ಭಯಂಕರ ಪ್ರೇಮಿ ಇವ: ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗೆಳತಿಗೆ ಭಾರತೀಯನ ಸರ್‌ಪ್ರೈಸ್‌

By Anusha KbFirst Published May 17, 2023, 2:55 PM IST
Highlights

ಭಾರತೀಯ ಯುವಕನೋರ್ವ ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ಟೈಮ್ಸ್ ಸ್ಕ್ವೇರ್‌ನಲ್ಲಿ ವಿಭಿನ್ನವಾಗಿ ತನ್ನ ಗೆಳತಿಗೆ ಅಚ್ಚರಿ ನೀಡಿದ್ದು,  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ನ್ಯೂಯಾರ್ಕ್‌: 'ಸರ್‌ಫ್ರೈಸ್' ಈ ಪದ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಅದರಲ್ಲೂ ಪ್ರೇಮಿಗಳಿಗೆ ಸ್ನೇಹಿತರಿಗೆ ಹೆಚ್ಚು ಖುಷಿ ಕೊಡುವ ಪದ. ಸ್ನೇಹಿತರು ಪ್ರೇಮಿಗಳು ತಮಗೆ ತಿಳಿಯದಂತೆ ಊಹೆಯೂ ಮಾಡಿರದಂತಹ ಸರ್‌ಪ್ರೈಸ್‌ ನೀಡಿ ತಮ್ಮ ಗೆಳೆಯ ಗೆಳತಿಯರಿಗೆ ಖುಷಿ ನೀಡುತ್ತಾರೆ. ಬರ್ತ್‌ಡೇ, ಆನಿವರ್ಸರಿ,  ಸೀಮಂತ, ವಿವಾಹ ವಾರ್ಷಿಕೋತ್ಸವ ಮುಂತಾದ ಶುಭ ಸಂದರ್ಭಗಳಲ್ಲಿ ತಮ್ಮ ಆತ್ಮೀಯರಿಗೆ ವಿಶೇಷ ಗಿಫ್ಟ್ ನೀಡುವ ಮೂಲಕ ಅವರನ್ನು ಖುಷಿ ಪಡಿಸುತ್ತಾರೆ. ಹೀಗೆ ಸರ್‌ಫ್ರೈಸ್‌ ನೀಡಿದ ಹಲವು ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಖುಷಿ ಪಡುತ್ತಾರೆ. ಹಾಗೆಯೇ ಇಲ್ಲೊಬ್ಬ ಯುವಕ ತನ್ನ ಗೆಳತಿಗೆ ಬರ್ತ್‌ಡೇ ದಿನ ವಿಭಿನ್ನವಾಗಿ ಸರ್‌ಫ್ರೈಸ್ ನೀಡಿದ್ದು,ಇದನ್ನು ನೋಡಿ ಆತನ ಗೆಳತಿ ಅಚ್ಚರಿಗೊಂಡಿದ್ದಾಳೆ. 

ಭಾರತೀಯ ಯುವಕನೋರ್ವ ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ಟೈಮ್ಸ್ ಸ್ಕ್ವೇರ್‌ನಲ್ಲಿ ವಿಭಿನ್ನವಾಗಿ ತನ್ನ ಗೆಳತಿಗೆ ಅಚ್ಚರಿ ನೀಡಿದ್ದು,  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಟೇಲ್ಸ್ ಬೈ ಲೇಖಾ ಎಂಬ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ನ್ಯೂಯಾರ್ಕ್‌ನ (Newyork)ಟೈಮ್ಸ್ ಸ್ಕ್ವೇರ್‌ನ  (Times square) ಕಟ್ಟಡದ ಮುಂದೆ ದೊಡ್ಡದಾದ ಎಲ್‌ಇಡಿ ಪರದೆ ಮೇಲೆ ಯುವತಿಯ ವಿವಿಧ ಕ್ಷಣಗಳಲ್ಲಿ ತೆಗೆದಂತಹ ಫೋಟೋಗಳನ್ನು  ಪ್ಲೇ ಮಾಡಲಾಗಿದೆ.  ಕೊನೆಯಲ್ಲಿ ಯುವತಿಗೆ ಹ್ಯಾಪಿ ಬರ್ತ್‌ಡೇ ಎಂದು ವಿಶ್ ಮಾಡಲಾಗಿದೆ.

Latest Videos

ಬೇಡ ಅಂದ್ರೂ ಬಿಡದ ತಂಡ; ಎಳೆದುಕೊಂಡು ಬಂದು ಸಮಂತಾ ಹುಟ್ಟುಹಬ್ಬ ಆಚರಿಸಿದ 'ಸಿಟಾಡೆಲ್' ಟೀಂ

ಭಾರಿ ಗಾತ್ರದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಒಂದೊಂದಾಗಿ ಯುವತಿಯ ಫೋಟೋ ವೀಡಿಯೋಗಳು ಹರಿದು ಬರುತ್ತಿದ್ದರೆ ಸುತ್ತಲಿದ್ದ ಜನರು ಕೂಡ ಆ ಎಲ್‌ಇಡಿ ಸ್ಕ್ರೀನ್‌ನಲ್ಲಿ ಇವರನ್ನು ಗಮನಿಸಿ ಅಚ್ಚರಿಯಿಂದ ನೋಡುತ್ತಿದ್ದಾರೆ. ಬಿಲ್ಬೋರ್ಡ್ ಮೇಲೆ ತನ್ನದೇ ಫೋಟೋ ನೋಡಿದ ಯುವತಿ ಅಚ್ಚರಿಯಿಂದ  ನೋಡುತ್ತಾಳೆ. ಆತ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ನನಗೆ ಸರ್‌ಫ್ರೈಸ್ ನೀಡಿದಾಗ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಈ ವಿಡಿಯೋಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಒಂದು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅನೇಕರು ನಾನು ಪ್ರೇಮ ನಿವೇದನೆ ಮಾಡುತ್ತಿದ್ದಾನೆ ಎಂದು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಹೊಸ ಟ್ರೆಂಡ್ ಆಗಲಿದ್ದು, ನೀವು ಟ್ರೆಂಡ್ ಸೆಟ್  ಮಾಡಿದ್ದೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಬೆಸ್ಟ್ ಗಿಫ್ಟ್‌ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ದಿನಾ ಬ್ರೇಕ್‌ಫಾಸ್ಟ್‌ಗೆ ಬರುತ್ತಿದ್ದ ವೃದ್ಧ ವ್ಯಕ್ತಿಗೆ ಹೊಟೇಲ್ ಮಾಲೀಕರಿಂದ ಸರ್‌ಪ್ರೈಸ್‌

 

click me!