ಐಐಟಿಯಲ್ಲಿ ಓದಿದ್ರೂ, ಸಾಧು-ಸಂತರಾಗಿರೋ ಈ ಜನ ಸಮಾಜ ಸೇವೆಯಲ್ಲೇ ನಿರತ

By Suvarna News  |  First Published Dec 22, 2023, 5:59 PM IST

ಜೀವನದಲ್ಲಿ ಅತ್ಯುನ್ನತ ಶಿಕ್ಷಣ, ಅತ್ಯುನ್ನತ ಹುದ್ದೆಗಳನ್ನು ನೋಡಿದ ಮೇಲೆ ಇನ್ನೇನಿದೆ ಎನ್ನುವ ವಿರಕ್ತಿ ಇವರಿಗೆ ಮೂಡಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಐಐಟಿಯಂತಹ ಸಂಸ್ಥೆಗಳಲ್ಲಿ ಓದಿ, ಉತ್ತಮ ಉದ್ಯೋಗದಲ್ಲಿದ್ದರೂ ಎಲ್ಲ ಬಿಟ್ಟು ಸಾಧುವಾದವರು ಈ ಮಹಾನ್ ವ್ಯಕ್ತಿಗಳು.
 


ನಮ್ಮ ದೇಶದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿವೆ ಐಐಟಿಗಳು. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಹಗಲಿರುಳು ಶ್ರಮಪಟ್ಟು ಜೆಇಇ ಪರೀಕ್ಷೆ ಬರೆಯುತ್ತಾರೆ. ದೇಶದಲ್ಲಿ ಪ್ರಸ್ತುತ, 23  ಐಐಟಿಗಳು ಕಾರ್ಯನಿರ್ವಹಿಸುತ್ತಿವೆ. ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಖರಗ್ ಪುರ, ಐಐಟಿ ದೆಹಲಿ ಮುಂತಾದ ಐಐಟಿಗಳು ಅತ್ಯಂತ ಹಳೆಯ ಸಂಸ್ಥೆಗಳಾಗಿದ್ದು, ಬಹಳ ಬೇಡಿಕೆ ಹೊಂದಿವೆ. ಇವುಗಳಲ್ಲಿ ಶಿಕ್ಷಣ ಪೂರೈಸಿದವರಿಗೆ ಉತ್ತಮ ಸಂಬಳದ ಉದ್ಯೋಗ ಕಾದಿರುತ್ತದೆ. ಆದರೆ, ಅಂತಹ ಅತ್ಯುನ್ನತ ಶಿಕ್ಷಣ ಪೂರೈಸಿ, ಉತ್ತಮ ಉದ್ಯೋಗವನ್ನೂ ತೊರೆದು ಯಾವುದೂ ಬೇಡ ಎನ್ನುವಂತೆ ಸಾಧು ಸಂತರಾಗಿ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಜನರಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಅವರಲ್ಲಿ ಕೆಲವು ಜನರನ್ನು ಪ್ರಮುಖವಾಗಿ ಗುರುತಿಸಬಹುದು ಹಾಗೂ ಅವರಲ್ಲಿ ಬಹಳಷ್ಟು ಜನ ಇಸ್ಕಾನ್ ಸಂಸ್ಥೆಯಲ್ಲಿದ್ದಾರೆ.
 
•    ಗೌರಂಗದಾಸ್ (Gauranga Das)
ಇವರು ಆಧ್ಯಾತ್ಮಿಕ (Spiritual) ಗುರು, ಮೈಂಡ್ ಫುಲ್ ಮೆಡಿಟೇಷನ್ (Mindful Meditation) ತಜ್ಞರು. ಪ್ರಸ್ತುತ, ಇಸ್ಕಾನ್ ನ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಸ್ಥಿರತೆ ಮತ್ತು ಸಮಾಜ ಕಲ್ಯಾಣಕ್ಕಾಗಿ (Social Welfare)  ಸೇವೆ ಸಲ್ಲಿಸುತ್ತಿದ್ದಾರೆ. ಇವರು 1989-93ರಲ್ಲಿ ಐಐಟಿ ಬಾಂಬೆಯಿಂದ (IIT Bombay) ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು.

ಭಾರತದ ರೈತ ಕುಟುಂಬದಲ್ಲಿ ಹುಟ್ಟಿದ ಈತ ಇಂದು ಅಮೆರಿಕದ ಎರಡು ಕಂಪನಿಗಳ ಮಾಲೀಕ; ಈತನ ಆಸ್ತಿ ಎಷ್ಟು ಗೊತ್ತಾ?

Tap to resize

Latest Videos

undefined

•    ಸ್ವಾಮಿ ಮುಕುಂದಾನಂದ (Swami Mukundananda)
ಆಧ್ಯಾತ್ಮಿಕ ಗುರು, ಲೇಖಕರು (Writer) ಹಾಗೂ ವೇದ ಪಾರಂಗತರಾಗಿದ್ದಾರೆ. ಜಗದ್ಗುರು ಕೃಪಾಳು ಯೋಗದ ಸ್ಥಾಪಕರಾಗಿದ್ದಾರೆ. ಹಲವು ಕೃತಿಗಳನ್ನು ಬರೆದಿದ್ದಾರೆ. ಇವರು ಐಐಟಿ ದೆಹಲಿಯಿಂದ (IIT Delhi) ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದು, ಕೋಲ್ಕತದ ಐಐಎಂನಲ್ಲೂ ಅಧ್ಯಯನ (Study) ಮಾಡಿದ್ದಾರೆ. 

•    ಮಧು ಪಂಡಿತ ದಾಸ (Madhu Pandit Das)
ಬೆಂಗಳೂರು ಇಸ್ಕಾನ್ (ISKON) ಸಂಸ್ಥೆಯ ಮುಖ್ಯಸ್ಥರಾಗಿರುವ ಮಧು ಪಂಡಿತ ದಾಸರು ಅಕ್ಷಯ ಪಾತ್ರ ಫೌಂಡೇಷನ್ನಿನ ಸ್ಥಾಪಕರು ಹಾಗೂ ಅಧ್ಯಕ್ಷರು. ಇವರು ಐಐಟಿ ಬಾಂಬೆಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.

•    ಖುರ್ಷಿದ್ ಬಟ್ಲಿವಾಲಾ (Khurshid Batliwala)
ಇವರು ಲೇಖಕರು, ಸ್ಪೀಕರ್, ಖಾಸಗಿ ಕೋಚ್, ಹೀಲರ್ (Healer) ಆಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ನಲ್ಲಿ ಧ್ಯಾನದ ಶಿಕ್ಷಕರಾಗಿ (Teacher) ಸೇವೆ ಸಲ್ಲಿಸುತ್ತಿದ್ದಾರೆ. ಇವರು ಐಐಟಿ ಬಾಂಬೆಯಲ್ಲಿ ಎಂಎಸ್ಸಿ ಮಾಡಿದ್ದಾರೆ. 

•    ಮನನ್ ಎಂ.ಜೆ. (Manan MJ)
ಗಣಿತಜ್ಞರಾಗಿರುವ (Mathematician) ಇವರು ಟಾಟಾ ಇನ್ಸ್ ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ರಾಮಕೃಷ್ಣ ಆರ್ಡರ್ ಸಂಸ್ಥೆಯ ಸಾಧುವಾಗಿದ್ದು, ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (Award) ಹಾಗೂ ಇನ್ಫೋಸಿಸ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮನನ್ ಓದಿದ್ದು ಐಐಟಿ ಕಾನ್ಪುರ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕಲಿಯಲ್ಲಿ.

ಎಲಾನ್‌ ಮಸ್ಕ್‌ಗೆ ಸ್ಪರ್ಧೆ ನೀಡುವಂಥಾ 1300 ಕೋಟಿಯ ಬೃಹತ್‌ ಕಂಪೆನಿ ಆರಂಭಿಸಿದ ಇಸ್ರೋ ಮಾಜಿ ಉದ್ಯೋಗಿ!

•    ಆಚಾರ್ಯ ಪ್ರಶಾಂತ್ (Acharya Prashant)
ಪ್ರಶಾಂತ್ ಅದ್ವೈತ ಫೌಂಡೇಷನ್ ಸ್ಥಾಪನೆ ಮಾಡಿರುವ ಇವರು, ಅದ್ವೈತವನ್ನು ಬೋಧಿಸುತ್ತಾರೆ. ಗೀತೆಯ 17 ರೂಪಗಳು ಹಾಗೂ ಉಪನಿಷತ್ತಿನ 60 ವಿಧಗಳನ್ನು ತಿಳಿಸಬಲ್ಲರು. ಐಐಟಿ ದೆಹಲಿ ಹಾಗೂ ಐಐಎಂ ಅಹಮದಾಬಾದ್ ನಲ್ಲಿ ಓದಿದ್ದಾರೆ.

•    ರಾಧೇಶ್ಯಾಮ್ ದಾಸ್ (Radheshyam Das)
ಪುಣೆಯ ಇಸ್ಕಾನ್ ಅಧ್ಯಕ್ಷರಾಗಿರುವ ಇವರು, ಯುವಕರಿಗೆ ಆಪ್ತಸಮಾಲೋಚನೆ (Counselling) ಮಾಡುತ್ತಿದ್ದು, ಕಾರ್ಪೋರೇಟ್ ಸಂಸ್ಥೆಗಳಿಗೂ ಸಲಹಾಕಾರರಾಗಿದ್ದಾರೆ. ಐಐಟಿ ಬಾಂಬೆಯಲ್ಲಿ ಎಂಟೆಕ್ ಮಾಡಿದ್ದಾರೆ.

•    ರಸನಾಥ್ ದಾಸ್ (Rasanath Das)
ಮೊದಲು ಬ್ಯಾಂಕರ್ ಆಗಿದ್ದವರು ರಸನಾಥ್ ದಾಸ್. ಮುಂಬೈನಲ್ಲಿ ಜನಿಸಿರುವ ಇವರು ಅಮೆರಿಕದಲ್ಲಿ ನೆಲೆಸಿದ್ದು, ಜನರಲ್ಲಿ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ. ಐಐಟಿ ಮತ್ತು ಕಾರ್ನೆಲ್ ವಿವಿಯಿಂದ ಎಂಬಿಎ ಪಡೆದಿದ್ದಾರೆ.

•    ಅವಿರಾಜ್ ಜೈನ್ (Aviraj Jain)
ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಅವಿರಾಜ್ ಜೈನ್, ವಡೋದರಾ ಮೂಲದವರು. ಅತಿ ಕಿರಿಯ ವಯಸ್ಸಿನಲ್ಲೇ ಜೈನ ಮತದ ಸಾಧುವಾಗಿ ಮನುಷ್ಯನ ಮಿದುಳಿನ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಐಐಟಿ ಬಿಎಚ್ ಯುದಲ್ಲಿ ಅಧ್ಯಯನ ಮಾಡಿದ್ದಾರೆ.

•    ಸಂಕೇತ್ ಪಾರೇಖ್ (Sanketh Parekh)
ಐಐಟಿ ಬಾಂಬೆಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದಿರುವ ಇವರು ಸಹ ಜೈನ ಸಾಧುವಾಗಿದ್ದಾರೆ. 
 

click me!