ಸಂಭೋಗದ ಬಗ್ಗೆ ಜನರು ತಿಳಿಯೋದು ಸಾಕಷ್ಟಿದೆ. ನೀವು ಮಾಡುವ ಕೆಲಸ, ನಮ್ಮ ದಿನಚರಿ, ಆಹಾರ ಎಲ್ಲವೂ ನಮ್ಮ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸೆಕ್ಸ್ ಗೆ ಮುನ್ನ ಮಾಡುವ ತಪ್ಪುಗಳು ನಿಮ್ಮ ಅರಿವಿಲ್ಲದೆ ಸಂಭೋಗ ಸುಖ ಹಾಳು ಮಾಡುತ್ತದೆ.
ನಿಮ್ಮ ವಯಸ್ಸು ನಲವತ್ತಾಗ್ತಾ ಇದ್ದಂತೆ ಸೆಕ್ಸ್ ನಿಂದ ದೂರ ಇರ್ಬೇಕಾಗಿಲ್ಲ. ನಲವತ್ತರ ನಂತ್ರವೂ ನಿಮ್ಮ ಲೈಂಗಿಕ ಜೀವನ ಸುಖಕರವಾಗಿರಬಹುದು, ಸಂತೋಷದಿಂದ ಕೂಡಿರಬಹುದು. ಯಾಕೆಂದ್ರೆ ನಿಮ್ಮ ಬಳಿ ಸಂಭೋಗಕ್ಕೆ ಸಂಬಂಧಿಸಿದ ಅನುಭವಿರುತ್ತದೆ. ಅನೇಕ ವರ್ಷಗಳಿಂದ ಸಂಗಾತಿ ಜೊತೆ ನೀವು ಶಾರೀರಿಕ ಸಂಬಂಧ ಬೆಳೆಸುವ ಕಾರಣ ಸಂಗಾತಿ ಏನು ಬಯಸುತ್ತಾರೆ, ಯಾವ ಸಮಯದಲ್ಲಿ ಸಂಭೋಗವನ್ನು ನೀವು ಇಷ್ಟಪಡುತ್ತೀರಿ, ಕಾಂಡೋಮ್ ಬಳಕೆ ಸೇರಿದಂತೆ ಸಾಕಷ್ಟು ವಿಷ್ಯಗಳ ಅನುಭವವಾಗಿರುತ್ತದೆ. ಆದ್ರೆ ಹತ್ತು – ಹದಿನೈದು ವರ್ಷಗಳಿಂದ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುತ್ತಿರುವ ಕೆಲ ದಂಪತಿಗೆ ಸಂಭೋಗಕ್ಕೆ ಸಂಬಂಧಿಸಿದ ಅನೇಕ ಮಾಹಿತಿ ತಿಳಿದಿರೋದಿಲ್ಲ. ಯಾಂತ್ರಿಕವಾಗಿ ಸಂಬಂಧ ಬೆಳೆಸುವ ಜನರು ಅದ್ರಲ್ಲಿ ರುಚಿ ಕಳೆದುಕೊಳ್ಳೋದು ಒಂದಾದ್ರೆ ಮತ್ತೊಂದೆಡೆ ಕೆಲ ತಪ್ಪುಗಳನ್ನು ಮಾಡಿ ತೊಂದರೆಗೆ ಸಿಲುಕುತ್ತಾರೆ. ನಾವಿಂದು ಸಂಭೋಗಕ್ಕಿಂತ ಮೊದಲು ನೀವು ಏನು ಮಾಡ್ಬಾರದು ಎಂಬ ವಿಷ್ಯವನ್ನು ಹೇಳ್ತೇವೆ.
ಸಂಭೋಗ (Sex) ಕ್ಕಿಂತ ಮೊದಲು ಈ ಕೆಲಸ ಮಾಡಬೇಡಿ :
undefined
ಆಂಟಿಹಿಸ್ಟಮೈನ್ (Antihistamine) ಬೇಡ : ನೀವು ಶಾರೀರಿಕ ಸಂಬಂಧ ಬೆಳೆಸುವ ಪ್ಲಾನ್ ನಲ್ಲಿದ್ದರೆ ಸಂಭೋಗಕ್ಕಿಂತ ಮೊದಲು ಆಂಟಿಹಿಸ್ಟಮೈನ್ ತೆಗೆದುಕೊಳ್ಳಬೇಡಿ. ಇದು ಮೂಗಿನ ಲೋಳೆ ಪೊರೆಗಳನ್ನು ಒಣಗಿಸಿ ಮೂಗಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ನೀವು ಸೆಕ್ಸ್ ಸಮಯದಲ್ಲಿ ಇದನ್ನು ತೆಗೆದುಕೊಂಡ್ರೆ ಯೋನಿ ಕೂಡ ಒಣಗುವ ಅಪಾಯವಿದೆ. ಯೋನಿ (vagina) ಶುಷ್ಕವಾದ್ರೆ ಲೈಂಗಿಕತೆ ಆನಂದಿಸುವುದು ಕಷ್ಟವಾಗುತ್ತದೆ. ನೋವು ಕಾಣಿಸಿಕೊಳ್ಳುತ್ತದೆ.
ನೈರ್ಮಲ್ಯ ಮುಖ್ಯ ಹೌದು, ಆದ್ರೂ ಸಂಭೋಗಕ್ಕಿಂತ ಮೊದಲು ಪ್ಯುಬಿಕ್ಸ್ ಹೇರ್ ಶೇವ್ ಮಾಡ್ಬುಹುದಾ?
ಮದ್ಯ ಸೇವನೆಯಿಂದ ದೂರವಿರಿ : ಮದ್ಯಸೇವನೆ ಮಾಡಿದ ನಂತ್ರ ಸಂಭೋಗ ಸುಖ ದುಪ್ಪಟ್ಟಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದ್ರೆ ಇದು ತಪ್ಪು. ಮದ್ಯಸೇವನೆ ಮಾಡೋದು ನಿಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮಧ್ಯದಲ್ಲೇ ನಿಮಗೆ ನಿದ್ರೆ ಬರಬಹುದು. ಮದ್ಯಸೇವನೆ ದೀರ್ಘಾವಧಿಯಲ್ಲಿ ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಇದ್ರಿಂದ ಕಾಡುತ್ತದೆ. ಅನೇಕರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಮದ್ಯ ಸೇವನೆಯೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ರಲ್ಲೂ ಸೆಕ್ಸ್ ಮುನ್ನ ಮದ್ಯ ಸೇವನೆ ಒಳ್ಳೆಯ ನಿರ್ಧಾರವಲ್ಲ.
ವೀಕ್ನೆಸ್ ಇದ್ದರೂ ಗಂಡು ಹೆಣ್ಣಿಗೆ ಸುಖ ಕೊಡೋದು ಹೇಗೆಂದು ವಾತ್ಸಾಯನ ಹೇಳಿದ್ದಾನೆ!
ಇಂಥ ಆಹಾರ ಸೇವನೆ ಬೇಡ : ಸಂಭೋಗ ಸುಖವನ್ನು ಸಂಪೂರ್ಣ ಆನಂದಿಸಬೇಕು ಎಂದಾದ್ರೆ ನೀವು ಮಸಾಲೆಯುಕ್ತ ಆಹಾರದಿಂದ ದೂರವಿರಬೇಕು. ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತ್ರ ದೇಹ ಜಡವಾಗುತ್ತದೆ. ಇದಲ್ಲದೆ ಅನೇಕರಿಗೆ ಜನನಾಂಗದಿಂದ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. ಇದು ನಿಮ್ಮ ಲೈಂಗಿಕತೆಯನ್ನು ಹಾಳು ಮಾಡುತ್ತದೆ. ಶಾರೀರಿಕ ಸಂಬಂಧ ಬೆಳೆಸಲು ನಿಮಗೆ ಆಸಕ್ತಿ ಇರೋದಿಲ್ಲ. ನೀವು ಸೆಕ್ಸ್ ಮುನ್ನ ದಾಳಿಂಬೆ ಹಣ್ಣು ಅಥವಾ ಅದರ ಜ್ಯೂಸ್ ಕುಡಿಯಿರಿ. ಚಾಕೋಲೇಟ್, ಕಲ್ಲಂಗಡಿ ಹಣ್ಣು, ಬೆಣ್ಣೆ ಹಣ್ಣಿನ ಸೇವನೆಯನ್ನು ನೀವು ಮಾಡ್ಬಹುದು.
ಸೆಕ್ಸ್ ಆಟಿಕೆ (Sex Toys) ಬಳಕೆ ಹೀಗಿರಲಿ : ಒಂದ್ವೇಳೆ ನೀವು ಸಂಭೋಗ ಬೆಳೆಸುವ ವೇಳೆ ಸೆಕ್ಸ್ ಆಡಿಕೆಗಳನ್ನು ಬಳಸುತ್ತಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಹಾಗೆಯೇ ಬಳಸಬೇಡಿ. ಮೊದಲ ಬಾರಿ ಇರಲಿ ಇಲ್ಲ ಆಗಾಗ ಬಳಸುವ ಆಟಿಕೆ ಆಗಿರಲಿ, ನೀವು ಅದನ್ನು ಸ್ವಚ್ಛವಾಗಿ ತೊಳೆದು ಬಳಕೆ ಮಾಡಿ. ಇಲ್ಲವೆಂದ್ರೆ ಬ್ಯಾಕ್ಟೀರಿಯಾ, ಸೋಂಕು ನಿಮ್ಮನ್ನು ಕಾಡುವ ಅಪಾಯವಿರುತ್ತದೆ.
ಮೂತ್ರ ವಿಸರ್ಜನೆ (Urination) : ಸೆಕ್ಸ್ ಮೊದಲು ಅನೇಕರು ಮೂತ್ರ ವಿಸರ್ಜನೆಯನ್ನು ಮಾಡೋದಿಲ್ಲ. ಮೂತ್ರ ವಿಸರ್ಜನೆ ಮಾಡೋದು ಬಹಳ ಮುಖ್ಯ. ಸಂಭೋಗಕ್ಕಿಂತ ಮೊದಲು ನೀವು ಮೂತ್ರ ವಿಸರ್ಜನೆ ಮಾಡಿದಲ್ಲಿ ನೀವು ರಿಲ್ಯಾಕ್ಸ್ ಆಗ್ತಿರಿ. ಆರಾಮವಾಗಿ ಸಂಭೋಗ (Sexual Intercourse) ಸುಖ ಪಡೆಯಬಹುದು. ಅದೇ ಮೂತ್ರ ತುಂಬಿದ್ದಲ್ಲಿ ಶಾರೀರಿಕ ಸಂಬಂಧ (Physical Relationship) ಬೆಳೆಸುವಾಗ ಹಿಂಸೆಯಾಗುತ್ತದೆ.