ಡೋನಾಗೆ ಕ್ಲೀನ್‌ ಬೋಲ್ಡ್ ಆದ ಸೌರವ್ ಗಂಗೂಲಿ, 'ದಾದಾ' ಇಂಟ್ರೆಸ್ಟಿಂಗ್‌ ಲವ್ ಕಹಾನಿ

By Vinutha Perla  |  First Published May 11, 2023, 11:23 AM IST

ಕ್ರಿಕೆಟ್ ಲೋಕದಲ್ಲೂ ಅತ್ಯದ್ಭುತ ಪ್ರೇಮಕಥೆಗಳಿವೆ. ಅದರಲ್ಲೊಂದು ಸೌರವ್ ಗಂಗೂಲಿ-ಡೋನಾ ರಾಯ್ ಪ್ರೇಮಕಥೆ. ಭಾರತ ಕ್ರಿಕೆಟ್‌ ತಂಡದ ದಾದಾ ಎನಿಸಿಕೊಂಡಿದ್ದ ನಾಯಕನ ಇಂಟ್ರೆಸ್ಟಿಂಗ್ ಲವ್ ಕಹಾನಿ ಇಲ್ಲಿದೆ.


ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಇತ್ತೀಚೆಗೆ ಐಪಿಎಲ್ 2023ರ ಪಂದ್ಯದ ಸಂದರ್ಭದಲ್ಲಿ ಸುದ್ದಿಯಲ್ಲಿದ್ದರು, ಅಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ವಿರಾಟ್ ಕೊಹ್ಲಿಯೊಂದಿಗೆ ಕೈಕುಲುಕಿದ್ದು ಹೆಚ್ಚು ಸುದ್ದಿಯಾಯಿತು. ಈ ಮೂಲಕ ಇವರಿಬ್ಬರೂ ತಮ್ಮ ಸುದೀರ್ಘ ಕಾಲದ ಜಗಳವನ್ನು ಕೊನೆಗೊಳಿಸಿದರು ಎಂದೇ ಹೇಳಲಾಯಿತು. ಇಬ್ಬರು ಆಟಗಾರರ ಮಧ್ಯೆ ಹಲವು ಅಭಿಪ್ರಾಯ ವ್ಯತ್ಯಾಸವಿದ್ದರೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರಂತೆಯೇ ಸೌರವ್ ಗಂಗೂಲಿಯದ್ದೂ ಪ್ರೇಮ ವಿವಾಹವಾಗಿದೆ. ವಿರುಷ್ಕಾ ಮದುವೆಯ ಕಥೆಗಿಂತ ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಅವರ ಪ್ರೇಮಕಥೆ ಹೆಚ್ಚು ರೋಮ್ಯಾಂಟಿಕ್ ಆಗಿದೆ.

ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರ ಪ್ರೇಮಕಥೆಯು (Love story) ಯಾವುದೇ ಬಾಲಿವುಡ್ ಚಲನಚಿತ್ರಕ್ಕಿಂತ ಕಡಿಮೆಯೇನಿಲ್ಲ. ಇಬ್ಬರೂ ಹಲವು ಅಡೆತಡೆಗಳನ್ನು ಎದುರಿಸಿ, ಮನೆಯವರ ವಿರೋಧವನ್ನೂ ಲೆಕ್ಕಿಸದೆ ಮದುವೆ (Marriage)ಯಾಗಿದ್ದಾರೆ. ದಂಪತಿಗಳು ಮದುವೆಯಾಗಿ ಈಗ 25 ವರ್ಷಗಳು ಕಳೆದಿವೆ. ಕ್ರಿಯಾಶೀಲ ವ್ಯಕ್ತಿಯಾಗಿರುವ ಸೌರವ್ ಗಂಗೂಲಿ ತನ್ನ ಸಂಗಾತಿ ಡೋನಾ ಅವರೊಂದಿಗೆ ತನ್ನ ಜೀವನ (Life)ವನ್ನು ಕಳೆಯಲು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸೌರವ್‌-ಡೋನಾ ರೊಮ್ಯಾಂಟಿಕ್ ಲವ್ ಸ್ಟೋರಿ ಮತ್ತು ಅವರು ಪರಸ್ಪರ ಹೇಗೆ ಭೇಟಿ (Meet)ಯಾದರು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

Tap to resize

Latest Videos

ಕೊಹ್ಲಿ ಕುಳ್ಳಗೆ ಅಂತ, ಹೀಲ್ಸ್ ಧರಿಸದೆ ಬಂದಿದ್ರು ಅನುಷ್ಕಾ: ಹೀಗಿತ್ತು ವಿರುಷ್ಕಾ ಮೊದಲ ಭೇಟಿ

ಸೌರವ್ ಗಂಗೂಲಿ ಮತ್ತು ಡೋನಾ ಗಂಗೂಲಿ ಪ್ರೇಮಕಥೆ
ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ ಅವರು ಡೋನಾ ಅವರನ್ನು ಹಲವು ವರ್ಷಗಳಿಂದ ತಿಳಿದಿದ್ದರು. ಚಿಕ್ಕಂದಿನಿಂದಲೂ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಸೌರವ್‌ ಗಂಗೂಲಿಗೆ ಚಿಕ್ಕಂದಿನಿಂದಲೇ ಡೋನಾ ಮೇಲೆ ಪ್ರೀತಿ (Love)ಯಾಗಿತ್ತು ಎಂಬುದಾಗಿ ಅವರು ಹೇಳಿದ್ದಾರೆ. ಸೌರವ್ ಗಂಗೂಲಿ, ತನ್ನ ಸ್ನೇಹಿತರೊಂದಿಗೆ ಫುಟ್‌ಬಾಲ್ ಆಡಲು ಹೋಗುತ್ತಿದ್ದಾಗ, ಡೋನಾ ಅವರನ್ನು ನೋಡಲು ಅವರ ಮನೆಯ ಮೂಲಕ ಹಾದು ಹೋಗುತ್ತಿದ್ದರು. ಸೌರವ್ ಒಮ್ಮೆ ತನ್ನ ಬ್ಯಾಡ್ಮಿಂಟನ್ ಷಟಲ್ ಕಾಕ್‌ನ್ನು ರಾಯ್ ಮನೆಯೊಳಗೆ ಎಸೆದ ಕಾರಣ ಡೋನಾ ಜೊತೆ ಮಾತನಾಡಲು ಸಾಧ್ಯವಾಯಿತು. ಅಲ್ಲಿ ಇಬ್ಬರೂ ಪರಸ್ಪರ ಮಾತನಾಡಿ ಫಸ್ಟ್ ಡೇಟ್‌ಗೆ ಹೋಗಲು ನಿರ್ಧರಿಸಿದರು.

ಒಡಿಸ್ಸಿ ನೃತ್ಯಗಾರ್ತಿಯಾಗಿರುವ ಡೋನಾ ರಾಯ್ ಅವರು ಸೌರವ್ ಗಂಗೂಲಿ ಅವರೊಂದಿಗೆ ಚೈನೀಸ್ ರೆಸ್ಟೋರೆಂಟ್‌ನಲ್ಲಿ ತಮ್ಮ ಫಸ್ಟ್ ಡೇಟ್‌ಗೆ ಹೋದರು. ಅಲ್ಲಿ ಅವರು ತುಂಬಾ ಆಹಾರವನ್ನು ಆರ್ಡರ್ ಮಾಡಿ ಖುಷಿಯಾಗಿ ಎಂಜಾಯ್ ಮಾಡಿದರು. ಆ ನಂತರ ಸತತವಾಗಿ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಗಾಢವಾಗಿ ಪ್ರೀತಿಸುತ್ತಿದ್ದರು ಮತ್ತು ಸೌರವ್ ಗಂಗೂಲಿ ಇಂಗ್ಲೆಂಡ್‌ನಲ್ಲಿ ನಡೆದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕಾಗಿ ಚೊಚ್ಚಲ ಪಂದ್ಯಕ್ಕೆ ತೆರಳಿದರು.

Love story: ಪೋಲಿಸ್‌ ಕಮಿಷನರ್‌ ಮಗಳಿಗೆ ಬೋಲ್ಡ್‌ ಆದ ಕ್ರಿಕೆಟರ್‌ ಮಯಾಂಕ್ ಅಗರ್ವಾಲ್

ಸೌರವ್ ಗಂಗೂಲಿ ಮತ್ತು ಡೋನಾ ರಾಯ್ ಅವರ ಕುಟುಂಬವು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣ ಇಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು. ಅವರ ಕುಟುಂಬಗಳು ಪರಸ್ಪರ ದ್ವೇಷಿಸುತ್ತಿದ್ದರು. ಹೀಗಾಗಿ ಸೌರವ್‌ ಮತ್ತು ಡೋನಾ  ಮದುವೆಯಾಗುವುದನ್ನು ನಿರಾಕರಿಸಿದರು. ಇದರ ಹೊರತಾಗಿಯೂ, ಸೌರವ್ ಇಂಗ್ಲೆಂಡ್‌ನಿಂದ ಹಿಂತಿರುಗಿದಾಗ, ತಮ್ಮ ಸ್ನೇಹಿತರ ಜೊತೆ ರಹಸ್ಯ ಸ್ಥಳದಲ್ಲಿ ಡೋನಾ ಜೊತೆ ಮದುವೆಯಾಗಲು ನಿರ್ಧರಿಸಿದರು.

ಮದುವೆಯಾದ ನಂತರವೂ ಇಬ್ಬರು ತಮ್ಮ ಮದುವೆಯನ್ನು ತಮ್ಮ ಪೋಷಕರಿಂದ ಬಹಳ ಸಮಯದವರೆಗೆ ಮುಚ್ಚಿಟ್ಟಿದ್ದರು. ಆದರೆ ಕೊನೆಗೊಮ್ಮೆ ಎಲ್ಲವನ್ನೂ ಮನೆಯಲ್ಲಿ ವಿವರಿಸಿ ಹೇಳಿದರು. ಹೀಗಿತ್ತು ದಾದಾ ಲವ್‌ ಸ್ಟೋರಿ.

click me!