ಡೇಟಿಂಗ್‌ ಸುದ್ದಿ ಬೆನ್ನಲ್ಲೇ ಶುಬಮನ್ ಗಿಲ್ ತಬ್ಬಿಕೊಂಡ ಸಾರಾ ತೆಂಡೂಲ್ಕರ್ ಫೋಟೋ ವೈರಲ್‌; ಅಸಲಿನಾ, ಡೀಪ್‌ ಫೇಕಾ?

By Vinutha Perla  |  First Published Nov 8, 2023, 3:48 PM IST

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಇದ್ರ ಬೆನ್ನಲ್ಲೇ ಸಾರಾ ತೆಂಡೂಲ್ಕರ್, ಶುಬ್‌ಮನ್ ಗಿಲ್ ತಬ್ಬಿಕೊಂಡಿರೋ ಫೋಟೋ ವೈರಲ್ ಆಗ್ತಿದೆ. ಆದ್ರೆ ಇದು ಅಸಲಿ ಫೋಟೋನಾ, ಇಲ್ಲ ನಕಲಿನಾ?


ಸೆಲೆಬ್ರಿಟಿಗಳ ಡೀಪ್‌ಫೇಕ್, ಮಾರ್ಫ್ಡ್ ಅಥವಾ ಫೋಟೋಶಾಪ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್‌ ಆಗುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ, ಜಾರಾ ಪಟೇಲ್ ಎಂಬ ಮಹಿಳೆಯ ದೇಹದ ಮೇಲೆ ರಶ್ಮಿಕಾ ಮಂದಣ್ಣ ಅವರ ಮಾರ್ಫ್ಡ್ ಮುಖವನ್ನು ಒಳಗೊಂಡಿರುವ ವೀಡಿಯೊ ವೈರಲ್ ಆಗಿದ್ದು, ಟೆಕ್ನಾಲಜಿಯ ಬಗ್ಗೆ ಆತಂಕವನ್ನು ಉಂಟು ಮಾಡಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್‌ಫೆಕ್‌ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿರುವ ಬೆನ್ನಲ್ಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ತಿರುಚಿದ ಡೀಪ್‌ಫೇಕ್ ಫೋಟೊ ಸಹ ವೈರಲ್ ಆಗಿದೆ.  ಅಮಿತಾಬ್ ಬಚ್ಚನ್ ಮತ್ತು ಮೃಣಾಲ್ ಠಾಕೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. 

ಈಗ, ರಶ್ಮಿಕಾ, ಕತ್ರಿನಾ ಕೈಫ್ ಮತ್ತು ಹೆಚ್ಚಿನವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಏಸ್ ಕ್ರಿಕೆಟಿಗ ಶುಭಮನ್ ಗಿಲ್ ಅವರ ಹೆಸರುಗಳು ಸೇರ್ಪಡೆಗೊಂಡಿವೆ. ಸಾರಾ ತೆಂಡೂಲ್ಕರ್ ಶುಬ್‌ಮಾನ್ ಗಿಲ್ ಅವರನ್ನು ತಬ್ಬಿಕೊಂಡಿರುವ (Hugging) ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ.

Tap to resize

Latest Videos

ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಲು ಸಂಚು; ಏನು ಹೇಳ್ತಾರೆ ಅಮಿತಾಭ್ ಬಚ್ಚನ್ !

ಶುಬ್‌ಮನ್ ಗಿಲ್- ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ವದಂತಿ
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಪೋಸ್ಟ್, ಪ್ರತಿಕ್ರಿಯೆಗಳು ಭಾರಿ ಸಂಚಲನ ಸೃಷ್ಟಿಸಿತ್ತು. ಇನ್ನು ಪಂದ್ಯದ ವೇಳೆ ಸಾರಾ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ಹಾಜರಾಗುವ ಮೂಲಕ ಉಹಾಪೋಹಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದರು. ಈ ಬೆಳವಣಿಗೆ ನಡುವೆ ಇದೀಗ ಗಿಲ್ ಹಾಗೂ ಸಾರಾ ತಬ್ಬಿಕೊಂಡಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

'ಸಾರಾ ತೆಂಡೂಲ್ಕರ್ ಅವರು ಶುಭ್‌ಮನ್‌  ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ' ಎಂಬ ಶೀರ್ಷಿಕೆಯಡಿ ಫೋಟೋ ವೈರಲ್ ಆಗ್ತಿದೆ. ಇದು ಅಭಿಮಾನಿಗಳ (Fans) ಖುಷಿಯನ್ನು ಸಹ ಹೆಚ್ಚಿಸಿದೆ. ಆದರೆ ಈ ಫೋಟೋ ಅಸಲಿಯಲ್ಲ ಮಾರ್ಫ್ಡ್‌ ಎಂಬುದು ಬಯಲಾಗಿದೆ. 

ಡೀಪ್‌ಫೇಕ್: ರಶ್ಮಿಕಾ ಮಂದಣ್ಣ ಆಯಿತು; ಈಗ ಕತ್ರಿನಾ ಕೈಫ್ ಮಾರ್ಫಿಂಗ್‌ಗೆ ಬಲಿ

ಅರ್ಜುನ್ ತೆಂಡೂಲ್ಕರ್ ಜೊತೆ ಸಾರಾ ತೆಗೆಸಿಕೊಂಡಿದ್ದ ಫೋಟೋ ಎಡಿಟ್‌
ಮೂಲ ಚಿತ್ರವನ್ನು ಸಾರಾ ಅವರು ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಅವರ 24ನೇ ಹುಟ್ಟುಹಬ್ಬದಂದು ಸೆಪ್ಟೆಂಬರ್ 24, 2023ರಂದು ಒಂದೆರಡು ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ, ಮೂಲ ಚಿತ್ರದಲ್ಲಿ ಅರ್ಜುನ್ ಕುರ್ಚಿಯ ಮೇಲೆ ಕುಳಿತಿದ್ದು, ಕೈಯಲ್ಲಿ ಐಸ್ ಕ್ರೀಮ್ ಕೋನ್ ಹಿಡಿದುಕೊಂಡು ಹಸಿರು ಪ್ಯಾಂಟ್‌ನೊಂದಿಗೆ ಕಪ್ಪು ಟೀ ಶರ್ಟ್‌ನಲ್ಲಿ ಡ್ಯಾಪರ್ ಆಗಿ ಕಾಣುತ್ತಿದ್ದಾರೆ. ಅದೇ ಚಿತ್ರದಲ್ಲಿ, ಕಪ್ಪು ಪ್ಯಾಂಟ್‌ನೊಂದಿಗೆ ಜೋಡಿಯಾಗಿರುವ ಕಂದು ಬಣ್ಣದ ಟಾಪ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದ ಸಾರಾ, ತನ್ನ ಸಹೋದರನನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ಇದೇ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.

ಡೀಪ್‌ ಫೇಕ್ ಫೋಟೊ ವೈರಲ್: ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ
ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌ ಡೀಪ್ ಫೇಕ್‌ ವಿಡಿಯೋ  ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದೆ.  ಇಂಥ ನಕಲಿ ಫೋಟೋ, ವಿಡಿಯೋ, ಕುರಿತು ದೂರು ಸಲ್ಲಿಕೆಯಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದು ಹಾಕಬೇಕು ಎಂದು ಗಡುವು ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಈ ಕುರಿತು ಕೆಲ ಅಂಶಗಳ ಕುರಿತು ಮತ್ತೊಮ್ಮೆ ಸಲಹಾವಳಿ ಬಿಡುಗಡೆ ಮಾಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ತಿರುಚಿದ ಪೋಟೋ, ವಿಡಿಯೋ ಕುರಿತು ದೂರು ದಾಖಲಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದುಹಾಕಬೇಕು. ಇಲ್ಲದೆ ಹೋದಲ್ಲಿ 3 ವರ್ಷ ಜೈಲು ಮತ್ತು 1 ಲಕ್ಷ ರು. ದಂಡ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಈ ವಿಡಿಯೋ ಕುರಿತು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಮಾಹಿತಿ ತಂತ್ರ ಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಮ್ಮ ಕಾನೂನು ಬಾಧ್ಯತೆಯನ್ನು ಪೂರೈಸಬೇಕು ಎಂದು ಎಚ್ಚರಿಸಿದ್ದರು.

click me!