹರಿಸಿಕೊಂಡರೆ, ಇನ್ನು ಕೆಲವೊಬ್ಬರು ಜಗಳವನ್ನೇ ಮುಂದುವರಿಸಿಕೊಂಡು ಹೋಗಿ ವಾರಗಟ್ಟಲೆ ಮುನಿಸಿನಿಂದಲೇ (Angry) ಇದ್ದುಬಿಡುತ್ತಾರೆ. ಅದರಲ್ಲೂ ಹೆಂಡ್ತಿ ಸುಮ್ ಸುಮ್ನೆ ರೇಗಾಡುತ್ತಾಳೆ ಅನ್ನೋ ಗಂಡಂದಿರೇ ಹೆಚ್ಚು. ಸಣ್ಣ ವಿಚಾರವನ್ನೇ ನೆಪ ಮಾಡ್ಕೊಂಡು ಹೆಂಡತಿ ಜಗಳಕ್ಕೆ ಬರ್ತಾಳೆ. ಯಾವಾಗ ನೋಡಿದ್ರೂ ಇರಿಟೇಟ್ (Irritate) ಮಾಡ್ತಾಳೆ. ಮೂಡೇ ಹಾಳಾಗುತ್ತೆ. ಮನೆಯ ನೆಮ್ಮದಿನೇ ಹಾಳಾಗುತ್ತೆ ಅನ್ನೋರು ಇದ್ದಾರೆ. ಅಂಥಾ ಗಂಡದಿರುವ ಇಲ್ ಕೇಳಿ. ಸಮಸ್ಯೆಯನ್ನು ಹೇಗೆ ಹ್ಯಾಂಡಲ್ ಮಾಡುವುದು ನಾವ್ ಹೇಳ್ತಿವಿ.
ಕಾರಣವನ್ನು ತಿಳಿದುಕೊಳ್ಳಿ
ಹೆಂಡತಿ ಕಿರುಚಾಡಲು ಆರಂಭಿಸಿದ ತಕ್ಷಣ ನೀವು ಕೂಡಾ ಸಿಟ್ಟಿಗೆದ್ದ ರೇಗಾಡಲು ಶುರುಮಾಡಬೇಡಿ. ಮೊದಲಿಗೆ ಆಕೆಯ ಸಿಟ್ಟಿಗೆ ನಿಜವಾದ ಕಾರಣ (Reason)ವೇನೆಂದು ತಿಳ್ಕೊಳ್ಳಿ. ಆಕೆ ಸಿಟ್ಟಿಗೆದ್ದಿರೋದು ಅದೇ ಕಾರಣಕ್ಕೋ, ಇಲ್ಲ ಇನ್ಯಾವುದೋ ವಿಚಾರದ ಸಿಟ್ಟನ್ನು ತೋರಿಸುತ್ತಿದ್ದಾಳಾ ಎಂಬುದನ್ನು ಅರ್ಥಮಾಡಿಕೊಳ್ಳಿ. ನಂತರ ಸಮಾಧಾನ ಮಾಡಲು ಪ್ರಯತ್ನಿಸಿ.
ಹಾಸಿಗೆಯಲ್ಲಿ ಪತ್ನಿ ಈ ಡ್ರೆಸ್ ಧರಿಸಬೇಕೆಂದು ಬಯಸ್ತಾರೆ ಪುರುಷರು
ಹೊರಗಡೆ ಸುತ್ತಾಡಲು ಹೋಗಿ
ಹೆಂಡತಿ ಸಿಟ್ಟಿಗೆದ್ದ ತಕ್ಷಣ ಸಮಾಧಾನ ಮಾಡಿ ತಕ್ಷಣ ಹೊರಗೆ ಕರೆದುಕೊಂಡು ಹೋಗಿ. ಮನೆಯೊಳಗೇ ಇದ್ದರೆ ಅದೇ ಮನಸ್ಥಿತಿ ಇರುತ್ತದೆ. ಜತೆಗೆ ಜಗಳವೂ ಮುಂದುವರೆಯುತ್ತದೆ. ಮನೆಯಿಂದ ಹೊರಗಡೆ ಹೋದಾಗ ವಾತಾವರಣ ಬದಲಾಗುವುದರ ಜತೆಗೆ ಅವರ ಮನಸ್ಥಿತಿಯೂ ಬದಲಾಗುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗಿ ರಿಲ್ಯಾಕ್ಸ್ ಆಗುವುದರಿಂದ ಸಹಜವಾಗಿಯೇ ಸಿಟ್ಟು ಸಹ ಕಡಿಮೆಯಾಗುತ್ತದೆ.
ಜೊತೆಯಾಗಿ ಸಮಯ ಕಳೆಯಿರಿ
ಕಿರುಚಾಡುತ್ತಿರುವ ಹೆಂಡತಿಯನ್ನು ಬಿಟ್ಟು ಸಹವಾಸವೇ ಬೇಡ ಅಂತ ಸುಮ್ನೆ ಆಚೆ ಹೋಗಿಬಿಡಬೇಡಿ. ಇದು ಸಿಟ್ಟನ್ನು ಇನ್ನಷ್ಟು ಹೆಚ್ಚು ಮಾಡುತ್ತದೆಯಷ್ಟೆ. ಬದಲಾಗಿ ಜತೆಯಲ್ಲೇ ಕುಳಿತು ಶಾಂತಚಿತ್ತರಾಗಿ ಅವರೊಂದಿಗೆ ಸಮಯ ಕಳೆಯಿರಿ. ಅವರಿಷ್ಟದ ಫುಡ್ ಆರ್ಡರ್ ಮಾಡುವುದು, ಅವರಿಗಿಷ್ಟವಾದ ವಿಷಯವನ್ನು ಮಾತನಾಡುವಾಗ ಮೂಲಕ ಮನಸ್ಸನ್ನು ಬೇರೆಡೆಗೆ ಡೈವರ್ಟ್ ಮಾಡಲು ಯತ್ನಿಸಿ.
ವಿಶ್ರಾಂತಿ ಪಡೆಯಲು ಸೂಚಿಸಿ
ಹಲವು ಸಂದರ್ಭಗಳಲ್ಲಿ ಯಾರಾದರೂ ಅತಿಯಾಗಿ ಸಿಟ್ಟುಗೊಂಡು ಕಿರುಚಾಡಿದಾಗ ಅವರು ರೆಸ್ಟ್‌ಲೆಸ್ ಆಗಿರುತ್ತಾರೆ. ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾರೆ. ಇದು ಸಹಜವಾಗಿ ಸಣ್ಣ ಪುಟ್ಟ ವಿಚಾರಕ್ಕೆ ಕಿರುಚಾಡುವಂತೆ ಮಾಡುತ್ತದೆ. ಹೀಗಾಗಿ ಪತ್ನಿ ಈ ರೀತಿ ಕಿರುಚಾಡಿದಾಗ ತಕ್ಷಣ ವಿಶ್ರಾಂತಿ ಪಡೆಯಲು ಸೂಚಿಸಿ. ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಅವರೊಂದಿಗೆ ಕೈ ಜೋಡಿಸಿ.
Relationship Tips: ಏನು ಬೇಕಾದ್ರೂ ಆಗ್ಲಿ, ಗಂಡಂದಿರು ಈ ಗುಟ್ಟು ಮಾತ್ರ ಬಿಟ್ಟುಕೊಡಲ್ಲ
ವಾಪಾಸ್ ಚರ್ಚೆ ಮಾಡದಿರಿ
ಇದು ಎಲ್ಲಕ್ಕಿಂತಲೂ ಮುಖ್ಯವಾದ ವಿಷಯ. ಯಾರಾದರೂ ಸಿಟ್ಟಿನಲ್ಲಿದ್ದಾಗ ಅವರ ಜೊತೆ ಮತ್ತಷ್ಟು ಚರ್ಚೆ ಮಾಡುವುದು ಜಗಳ ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ಹೆಂಡತಿ ಸಿಟ್ಟಿನಲ್ಲಿದ್ದಾಗ ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಬೇಡಿ. ಅವರ ಸಿಟ್ಟು ಕಡಿಮೆಯಾಗಿ ಶಾಂತ ಮನಸ್ಥಿತಿ ಹೊಂದಿದಾಗಲಷ್ಟೇ ಪ್ರಶ್ನೆ, ಉತ್ತರಗಳನ್ನು ಕೇಳುವುದನ್ನು ಮಾಡಿ.
ತಾಳ್ಮೆಯನ್ನು ಅಭ್ಯಾಸ ಮಾಡಿ
ಕೋಪದ ಕೆಳಗೆ ಭಯ, ದುಃಖ ಅಥವಾ ನೋವಿನಂತಹ ಆಳವಾದ ಮತ್ತು ಹೆಚ್ಚು ದುರ್ಬಲವಾದ ಭಾವನೆಗಳು ಇರುತ್ತದೆ. ಇದರಿಂದ ವ್ಯಕ್ತಿ ಬೇಗನೇ ಸಿಟ್ಟಿಗೆ ಒಳಗಾಗುತ್ತಾರೆ. ಹೀಗಾಗಿ ಯಾವಾಗಲೂ ಒಬ್ಬ ವ್ಯಕ್ತಿ ಕಿರುಚಾಡುತ್ತಿದ್ದರೆ ತಾಳ್ಕೆಯಿಂದ ಇರುವುದನ್ನು ಕಲಿಯಿರಿ. ಸಮಾಧಾನದಿಂದ ಸಮಸ್ಯೆಗಳನ್ನು ಆಲಿಸಿ. ತಾಳ್ಮೆ ಕಳೆದುಕೊಂಡರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಾ ಹೋಗುತ್ತದೆ.