ಹೊಸ ವರ್ಷದಲ್ಲಿ ನಿಮ್ಮ ಮಗುವನ್ನು ಜಾಣಜಾಣೆಯರನ್ನಾಗಿಸಿ!

By Suvarna News  |  First Published Jan 4, 2021, 7:35 PM IST

ಕೋವಿಡ್‌ ಕೋವಿಡ್‌ ಅನ್ನುತ್ತಾ ಮಗುವನ್ನು ಮನೆಯಲ್ಲೇ ಕೂಡಿಹಾಕಿದ್ದು ಸಾಕು. ಹೊಸ ವರ್ಷದಲ್ಲಾದರೂ ನಿಮ್ಮ ಮಗುವನ್ನು ಹಲವು ಚಟುವಟಿಕೆಗಳಲ್ಲಿ ತೊಡಗಿಸಿ, ಜಾಣರನ್ನಾಗಿಸಿ.


ನಿಮ್ಮ ಮಗು ಜಾಣ/ಜಾಣೆ ಆಗಬೆಕು, ಬುದ್ಧವಂತನಾಗಿ ಬೆಳೆಯಬೇಕು ಎಂಬ ಆಸೆ ನಿಮಗೂ ಇದೆ ಅಲ್ಬಾ? ಐಕ್ಯೂ ಚೆನ್ನಾಗಿದ್ದರೆ ಆತ/ ಆಕೆ ಒಳ್ಳೆಯ ಜೀವನ ನಡೆಸಬಹುದು ಅಂದುಕೊಂಡಿರುತ್ತೀರಿ. ಆದರೆ ಮಗುವಿನ ಐಕ್ಯೂ ಹೆಚ್ಚಿಸಬೇಕಾದರೆ ಏನು ಮಾಡಬೇಕು ಅನ್ನೋದು ಗೊತ್ತಿದೆಯಾ? ಇಲ್ಲಿವೆ ಕೆಲವು ಸೂತ್ರಗಳು. ಇವುಗಳನ್ನು ನಿರಂತರವಾಗಿ ಪಾಲಿಸಿದರೆ ಒಂದೇ ವರ್ಷದಲ್ಲಿ ಧನಾತ್ಮಕ ಫಲಿತಾಂಶ ಕಾಣಬಹುದು.

ಇನ್‌ಸ್ಟ್ರುಮೆಂಟ್ ನುಡಿಸಲು ಕಲಿಸಿ
ಮಗು ಯಾವುದಾದರೊಂದು ಸಂಗೀತ ವಾದ್ಯವನ್ನು ನುಡಿಸಲು ಕಲಿತಾದ ಅದು ಹೆಚ್ಚು ಚುರುಕಾಗುವುದು, ಅದರ ಗಣಿತದ ಶಕ್ತಿ ಹೆಚ್ಚುವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಇದನ್ನು ಎಂಆರ್‌ಐ ಸ್ಕ್ಯಾ‌ನ್‌ ಪರೀಕ್ಷೆಗಳ ಮೂಲಕವೂ ಕಂಡುಕೊಳ್ಳಲಾಗಿದೆ. ಗಿಟಾರ್‌, ಸಿತಾರ್‌, ಕೀಬೋರ್ಡ್‌, ತಬಲಾ, ವೀಣೆ, ಕೊಳಲು ಹೀಗೆ ಯಾವುದೇ ಇನ್‌ಸ್ಟ್ರುಮೆಂಟ್‌ ಆದರೂ ಓಕೆ. ಕಲಿಯುವುದು ಮುಖ್ಯ.

Tap to resize

Latest Videos

undefined

ಆಟದಲ್ಲಿ ತೊಡಗಿಸಿ
ಯಾವುದಾದರೊಂದು ಆಟದಲ್ಲಿ ಮಗು ತೊಡಗಿಕೊಳ್ಳುವುದು ಮುಖ್ಯ. ಅದರಲ್ಲಿ ಎಕ್ಸ್‌ಪರ್ಟ್‌ ಆಗಬೇಕೆಂದೇನಿಲ್ಲ. ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫುಟ್ಬಾಲ್‌, ಹೀಗೆ ಯಾವುದಾದರೂ ಸರಿ. ಆಟದಲ್ಲಿ ತೊಡಗಿದಾಗ ಮಗುವಿನ ದೇಹದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್‌ ಹಾರ್ಮೋನುಗಳು ಮೆದುಳನ್ನು ಚುರುಕಾಗಿಡುತ್ತವೆ. ಆಡುತ್ತಾ ಹೋದಂತೆ ದೈಹಿಕ ದೃಢತೆಯೊಂದಿಗೆ ಮಾನಸಿಕ ಚುರುಕುತನವೂ ಹೆಚ್ಚುತ್ತದೆ.

ಗಣಿತದಲ್ಲಿ ಆಸಕ್ತಿ
ಮಗುವಿನಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸಿ. ಪ್ರತಿದಿನವೂ ಅರ್ಧ ಗಂಟೆ ಲೆಕ್ಕ ಕೊಟ್ಟು ಬಿಡಿಸಲು ತೊಡಗಿಸಿ. ಅದು ಸರಳವಾದ ಲೆಕ್ಕವಾದರೂ ಚಿಂತೆಯಿಲ್ಲ. ಗಣಿತ ಮೆದುಳನ್ನು ಸಕ್ರಿಯವಾಗಿಡುತ್ತದೆ. ಅಬಾಕಸ್‌, ಯೋಗ ಗಣಿತ ಮುಂತಾದವನ್ನೆಲ್ಲ ಕಲಿಸುವುದೂ ಕೂಡ ಒಳ್ಳೆಯದೇ.

ಇರುವ ದಡದಲ್ಲೇ ಸಂತೋಷವಾಗಿರಲು ನಾವೇಕೆ ಯತ್ನಿಸುವುದಿಲ್ಲ? ...

ಆಳವಾದ ಉಸಿರಾಟ
ಆಳವಾದ ಉಸಿರಾಟವೂ ಒಂದು ಬಗೆಯ ಪ್ರಾಣಾಯಾಮವೇ. ಇದು ಮೆದುಳಿನ ನರಗಳನ್ನು ಚುರುಕಾಗಿಸುತ್ತದೆ. ಚಿಂತನಾ ಶಕ್ತಿಯನ್ನು ಉದ್ದೀಪಿಸುತ್ತದೆ. ದಿನಕ್ಕೊಮ್ಮೆ ಅರ್ಧ ಗಂಟೆ ನಿಮ್ಮ ಮಗುವಿನೊಂದಿಗೆ ಆಳವಾದ ಉಸಿರಾಟದಲ್ಲಿ ನೀವೂ ತೊಡಗಿ. ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ತಜ್ಞರು ಇತ್ತೀಚೆಗೆ ಅಧ್ಯಯನದಿಂದ ಕಂಡುಕೊಂಡಿದ್ದೆಂದರೆ, ಎಂಟು ತಿಂಗಳ ಕಾಲದ ದೀರ್ಘ ಉಸಿರಾದ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರ ಮೆದುಳು ಸೂಕ್ಷ್ಮವಾಗಿ ಹಿಗ್ಗಿದುದು ಗೊತ್ತಾಗಿದೆ.

ಮೆದುಳಿನ ಗೇಮ್‌ಗಳು
ಇಂದಿನ ಮಕ್ಕಳು ನಿಮ್ಮಿಂದ ಮೊಬೈಲ್‌ ಕಸಿದುಕೊಂಡು ಅದರಲ್ಲಿ ಆಟದಲ್ಲಿ ತೊಡಗಿಕೊಳ್ಳುವುದು ಸಹಜ. ಅದು ಪೂರ್ತಿ ತಪ್ಪೇನೂ ಅಲ್ಲ. ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಮುಳುಗುವುದ ತಪ್ಪೇ. ಆದರೆ ಮಗುವಿನ ಬೆಳವಣಿಗೆಗೆ ಪೂರಕವಾದ, ಆರೋಗ್ಯಕರವಾದ ಕೆಲವು ಗೇಮ್‌ಗಳನ್ನು ನೀವೇ ಡೌನ್‌ಲೋಡ್‌ ಮಾಡಿ, ಅದನ್ನು ನಿಗದಿತ ಸಮಯದಲ್ಲಿ ಆಡಲು ಪ್ರೋತ್ಸಾಹಿಸಿ. ಆ ಆಟಗಳು ಮೆದುಳಿನ ಕಾರ‍್ಯವೈಖರಿಯನ್ನು ಚುರುಕಾಗಿಸುವಂತೆ ಇರಲಿ. 

ಮಕ್ಕಳು ನೋಡಬಾರದ ಪ್ರಾಯದಲ್ಲಿ ಪೋರ್ನ್ ನೋಡಿದ್ರೆ..? ...

ಪ್ರವಾಸ ಕರೆದುಕೊಂಡು ಹೋಗಿ
ಮಗುವನ್ನು ಸುತ್ತಾಡಿಸುವುದು, ಹೊರಗೆ ಕರೆದುಕೊಂಡು ಹೋಗುವುದು ಮಗುವಿಗೂ, ನಿಮಗೂ ಫನ್‌, ಜೊತೆಗೆ ಕಲಿಕೆಯ ಅವಕಾಶ ಕೂಡ. ಹೊಸ ಸಂಗತಿಗಳನ್ನು ಮಗು ಬೇಗ ಬೇಗನೆ ತಿಳಿದಷ್ಟೂ ಅದರ ಐಕ್ಯೂ ಬೆಳೆಯುತ್ತಾ ಹೋಗುತ್ತದೆ. ಪೋಸ್ಟ್‌ ಆಫೀಸ್‌, ಬ್ಯಾಂಕ್‌, ಪೊಲೀಸ್‌ ಸ್ಟೇಶನ್‌ ಮುಂತಾದೆಡೆ ಕರೆದುಕೊಂಡು ಹೋಗಿ ಅಲ್ಲಿನ ಕೆಲಸದ ರೀತಿಯನ್ನು ಅರ್ಥ ಮಾಡಿಸಿ. 

ವೃತ್ತಿಗಳನ್ನು ಅರ್ಥ ಮಾಡಿಸಿ
ಮಗು ಇಂದಿನ ಜಗತ್ತಿನಲ್ಲಿ ಒಂದಲ್ಲ ಒಂದು ವೃತ್ತಿಯನ್ನು ಕಲಿಯುವುದು ಅನಿವಾರ್ಯ ಅಲ್ಲವೇ. ಯಾವುದೋ ಒಂದು ಕೆಲಸದಲ್ಲಿ ಮಾತ್ರವೇ ತೊಡಗಿಸಿಕೊಳ್ಳುವುದಲ್ಲ, ಹತ್ತು ಹಲವಾರು ವೃತ್ತಿಗಳ ಬಗ್ಗೆ ತಿಳಿದಿದ್ದಾಗ ತನಗೆ ಇಷ್ಟವಾದುದನ್ನು ಆರಿಸಿಕೊಳ್ಳಲೂ ಆಗುತ್ತದೆ; ಇತರ ವೃತ್ತಿಗಳ ಬಗ್ಗೆ ಅರಿವಿದ್ದರೆ ಆ ಕಡೆಗೂ ಬೆಳೆಯುವ ಸಾಧ್ಯತೆಗಳಿವೆ. ತನ್ನ ತಂದೆ ತಾಯಿಯ ಕೆಲಸ ಏನೆಂದು ಮಗು ಮೊದಲು ಅರ್ಥ ಮಾಡಿಕೊಳ್ಳಲಿ. 

ಗರ್ಭದಲ್ಲಿರುವ ಶಿಶು ತನ್ನ ಪುಟ್ಟ ಕಾಲುಗಳಿಂದ ಒದೆಯುವುದೇಕೆ? ...

ಹಣಕಾಸಿನ ಅರಿವು
ಮುಗುವಿಗೆ ಸಣ್ಣ ಪ್ರಾಯದಲ್ಲೇ ಹಣಕಾಸಿನ ವಹಿವಾಟು ಗೊತ್ತಾಗುವುದು ಮುಖ್ಯ. ಮನೆಗೆ ದಿನಸಿ ಸಾಮಗ್ರಿ ಕೊಳ್ಳುವಾಗ ಮಗುವನ್ನೂ ಕರೆದೊಯ್ದು ಸರಳವಾದ ಹಣಕಾಸಿನ ಲೆಕ್ಕಾಚಾರ ಆತ/ಆಕೆಯಿಂದಲೇ ಮಾಡಿಸಿ ಹಣ ಎಣಿಸಿ ಕೊಡಲು ಕಲಿಸಿ.
 

click me!