ಪಾಲಕರ ಹೊಣೆ ಹೆಚ್ಚಿರುತ್ತದೆ. ತಮ್ಮ ಕೆಲಸ, ಟೆನ್ಷನ್ ಜೊತೆ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕಾಗುತ್ತದೆ. ಅದಕ್ಕೆ ಅವರು ನಾನಾ ಕಸರತ್ತು ಮಾಡ್ತಾರೆ. ಅತ್ಯಂತ ಸರಳ ಮಾರ್ಗಗಳನ್ನು ಸದ್ಗುರು ಹೇಳಿದ್ದು, ಅದನ್ನು ಪಾಲಿಸಬಹುದು.
ಸರಳ ಮಾರ್ಗಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು. ಮಕ್ಕಳನ್ನು ಯೋಗ್ಯ ವ್ಯಕ್ತಿಗಳನ್ನಾಗಿ ರೂಪಿಸುವುದು ಪಾಲಕರ ಕೈನಲ್ಲಿದೆ. ಒಂದು ಮಗು ಸಮಾಜಕ್ಕೆ ಮಾದರಿಯಾಗಿ ಬೆಳೆಯುತ್ತಿದೆ ಎಂದ್ರೆ ಅದ್ರ ಹಿಂದೆ ಪಾಲಕರ ಪರಿಶ್ರಮವಿರುತ್ತದೆ. ಮಕ್ಕಳನ್ನು ಬೆಳೆಸಲು ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ನಿಮ್ಮ ಬಿಪಿ ಹೆಚ್ಚಿಸಿಕೊಂಡು, ನಿಮ್ಮ ಸಮಯ ಹಾಳು ಮಾಡಿಕೊಂಡು ಮಕ್ಕಳನ್ನು ಬೆಳೆಸುವ ಅಗತ್ಯವೂ ಇಲ್ಲ. ನಿತ್ಯದ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದ್ರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಆಧ್ಯಾತ್ಮಿಕ ಗುರು ಸದ್ಗುರು, ಜೀವನಕ್ಕೆ ಅಗತ್ಯವಿರುವ ಅನೇಕ ಸಲಹೆಗಳನ್ನು ನೀಡುತ್ತಾರೆ. ಮಕ್ಕಳ ಪೋಷಣೆ ಹೇಗೆ ಮಾಡಬೇಕು ಎಂಬ ಬಗ್ಗೆಯೂ ಅವರು ಪಾಲಕರಿಗೆ ಸಲಹೆ ನೀಡ್ತಿರುತ್ತಾರೆ. ನೀವು ಸದ್ಗುರು ಹೇಳಿದ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅವಳಡಿಸಿಕೊಳ್ಳುವ ಮೂಲಕ ನಿಮ್ಮ ಮಕ್ಕಳ ಬಾಳಲ್ಲಿ ಸಂತೋಷ ತರಬಹುದು. ಮಕ್ಕಳನ್ನು ಬೆಳೆಸೋದು ಹೇಗೆ ಎನ್ನುವ ಬಗ್ಗೆ ಸದ್ಗುರು ನೀಡಿದ ಟಿಪ್ಸ್ ಇಲ್ಲಿದೆ.
ಮಕ್ಕಳಿಗೆ ನೀಡುವ ಪ್ರೀತಿ (Love) ನಿಜ – ಸಹಜವಾಗಿರಲಿ: ಮಕ್ಕಳನ್ನು ನೀವು ತೋರಿಕೆಗೆ ಪ್ರೀತಿಸುವ ಅಗತ್ಯವಿಲ್ಲ. ಪ್ರೀತಿ, ಮಕ್ಕಳಿಗೆ ಇಷ್ಟವಾದ ವಸ್ತುಗಳನ್ನು ಕೊಡಿಸೋದ್ರಲ್ಲಿ ಇಲ್ಲ. ಮಕ್ಕಳು ಹೇಳಿದ್ದನ್ನೆಲ್ಲ ನೀವು ಅವರಿಗೆ ನೀಡಿದ್ರೆ ನಿಮ್ಮ ಪ್ರೀತಿ ಹೆಚ್ಚಿದೆ ಎಂದರ್ಥವಲ್ಲ. ನೀವು ಮಕ್ಕಳನ್ನು ಹಾಳು ಮಾಡುತ್ತಿದ್ದೀರಿ ಎಂದರ್ಥ. ಇದು ಪಾಲಕರ ಮೂರ್ಖತನ. ಮಕ್ಕಳನ್ನು ನೀವು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ ಅವರಿಗೆ ಯಾವುದು ಅಗತ್ಯ, ಯಾವುದು ಅನಗತ್ಯ ಎಂಬುದನ್ನು ತಿಳಿದುಕೊಳ್ಳಿ. ಅದಕ್ಕೆ ತಕ್ಕಂತೆ ಮಕ್ಕಳಿಗೆ ವಸ್ತುಗಳನ್ನು ನೀಡಿ. ಹಾಗೆಯೇ ಅದ್ರ ಮಹತ್ವವನ್ನು ಮಕ್ಕಳಿಗೆ ತಿಳಿಸಿ.
ಬಳೆಯೂ ಕೊಡುತ್ತೆ ಮದುವೆ ವಿಳಂಬಕ್ಕೆ ಪರಿಹಾರ, ಯಾರು, ಯಾವ ರೀತಿ ಬಳೆ ತೊಡಬೇಕು?
ಪಾಲಕ (Parents ) ರ ಬೆಂಬಲ : ತಮ್ಮ ಜೀವನದಲ್ಲಿ ಮಾಡಲಾಗದ ಕೆಲಸವನ್ನ ಮಕ್ಕಳು ಮಾಡಲಿ ಎಂದು ಬಯಸುವ ಪಾಲಕರೇ ಹೆಚ್ಚು. ಹಾಗಾಗಿ ಮಕ್ಕಳನ್ನು ಒತ್ತಾಯ ಮಾಡಿ ಅವರಿಷ್ಟದ ಕೆಲಸಕ್ಕೆ ಕಳುಹಿಸುತ್ತಾರೆ. ಮಕ್ಕಳು ಮಾಡುವ ಕೆಲಸಕ್ಕೆ ಪಾಲಕರು ಬೆಂಬಲ ನೀಡುವುದಿಲ್ಲ. ಇದು ಪಾಲಕರು ಮಾಡುವ ತಪ್ಪು. ಮಕ್ಕಳ ಕೆಲಸಕ್ಕೆ ಪಾಲಕರು ಸಂಪೂರ್ಣ ಬೆಂಬಲ ನೀಡಿ, ಅವರು ಗುರಿ ಸಾಧಿಸಲು ಸಹಾಯ ಮಾಡಬೇಕು. ಅವರು ತಪ್ಪು ದಾರಿ ಹಿಡಿದಾಗ ಅವರನ್ನು ತಿದ್ದಿ, ಮಾರ್ಗದರ್ಶನ (Guidance) ನೀಡಬೇಕು. ನಿಮ್ಮಿಬ್ಬರ ಮಧ್ಯೆ ಪ್ರೀತಿ ಹಾಗೂ ತಿಳುವಳಿಕೆ ಇದ್ದಲ್ಲಿ ಮಕ್ಕಳು ಪಾಲಕರನ್ನು ಅರ್ಥ ಮಾಡಿಕೊಳ್ತಾರೆ. ಪಾಲಕರು ನಮ್ಮ ಒಳಿತಿಗಾಗಿಯೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಕ್ಕಳು ನಂಬುತ್ತಾರೆ.
ಮನೆಯೇ ಮೊದಲ ಪಾಠ ಶಾಲೆ : ನಮ್ಮ ಮನೆ ವಾತಾವರಣ ಚೆನ್ನಾಗಿದ್ದಲ್ಲಿ ಮಕ್ಕಳು ಕೂಡ ಚೆನ್ನಾಗಿ ಬೆಳೆಯುತ್ತಾರೆ. ಮೊದಲು ನಿಮ್ಮ ಮನೆಯ ವಾತಾವರಣ ಬದಲಿಸಿ. ಮನೆಯಲ್ಲಿ ಪ್ರೀತಿ, ಖುಷಿ ತುಂಬಿರುವಂತೆ ನೋಡಿಕೊಳ್ಳಿ. ಆತಂಕದ, ಮಕ್ಕಳಿಗೆ ಭಯ ಹುಟ್ಟಿಸುವ ವಾತಾವರಣ ಇರಬಾರದು. ನೀವು ಮಕ್ಕಳ ಮುಂದೆ ಭಯ ವ್ಯಕ್ತಪಡಿಸಿದ್ರೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ. ಚಿಂತೆಗೆ ಒಳಗಾಗ್ತಾರೆ. ಇದು ಅವರ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ. ಅದೇ ಧೈರ್ಯ, ಪ್ರೀತಿ ಇದ್ದಲ್ಲಿ ಅವರು ಯಾವುದಕ್ಕೂ ಹೆದರದೆ ಮುನ್ನುಗ್ಗುತ್ತಾರೆ.
ಮಗಳ ವಯಸ್ಸಿನವಳ ಜೊತೆ 3ನೇ ಬಾರಿ ಅರ್ಬಾಜ್ ಖಾನ್ ಮದುಮಗ! ಡೇಟ್ ಫಿಕ್ಸ್: ಹೊಟ್ಟೆ ಉರಿಸಿಕೊಳ್ತಿರೋ ಅವಿವಾಹಿತರು!
ಮೊದಲು ನಿಮ್ಮನ್ನು ಬದಲಿಸಿಕೊಳ್ಳಿ : ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂದ್ರೆ ಮೊದಲು ನಿಮ್ಮನ್ನು ನೀವು ಬದಲಿಸಿಕೊಳ್ಳಿ. ಮಕ್ಕಳಿಗೆ ಪಾಲಕರು ರೋಲ್ ಮಾಡೆಲ್ ಆಗ್ಬೇಕು. ಮಕ್ಕಳು ಸುತ್ತಮುತ್ತಲಿನ ಪರಿಸರ ನೋಡಿ ಬೆಳೆಯುತ್ತಾರೆ. ಅವರಿಗೆ ಆಕರ್ಷಕ ಎನ್ನಿಸಿದ್ದನ್ನು ಅವರು ಅನುಸರಿಸಲು ಶುರು ಮಾಡ್ತಾರೆ. ಮನೆಯಲ್ಲಿರುವ ವ್ಯಕ್ತಿಯೇ ಆಕರ್ಷಕವಾಗಿದ್ದರೆ ಅವರಿಗೆ ಬೇರೆಯವರ ಅಗತ್ಯ ಬೀಳೋದಿಲ್ಲ. ಸಂತೋಷ, ಬುದ್ಧಿವಂತ ಮತ್ತು ಅದ್ಭುತ ವ್ಯಕ್ತಿಯಾಗಿ ನೀವು ಮಕ್ಕಳ ಮುಂದೆ ಕಾಣಿಸಿಕೊಂಡರೆ ಅವರು ನೀವು ಹೇಳಿದ್ದನ್ನೆಲ್ಲ ಕೇಳ್ತಾರೆ.