ಸುತ್ತ ನೀರು, ಮಧ್ಯೆ ಮದು ಮಕ್ಕಳು; ಅವರ ನಡುವೆ ಬಂತೊಂದು ಹಾವು! ಇದು ಪ್ರಿವೆಡ್ಡಿಂಗ್ ಶೂಟ್

By Suvarna News  |  First Published Dec 22, 2023, 5:49 PM IST

ಸಣ್ಣದೊಂದು ನೀರಿನ ಹರಿವಿನಲ್ಲಿ ರಾತ್ರಿ ವೇಳೆ ಪ್ರಿವೆಡ್ಡಿಂಗ್ ಫೋಟೋ ಶೂಟ್ ಗೆಂದು ಹೋದವರಿಗೆ ಅನಿರೀಕ್ಷಿತ ಅತಿಥಿಯನ್ನು ಕಂಡು ಬೆಚ್ಚಿ ಬೀಳುವಂತಾದರೂ ಯಾವುದೇ ಅಪಾಯವಾಗದೆ ಬಚಾವಾಗಿದ್ದಾರೆ, ಅಷ್ಟೇ ಅಲ್ಲ, ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ. 
 


ಪ್ರಿವೆಡ್ಡಿಂಗ್ ಫೋಟೋ ಶೂಟ್ ಗಳು ಈಗ ಸರ್ವೇ ಸಾಮಾನ್ಯವಾಗಿವೆ. ಮದುವೆಗೂ ಮುನ್ನ ಮದುಮಕ್ಕಳು ಭರ್ಜರಿ ಫೋಟೋ ಶೂಟ್ ಮಾಡಿಸಿಕೊಳ್ಳಲೆಂದೇ ಯಾವ್ಯಾವುದೋ ಐಡಿಯಾ ಬೆನ್ನತ್ತುತ್ತಾರೆ. ಈಗಂತೂ ಫೋಟೋ ಶೂಟ್ ನಡೆಯದ ಸ್ಥಳವೇ ಇಲ್ಲ. ಕೆಸರು ತುಂಬಿದ ಗದ್ದೆಯಿಂದ ಹಿಡಿದು, ತೋಟ, ಹೊಲ, ಕಾಡು, ಬೆಟ್ಟ, ವಿಮಾನ, ಮಳೆಯಲ್ಲಿಯೂ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಕಂಡುಬರುತ್ತದೆ. ಭಾರೀ ಜನಪ್ರಿಯವಾಗಿರುವ ಪ್ರಿವೆಡ್ಡಿಂಗ್ ಶೂಟ್ ಇಲ್ಲದೇ ವಿವಾಹದ ಆರಂಭವೇ ಆಗುವುದಿಲ್ಲ ಎನ್ನಬಹುದು. ಈ ಸಮಯದಲ್ಲಿ ಕೆಲವೊಮ್ಮೆ ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾಗುವ ಅವಕಾಶವೂ ದೊರೆಯುತ್ತದೆ. ಮನಸ್ಸಿಗೆ ಮುದ ನೀಡುವಂತಿದ್ದರೆ ಖುಷಿಯಾಗುತ್ತದೆ, ಇಲ್ಲವಾದರೆ ಜೀವಭಯವೂ ಉಂಟಾಗುತ್ತದೆ. ಅಂಥದ್ದೇ ಒಂದು ಘಟನೆಗೆ ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಸುತ್ತಿದ್ದ ತಂಡವೊಂದು ಇತ್ತೀಚೆಗೆ ಸಾಕ್ಷಿಯಾಗಿದೆ. ಇದನ್ನು ಫೋಟೋಗ್ರಾಫರ್ ಒಬ್ಬರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋವೀಗ ಸಖತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. 

ಫೋಟೋಗ್ರಾಫರ್ (Photographer) ಶೇರ್ (Share) ಮಾಡಿರುವ ವೀಡಿಯೋ (Video) ಭಾರೀ ಕುತೂಹಲಕಾರಿಯಾಗಿದೆ. ವಿರಳವಾಗಿ ಬೆಳಕಿರುವ ನೀರಿನ ಹರಿವಿನ ತಾಣದಿಂದ ಈ ವೀಡಿಯೋ ಆರಂಭವಾಗುತ್ತದೆ. ಅಲ್ಲೊಂದು ಸಣ್ಣದಾದ ಝರಿ (Stream) ಹರಿಯುತ್ತಿದೆ. ಜೋಡಿಯೊಂದು ಪ್ರಿವೆಡ್ಡಿಂಗ್ ಫೋಟೋಕ್ಕೆ (Pre Wedding Photo Shoot) ಸಿದ್ಧವಾಗುತ್ತಿದೆ. ಈ ನಡುವೆ ಅಲ್ಲೊಂದು ಅತಿಥಿಯ ಆಗಮನವಾಗುತ್ತದೆ. ಅದು ಎಲ್ಲರೂ ಉಸಿರು ಬಿಗಿಹಿಡಿದು ನಿಲ್ಲುವ ಪ್ರಸಂಗ. ಇದು ಅವರ ಜೀವನದ ಅತ್ಯಂತ ಭಯಭೀತರಾಗಿದ್ದ ಸಮಯವಾಗಿರಲು ಸಾಕು. 

ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದರ ನಡುವೇ ರೈತರ ವೇಷದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ವೈರಲ್ ವಿಡಿಯೋ!

Tap to resize

Latest Videos

ಹರಿಯುತ್ತಿರುವ ನೀರಿನಲ್ಲಿ ರಾತ್ರಿ (Night) ಸಮಯ ಮಾಡಿದ ಕಾರ್ಯಾಚರಣೆ ಇದಾಗಿದ್ದು, ನೀರಿನ ಹರಿವು ತೀರ ಹೆಚ್ಚಾಗಿಲ್ಲ. ಪುಟ್ಟ ಝರಿ, ಸಣ್ಣದೊಂದು ಹೊಂಡ, ಅಲ್ಲಿ ಮದುಮಕ್ಕಳು. ಫೋಟೋಗ್ರಾಫರ್ ಅತ್ಯುತ್ತಮ ಫೋಟೋ ತೆಗೆಯಲು ಸಿದ್ಧವಾಗಿದ್ದರೆ, ಮದುಮಕ್ಕಳು ಹೇಗೆಲ್ಲ ಪೋಸ್ ಕೊಡಬೇಕು ಎಂದು ಮೊದಲೇ ಸಿದ್ಧತೆ ನಡೆಸಿ ತಯಾರಿದ್ದರು. ನೀರಿಗೆ ಏನೋ ಸಿಂಪಡಿಸಿ ಹೊಗೆಯಂತಹ ವಾತಾವರಣ ನಿರ್ಮಾಣ ಮಾಡುತ್ತಿರುವ ಸಮಯದಲ್ಲಿ, ಆಹಾ, ಎಂತಹ ರಮ್ಯವಾದ ವಾತಾವರಣ ಎಂದುಕೊಳ್ಳುತ್ತಿದ್ದರೆ ಅಲ್ಲಿಗೆ ಅನಿರೀಕ್ಷಿತ ಅತಿಥಿಯೊಂದು ಬಂದಿತ್ತು. ಅದು ಹಾವು (Snake).

ಐಶ್​- ಅಭಿ ಮದ್ವೆ ದಿನ ನಡೆದಿತ್ತು ಹೈಡ್ರಾಮಾ: ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಜಾಹ್ನವಿ ಕಪೂರ್​!

ನೀರಿನಲ್ಲಿದ್ದ ಭಾವಿ ವಧು-ವರ ಸುಮ್ಮನೆ ನಿಂತುಕೊಂಡರು. ಮಹಿಳೆ ಕೂಗಲು ಸಿದ್ಧರಾಗುತ್ತಿದ್ದಂತೆ, ಮದುಮಗ ಸನ್ನಿವೇಶವನ್ನು (Situation) ತಾಳ್ಮೆಯಿಂದ (Patience) ನಿಭಾಯಿಗುತ್ತಾರೆ. ಅದೃಷ್ಟವಶಾತ್, ಆ ಹಾವು ಅವರ ಫೋಟೋಶೂಟ್ ಗೆ ಏನೂ ತೊಂದರೆ ಮಾಡಲಿಲ್ಲ, ಬಹುಬೇಗ ಹಾಗೆಯೇ ಹೊರಟುಹೋಯಿತು. ಆದರೆ, ಅಲ್ಲಲ್ಲಿ ಸರಿದಾಡಿದ ಹಾವು ಇಬ್ಬರ ಮಧ್ಯೆ ನುಸುಳಿ ಆಚೆ ಕಡೆಗೆ ಸಾಗುತ್ತದೆ. 

 

ನಿಭಾಯಿಸಿದ ರೀತಿಗೆ ಮೆಚ್ಚುಗೆ
ಈ ವೀಡಿಯೋ ಈಗ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ವೀಡಿಯೋ ನೋಡುಗರಿಗೂ ಇದು ಮೈನವಿರೇಳಿಸುವಂತಿದೆ. ಇದುವರೆಗೆ 40 ಲಕ್ಷಕ್ಕೂ ಅಧಿಕ ವೀಕ್ಷಣೆಗೆ ಒಳಗಾಗಿದೆ. ಪೋಸ್ಟ್ (Post) ಆಗುತ್ತಿದ್ದಂತೆ ಬಹಳಷ್ಟು ಕಾಮೆಂಟ್ ಗಳೂ ಬಂದಿವೆ. ಅನೇಕರು ಈ ಸನ್ನಿವೇಶವನ್ನು ಜೋಡಿ ನಿಭಾಯಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬಾತ ಈ ಘಟನೆಯನ್ನು “ಮ್ಯಾನ್ ವರ್ಸಸ್ ವೈಲ್ಡ್’ ಎಂದು ಬಣ್ಣಿಸಿದರೆ, ಮತ್ತೊಬ್ಬರು “ವಿಶ್ವದ ಚಿಲ್ಲಿಯೆಸ್ಟ್ ಜೋಡಿ’ ಎಂದಿದ್ದಾರೆ. ಒಬ್ಬರು “ಮದುಮಗ, ಮದುಮಗಳು ಮತ್ತು ಹಾವು’ ಎಂದು ಛೇಡಿಸಿದ್ದಾರೆ. 
 

click me!