ಬ್ರೇಕಪ್ ಮಾಡ್ಕೊಂಡ ಗರ್ಲ್‌ಫ್ರೆಂಡ್, ಆಕೆಗಾಗಿ ಖರ್ಚು ಮಾಡಿದ ಹಣ ವಾಪಾಸ್‌ ಕೇಳಿದ ಹುಡುಗ!

By Vinutha Perla  |  First Published May 10, 2023, 2:14 PM IST

ಲವರ್ಸ್‌ಗಾಗಿ ಹುಡುಗರು ನೀರಿನಂತೆ ಹಣ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಆದರೆ ಇಷ್ಟೆಲ್ಲಾ ಪ್ರೀತಿಯಿದ್ರೂ ಕೆಲವೊಮ್ಮೆ ಬ್ರೇಕಪ್ ಆಗಿಬಿಡುತ್ತದೆ. ಹಾಗೆಯೇ ಇಲ್ಲೊಬ್ಬ ಹುಡುಗ, ತನ್ನಿಂದ ಬ್ರೇಕಪ್ ಮಾಡ್ಕೊಂಡ ಹುಡುಗಿ, ತಾನು ಆಕೆಗಾಗಿ ಖರ್ಚು ಮಾಡಿದ ಹಣ ವಾಪಾಸ್ ಕೊಡುವಂತೆ ಹೇಳಿದ್ದಾನೆ.


ಪ್ರೀತಿಯಲ್ಲಿರುವುದು ತುಂಬಾ ಖುಷಿಯನ್ನು ನೀಡುತ್ತದೆ. ಮಾಲ್, ಮೂವಿ, ಡೇಟ್ ಅಂತ ಸುತ್ತಾಡುವುದು ಚೆನ್ನಾಗಿರುತ್ತದೆ. ಆದರೆ ಹೀಗೆ ಎಂಜಾಯ್ ಮಾಡಲು ತುಂಬಾ ಹಣ ಸಹ ಖರ್ಚಾಗುತ್ತದೆ. ಸಾಮಾನ್ಯವಾಗಿ ಹುಡುಗರು ಇಂಥಾ ಸಂದರ್ಭದಲ್ಲಿ ಹಣ ಖರ್ಚು ಮಾಡುತ್ತಾರೆ. ಸ್ಟೂಡೆಂಟ್‌ ಆಗಿದ್ದರೂ, ಉದ್ಯೋಗದಲ್ಲಿದ್ದರೂ ಹುಡುಗಿಗಾಗಿ ಕಾಸ್ಟ್ಲೀ ಬಟ್ಟೆ, ಜ್ಯುವೆಲ್ಸ್, ಮೊಬೈಲ್ ಹಾಗೂ ಇತರ ಗಿಫ್ಟ್‌ಗಳನ್ನು ಕೊಡಿಸುತ್ತಾರೆ. ಸಂಬಂಧದಲ್ಲಿ, ಕಪಲ್ಸ್‌ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಪರಸ್ಪರ ಹೂಡಿಕೆ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಒಬ್ಬರಿಗೊಬ್ಬರು ಸಮಯ ಕಳೆಯುವುದರಿಂದ ಹಿಡಿದು, ಅಮೂಲ್ಯವಾದ ಉಡುಗೊರೆಗಳನ್ನು ಖರೀದಿಸುವುದು ಅಥವಾ ಡೇಟ್ಸ್‌ಗೆ ಹೋಗುವುದು ಎಲ್ಲವನ್ನೂ ಒಟ್ಟಿಗೆ ಮಾಡುತ್ತಾರೆ. 

ಹೀಗೆ ಸಮಯ ಕಳೆಯುವಾಗ ಹೆಚ್ಚಾಗಿ ಹುಡುಗರೇ (Boys) ಖರ್ಚು ಮಾಡುವುದು ವಾಡಿಕೆ. ಸಾಲ ಮಾಡಿಯಾದರೂ ಹುಡುಗಿಯನ್ನು ಸುತ್ತಾಡಿಸಲು ಸಮಯ ಹೊಂದಿಸುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿಯಾದ ಮೇಲೂ ಕೆಲವೊಮ್ಮೆ ಇಬ್ಬರ ನಡುವೆ ಹೊಂದಾಣಿಕೆಯಾಗದಿದ್ದಾಗ ಬ್ರೇಕಪ್ ಆಗಿಬಿಡುತ್ತದೆ. ಹೀಗೆ ಬ್ರೇಕಪ್ ಆದ ನಂತರ ಮತ್ತೇನು ಮಾಡುವಂತಿಲ್ಲ. ಇಬ್ಬರೂ ಬೇರೆ ಬೇರೆ ದಾರಿಯಲ್ಲಿ ಜೀವನ (Life) ಸಾಗಿಸಬೇಕಾಗುತ್ತದೆ.

Tap to resize

Latest Videos

ಬ್ರೇಕಪ್ ಲೆಟರ್ ಬರೆದ ಹುಡುಗ, ವಾವ್ಹ್‌..ಮತ್ತೆ ಲವ್ವಾಯ್ತು ಅಂದ್ಲು ಹುಡುಗಿ!

ಬ್ರೇಕಪ್ ಆದ ನಂತರ ಮಾಜಿ ಗರ್ಲ್‌ಫ್ರೆಂಡ್ ಬಳಿಯಿಂದ ಹಣ ಕೇಳಿದ
ಆದರೆ, ಇದೆಲ್ಲಕ್ಕಿಂತ ವಿಭಿನ್ನವಾಗಿ ಇಲ್ಲೊಬ್ಬ ವ್ಯಕ್ತಿ ಬ್ರೇಕಪ್ ಆದ ನಂತರ ಮಾಜಿ ಗರ್ಲ್‌ಫ್ರೆಂಡ್ ಬಳಿಯಿಂದ ಖರ್ಚಾದ ಹಣವನ್ನು (Money) ವಾಪಾಸ್ ಕೇಳಿದ್ದಾನೆ. ಆಸ್ಟ್ರೇಲಿಯದ ಅಡಿಲೇಡ್‌ನಲ್ಲಿ ವಾಸಿಸುವ ಆಯ್ಲೆ ತನ್ನ ಸಂಗಾತಿ ಅಲೆಕ್ಸ್‌ನೊಂದಿಗೆ ಸಂಬಂಧ ಹೊಂದಿದ್ದಳು. ಇತ್ತೀಚಿಗಷ್ಟೇ ಆತನಿಂದ ದೂರವಾಗಿದ್ದಳು. ಸ್ಪಲ್ಪ ದಿನಗಳ ನಂತರ ಆಕೆಗೆ ಮಾಜಿ ಬಾಯ್‌ಫ್ರೆಂಡ್ ಆಕೆಗೆ ಖರ್ಚು ಮಾಡಿದ ಹಣದ ಲಿಸ್ಟ್‌ನ್ನು ಕಳುಹಿಸಿಕೊಟ್ಟಿದ್ದಾನೆ. ಮಾತ್ರವಲ್ಲ ಅದರಲ್ಲಿ ಅರ್ಧ ಹಣವನ್ನು ಪಾವತಿಸುವಂತೆ ಹೇಳಿದ್ದಾನೆ.

ಇದನ್ನು ಉಲ್ಲೇಖಿಸಿ ಆಯ್ಲೆ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾಳೆ. ಮಾತ್ರವಲ್ಲ ತಮ್ಮ ಸಂಬಂಧದ ಸಮಯದಲ್ಲಿ ತನಗಾಗಿ ಖರ್ಚು ಮಾಡಿದ ಎಲ್ಲಾ ಖರ್ಚುಗಳನ್ನು ಒಳಗೊಂಡಿರುವ ದೀರ್ಘ ಪಟ್ಟಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಇಂಧನ, ಆಹಾರ, ನೀರು ಮತ್ತು ಸಿನಿಮಾ ಟಿಕೆಟ್‌ಗಳ ವೆಚ್ಚವೂ ಸೇರಿದೆ. ಈಗ, ಅಲೆಕ್ಸ್‌ ತನ್ನ ಮಾಜಿ ಗೆಳತಿ ಒಟ್ಟಿಗೆ ಇಲ್ಲದ ಕಾರಣ ಅರ್ಧದಷ್ಟು ಖರ್ಚನ್ನು ಆಕೆ ಪಾವತಿಸಲು ಬಯಸುತ್ತಾನೆ. 

ಅಬ್ಬಬ್ಬಾ...! ಈ ನಟನ ಲವ್​ ಬ್ರೇಕಪ್​ ಪತ್ರ 13 ಲಕ್ಷ ರೂ.ಗೆ ಮಾರಾಟ...

ಡಿವೋರ್ಸ್‌ ಆಯ್ತೆಂದು ಫೋಟೋಗ್ರಾಫರ್‌ಗೆ ಹಣ ವಾಪಸ್ ನೀಡುವಂತೆ ಕೇಳಿದ ಮಹಿಳೆ
ಮದುವೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತದೆ. ಅದರಲ್ಲೂ ಮದುವೆಯ ಫೋಟೋಶೂಟ್ ಪ್ರೀವೆಡ್ಡಿಂಗ್ ಫೋಟೋಶೂಟ್‌ಗೆ ಲಕ್ಷ ಲಕ್ಷ ಸುರಿಯುವ ಜೋಡಿಗಳಿದ್ದಾರೆ. ನೆನಪುಗಳನ್ನು ಚಿರಕಾಲ ಸಿಹಿಯಾಗಿಡಲು ಜನ ಫೋಟೋಗ್ರಾಫರ್ ಮೊರೆ ಹೋಗುತ್ತಿದ್ದು, ತಮಗೆ ಬೇಕಾದಂತೆ ಬೇಕಾದ ಸ್ಟೈಲ್‌ಗಳಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಮದುವೆಯಾಗಿ ವಿಚ್ಛೇದನಕ್ಕೆ ಒಳಗಾದ ಮಹಿಳೆಯೊಬ್ಬರು ಫೋಟೋಗ್ರಾಫರ್ ಬಳಿ ತಾನೂ ಫೋಟೋಶೂಟ್‌ಗೆ ವೆಚ್ಚ ಮಾಡಿದ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಾರೆ.

ಈ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಸ್ವತಃ ಫೋಟೋಗ್ರಾಫರ್‌ರೇ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.  LanceRomeoPhotography (@LanceRomeo) ಎಂಬ ಹೆಸರಿನ ಖಾತೆ ಹೊಂದಿರುವ ಫೋಟೋಗ್ರಾಫರ್ ಮಹಿಳೆ ಹಣ ರೀಫಂಡ್ ಮಾಡುವಂತೆ ಕೇಳಿ ಮಾಡಿದ್ದ ಮೆಸೇಜ್‌ನ್ನ ಸ್ಕ್ರೀನ್‌ಶಾಟ್ ತೆಗೆದು ಹಾಕಿದ್ದು, ಇದನ್ನು ನೋಡಿದ ನೆಟ್ಟಿಗರು ಅಚ್ಚರಿಯ ಜೊತೆ ಹಾಸ್ಯದ ಕಾಮೆಂಟ್ ಮಾಡಿದ್ದಾರೆ. 

click me!