ದೆಹಲಿ ಮೆಟ್ರೋ ಇತ್ತೀಚಿಗೆ ವಿಚಿತ್ರ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಕೆಲದಿನಗಳ ಹಿಂದೆ ಹುಡುಗರು ಸ್ಕರ್ಟ್ ಧರಿಸಿ ಮೆಟ್ರೋ ಹತ್ತಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದಕ್ಕೂ ಮೊದಲು ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳೋ ದೃಶ್ಯ ಸೆರೆಯಾಗಿತ್ತು. ಸದ್ಯ ದೆಹಲಿ ಮೆಟ್ರೋದಲ್ಲಿ ಜೋಡಿ ಮೈ ಮರೆತು ಲಿಪ್‌ಲಾಕ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
ನವದೆಹಲಿ: ದೆಹಲಿ ಮೆಟ್ರೋ ಇತ್ತೀಚಿಗೆ ಹಲವು ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ. ಅರೆಬರೆ ಬಟ್ಟೆ ತೊಟ್ಟುಕೊಂಡು ಮೆಟ್ರೋ ಏರಿದ್ದ ರಿದಂ ಚನ್ನಾ ಎನ್ನುವ ಹುಡುಗಿಯ ವೇಷಕ್ಕೆ ಟ್ವಿಟರ್‌ನಲ್ಲಿ ಪರ-ವಿರೋಧದ ಕಾಮೆಂಟ್‌ಗಳು ಬಂದಿದ್ದವು. ಅದಕ್ಕೂ ಮುನ್ನ, ಇಬ್ಬರು ಪ್ರಯಾಣಿಕರ ನಡುವೆ ಯಾವುದೇ ಕಾರಣಕ್ಕೆ ನಡೆದ ಜಗಳ ವಿಪರೀತಕ್ಕೆ ಹೋಗಿದ್ದರಿಂದ ಮಹಿಳೆಯೊಬ್ಬಳು ಪೆಪ್ಪರ್ ಸ್ಪ್ರೇ ಹಾಕಿದ್ದ ಘಟನೆ ಕೂಡ ನಡೆದಿತ್ತು. ಈಗ ಮತ್ತೊಮ್ಮೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ. ಈಗ ಬಾರಿಯ ವಿಡಿಯೋ ನೋಡಿದ ನೆಟ್ಟಿಗರು, ಸ್ವಲ್ಪನಾದ್ರೂ ಸಂಸ್ಕೃತಿ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು, ದೇಶದಲ್ಲಿ ಸಂಸ್ಕೃತಿ ಅನ್ನೋದು ದೆಹಲಿ ಮೆಟ್ರೋ ಏರುವಾಗಿ ಕೊನೆಯಾಗುತ್ತದೆ ಎಂದು ಟೀಕೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲವರ್‌ಗಳು ಕೈಕೈ ಹಿಡಿದುಕೊಂಡು ಮೆಟ್ರೋದ ಸೀಟ್‌ನಲ್ಲಿ ಕುಳಿತಿದ್ದು, ಸುತ್ತಲಿನ ಜನರ ಪರಿವೇ ಇಲ್ಲದೇ, ಲಿಪ್‌ಲಾಕ್ ಮಾಡುತ್ತಾ, ರೊಮಾನ್ಸ್ ಮಾಡುತ್ತಿದ್ದಾರೆ.
ಜನನಿಬಿಡ ದೆಹಲಿಯ ಮೆಟ್ರೋದಲ್ಲಿ ಜೋಡಿಯ ಲಿಪ್‌ಲಾಕ್
ಜನನಿಬಿಡ ದೆಹಲಿಯ ಮೆಟ್ರೋ ಕೋಚ್‌ನಲ್ಲಿ ಜೋಡಿ ಲಿಪ್‌ಲಾಕ್ (Couple liplock) ಮಾಡುವ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೆಟ್ರೋ ರೈಲಿನಲ್ಲಿ ಸಾರ್ವಜನಿಕವಾಗಿ ಕಿಸ್ ಮಾಡುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ದೆಹಲಿ ಮೆಟ್ರೋವು ಪ್ರಯಾಣದ (Travel) ಹೊರತಾಗಿ ಇತರ ಚಟುವಟಿಕೆಗಳ ತಾಣವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
undefined
ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಬಂದು ಎಲ್ಲರೂ ಕತ್ತು ಕೊಂಕಿಸಿ ನೋಡುವಂತೆ ಮಾಡಿದ ಹುಡುಗರು
ವೈರಲ್ ಆಗಿರುವ ವೀಡಿಯೋದಲ್ಲಿ ಹುಡುಗ, ತನ್ನ ಮಡಿಲಲ್ಲಿ ತಲೆಯಿಟ್ಟು ಮಲಗಿರುವ ಹುಡುಗಿಗೆ ಕಿಸ್ ಮಾಡುವ ದೃಶ್ಯ ಕಾಣಿಸುತ್ತದೆ. ಮೆಟ್ರೋ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಇದೆಲ್ಲದರ ಮಧ್ಯೆಯೂ ಜೋಡಿ ಮೈ ಮರೆತು ಲಿಪ್‌ಲಾಕ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನೆಟಿಜನ್‌ಗಳು ತಮ್ಮ ಆಕ್ರೋಶವನ್ನು (Angry) ವ್ಯಕ್ತಪಡಿಸಿದ್ದಾರೆ.
ಒಬ್ಬರು, 'ನೀವು ದೆಹಲಿ ಮೆಟ್ರೋದ ಹೆಸರನ್ನು P0rnHub ಎಂದು ಏಕೆ ಬದಲಾಯಿಸಬಾರದು' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು. 'OMG WHAT' ಇದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಸಾರ್ವಜನಿಕರು (Public) ಸಂಚರಿಸುವ ಮೆಟ್ರೋದಲ್ಲಿ ಈ ರೀತಿಯ ಘಟನೆ ನಡೆದರೂ ಜನರು ಯಾಕೆ ಮೌನವಾಗಿದ್ದಾರೆ. ಅವರ ವಿರುದ್ಧ ಒಂದು ಮಾತನ್ನೂ ಹೇಳುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ. ಮೂರನೇ ಬಳಕೆದಾರರು, 'ಇದು ನಿಜವಾದ ಪ್ರೀತಿಯೇ ಅಥವಾ ವೈರಲ್ ಆಗಲು ಮಾಡುತ್ತಿರುವ ಉಪಾಯವೇ' ಎಂದಿದ್ದಾರೆ.
ದೆಹಲಿ ಮೆಟ್ರೋದಲ್ಲೇ ಹಸ್ತ ಮೈಥುನ ಮಾಡ್ಕೊಂಡ ವ್ಯಕ್ತಿ ವಿರುದ್ಧ ದೂರು ದಾಖಲು
ದೆಹಲಿ ಮೆಟ್ರೋದಲ್ಲಿ ಇಂಥಾ ಘಟನೆ ಹೊಸತೇನಲ್ಲ
ಈ ಹಿಂದೆಯೂ ಒಮ್ಮೆ, ದೆಹಲಿ ಮೆಟ್ರೋ ಟ್ರೇನ್‌ನಲ್ಲಿ ಇಂಥಹದ್ದೇ ಘಟನೆ ನಡೆದಿತ್ತು. ಇದಕ್ಕೆ ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದು, 'ಭಾರತದಲ್ಲಿ ಇಂದು ಆಗುತ್ತಿರುವ ಬಹಳಷ್ಟು ಸಂಗತಿಗಳ ಮೂಲ ತಾಣ ದೆಹಲಿ ಮೆಟ್ರೋ. ಸೀಟ್‌ಗಾಗಿ ಇಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದರು. ಒಬ್ಬ ಹೆಚ್ಚೂ ಕಡಿಮೆ ಬೆತ್ತಲೆಯಾಗಿಯೇ ಪ್ರಯಾಣ ಮಾಡಿದ್ದ, ಹುಡುಗಿಯೊಬ್ಬಳು ಬೋಲ್ಡ್ ಆಗಿ ಹೇಳಿಕೆ ನೀಡುತ್ತಾರೆ. ಈಗ ಲವರ್‌ಗಳು ಸಾರ್ವಜನಿಕವಾಗಿಯೇ ಲಿಪ್ ಲಾಕ್ ಮಾಡಿಕೊಂಡಿಕೊಂಡಿದ್ದಾರೆ. ಒಟ್ಟಾರೆ ಪ್ರತಿದಿನದ ಮನರಂಜನೆಗೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಸ್ಕತಿ ಅನ್ನೋದು ಇಲ್ಲಿ ಬದಲಾಗುತ್ತದೆ' ಎಂದು ಬರೆದುಕೊಂಡಿದ್ದರು
ಇದರ ನಡುವೆ ಇನ್ನೊಬ್ಬ ವ್ಯಕ್ತಿ ಭಿನ್ನ ಅಭಿಪ್ರಾಯ ನೀಡಿದ್ದ. "ದೆಹಲಿ ಮೆಟ್ರೋದಲ್ಲಿ ಜೋಡಿಗಳು ಚುಂಬಿಸುತ್ತಿರುವ ವೀಡಿಯೊವನ್ನು ಇತ್ತೀಚೆಗೆ ಟ್ವಿಟರ್‌ನಲ್ಲಿ(Twitter) ಇದು ಸಾಂಸ್ಕೃತಿಕ ನರಮೇಧ ಎಂದು ಹೇಳಿಕೊಂಡು ಶೇರ್ ಮಾಡಿಕೊಳ್ಳಲಾಗುತ್ತಿದೆ. ನಾನು ಮೊದಲ ಬಾರಿಗೆ ಯುರೋಪ್‌ಗೆ ಭೇಟಿ ನೀಡಿದಾಗ, ಜನರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದನ್ನು ನೋಡಿ ನನಗೆ ಸಂತೋಷವಾಯಿತು. ಇದಕ್ಕೆ ಸಾಕ್ಷಿಯಾಗುವುದು ನನಗೆ ಖುಷಿಯ ವಿಷಯ' ಎಂದು ಬರೆದುಕೊಂಡಿದ್ದರು.
Why don't you change the name of Delhi Metro to P0rnHub.
"OMG WHAT" is this ?? pic.twitter.com/hiRiAzGyjR