
ಪ್ರಿಯಾಂಕಾ ಚೋಪ್ರಾ ಜೋನಾಸ್ ಸದ್ಯ ವರ್ಲ್ಡ್ ಆಗಿರುವ ನಟಿ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಪ್ರಿಯಾಂಕ ಚೋಪ್ರಾ ನಂತರ ಬಿಟೌನ್‌ನಿಂದ ಬಹುತೇಕ ದೂರವಾಗಿ ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ನಂತರ ಅಮೇರಿಕನ್ ಪಾಪ್‌ಸ್ಟಾರ್, ನಿಕ್ ಜೋನಾಸ್ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗಷ್ಟೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ಹೆಸರಿನ ಹಾಲಿವುಡ್ ವೆಬ್ ಸರಣಿ ಬಿಡುಗಡೆ ಆಗಿದೆ. ಇದರ ಪ್ರಯುಕ್ತ ಪ್ರಿಯಾಂಕ ಚೋಪ್ರಾ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪಿಗ್ಗಿ ತಾನು ಈ ಹಿಂದೆ ಹಲವರ ಜೊತೆ ಡೇಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದರು.
ಅಲೆಕ್ಸ್ ಕೂಪರ್ ಅವರ ಪಾಡ್‌ಕ್ಯಾಸ್ಟ್ ಕಾಲ್ ಹರ್ ಡ್ಯಾಡಿಯಲ್ಲಿ ತನ್ನ ಮಾಜಿ ಗೆಳೆಯರ ಬಗ್ಗೆ ಮಾತನಾಡುವ ಮೂಲಕ ಪ್ರಿಯಾಂಕ ಚೋಪ್ರಾ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ. ನಿಕ್ ಜೋನಾಸ್ ಅವರೊಂದಿಗೆ ಮದುವೆ (Marriage)ಯಾಗಿರುವ ಮೊದಲು ತಾವು ಡೇಟಿಂಗ್ ಮಾಡಿದ ನಟರ ಬಗ್ಗೆ ಮಾತನಾಡಿದ್ದಾರೆ. ನನ್ನ ಹಿಂದಿನ ಸಂಬಂಧ (Relationship)ಗಳಲ್ಲಿ ತಾನು 'ಡೋರ್ ಮ್ಯಾಟ್' ಆಗಿದ್ದೆ ಎಂದು ಎಂದು ಬಹಿರಂಗಪಡಿಸಿದ್ದಾರೆ.
ಅವಳನ್ನು ಕಂಡಾಗ ನನ್ನೊಳಗೇನೋ ಸ್ಪಾರ್ಕ್! ಆದ್ರೆ ಅವಳಿಗೆ ಮದುವೆ ಆಗ್ಬಿಟ್ಟಿದೆ!
ಸಂಬಂಧದಲ್ಲಿ ಡೋರ್ ಮ್ಯಾಟ್ ಎಂದರೇನು?
'ಈ ಹಿಂದಿನ ನನ್ನ ರಿಲೇಶನ್ಶಿಪ್ನಲ್ಲಿ ನನ್ನನ್ನು ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಳ್ಳಲಾಗಿತ್ತು. ಈ ಹಿಂದಿನ ರಿಲೇಶನ್ಷಿಪ್ಗಳಲ್ಲಿ ನಾನು ಕೇರ್ಟೇಕರ್ ರೀತಿ ವರ್ತಿಸುತ್ತಿದ್ದೆ. ನನ್ನ ಬಾಯ್ಫ್ರೆಂಡ್ ಬಗ್ಗೆ ಅತಿಯಾಗಿ ಕಾಳಜಿ (Care) ಮಾಡುವುದು, ಅವನು ಸದಾ ಕಂಪರ್ಟ್ನಲ್ಲಿರುವಂತೆ ನೋಡಿಕೊಳ್ಳುವುದು. ಅವನ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದೆ. ಇದರಿಂದಾಗಿ ನಾನು ನನ್ನತನವನ್ನೇ ಕಳೆದುಕೊಂಡಿದ್ದೆ. ಹಲವು ಅವಕಾಶಗಳನ್ನು ಕೈಬಿಟ್ಟೆ, ನನ್ನ ಮೇಲಿನ ಅಧಿಕಾರವನ್ನು ನಾನು ಅವನಿಗೆ ಕೊಟ್ಟುಬಿಟ್ಟಿದ್ದೆ' ಎಂದು ಪ್ರಿಯಾಂಕ ಚೋಪ್ರಾ ತಿಳಿಸಿದ್ದರು. ಹಾಗಿದ್ರೆ ಸಂಬಂಧದಲ್ಲಿ ಡೋರ್‌ಮ್ಯಾಟ್ ಆಗದಿರಲು ಏನು ಮಾಡಬೇಕು?
ಸಂವಹನವು ಪ್ರಮುಖವಾಗಿದೆ: ಮುಕ್ತ ಮತ್ತು ಪ್ರಾಮಾಣಿಕ ಸಂವಹನವು (Communication) ಯಾವುದೇ ಯಶಸ್ವಿ ಸಂಬಂಧದ ಅಡಿಪಾಯವಾಗಿದೆ. ಹೀಗಾಗಿ ನಿಮ್ಮ ಅಗತ್ಯತೆಗಳು, ಕಾಳಜಿಗಳು ಮತ್ತು ನಿರೀಕ್ಷೆಗಳನ್ನು ಸಂಗಾತಿಗೆ ಸ್ಪಷ್ಟವಾಗಿ ವ್ಯಕ್ತಪಡಿಸಿ. ಸಂಬಂಧದಲ್ಲಿ ಗಡಿಗಳನ್ನು ಸ್ಥಾಪಿಸುವುದು ಮುಖ್ಯವಾಗಿದೆ. ಇದರಿಂದ ನಿಮ್ಮ ಪಾಲುದಾರರು ನೀವು ಮೌಲ್ಯಯುತವಾಗಿರಲು ಏನು ಬಯಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಂಗಾತಿಯ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅವರ ದೃಷ್ಟಿಕೋನವನ್ನು ಸಕ್ರಿಯವಾಗಿ ಕೇಳಲು ಪ್ರೋತ್ಸಾಹಿಸಿ.
ವರದಕ್ಷಿಣೆಯಾಗಿ ಬೈಕ್ ಕೇಳಿದ ಮಗನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ!
ಸ್ಪಷ್ಟ ನಿರೀಕ್ಷೆಗಳನ್ನು ಹೊಂದಿಸಿ: ಪಾಲುದಾರರಿಂದ ಪರಸ್ಪರ ಗೌರವ (Respect) ಮತ್ತು ಸರಳ ಮೆಚ್ಚುಗೆಯಂತಹ ಅಂಶಗಳನ್ನು ಒಳಗೊಂಡಂತೆ ಸಂಬಂಧದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ವಿವರಿಸಿ. ಈ ನಿರೀಕ್ಷೆಗಳನ್ನು ಮೊದಲೇ ಹೊಂದಿಸುವ ಮೂಲಕ, ನಿಮಗೆ ಅರ್ಹವಾದ ಗೌರವದಿಂದ ನಿಮ್ಮನ್ನು ಹೇಗೆ ನಡೆಸಿಕೊಳ್ಳಬೇಕೆಂದು ಅರ್ಥಮಾಡಿಕೊಳ್ಳಲು ನಿಮ್ಮ ಪಾಲುದಾರರಿಗೆ ನೀವು ಸಹಾಯ ಮಾಡುತ್ತೀರಿ.
ಸ್ವ-ಆರೈಕೆಯನ್ನು ಅಭ್ಯಾಸ ಮಾಡಿ: ನಿಮ್ಮ ಸಂಗಾತಿಯು (Partner) ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ತಡೆಯುವಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ನಿಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಿ, ಸ್ವಂತ ಆಸಕ್ತಿಗಳನ್ನು ಅನುಸರಿಸಿ. ಪ್ರೀತಿ ಯಾವತ್ತೂ ನಿಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಅಡ್ಡಿಯಾಗದಿರಲಿ.
ಕೃತಜ್ಞತೆ ವ್ಯಕ್ತಪಡಿಸಿ: ಇಬ್ಬರೂ ಪಾಲುದಾರರು ಪರಸ್ಪರರ ಪ್ರಯತ್ನಗಳು ಮತ್ತು ಕೊಡುಗೆಗಳಿಗೆ ಸಕ್ರಿಯವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ನಿಮ್ಮ ಸಂಗಾತಿ ನಿಮಗಾಗಿ ಮತ್ತು ಸಂಬಂಧಕ್ಕಾಗಿ ಮಾಡುವ ಕೆಲಸಗಳನ್ನು ನಿಯಮಿತವಾಗಿ ಅಂಗೀಕರಿಸಿ. ಮೆಚ್ಚುಗೆಯು ಪರಸ್ಪರ ಅಭ್ಯಾಸವಾದಾಗ, ಅದು ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.
ಸಮತೋಲಿತ ಸಂಬಂಧವನ್ನು ಕಾಪಾಡಿಕೊಳ್ಳಿ: ಎರಡೂ ಪಾಲುದಾರರು ಸಮಾನವಾಗಿ ಮೌಲ್ಯಯುತ ಮತ್ತು ಬೆಂಬಲವನ್ನು ಅನುಭವಿಸುವ ಸಂಬಂಧವನ್ನು ರಚಿಸುವುದು ಮುಖ್ಯವಾಗಿದೆ. ಇಬ್ಬರೂ ಸಾಮಾನ್ಯ ಕೆಲಸಗಳನ್ನು ಮತ್ತು ಜವಾಬ್ದಾರಿಗಳನ್ನು ಹೇಗೆ ವಿಭಜಿಸಬೇಕು ಮತ್ತು ಹೇಗೆ ಹೊಂದಾಣಿಕೆಯಿಂದ ಬಾಳಬೇಕು ಎಂಬುದನ್ನು ಮಾತನಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.