ವಿಶ್ವದ ಭಯಾನಕ ಸ್ಥಳ ಪರಿಚಯಿಸೋ ದಂಪತಿ ಸ್ಮಶಾನಕ್ಕೆ ಹೋದಾಗ ದೆವ್ವ ಬಂದ್ ಬಿಡೋದಾ?

By Suvarna News  |  First Published Nov 8, 2023, 3:10 PM IST

ದುಷ್ಟಶಕ್ತಿಗಳನ್ನು ನಂಬುವವರು ಅನೇಕರಿದ್ದಾರೆ. ಆ ವಿಷ್ಯಗಳನ್ನು ತನಿಖೆ ಮಾಡುವ ಜನರು ಸಾಕಷ್ಟು ಮಂದಿ. ಅನೇಕ ವೇಳೆ ಏನೋ ಮಾಡಲು ಹೋಗಿ ಇನ್ನೇನೋ ಆಗಿರುತ್ತದೆ. ಅದಕ್ಕೆ ಈ ದಂಪತಿ ಉತ್ತಮ ನಿದರ್ಶನ.
 


ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದರು ಎಂಬ ಗಾದೆ ಇದೆ. ಈ ದಂಪತಿ ಸ್ಥಿತಿಯೂ ಈಗ ಅದೇ ಆಗಿದೆ. ತಮ್ಮ ಬಿಡುವಿನ ವೇಳೆಯಲ್ಲಿ ಅಧಿಸಾಮಾನ್ಯ ಚಟುವಟಿಕೆಯನ್ನು ತನಿಖೆ ಮಾಡುವ ದಂಪತಿ ಈಗ ತೊಂದರೆ ತಂದುಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಸ್ಮಶಾನಕ್ಕೆ ಹೋಗಿದ್ದರು. ಅಲ್ಲಿಂದ ಬರುವಾಗ ಬರಿಗೈನಲ್ಲಿ ಬರುವ ಬದಲು ಒಂದು ಕೆಟ್ಟ ಆತ್ಮವನ್ನು ಜೊತೆಯಲ್ಲಿ ಕರೆತಂದಿದ್ದಾರೆ. ಆ ಆತ್ಮದ ಹೆಸರು ಜಾರ್ಜ್ ಎಂದು ದಂಪತಿ ಹೇಳಿದ್ದಾರೆ. ಆತ್ಮ ಈಗ ಇವರನ್ನು ಕೊಲೆ ಮಾಡೋದಾಗಿ ಹೇಳ್ತಿದೆ. ಮನೆಯಲ್ಲಿ ಕೆಟ್ಟ ಘಟನೆಗಳು ನಡೆಯುತ್ತಿವೆ. ಇದ್ರಿಂದ ದಂಪತಿ ಸ್ವಲ್ಪ ಭಯಗೊಂಡಿದ್ದಾರೆ. 

58 ವರ್ಷದ ಚಾರ್ಲಿ ಹಾರ್ಕರ್ ಮತ್ತು ಅವರ 59 ವರ್ಷದ ಪತ್ನಿ ತೆರೇಸಾ ಹ್ಯೂಸ್, ಆಫ್ಟರ್‌ಲೈಫ್ ಪ್ಯಾರಾನಾರ್ಮಲ್ ಎಂಬ ಪ್ರೇತ (Ghost)  ತನಿಖಾ ಕಂಪನಿಯನ್ನು ನಡೆಸುತ್ತಿದ್ದಾರೆ. ಅವರ ಲೈಮ್ ಪಿಟ್ಸ್ ನೇಚರ್ ರಿಸರ್ವ್ ಹೆಸರಿನ ತನಿಖಾ ಕಂಪನಿ ಬ್ರಿಟನ್‌ (Britain) ನ ಬರ್ಮಿಂಗ್ಹ್ಯಾಮ್ ಬಳಿಯ ವಾಲ್ಸಾಲ್ ಪಟ್ಟಣದಲ್ಲಿದೆ. ಇಬ್ಬರು ವಿಶ್ವದಾದ್ಯಂತ ಇರುವ ಭಯಾನಕ ಜಾಗಕ್ಕೆ ಹೋಗ್ತಾರೆ. ಅಲ್ಲಿನ ಅನುಭವನ್ನು ಫೇಸ್ಬುಕ್ (Facebook)  ಲೈವ್ ಮೂಲಕ ಜನರ ಮುಂದೆ ಇಡ್ತಾರೆ. ಈ ದಂಪತಿ ಅನೇಕ ಬಾರಿ ಆತ್ಮಗಳ ಕೈಗೆ ಸಿಕ್ಕಿಬಿದ್ದು ಸಮಸ್ಯೆ ಎದುರಿಸಿದ್ದಾರೆ. ಆದ್ರೆ ಇದು ಸ್ವಲ್ಪ ಭಿನ್ನವಾಗಿದೆ ಎಂದು ದಂಪತಿ ಹೇಳ್ತಾರೆ. ಹಿಂದಿನ ವರ್ಷವೂ ಚಾರ್ಲಿ ಮತ್ತು ತೆರೇಸಾ ದಂಪತಿಗೆ ಕೆಟ್ಟ ಅನುಭವವಾಗಿತ್ತು. ಈ ಬಾರಿ ಜಾರ್ಜ್ ಎಂಬ ಭೂತ ತಮ್ಮನ್ನು ಕಾಡುತ್ತಿದೆ ಎಂದು ಚಾರ್ಲಿ ಮತ್ತು ತೆರೇಸಾ ನಂಬುತ್ತಾರೆ. 

Tap to resize

Latest Videos

ವಾಸುಕಿ ವೈಭವ್ ಮದ್ವೆಯಾಗ್ತಿರೋ ಹುಡುಗಿ ಅವಳೇನಾ? ಅಥವಾ ಬೇರೆನಾ?

ಸ್ಮಶಾನಕ್ಕೆ ಹೋದಾಗ ಆಗಿದ್ದೇನು? : ಚಾರ್ಲಿ ಮತ್ತು ತೆರೇಸಾ ಸ್ಮಶಾನಕ್ಕೆ ಹೋಗಿದ್ದಾರೆ. ಈ ವೇಳೆ ತೆರೇಸಾ ಕೆಸರಿನಲ್ಲಿ ಬಿದ್ದಿದ್ದಾಳೆ. ಎಲ್ಲೆಡೆ ಕತ್ತಲಿದ್ದ ಕಾರಣ ಚಾರ್ಲಿಗೆ ಏನೂ ಆರಂಭದಲ್ಲಿ ಗೊತ್ತಾಗಲಿಲ್ಲ. ತೆರೇಸಾ ಕಿರುಚಿದ್ದರಿಂದ ಚಾರ್ಲಿ ಅಲ್ಲಿಗೆ ಹೋಗಿದ್ದಾನೆ. ಅಲ್ಲೇ ಜಾರ್ಜ್ ಹೆಸರಿನ ಆತ್ಮ ತೆರೇಸಾ ಮೈ ಸೇರಿತ್ತು ಎಂದು ಚಾರ್ಲಿ ಹೇಳ್ತಿದ್ದಾನೆ. ತೆರೇಸಾ ಯಾರಿಗೋ ಅಲ್ಲಿಂದ ಹೋಗುವಂತೆ ಹೇಳ್ತಿದ್ದಳಂತೆ. ಚಾರ್ಲಿ ನನ್ನ ಬಳಿ ನಿಂತಿದ್ದು ಬಿಟ್ಟರೆ ನನಗೆ ಮತ್ತೇನೂ ತಿಳಿಯಲಿಲ್ಲ ಎಂದು ತೆರೇಸಾ ಹೇಳಿದ್ದಾಳೆ. ಅವರಿಬ್ಬರ ಪ್ರಕಾರ, ಚಾರ್ಲಿ ಹೆಸರಿನ ಕೆಟ್ಟ ಭೂತ ಸ್ಮಶಾನದಲ್ಲಿ ಇವರನ್ನು ನೋಡಿದೆ. ತೆರೇಸಾ ಮೈ ಹೊಕ್ಕಿದೆ. ಅಲ್ಲದೆ ದಂಪತಿ ಹಿಂಬಾಲಿಸಿಕೊಂಡು ಅವರ ಮನೆಗೆ ಬಂದಿದೆ. ತೆರೇಸಾ ಹಾಗೂ ಚಾರ್ಲಿ ಪ್ರಕಾರ, ಅವರ ಮನೆ ಭೂತಗಳ ವಾಸಸ್ಥಾನವಂತೆ. ಅನೇಕ ಪ್ರಯೋಗಗಳನ್ನು ಮಾಡುವ ಕಾರಣ ಮನೆಯಲ್ಲಿ ಅನೇಕ ಭೂತಗಳು ವಾಸಿಸುತ್ತವೆ ಎನ್ನುತ್ತಾರೆ. 

ನಿಲ್ಲದ ಆ್ಯಸಿಟಿಡಿ, ಎಷ್ಟು ಮಾತ್ರೆ ತಿಂದ್ರೂ ಆಗ್ತಿಲ್ಲ ಉಪಯೋಗ ಅಂದ್ರೆ ಈ ಯೋಗಾಸನ ಟ್ರೈ ಮಾಡಿ!

ಚಾರ್ಲಿ ಕಳೆದ 18 ವರ್ಷಗಳಿಂದ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕಳೆದ ಕೆಲವು ತಿಂಗಳುಗಳಿಂದ ತನ್ನ ಮನೆಯ ವಸ್ತುಗಳು ಬದಲಾಗುತ್ತಿವೆ ಎಂದು ಚಾರ್ಲಿ ಹೇಳಿದ್ದಾನೆ. ಅದೃಶ್ಯ ಕೈಗಳಿಂದ ಚಾಕುಗಳು ಸೇರಿದಂತೆ ಮನೆಯಲ್ಲಿದ್ದ ವಸ್ತುಗಳನ್ನು ತಮ್ಮ ಮೇಲೆ ಎಸೆಯಲಾಗ್ತಿದೆ ಎಂದು ಚಾರ್ಲಿ ಹೇಳಿದ್ದಾನೆ. ದಂಪತಿ ವಿದ್ಯುತ್ಕಾಂತೀಯ ಉಪಕರಣಗಳು (Magnetic Items), ಗೊಂಬೆಗಳು ಮತ್ತು ಓಯಿಜಾ ಬೋರ್ಡ್ ಅನ್ನು ಬಳಸಿಕೊಂಡು ತಮ್ಮ ಮನೆಯಲ್ಲಿ ಅಧಿಸಾಮಾನ್ಯ ಚಟುವಟಿಕೆ ನಡೆಯುತ್ತಿದೆಯೇ ಎಂದು ತನಿಖೆ ಮಾಡಿದ್ದಾರೆ. ಮನೆಯಲ್ಲಿ ಆತ್ಮವಿರೋದನ್ನು ಅವರು ಪತ್ತೆ ಮಾಡಿದ್ದಾರೆ. ಫೇಸ್ಬುಕ್ ಲೈವ್ ನಲ್ಲಿ  ಭಯಾನಕ ಗೊಂಬೆಯು ಮೆಟ್ಟಿಲುಗಳ ಕೆಳಗೆ ಉರುಳುತ್ತಿರುವುದನ್ನು ತೋರಿಸಿದ್ದಾರೆ. ಚಾರ್ಲಿ, ಜಾರ್ಜ್ ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾನೆ. ಜಾರ್ಜ್ ಇವರ ಸಂಪರ್ಕಕ್ಕೆ ಬಂದಿದ್ದನಂತೆ. ಆತನೇ ತನ್ನ ಹೆಸರು ಜಾರ್ಜ್ ಎಂದು ಹೇಳಿದ್ದಲ್ಲದೆ, ನಿಮ್ಮನ್ನು ಕೊಲೆ ಮಾಡ್ತೇನೆ, ಸಾಯಿರಿ ಎಂದು ಬೋರ್ಡ್ ಮೇಲೆ ಬರೆದಿದ್ದನಂತೆ. 
 

click me!