ಪ್ರೀತಿಸಿದವರನ್ನು ಮದುವೆಯಾಗಬೇಕು ಎಂದು ಮಕ್ಕಳು ಹಠ ಹಿಡಿಯುವುದು ಸಾಮಾನ್ಯ. ಆದರೆ, ಪಾಕಿಸ್ತಾನದಲ್ಲಿ ಒಬ್ಬ ಹುಡುಗ ಮದುವೆ ಮಾಡಿದರೆ ಮಾತ್ರ ತಾನು ಮುಂದೆ ಓದುತ್ತೇನೆ ಎಂದು ಹಠ ಹಿಡಿದು ಮದುವೆಯಾಗಿದ್ದಾರೆ. ಹುಡುಗನ ಈ ಧೋರಣೆಗೆ ನೆಟ್ಟಿಗರು ಬೆರಗಾಗಿದ್ದಾರೆ.
ಪ್ರೀತಿಸಿದವರೊಂದಿಗೆ ಮದುವೆ ಮಾಡದಿದ್ದರೆ ಸತ್ತೇ ಹೋಗುತ್ತೇನೆ ಎಂದೋ, ಜೀವನಪೂರ್ತಿ ಒಂಟಿಯಾಗಿ ಬಾಳುತ್ತೇನೆ ಎಂದೋ, ಪ್ರೀತಿಸಿದ ವ್ಯಕ್ತಿಯೊಂದಿಗೆ ಬೇರೆ ಎಲ್ಲಾದರೂ ತೆರಳಿ ಜೀವನ ಕಟ್ಟಿಕೊಳ್ಳುತ್ತೇನೆ ಎಂದೋ ತಮ್ಮ ತಂದೆ ತಾಯಂದಿರನ್ನು ಹೆದರಿಸುವ ಪ್ರೇಮಿಗಳನ್ನು ಕಂಡಿದ್ದೇವೆ. ಪ್ರೀತಿಸಿದವರನ್ನೇ ಮದುವೆಯಾಗಿ ಅವರೊಂದಿಗೇ ಜೀವನ ನಡೆಸಬೇಕು ಎನ್ನುವುದು ಅವರ ಆಶಯವಾಗಿರುತ್ತದೆ. ಹೀಗಾಗಿ, ಹೇಗಾದರೂ ಮಾಡಿ ಪಾಲಕರ ಮನವೊಲಿಸಲು ಯತ್ನಿಸುತ್ತಾರೆ. ಪಾಲಕರನ್ನು ಧೈರ್ಯವಾಗಿ ಎದುರಿಸುತ್ತಾರೆ, ಸಂದರ್ಭ ಎದುರಾದರೆ ಅವರೊಂದಿಗೆ ವಾಗ್ವಾದ, ಜಗಳವನ್ನೂ ಮಾಡುತ್ತಾರೆ, ಮನೆಬಿಟ್ಟು ಹೋಗಿ ಪ್ರೀತಿಸಿದವರೊಂದಿಗೆ ಬಾಳು ಕಟ್ಟಿಕೊಳ್ಳಲು ಸಹ ಹಿಂದೇಟು ಹಾಕುವುದಿಲ್ಲ. ಇವೆಲ್ಲ ಸಾಮಾನ್ಯ ಪ್ರೇಮಿಗಳು ಅನುಸರಿಸುವ ದಾರಿ. ಪಾಕಿಸ್ತಾನದಲ್ಲಿ ೧೩ ವರ್ಷದ ಬಾಲಕನೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಬೇಕೆಂದು ವಿಶಿಷ್ಟ ರೀತಿಯಲ್ಲಿ ಹಠ ಹಿಡಿದು, ತನ್ನ ಬಯಕೆಯನ್ನು ಪೂರೈಸಿಕೊಂಡಿರುವ ಘಟನೆ ವರದಿಯಾಗಿದೆ.
13 ವರ್ಷದ ಹುಡುಗನ (Boy) ವಿವಾಹದ (Marriage) ವೀಡಿಯೋವೊಂದನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ (Share) ಮಾಡಲಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಅಪ್ರಾಪ್ತ ವಯಸ್ಕರ ಮದುವೆಯ ವೀಡಿಯೋ (Video) ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ, ಅಷ್ಟೇ ಅಲ್ಲ, ಅವರ ಪಾಲಕರ ನಿಲುವಿನ ಬಗ್ಗೆಯೂ ಬಹಳಷ್ಟು ಜನ ವಿಚಾರ ಮಾಡಿದ್ದಾರೆ. ಈ ವೀಡಿಯೋದಲ್ಲಿ 13 ವರ್ಷದ ಬಾಲಕ ಹಾಗೂ 12 ವರ್ಷದ ಹುಡುಗಿಯ ಮದುವೆಯನ್ನು ನೆರವೇರಿಸುವ ಸನ್ನಿವೇಶವಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಈ ವೀಡಿಯೋ ವೈರಲ್ ಆಗಿದ್ದು, ಪಾಕಿಸ್ತಾನದಲ್ಲಿ (Pakistan) ಹೆಚ್ಚುತ್ತಿರುವ ಅಪ್ರಾಪ್ತರ ವಿವಾಹದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ.
undefined
'ನಂಗೂ ಭಯ ಆಗುತ್ತೆ..!': ಗರ್ಲ್ ಫ್ಯಾನ್‌ಗೆ ಯಶಸ್ವಿ ಜೈಸ್ವಾಲ್ ಹೀಗಂದಿದ್ದೇಕೆ..? ವಿಡಿಯೋ ವೈರಲ್
ಸಲಾಮ್ ಪಾಕಿಸ್ತಾನ ಹೆಸರಿನ ಖಾತೆಯಲ್ಲಿ ಈ ವೀಡಿಯೋ ಶೇರ್ ಆಗಿದೆ. ಕಿಶೋರಾವಸ್ಥೆಯಲ್ಲಿರುವ ಹುಡುಗ ಹಾಗೂ ಹುಡುಗಿ ಮದುವೆಯ ದಿರಿಸಿನಲ್ಲಿ ಕಂಡುಬರುತ್ತಾರೆ. ಪುಟ್ಟ ವರ ತಲೆಯ ಮೇಲೆ ಪಗಡಿ ಧರಿಸಿದ್ದರೆ, ವಧು ವಿವಾಹದ ಅದ್ದೂರಿ ದಿರಿಸನ್ನು (Dress) ಧರಿಸಿದ್ದಾಳೆ. ವೀಡಿಯೋದೊಂದಿಗೆ, “13 ವರ್ಷದ ಹುಡುಗ ಮದುವೆಯಾಗುತ್ತಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ? ಮದುವೆಯಾಗಲು 13 ವರ್ಷ ವಯೋಮಾನ ಸಾಕೇ? ಎಂದು ಪ್ರಶ್ನಿಸಲಾಗಿದೆ. ಕಾನೂನು ಪ್ರಕಾರ ಪಾಕಿಸ್ತಾನದಲ್ಲಿ ಗಂಡುಮಕ್ಕಳಿಗೆ ಮದುವೆಯಾಗುವ ವಯಸ್ಸು 18 ಆಗಿದ್ದರೆ, ಹೆಣ್ಣುಮಕ್ಕಳಿಗೆ 16. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಯೋಮಾನ ಗಂಡು ಮತ್ತು ಹೆಣ್ಣುಮಕ್ಕಳಿಬ್ಬರಿಗೂ 18 ಆಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾತ್ರ 2013ರಲ್ಲಿ ಹೊಸ ಕಾನೂನು ಜಾರಿಗೊಳಿಸಿ, ಮದುವೆಯ ವಯಸ್ಸನ್ನು 18ಕ್ಕೆ ನಿಗದಿ ಮಾಡಿಕೊಳ್ಳಲಾಗಿದೆ. ಆದರೆ, ಈ ಕಾನೂನು ದೇಶದಲ್ಲಿ ಎಲ್ಲೆಡೆ ಸಮಾನವಾಗಿಲ್ಲ.
ಹುಡುಗನ ಹಠವೇ ವಿಚಿತ್ರ
ಓದುವ ಹಂಬಲದಿಂದ ಮದುವೆಯಾಗದಿರುವ ಹುಡುಗ-ಹುಡುಗಿಯರನ್ನು ಸಾಮಾನ್ಯವಾಗಿ ನಾವು ನೋಡುತ್ತೇವೆ. ಆದರೆ, ಈ ಹುಡುಗ, ಮದುವೆಯಾಗುವ ತನ್ನ ಹಂಬಲವನ್ನು (Desire) ಪೂರೈಸಿಕೊಂಡಿದ್ದು ವಿಭಿನ್ನವಾಗಿ. “ಓದನ್ನು (Education) ಮುಂದುವರಿಸಬೇಕಾದರೆ ಮದುವೆ ಮಾಡಬೇಕುʼ ಎಂದು ಈತ ದುಂಬಾಲು ಬಿದ್ದಿದ್ದ! ಹೇಗಾದರೂ ಓದುವುದು ಮುಖ್ಯವೆಂದು ಮನೆಯವರು ಈತನಿಗೆ ಈಗ ಮದುವೆ ಮಾಡಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ಪಾಲಕರಿಗೆ (Parents) ಬೇಸರವೇವೂ ಇಲ್ಲ. ಮದುವೆ ಮಾಡಿರುವುದಕ್ಕೆ ಸಂತೋಷವೇ (Happy) ಆಗಿದೆ.
ಸ್ಮಾರ್ಟ್‌ಫೋನ್ ಗುಂಗಿನಲ್ಲಿದೆ ಆಪತ್ತು, ಆಹಾರ ಬದಲು ಐಪ್ಯಾಡ್ ರೋಸ್ಟ್ ಮಾಡಿ ಮಹಿಳೆ ಎಡವಟ್ಟು!
ಸಾಂಪ್ರದಾಯಿಕವಾಗಿ ನಡೆದ ನಿಶ್ಚಿತಾರ್ಥದ ಸಮಯದಲ್ಲಿ ಹುಡುಗ ಹಾಗೂ ಹುಡುಗಿಯ ಅಮ್ಮಂದಿರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಹುಡುಗಿಯ ತಾಯಿ 16 ವರ್ಷಕ್ಕೆ ವಿವಾಹವಾಗಿರುವ ಮಹಿಳೆ (Woman)ಯಾಗಿದ್ದು, ಅಪ್ರಾಪ್ತ ಮಗಳ ಮದುವೆಯನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ. ಹುಡುಗನ ತಾಯಿ 25 ವರ್ಷಕ್ಕೆ ಮದುವೆಯಾಗಿರುವ ಮಹಿಳೆಯಾಗಿದ್ದರೂ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವ ಮಗನ ನಿರ್ಧಾರಕ್ಕೆ ಬೆಂಬಲ (Support) ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಈ ವಿವಾಹಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಇದು ಅತಿಯಾಯಿತುʼ ಎಂದಿದ್ದಾರೆ. ಒಬ್ಬರು, “ಈ ಮಕ್ಕಳಂತೆಯೇ ಈ ನಿಶ್ಚಿತಾರ್ಥವೂ ಸಹ ಮಕ್ಕಳಾಟಿಕೆ ಎನಿಸುತ್ತದೆʼ ಎಂದಿದ್ದಾರೆ. ಮತ್ತೊಬ್ಬರು, ಈ ಹುಡುಗನ ತಂದೆಗೆ ಹುಷಾರಿಲ್ಲ. ತಂದೆಗೆ ಹುಷಾರಿಲ್ಲದ ಸಮಯದಲ್ಲಿ ಅವರ ಸಂತಸಕ್ಕೆಂದು ಈ ವಿವಾಹ ಮಾಡಲಾಗಿದೆ ಎಂದು ಹೇಳಿದ್ದಾರೆ.