ಸಿನಿಮಾಗೆ ಬರಲು ಎಂದಿಗೂ ಬಯಸಿರಲಿಲ್ವಂತೆ ಕಿಂಗ್ ಖಾನ್‌

By Suvarna News  |  First Published Feb 25, 2024, 2:29 PM IST

 ಶಾರುಖ್ ಖಾನ್ ಅವರ ಪ್ರಾರಂಭದ ದಿನಗಳಲ್ಲಿ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದವರು ಸಿನಿಮಾ ನಿರ್ಮಾಪಕ ವಿವೇಕ್ ವಸ್ವಾನಿ, ಮುಂಬೈನಲ್ಲಿ ತಮ್ಮ ಬದುಕು ಆರಂಭಿಸಿದಾಗ ಎಸ್‌ಆರ್‌ಕೆ ಅವರನ್ನು ಮನೆಗೆ ಕರೆದು ವಸತಿ ನೀಡಿದವರು ಈ ವಿವೇಕ್ ವಾಸ್ವಾನಿ. 


ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ನಟನೆಯಿಂದ ವಿಶಾಲ ಹೃದಯದಿಂದ ಕೋಟ್ಯಾಂತರ ಅಭಿಮಾನಿಗಳ ಹೃದಯ ಸೂರೆಗೊಳಿಸಿರುವ ನಟ,  ಟೆಲಿವಿಷನ್ ಸೀರಿಯಲ್‌ಗಳ ಮೂಲಕ ನಟನ ವೃತ್ತಿ ಆರಂಭಿಸಿದ ಈ ನಟ ಮುಂದೆ ಬಾಲಿವುಡ್‌ ಸಿನಿಮಾ ರಂಗದಲ್ಲಿ ಅಚ್ಚಳಿಯದ ಹೆಸರಾಗಿ ಅಗಾಧ ವ್ಯಕ್ತಿತ್ವವಾಗಿ ಬೆಳೆದಿದ್ದು ಈಗ ಇತಿಹಾಸ.  ಶಾರುಖ್ ಖಾನ್ ಅವರ ಪ್ರಾರಂಭದ ದಿನಗಳಲ್ಲಿ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದವರು ಸಿನಿಮಾ ನಿರ್ಮಾಪಕ ವಿವೇಕ್ ವಸ್ವಾನಿ, ಮುಂಬೈನಲ್ಲಿ ತಮ್ಮ ಬದುಕು ಆರಂಭಿಸಿದಾಗ ಎಸ್‌ಆರ್‌ಕೆ ಅವರನ್ನು ಮನೆಗೆ ಕರೆದು ವಸತಿ ನೀಡಿದವರು ಈ ವಿವೇಕ್ ವಾಸ್ವಾನಿ. 

ಇವರು ಸಂದರ್ಶನವೊಂದರಲ್ಲಿ ಶಾರುಖ್ ಬದುಕಿನ ಬಗ್ಗೆ ಅಮ್ಮನ ಮೇಲಿದ ಆಗಾಧ ಪ್ರೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಿರೂಪಕ ಸಿದ್ಧಾರ್ಥ್‌ ಕಣನ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಶಾರುಖ್ ಆರಂಭಿಕ ದಿನಗಳ ಬಗ್ಗೆ ಹಲವು ಕುತೂಹಲಕಾರಿ ಅಂಶಗಳನ್ನು ಅವರು ತೆರೆದಿಟ್ಟಿದ್ದಾರೆ. 

Tap to resize

Latest Videos

ಅನಾರೋಗ್ಯಕ್ಕೀಡಾಗಿದ್ದ ತಾಯಿ ಬಗ್ಗೆ ಹೇಳಿಕೊಂಡಿದ್ದ ಶಾರುಖ್

ನಾವು ಚರ್ಚ್ ರೋಡ್ ಸಮೀಪದ ಗೆಹ್ಲೋಟ್ ಬಳಿ ಹೋದೆವು  ಅಲ್ಲಿ ಬಟರ್ ಚಿಕನ್ ಹಾಗೂ ನಾನ್ ಅರ್ಡರ್ ಮಾಡಿದೆವು. ಅದೇ ವೇಳೆ ಅವನು ನನ್ನಮ್ಮ ಸಾಯುತ್ತಿದ್ದಾರೆ ಎಂದು ಭಾವುಕ ದುಃಖ ಹತಾಶೆಯಿಂದ ಹೃದಯ ಬಿಚ್ಚಿ ಮಾತನಾಡಿದ, ನಂತರ ನಾವು ಅಲ್ಲಿಂದ ತೆರಳಿ ಮೆರಿನ್ ಡ್ರೈವ್‌ಗೆ ಹೋದೆವು ಈ ವೇಳೆ ಆತ ತನ್ನ ತಾಯಿಯ ಬಗ್ಗೆ ಆಕೆಯ ಅಂಗಾಂಗ ವೈಫಲ್ಯವಾದ ಬಗ್ಗೆ ಹೇಳಿದ.  ಅಮ್ಮನಿಗಾಗಿ ದುಬಾರಿ ಔಷಧಿಗಳನ್ನು ಖರೀದಿಸುತ್ತಿದ್ದ ಶಾರುಖ್  ಅದನ್ನು ತನ್ನ ಸ್ನೇಹಿತ ನಟ ರಮನ್ ಮೂಲಕ ದೆಹಲಿಗೆ ಕಳುಹಿಸುತ್ತಿದ್ದ, ಆದರೆ ಅಮ್ಮನ ಉಳಿಸಿಕೊಳ್ಳುವುದಕ್ಕಾಗಿ ಹಲವು ಪ್ರಯತ್ನಗಳ ನಡುವೆಯೂ ಶಾರುಖ್ ಅಮ್ಮ ಲತೀಫ್ ಫಾತಿಮಾ ಖಾನ್ 1991 ರಲ್ಲಿ ಸಾವನ್ನಪ್ಪಿದ್ದರು.  ಆದರೆ ಅಮ್ಮನ ಸಾವಿನ ನಂತರ ಶಾರುಖ್ ತಾನು ಸಿನಿಮಾಗಳಲ್ಲಿ ಕೆಲಸ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದರು. ಆದರೆ ಅದಕ್ಕೂ ಮೊದಲು ಸಿನಿಮಾಗೆ ಬರುವುದಕ್ಕೆ ಅವರು ಬಯಸಿಯೇ ಇರಲಿಲ್ಲ, ಆದರೆ ಶಾರುಖ್  ಅಮ್ಮ ಮಗ ಸೂಪರ್‌ಸ್ಟಾರ್ ಆಗಬೇಕೆಂದು ಬಯಸಿದ್ದರು. ಹೀಗಾಗಿ ಶಾರುಖ್ ಸಿನಿಮಾಗೆ ಬಂದರು ಎಂದು ಹೇಳಿಕೊಂಡಿದ್ದಾರೆ ವಿವೇಕ್ 

ಶಾರುಖ್ ಖಾನ್ ಮಗಳು ಈಗ ಬ್ಯುಸಿನೆಸ್​ನಲ್ಲಿ ಬ್ಯುಸಿ! ಮುಂಬೈ ಬಳಿ ಆಸ್ತಿ ಖರೀದಿಸಿದ ಸುಹಾನಾ ಖಾನ್!

ಒಂದು ಶಾರುಖ್ ನನ್ನ ಬಳಿ ಬಂದು ನನಗೆ ಸಿನಿಮಾ ಮಾಡಬೇಕು  ಎಂದು ಹೇಳಿದ ಆದರೆ ನಿನಗೆ ಸಿನಿಮಾ ಮಾಡುವ ಮನಸ್ಸು ಇರಲಿಲ್ಲವಲ್ಲ, ನೀನು ಎಲ್ಲಿ ಸಿನಿಮಾ ಮಾಡುವೆ ನಾನು ಟಿವಿಗೆ ಕೆಲಸ ಮಾಡುತ್ತಿರುವೆ ಸಿನಿಮಾ ಮಾಡುತ್ತಿಲ್ಲ ಎಂದು ಶಾರುಖ್‌ಗೆ ಹೇಳಿದೆ. ಆಗ ಆತ, ನನಗೆ ಈಗ ಸಿನಿಮಾ ಮಾಡಲೇಬೇಕು ಏಕೆಂದರೆ ನಾನು ದೊಡ್ಡ ಸೂಪರ್‌ಸ್ಟಾರ್ ಆಗಬೇಕೆಂಬುದು ಅಮ್ಮನ ಕನಸಾಗಿತ್ತು ಎಂದು ಹೇಳಿದ. ಈ ವೇಳೆ ನಾನು ಓಕೆ ಆಗಬಹುದು ಎಂದಿದ್ದೆ. ಆತ ಇಲ್ಲ ನೀವು ಈ ವಿಚಾರದಲ್ಲಿ ನನಗೆ ಪ್ರಾಮಿಸ್ ಮಾಡಬೇಕು ಇಲ್ಲದಿದ್ದರೆ ನಾನು ನಿಮ್ಮ ಮನೆಗೆ ಬರುವುದಿಲ್ಲ ಎಂದು ಹೇಳಿದ  ಎಂದು ಶಾರುಖ್ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ವಿವೇಕ್.

ಇನ್ನು ಶಾರುಖ್ ಜೊತೆಗಿನ ತಮ್ಮ ಸಂಬಂಧದ ರೂಮರ್ಸ್‌ ಬಗ್ಗೆ ಮಾತನಾಡಿದ ವಿವೇಕ್ ವಸ್ವಾನಿ, ನಮ್ಮ ಮಧ್ಯೆ ಅಂತಹ ಯಾವುದೇ ಸಂಬಂಧ ಇರಲಿಲ್ಲಇರಲಿಲ್ಲ, ನಾವು ಮಾತನಾಡುವುದಿಲ್ಲ, ಭೇಟಿಯಾಗುವುದಿಲ್ಲ, ಕಳೆದ ನಾಲ್ಕು ವರ್ಷಗಳಿಂದ ಒಮ್ಮೆಯೂ ಭೇಟಿಯಾಗಿಲ್ಲ,  ಕಾಲ್‌ನಲ್ಲಿಯೂ ಮಾತನಾಡಿಲ್ಲ ಇಬ್ಬರ ಬ್ಯುಸಿ ಜೀವನದಿಂದಾಗಿ ಹಲವು ವರ್ಷಗಳಿಂದ ನಾವು ಭೇಟಿಯೇ ಆಗಿಲ್ಲ ಎಂದು ಹೇಳಿದ್ದಾರೆ ವಿವೇಕ್.

ಶಾರುಖ್​ ಬಳಿ ಇರೋ ಮೊಬೈಲ್​ ಫೋನ್​ ಎಷ್ಟು ಗೊತ್ತಾ? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಿರ್ಮಾಪಕ

4 ವರ್ಷದ ಹಿಂದೆ  ಶಾರುಖ್ ಬರ್ತ್‌ಡೇಯಂದು ಪಾರ್ಟಿಯಲ್ಲಿ ಭೇಟಿ ಮಾಡಿದ್ದನ್ನು ನೆನಪು ಮಾಡಿಕೊಂಡ ವಿವೇಕ್ ಆ ಸಮಯದಲ್ಲಿ ಶಾರುಖ್ ಅವರು ತಮ್ಮ ಮಕ್ಕಳಾದ ಅಬ್‌ರಾಮ್, ಆರ್ಯನ್, ಸುಹಾನಾ ಅವರಿಗೆ ನನ್ನನ್ನು ಪರಿಚಯಿಸಬೇಕು ಎಂದು ಬಯಸಿದ್ದರು.  ಅಲ್ಲದೇ ಶಾರುಖ್ 17 ಫೋನ್‌ಗಳನ್ನು ಹೊಂದಿದ್ದು, ಜೊತೆಗೆ ಬ್ಯುಸಿ ಶೆಡ್ಯುಲ್ ಹೊಂದಿರುವುದರಿಂದ ಅವರೊಂದಿಗೆ ಟಚ್‌ನಲ್ಲಿ ಇರುವುದು ಬಹಳ ಕಷ್ಟದ ವಿಚಾರ ಎಂದು ಹೇಳಿಕೊಂಡಿದ್ದಾರೆ. 

click me!