ಪ್ರೇಮ ವಿವಾಹವಾದವರಲ್ಲೇ ಡಿವೋರ್ಸ್‌ ಹೆಚ್ಚು: ಸುಪ್ರೀಂಕೋರ್ಟ್

By Vinutha Perla  |  First Published May 17, 2023, 1:03 PM IST

ಇತ್ತೀಚಿನ ವರ್ಷಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಮದುವೆಯಾದಷ್ಟೇ ಶೀಘ್ರವಾಗಿ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಲವ್‌ ಮ್ಯಾರೇಜ್‌ ಆದವರೇ ಹೆಚ್ಚು ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.


ಇಬ್ಬರು ಪರಸ್ಪರ ಒಪ್ಪಿ, ಮುಂದಿನ ಭವಿಷ್ಯವನ್ನು ಒಟ್ಟಿಗೆ ಕಳೆಯುವ ನಿರ್ಧಾರಕ್ಕೆ ಬಂದ್ಮೇಲೆ ಮದುವೆಯಾಗ್ತಾರೆ. ಮದುವೆಗೂ ಮುನ್ನ ಸಾಕಷ್ಟು ಪ್ರಯತ್ನ, ಪರಿಶ್ರಮವಿರುತ್ತದೆ. ಆದ್ರೆ ಮದುವೆ ಮೂಲಕ ಒಂದಾಗುವ ಎರಡು ಕುಟುಂಬಗಳು ಕಾಗದದ ಮೇಲೆ ಒಂದು ಸಹಿ ಹಾಕುವ ಮೂಲಕ ದೂರವಾಗುತ್ತವೆ. ಎಲ್ಲಾ ಬಂಧಗಳು ಕಳಚಿ ಬೀಳುತ್ತವೆ. ದಾಂಪತ್ಯ ಮುರಿದು ಬೀಳಲು ನಾನಾ ಕಾರಣಗಳನ್ನು ನಾವು ನೋಡ್ಬಹುದು. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವಿಲ್ಲ ಎಂದಾಗ, ಒಂದು ಕಡೆಯಿಂದ ಹಿಂಸೆಗಳು ಕಾಣಿಸಿಕೊಂಡಾಗ, ಇಬ್ಬರ ಮಧ್ಯೆ ನಂಬಿಕೆ ಸತ್ತಾಗ ಹೀಗೆ ಅನೇಕ ಕಾರಣಕ್ಕೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಂತೂ ಸಣ್ಣಪುಟ್ಟ ಕಾರಣಕ್ಕೆ ದಂಪತಿಗಳು ಡಿವೋರ್ಸ್ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಸುಪ್ರೀಂಕೋರ್ಟ್ ಇತ್ತೀಚಿಗೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದೆ.

ಹೆಚ್ಚಿನ ವಿಚ್ಛೇದನಗಳು (Divorce) ಪ್ರೇಮವಿವಾಹಗಳಿಂದ ಉದ್ಭವಿಸುತ್ತವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ವರ್ಗಾವಣೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಪ್ರಕರಣದ ವಕೀಲರು (Lawyers) ವಿವಾಹವು ಪ್ರೇಮ ವಿವಾಹ, ಡಿವೋರ್ಸ್‌ಗೆ ಮುಖ್ಯ ಕಾರಣ (Reason) ಎಂದು ಉಲ್ಲೇಖಿಸಿದ್ದಾರೆ.

Tap to resize

Latest Videos

ಡಿವೋರ್ಸ್‌ ಆಯ್ತೆಂದು ಫೋಟೋಗ್ರಾಫರ್‌ಗೆ ಹಣ ವಾಪಸ್ ನೀಡುವಂತೆ ಕೇಳಿದ ಮಹಿಳೆ

ಪ್ರೇಮ ವಿವಾಹಗಳಿಂದ ಹೆಚ್ಚು ವಿಚ್ಛೇದನಗಳು ಉಂಟಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಟೀಕಿಸಿದೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ಪೀಠವು ವೈವಾಹಿಕ ಸಮಸ್ಯೆಯಿಂದ ಉಂಟಾದ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಪ್ರಕರಣದ ವಕೀಲರು ಇದು ಪ್ರೇಮ ವಿವಾಹ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿ ಗವಾಯಿ ಪ್ರತಿಕ್ರಿಯಿಸಿ, 'ಹೆಚ್ಚಿನ ವಿಚ್ಛೇದನಗಳು ಪ್ರೇಮ ವಿವಾಹಗಳಿಂದ ಮಾತ್ರ ಉಂಟಾಗುತ್ತವೆ' ಎಂದು ಹೇಳಿದರು. ನಂತರ ಪೀಠವು ಮಧ್ಯಸ್ಥಿಕೆಗೆ ಕರೆ ನೀಡಿತು. ಇತ್ತೀಚಿನ ಕಾನೂನು ತೀರ್ಪುಗಳನ್ನು ಉಲ್ಲೇಖಿಸಿ, ಪತಿಯ ಒಪ್ಪಿಗೆಯಿಲ್ಲದೆ ವಿಚ್ಛೇದನವನ್ನು ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.

ಸಂಬಂಧ ಉಳಿಸಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ, ಹೆಚ್ಚು ಡಿವೋರ್ಸ್ ಆಗೋದು ಯಾವ ದೇಶದಲ್ಲಿ?

ವಿವಾಹ ವಿಚ್ಛೇದನ ಇನ್ನು ಫಟಾಫಟ್‌: ಆರು ತಿಂಗಳು ಕಾಯುವ ಅಗತ್ಯವೂ ಇಲ್ಲ: ಸುಪ್ರೀಂಕೋರ್ಟ್
ಸರಿಪಡಿಸಲಾರದ ಮಟ್ಟಕ್ಕೆ ಮುರಿದುಬಿದ್ದಿರುವ ವಿವಾಹ ಪ್ರಕರಣಗಳ ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ರವಾನಿಸದೆ ನೇರವಾಗಿ ವಿಚ್ಛೇದನ ನೀಡುವ ಅಧಿಕಾರ ಸಂವಿಧಾನದ 142ನೇ ಪರಿಚ್ಛೇದದಡಿ ತನಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ, ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಗಳು 6ರಿಂದ 18 ತಿಂಗಳ ಕಾಲ ಕಾಯುವ ಅನಿವಾರ್ಯತೆ ತಪ್ಪಲಿದೆ.

ಸಂವಿಧಾನದ 142ನೇ ಪರಿಚ್ಛೇದದಡಿ ತಮಗೆ ವಿಚ್ಛೇದನ ನೀಡಬೇಕು ಎಂದು ಶಿಲ್ಪಾ ಶೈಲೇಶ್‌ (Shilpa Shailesh) ಹಾಗೂ ವರುಣ್‌ ಶ್ರೀನಿವಾಸನ್‌ (Varun Srinivasan) ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ (S.K. Koul) ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಸರಿಪಡಿಸಲಾಗದಷ್ಟು ಮುರಿದು ಬಿದ್ದಿರುವ ವಿವಾಹ ಪ್ರಕರಣಗಳಲ್ಲಿ ವಿವಾಹವನ್ನು ವಿಸರ್ಜನೆಗೊಳಿಸಲು ಈ ನ್ಯಾಯಾಲಯಕ್ಕೆ ಸಾಧ್ಯವಿದೆ. ಇದು ಸಾರ್ವಜನಿಕ ನೀತಿಯ ನಿರ್ದಿಷ್ಟಅಥವಾ ಮೂಲಭೂತ ತತ್ವಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಒಂದಾಗಲು ಇನ್ನು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿರುವ ದಂಪತಿಗಳು ವಿಚ್ಛೇದನಕ್ಕಾಗಿ (Divorce) ಕಾಯುತ್ತಾ ಕೂರುವ ಬದಲಿಗೆ, ಸಂವಿಧಾನದ 142ನೇ ಪರಿಚ್ಛೇದದಡಿ ನೇರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ.

click me!