
ಪ್ರಶ್ನೆ: ನನಗೆ ಈಗ ವರುಷ ನಲುವತ್ತು. ನನ್ನ ಪತ್ನಿ ಮೂವತ್ತೈದು. ಮದುವೆಯಾಗಿ ಹತ್ತು ವರ್ಷವಾಗಿದೆ. ಇತ್ತೀಚಿನವರೆಗೂ ಲೈಂಗಿಕವಾಗಿ ಸಕ್ರಿಯವಾಗಿ ಇದ್ದೆವು. ಅಂದರೆ ವಾರಕ್ಕೆ ಎರಡು ಬಾರಿ ಸಂಭೋಗ ಮಾಡುತ್ತಿದ್ದೆವು. ಈಗ ಅದು ತಿಂಗಳಿಗೆ ಒಮ್ಮೆ ಎಂಬಂತೆ ಆಗಿದೆ. ಇಬ್ಬರೂ ಉದ್ಯೋಗಿಗಳು. ಸಾಕಷ್ಟು ಕೆಲಸ ಮಾಡಿ ದಣಿದು ಬರುವುದರಿಂದ ಸೆಕ್ಸ್ ಮಾಡಲು ಉತ್ಸಾಹವಿಲ್ಲ ಎಂಬಂತಾಗಿದೆ. ಮೊದಲು ಮುಂಜಾನೆ ಸೆಕ್ಸ್ ಮಾಡುತ್ತಿದ್ದೆವು. ಈಗ ಅದೂ ಸಾಧ್ಯವಾಗುತ್ತಿಲ್ಲ. ಹಾಗೇ ಸೆಕ್ಸ್ ಆರಂಭಿಸಿದರೂ ಐದು ನಿಮಿಷದ ಒಳಗೆ ಸ್ಖಲಿಸಿಬಿಡುತ್ತೇನೆ. ನನಗೆ ಇನ್ನೂ ಹೆಚ್ಚು ಸಮಯ ಸೆಕ್ಸ್ ಮಾಡಬೇಕು ಎಂಬ ಆಸೆ. ನಾನು ವಯಾಗ್ರಾ ಸೇವಿಸಿದರೆ ಹೆಚ್ಚಿನ ಪರ್‌ಫಾರ್ಮೆನ್ಸ್ ಸಾಧ್ಯವೇ? ಭಾರತದಲ್ಲಿ ವಯಾಗ್ರಾ ಸಿಗುತ್ತದೆಯೇ? ಅದನ್ನು ಎಷ್ಟು ತೆಗೆದುಕೊಳ್ಳಬೇಕು?
ಉತ್ತರ: ಮದುವೆಯಾಗಿ ಹತ್ತು ವರ್ಷವಾದ ಮೇಲೆ ವಾರಕ್ಕೆ ಎರಡು ಬಾರಿ ಸೆಕ್ಸ್ ನಡೆಸುವುದು ಸಾಮಾನ್ಯ. ಕೆಲವು ದಂಪತಿಗಳ ವಿಷಯದಲ್ಲಿ ಅದೂ ಗ್ರೇಟ್ ಅನ್ನಬೇಕು. ಹೆಚ್ಚಿನ ದಂಪತಿಗಳಲ್ಲಿ ಮದುವೆಯ ಆರಂಭದಲ್ಲಿ ಇರುವ ಸೆಕ್ಷುಯಲ್ ಅರ್ಜ್ ಅಥವಾ ಲೈಂಗಿಕ ತೀವ್ರತೆ ಆಮೇಲೆ ಕಡಿಮೆಯಾಗುತ್ತದೆ. ಆಮೇಲೆ ಎಲ್ಲವೂ ರೂಢಿಯಂತೆ ನಡೆದುಬಿಡುತ್ತದೆ. ಮುನ್ನಲಿವು, ಸಂಭೋಗ ಎಲ್ಲವೂ ಯಾಂತ್ರಿಕ ಎಂಬಂತೆ ಆಗಿಬಿಡುವುದು ಸಾಮಾನ್ಯ. ಇಂಥ ಹೊತ್ತಿನಲ್ಲೇ ವಾರಕ್ಕೆ ಎರಡು ಇದ್ದದ್ದು ಒಂದಕ್ಕಿಳಿದು, ಎರಡು ವಾರಕ್ಕೊಮ್ಮೆ, ಮೂರು ವಾರಕ್ಕೊಮ್ಮೆ, ನಂತರ ತಿಂಗಳಿಗೊಮ್ಮೆ ಎಂಬಂತೆ ಆಗುತ್ತದೆ. ಎಷ್ಟು ವರ್ಷಗಳಾದರೂ ಲೈಂಗಿಕ ತೀವ್ರತೆಯನ್ನು ಕಾಪಾಡಿಕೊಳ್ಳಲು ಗಂಡ- ಹೆಂಡತಿ ಇಬ್ಬರೂ ತೀವ್ರವಾಗಿ ಪ್ರಯತ್ನ ಪಡಬೇಕು. ಜೊತೆಗೇ ಉದ್ಯೋಗದ ಒತ್ತಡಗಳೂ ಇರುತ್ತವೆ. ತಾರುಣ್ಯದ ಹುರುಪು ಇಳಿದು ಮಧ್ಯವಯಸ್ಸಿನ ಒತ್ತಡಗಳು ಕಾಡಲು ಆರಂಭಿಸುತ್ತವೆ. ಕೆಲವೊಮ್ಮೆ ಬಿಪಿ, ಶುಗರ್‌ನಂಥ ತೊಂದರೆಗಳೂ ಕಾಡಬಹುದು. ಇವೆಲ್ಲ ಸಹಜ. ಇದರಿಂದಾಗಿ ಸೆಕ್ಸ್ ಪ್ರಮಾಣ ಇಳಿಯುವುದೂ ಇದ್ದದ್ದೇ.
#Feelfree: ಗೊಂಬೆ ಜೊತೆಗೇ ಮೂಡ್ ಬರುತ್ತೆ, ಹೆಂಡ್ತಿ ಬೇಡ ಅನ್ಸುತ್ತೆ! ...
ಇದರಿಂಧ ಪಾರಾಗಲು ನೀವು ಸೆಕ್ಸ್‌ನಲ್ಲಿ ವೈವಿಧ್ಯವನ್ನು ರೂಢಿಸಿಕೊಳ್ಳಬೇಕು. ಐದು ನಿಮಿಷದ ಒಳಗೆ ಸ್ಖಲಿಸಿಬಿಡುವುದು- ಒತ್ತಡಕ್ಕೆ ಸಿಕ್ಕಿ ಸಂಭೋಗಿಸುವುದರಿಂದ. ಇದನ್ನು ತಡೆದು, ಸಂಭೋಗದ ಅವಧಿ ಹೆಚ್ಚು ಮಾಡಿಕೊಳ್ಳಲು ನೀವು ಸತತವಾಗಿ ಕೆಗೆಲ್ ವ್ಯಾಯಾಮ ಮಾಡಬಹುದು. ಕೆಗೆಲ್ ವ್ಯಾಯಾಮ ಮಾಡುವುದು ಹೀಗೆ- ಮೊದಲು ಪೆಲ್ವಿಕ್ ಸ್ನಾಯುಗಳನ್ನು ಗುರುತಿಸಿಕೊಳ್ಳಿ. ನೀವು ಮೂತ್ರ ಮಾಡುವಾಗ, ಒಮ್ಮೆ ಮೂತ್ರವನ್ನು ತಡೆಹಿಡಿಯಿರಿ. ಹೀಗೆ ತಡೆಹಿಡಿಯಲು ನೀವು ಬಳಸುವ ಸ್ನಾಯುವೇ ಪೆಲ್ವಿಕ್ ಸ್ನಾಯು. ಇನ್ನು ವ್ಯಾಯಾಮ- ಈ ಸ್ನಾಯುವನ್ನು ಒಮ್ಮೆ ಬಿಗಿಹಿಡಿದು ಐದು ಸೆಕೆಂಡ್ ಹಿಡಿದಿಟ್ಟುಕೊಳ್ಳಿ. ನಂತರ ಸಡಿಲಿಸಿ. ಹೀಗೆ ಐದು ಬಾರಿ ಮಾಡಿ. ಹೀಗೆ ದಿನದಲ್ಲಿ ಮೂರು ಬಾರಿ ಮಾಡಿ. ಇದನ್ನೇ ಮೂರು ತಿಂಗಳ ಕಾಲ ಮಾಡಿರಿ. ಇದು ಫಲ ಕೊಡುತ್ತದೆ. ನಿಮ್ಮ ಮೂತ್ರ ಕಟ್ಟುವ ಶಕ್ತಿ, ವೀರ್ಯವನ್ನು ತಡೆಹಿಡಿದಿಟ್ಟುಕೊಳ್ಳುವ ಶಕ್ತಿ- ಎಲ್ಲವೂ ವೃದ್ಧೀಯಾಗುತ್ತದೆ. ಇದರಿಂದ ನಿಮ್ಮ ಲೈಂಗಿಕ ಸುಖವೂ ವೃದ್ಧಿಯಾಗುತ್ತದೆ.
#Feelfree: ನಂಗೆ ಗರ್ಲ್‌ಫ್ರೆಂಡ್ ಇಲ್ಲವಲ್ಲ, ಏನ್ ಮಾಡಲಿ? ...
ಇನ್ನು ವಯಾಗ್ರಾ. ಅದು ನಿಮಗೆ ಅಗತ್ಯವೇ ಇಲ್ಲ. ಈಗಿನ್ನೂ ನಿಮಗೆ ವಯಸ್ಸು ನಲುವತ್ತು. ನಿಮ್ಮ ಪತ್ನಿಗೆ ಮೂವತ್ತೈದು. ಇಬ್ಬರಿಗೂ ಪರಸ್ಪರ ಪ್ರಚೋದಿಸಿಕೊಳ್ಳಲು, ದೇಹ- ಮನಸ್ಸು ಅರಳಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ, ಸೆಕ್ಸ್ ಅನ್ನು ವೈವಿಧ್ಯಮಯವಾಗಿ, ಕ್ರಿಯೇಟಿವ್ ಆಗಿ ಅನುಭವಿಸುವ ಸಾಮರ್ಥ್ಯವೂ ಕಲ್ಪನಾಶಕ್ತಿಯೂ ಇರುತ್ತದೆ. ಹೀಗಾಗಿ ವಯಾಗ್ರಾ ಅಗತ್ಯವಿಲ್ಲ. ಅದನ್ನು ಸೇವಿಸುವುದು ಅನಾರೋಗ್ಯಕರ ಕೂಡ. ಒರಿಜಿನಲ್ ವಯಾಗ್ರಾ ನಮ್ಮ ದೇಶದಲ್ಲಿ ಸಿಗುವುದಿಲ್ಲ. ಅದರ ನಕಲಿ ಅವತಾರಗಳು ಸಾಕಷ್ಟು ಸಿಗುತ್ತವೆ. ಆದರೆ ಅವು ಯಾವುವೂ ಆರೋಗ್ಯಕರವಲ್ಲ. ಅದನ್ನು ಬಳಸಿ ಬಳಸಿ ಹಲವು ಸಮಯದ ನಂತರ ಸೆಕ್ಸ್‌ನಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರು ಇದ್ದಾರೆ.
#Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ? ...
ಅದರ ಬದಲಾಗಿ, ವಿವಿಧ ಭಂಗಿಗಳನ್ನು ಪ್ರಯತ್ನಿಸಿ. ಮನೆಯನ್ನು ಬಿಟ್ಟು ಹೊಸ ಜಾಗಗಳಿಗೆ ಪ್ರವಾಸ ಹೋಗಿ. ಅಲ್ಲಿನ ವಾತಾವರಣದಲ್ಲಿ ಸೆಕ್ಸ್ ಮಾಡಲು ಪ್ರಯತ್ನಿಸಿ. ಮನಸ್ಸಿಗೆ ಹೊಸ ಹುರುಪು ತುಂಬುವ ಜಾಗಗಳಲ್ಲಿ ಸಂಭೋಗಿಸಿ. ರೋಲ್ ಪ್ಲೇ ಮಾಡಿ- ಹಾಗೆಂದರೆ ನಿಮ್ಮನ್ನು ಯಾವ ಕಲ್ಪನೆ ಕೆರಳಿಸುತ್ತದೋ ಆ ಕಲ್ಪನೆಯ ವೇಷವನ್ನು ನಿಮ್ಮ ಪತ್ನಿಗೆ ತೊಡಿಸಿ ಅದರಿಂದ ಪ್ರಚೋದನೆ ಪಡೆಯಿರಿ. ನೀವೂ ನಿಮ್ಮ ಹೆಂಡತಿಯನ್ನು ಉದ್ರೇಕಿಸಲು ಇಂಥ ರೋಲ್ ಪ್ಲೇ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.