ಪ್ರೀತಿ (Love) ಮಾಡೋರ ವಿರಹವೇದನೆಯನ್ನು ನೀವು ನೋಡೇ ಇರ್ತೀರಾ. ರಾತ್ರಿಯೆಲ್ಲಾ ಮೊಬೈಲ್‌ನಲ್ಲಿ ಮಾತನಾಡ್ತಾರೆ, ಮೆಸೇಜ್ ಮಾಡ್ತಾರೆ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬಂದು ಮೀಟ್ (Meet) ಆಗಿ ಕೂಡಾ ಹೋಗ್ತಾರೆ. ಆದ್ರೆ ಬಾಯ್‌ಫ್ರೆಂಡ್ (Boyfriend) ನೆನಪು ಬರ್ತಿದ್ದಂತೆ ಹುಡುಗಿಯರು (Girls) ಏನ್ ಮಾಡ್ತಾರೆ ಗೊತ್ತಾ ?
ಪ್ರೀತಿಸಿದ ವ್ಯಕ್ತಿಗಳು ಸದಾ ನಮ್ಮ ಜೊತೆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದ್ರೆ ಅದು ಅಸಾಧ್ಯ ಎನ್ನುವುದು ನಮಗೆಲ್ಲರಿಗೂ ಗೊತ್ತು. ಯಾವುದೇ ಜೋಡಿ, ಪ್ರತಿ ದಿನ, ಪ್ರತಿ ಕ್ಷಣ ಒಟ್ಟಿಗೆ ಇರಲು ಸಾಧ್ಯವಿಲ್ಲ. ದಿನದ ಕೆಲ ಗಂಟೆ ಭೇಟಿಯಾಗ್ಬಹುದು, ಇಲ್ಲವೆ ರಾತ್ರಿ ಪೂರ್ತಿ ಫೋನ್ (Phone) ನಲ್ಲಿ ಮಾತನಾಡ್ಬಹುದು, ವಿಡಿಯೋ ಕಾಲ್ ಮಾಡ್ಬಹುದು ಆದ್ರೆ ಎಲ್ಲ ಸಮಯವನ್ನು ಅಂಟಿಕೊಂಡು ಕಳೆಯಲು ಆಗುವುದಿಲ್ಲ. ಹೀಗಾಗಿಯೇ ನೆನಪಿಗಾಗಿಯೇ ಪರಸ್ಪರ ಕೀ ಬಂಚ್, ಟೆಡ್ಡಿಬೇರ್, ಶರ್ಟ್, ಡ್ರೆಸ್ ಅಂತ ಎನೇನೋ ಗಿಫ್ಟ್ ಕೊಡ್ತಿರ್ತಾರೆ. ಸಂಗಾತಿ ಜೊತೆಗಿಲ್ಲದ ಸಂದರ್ಭದಲ್ಲಿ ಗಿಫ್ಟ್ (Gift(ಗಳನ್ನು ನೋಡಿ ಖುಷಿ ಪಡ್ತಾರೆ.
ಪ್ರೇಮಿ ಜೊತೆಗಿರದ ಸಮಯದಲ್ಲಿ ವಿರಹ ವೇದನೆ ಸಹಜ. ಒಬ್ಬ ಹುಡುಗಿ ತನ್ನ ಪ್ರೇಮಿಯನ್ನು ಮಿಸ್ ಮಾಡಿಕೊಳ್ತಿರುವ ಸಮಯದಲ್ಲಿ ಏನು ಆಲೋಚನೆ ಮಾಡ್ತಾಳೆ ಅಥವಾ ಏನು ಕೆಲಸ ಮಾಡ್ತಾಳೆ ಎಂಬುದು ನಿಮಗೆ ಗೊತ್ತಾ? ಲವ್ವರ್ (Lover) ಜೊತೆಗಿಲ್ಲದ ಸಮಯದಲ್ಲಿ ಹುಡುಗಿಯಾದವಳು ಏನೇನು ಮಾಡ್ತಾಳೆ ಎಂಬ ರಹಸ್ಯವನ್ನು ನಾವಿಂದು ಹೇಳ್ತೇವೆ.
ಕಾಂಡೋಮ್ ಮಾತ್ರವಲ್ಲ, ಒಲ್ಲದ ಪ್ರೆಗ್ನೆನ್ಸಿಗೆ ಬೈ ಹೇಳಲಿವೆ ನಾನಾ ಮಾರ್ಗಗಳು
ಬಾಯ್‌ಫ್ರೆಂಡ್ ನೆನಪಾದಾಗ ಹುಡುಗಿಯರು ಏನ್ ಮಾಡ್ತಾರೆ ?
ಸ್ನೇಹಿತರ ಮುಂದೆ ಗುಣಗಾನ : ಹುಡುಗ ಸಿಗದೆ ಅನುಭವಿಸುತ್ತಿರುವ ನೋವನ್ನು ಹುಡುಗಿ ಸ್ನೇಹಿತರ ಮುಂದೆ ಮಾತಿನ ಮೂಲಕ ಹೊರ ಹಾಕ್ತಾಳೆ. ಮಾತು ಮಾತಿಗೂ ಆತನನ್ನು ಎಳೆದು ತರ್ತಾಳೆ. ತಮ್ಮ ಪ್ರೀತಿಯ ವಿಷ್ಯವನ್ನು ಅವರ ಮುಂದೆ ಹೇಳ್ತಾ ಮತ್ತೊಮ್ಮೆ ಹಳೆ ನೆನಪನ್ನು ಮೆಲುಕು ಹಾಕ್ತಾಳೆ.
ಸಂಗಾತಿ ನೀಡಿದ ಉಡುಗೊರೆ : ಸಂಗಾತಿ ನೀಡಿದ ಉಡುಗೊರೆ ಮೇಲೆ ವಿಶೇಷ ಕಾಳಜಿಯಿರುತ್ತದೆ ನಿಜ. ಆದ್ರೆ ಎಷ್ಟೂ ದಿನಗಳ ಹಿಂದೆ ನೀಡಿದ ಉಡುಗೊರೆಯನ್ನು ಈಗ್ಲೂ ದಿಟ್ಟಿಸಿ ನೋಡ್ತಾಳೆ ಹುಡುಗಿ. ಇದು ಮಾತ್ರವಲ್ಲ ಆತ ಕಳುಹಿಸಿದ ಮೆಸ್ಸೇಜ್ ಅಥವಾ ಪತ್ರವನ್ನು ಕೂಡ ಪದೇ ಪದೇ ಓದುತ್ತಾಳೆ. ಈ ಮೂಲಕ ಆತ ತನ್ನ ಹತ್ತಿರವಿದ್ದಾನೆಂಬ ಭಾವನೆಗೊಳಗಾಗ್ತಾಳೆ.
ಸಾಮಾಜಿಕ ಜಾಲತಾಣ : ಹುಡುಗನನ್ನು ನೋಡ್ದೇ ಬೋರ್ ಆಗಿದೆ ಎನ್ನುವ ಸಂದರ್ಭದಲ್ಲಿ ಹುಡುಗಿಯರು ಮೊದಲು ಮಾಡುವ ಕೆಲಸ ಸಾಮಾಜಿಕ ಜಾಲತಾಣದ ಸ್ಟೇಟಸ್ ಚೆಕ್ ಮಾಡುವುದು. ಅರ್ಧ ಗಂಟೆಗೊಮ್ಮೆ ಹುಡುಗನ ಸ್ಟೇಟಸ್ ಚೆಕ್ ಮಾಡ್ತಾಳೆ. ಆತನ ಫೋಟೋ ನೋಡುವುದು. ಸಾಮಾಜಿಕ ಜಾಲತಾಣದಲ್ಲಿ ಆತ ಹಾಕಿರುವ ಪೋಸ್ಟ್ ಗೆ ಬೇರೆಯವರು ಏನು ಕಮೆಂಟ್ ಮಾಡಿದ್ದಾರೆ ಎಂಬುದನ್ನು ನೋಡುವುದು.
Love Breakup: ವಿವಾಹಿತನ ಜೊತೆ ಸಂಬಂಧ ಬೆಳೆಸಿ ನೋವುಂಡ ಹುಡುಗಿ
ಪ್ರಣಯದ ಕನಸು : ಹಗಲುಕನಸು ಕಾಣೋದ್ರಲ್ಲಿ ಹುಡುಗಿಯರು ಮುಂದಿದ್ದಾರೆ. ನಿಂತಲ್ಲಿ, ಕುಂತಲ್ಲಿ ಹುಡುಗಿಯರು ಕನಸು ಕಾಣ್ತಿರುತ್ತಾರೆ. ಇನ್ನು ಪ್ರೀತಿಯಲ್ಲಿ ಬಿದ್ದಾಗ ಕೇಳ್ಬೇಕಾ? ರೋಮ್ಯಾಂಟಿಕ್ ಕನಸುಗಳು ಒಂದಾದ್ಮೇಲೆ ಒಂದರಂತೆ ಬರ್ತಿರುತ್ತವೆ. ನೆಚ್ಚಿನ ಹೀರೋ ಸ್ಥಾನದಲ್ಲಿ ಹುಡುಗನನ್ನು ಕಲ್ಪಿಸಿಕೊಂಡು, ಸಿನಿಮಾ ಸ್ಟೈಲ್ ನಲ್ಲಿ ಕನಸು ಕಾಣ್ತಿರುತ್ತಾರೆ. ಹುಟ್ಟುಹಬ್ಬ ಅಥವ ಬೇರೆ ವಿಶೇಷ ದಿನಗಳನ್ನು ಹೇಗೆ ಎಂಜಾಯ್ ಮಾಡ್ಬೇಕು ಎಂಬ ಪ್ಲಾನ್ ಮಾಡ್ತಾಳೆ. ಇಷ್ಟಕ್ಕೆ ಸುಮ್ಮನಿರುವವಳು ಅವಳಲ್ಲ. ಅದನ್ನು ಸಂದೇಶದ ಮೂಲಕ ಸಂಗಾತಿಗೆ ಕಳುಹಿಸಿ,ಹಾಗೆ ಮಾಡೋಣ,ಹೀಗೆ ಮಾಡೋಣ ಅಂತಾ ತಲೆ ತಿನ್ನಲು ಶುರು ಮಾಡ್ತಾಳೆ.
ಮಾತನಾಡಲು ಕಾರಣದ ಹುಡುಕಾಟ : ಪ್ರೇಮಿಯ ಭೇಟಿಯಾಗಿ ಮೂರ್ನಾಲ್ಕು ದಿನ ಕಳೆದಿದ್ದರೆ ಹುಡುಗಿಯ ಚಡಪಡಿಕೆ ಹೆಚ್ಚಿರುತ್ತದೆ. ಪದೇ ಪದೇ ಪ್ರೇಮಿಗೆ ಮೆಸ್ಸೇಜ್ ಮಾಡುವುದು ಅಥವಾ ಸಣ್ಣ ಸಣ್ಣ ವಿಷ್ಯಕ್ಕೆ ಕರೆ ಮಾಡುವುದು ಮಾಡ್ತಾಳೆ. ಆ ಕಡೆಯಿಂದ ಸರಿಯಾಗಿ ರೆಸ್ಪಾನ್ಸ್ ಬರೆದ ಹೋದ್ರೆ ಕೋಪಗೊಳ್ತಾಳೆ. ಇಬ್ಬರ ಮಾತುಕತೆ ಗಂಟೆಗಟ್ಟಲೆ ನಡೆಯಲಿ,ತನ್ನ ಎಲ್ಲ ಮಾತುಗಳನ್ನು ಆತ ಕೇಳಲಿ ಎಂಬ ತುಡಿತ ಆಕೆಗಿರುತ್ತದೆ. ಇಲ್ಲಿನ ವಿಶೇಷವೆಂದ್ರೆ ಐ ಲವ್ ಯು ಎಂದು ಶುರುವಾಗುವ ಮಾತು ಐ ಲವ್ ಯುನಲ್ಲಿ ಅಂತ್ಯವಾಗುತ್ತದೆ.